Explained: ಒಂದು ರಾಷ್ಟ್ರ, ಒಂದು ಚುನಾವಣೆ ಎಂದರೇನು? ಈಗೇಕೆ ಅದನ್ನು ಮಾಡಲಾಗುತ್ತಿದೆ?


 ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಕೇಂದ್ರ ಸರ್ಕಾರವು ಇದೀಗ ದೇಶದಲ್ಲಿ "ಒಂದು ರಾಷ್ಟ್ರ, ಒಂದು ಚುನಾವಣೆ" ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ನಡೆಸಲು ಆಯೋಗವೊಂದನ್ನು ರಚಿಸಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಈ ಆಯೋಗದಲ್ಲಿ ಯಾರೆಲ್ಲ ಸದಸ್ಯರುಗಳಿರುತ್ತಾರೆ ಎಂಬುದರ ಬಗ್ಗೆ ವಿವರವಾಗಿ ಈ ಸದ್ಯದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ವರದಿಯಾಗಿದೆ.ಕೇಂದ್ರ ಸರ್ಕಾರವು (Central Govt) ಇದೀಗ ದೇಶದಲ್ಲಿ "ಒಂದು ರಾಷ್ಟ್ರ, ಒಂದು ಚುನಾವಣೆ" ಸಾಧ್ಯತೆಗಳ ಬಗ್ಗೆ ವಿಶ್ಲೇಷಣೆ ನಡೆಸಲು ಆಯೋಗವೊಂದನ್ನು ರಚಿಸಿದೆ. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Former President Ram Nath Kovind) ಅವರ ನೇತೃತ್ವದ ಈ ಆಯೋಗದಲ್ಲಿ ಯಾರೆಲ್ಲ ಸದಸ್ಯರುಗಳಿರುತ್ತಾರೆ ಎಂಬುದರ ಬಗ್ಗೆ ವಿವರವಾಗಿ ಈ ಸದ್ಯದಲ್ಲೇ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ ಎಂದು ವರದಿಯಾಗಿದೆ. ಇದೀಗ ವಿಶೇಷ ಲೋಕಸಭೆ ಅಧಿವೇಶನ (Lok Sabha session) ಕರೆದಿರುವ ಬೆನ್ನಲ್ಲೇ ಈ ವಿದ್ಯಮಾನ ಹೊರಬಿದ್ದಿದೆ. ಇದೆ ಸೆಪ್ಟೆಂಬರ್ ೧೮ ರಿಂದ ೨೨ ರ ವರೆಗೆ ವಿಶೇಷ ಲೋಕಸಭೆ ಅಧಿವೇಶನ ನಡೆಯಲಿದೆ. ಇದೀಗ "ಒಂದೇ ದೇಶ, ಒಂದೇ ಚುನಾವಣೆ" ಬಿಲ್ ಅನ್ನು ಮಂಡಿಸುವ ಇರಾದೆಯಿಂದಲೇ ಈ ವಿಶೇಷ ಅಧಿವೇಶನವನ್ನು ಕೇಂದ್ರದಿಂದ ಕರೆಯಲಾಗಿದೆಯೇ ಎಂಬ ಕುತೂಹಲ ಹಾಗು ಅನುಮಾನಗಳು ವ್ಯಕ್ತವಾಗುತ್ತಿವೆ.ಒಂದು ರಾಷ್ಟ್ರ, ಒಂದು ಚುನಾವಣೆ ಏನಿದು ಪರಿಕಲ್ಪನೆ?ದೇಶಾದ್ಯಂತ ಸತತವಾಗಿ ಚುನಾವಣೆಗಳನ್ನು ನಡೆಸುವುದೇ ಒಂದು ರಾಷ್ಟ್ರ, ಒಂದು ಚುನಾವಣೆ ಎಂಬುದರ ಪರಿಕಲ್ಪನೆಯಾಗಿದೆ. ಅಂದರೆ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲೇ ಚುನಾವಣೆ ನಡೆಸುವುದು ಈ ಪರಿಕಲ್ಪನೆಯ ತತ್ವವಾಗಿದೆ.ಇದನ್ನೂ ಓದಿ: ಭಾರತದ ಸೂರ್ಯಯಾನಕ್ಕೆ ಕೌಂಟ್‌ಡೌನ್‌, ‘ಆದಿತ್ಯ-ಎಲ್1’ ಉಡಾವಣೆಗೆ ದಿನಾಂಕ ಘೋಷಿಸಿದ ಇಸ್ರೋಭಾರತದಲ್ಲಿ ಇದುವರೆಗೂ ಸಾಮಾನ್ಯವಾಗಿ ಸಂಸದ ಹಾಗೂ ಶಾಸಕರ ಸ್ಥಾನಗಳಿಗಾಗಿ ಚುನಾವಣೆಗಳು ಪ್ರತ್ಯೇಕವಾಗಿ ನಡೆಯುತ್ತವೆ. ಆದರೆ ಈ ಪರಿಕಲ್ಪನೆಯಡಿಯಲ್ಲಿ ಎರಡೂ ಸ್ಥಾನಗಳಿಗೆ ಏಕಕಾಲದಲ್ಲೇ ಚುನಾವಣೆ ನಡೆಸುವುದಾಗಿದೆ.ಪ್ರಯೋಜನಗಳುಅಷ್ಟಕ್ಕೂ ಒನ್ ನೇಷನ್, ಒನ್ ಇಲೆಕ್ಷನ್ ಎಂಬ ಅಭಿಯಾನವು ಹೊಸದೇನಲ್ಲ. ಈ ಮುಂಚೆಯಿಂದಲೂ ಪ್ರಧಾನಿ ನರೇಂದ್ರ ಮೋದಿಯವರು ಹಲವಾರು ಸಂದರ್ಭಗಳಲ್ಲಿ ಈ ಪರಿಕಲ್ಪನೆಯ ಪರವಾಗಿ ಮಾತನಾಡಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.2014ರ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲೂ ಈ ಬಗ್ಗೆ ಹೇಳಲಾಗಿದೆ. ಸಾಮಾನ್ಯವಾಗಿ ಎಲೆಕ್ಷನ್ ಎಂದಾಗ ಅದರ ವೆಚ್ಚ ಭಾರತದಂತಹ ದೇಶದಲ್ಲಿ ಅಧಿಕವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ವಿಧಾನಸಭೆ, ಲೋಕಸಭೆ ಎಂದು ಪ್ರತ್ಯೇಕವಾಗಿ ಚುನಾವಣೆಗಳನ್ನು ನಡೆಸಿದಾಗ ಅದರ ವೆಚ್ಚದ ಭಾರ ಶ್ರೀಸಾಮಾನ್ಯನಿಗೆ ಬೀಳಿವಂಥದ್ದು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಹಾಗಾಗಿ ಈ ಪರಿಕಲ್ಪನೆಯನ್ನು ಬೆಂಬಲಿಸುವವರು ಹೇಳುವ ಹಾಗೆ ಈ ಪರಿಕಲ್ಪನೆಯನ್ನು ಅನುಷ್ಠಾನ ಮಾಡಿದ್ದೇ ಆದಲ್ಲಿ ಇದು ದೇಶದಲ್ಲಿ ಚುನಾವಣೆಗೆ ಆಗುವ ವೆಚ್ಚವನ್ನು ಸಾಕಷ್ಟು ಮಹತ್ತರ ಪ್ರಮಾಣದಲ್ಲಿ ಉಳಿಸಲಿದೆ ಎಂದಾಗಿದೆ.ಭಾರತವು ಒಂದು ದೊಡ್ಡ ದೇಶವಾಗಿದ್ದು ಸಾಕಷ್ಟು ರಾಜ್ಯಗಳಿವೆ. ಹಾಗಾಗಿ ಒಂದೊಂದು ರಾಜ್ಯದಲ್ಲಿ ಒಂದೊಂದು ಸಮಯದಲ್ಲಿ ಆದರೆ ನಿಯಮಿತವಾಗಿ ಚುನಾವಣೆಗಳು ಬರುವ ಕಾರಣದಿಂದಾಗಿ ಆ ಒಟ್ಟಾರೆ ಪ್ರಕ್ರಿಯೆಯನ್ನು ನಡೆಸಲು ಚುನಾವಣಾ ಆಯೋಗ ಹಾಗೂ ಚುನಾವಣಾ ಸ್ಪರ್ಧಿಗಳು ಸಾಕಷ್ಟು ಹಣ ವ್ಯಯಿಸಬೆಕಾಗುತ್ತದೆ. ಆದರೆ ಈ ಪರಿಕಲ್ಪನೆಯ ಮೂಲಕ ಹೆಚ್ಚಿನ ಹಣ ವ್ಯಯವನ್ನು ನಿಯಂತ್ರಿಸಬಹುದಾಗಿದೆ.ಇನ್ನೊಂದು ವಾದವೆಂದರೆ ಈ ಪರಿಕಲ್ಪನೆಯಡಿಯಲ್ಲಿ ಚುನಾವಣೆ ನಡೆದಾಗ ಅದು ಹೆಚ್ಚು ಪರಿಣಾಮಕಾರಿ ಆಡಳಿತಕ್ಕೆ ಉತ್ತೇಜನ ನೀಡುತ್ತದೆ. ಚುನಾವಣೆಯ ಸಮಯದಲ್ಲಿ, ಇಡೀ ರಾಜ್ಯದ ಆಡಳಿತ ಯಂತ್ರವು ಮುಕ್ತ ಮತ್ತು ನ್ಯಾಯಸಮ್ಮತವಾದ ಚುನಾವಣಾ ಪ್ರಕ್ರಿಯೆಯನ್ನು ನಡೆಸುವುದರ ಮೇಲೆ ಕೇಂದ್ರೀಕರಿಸುತ್ತದೆ.ಇದು ದೈನಂದಿನ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ, ಏಕೆಂದರೆ ಅಧಿಕಾರಿಗಳು ಮತದಾನದ ಕರ್ತವ್ಯಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಅಲ್ಲದೆ, ಏಕಕಾಲದ ಚುನಾವಣೆಗಳು ಮತದಾನದ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆಯೂ ಇದ್ದು, ಇದು ಮತದಾರರಿಗೆ ಒಂದೇ ಬಾರಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡುತ್ತದೆ.ಒಂದು ರಾಷ್ಟ್ರ, ಒಂದು ಚುನಾವಣೆಯ ಕಲ್ಪನೆಯು ಕೇಂದ್ರ ಸರ್ಕಾರ ಮತ್ತು ರಾಜ್ಯಗಳ ನೀತಿಗಳು ಮತ್ತು ಕಾರ್ಯಕ್ರಮಗಳಲ್ಲಿ ಸ್ಥಿರತೆ ಮತ್ತು ನಿರಂತರತೆಯನ್ನು ತರುವ ನಿರೀಕ್ಷೆಯಿದೆ. ಲೋಕಸಭಾ ಚುನಾವಣೆಯ ಸಮಯದಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ, ಚುನಾವಣೆ ಮುಗಿಯುವವರೆಗೆ ಯಾವುದೇ ರಾಜ್ಯಗಳು ಹೊಸ ಯೋಜನೆಗಳು ಅಥವಾ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಿರುವುದಿಲ್ಲ.ಸವಾಲುಗಳುಪ್ರಯೋಜನಗಳು ಇರುವ ಹಾಗೆ ಈ ಪರಿಕಲ್ಪನೆಯ ಅನುಷ್ಠಾನಕ್ಕೆ ಸಮ್ಬಂಧಿಸಿದಂತೆ ಕೆಲ ಸವಾಲುಗಳೂ ಸಹ ಇರುವುದನ್ನು ಕಾಣಬಹುದು. ಹಾಗಾದರೆ ಏನೆಲ್ಲ ಸವಾಲುಗಳಿವೆ ಎಂಬುದನ್ನು ಇಲ್ಲಿ ತಿಳಿಯೋಣ.ಒಂದು ರಾಷ್ಟ್ರ ಒಂದು ಚುನಾವಣೆ'ಯ ದಾರಿಯಲ್ಲಿ ಇರುವ ದೊಡ್ಡ ಸವಾಲು ಎಂದರೆ ವಿವಿಧ ರಾಜ್ಯಗಳ ವಿಧಾನಸಭೆಗಳ ನಿಯಮಗಳನ್ನು ಲೋಕಸಭೆಯ ನಿಯಮಗಳೊಂದಿಗೆ ಸಿಂಕ್ ಮಾಡುವುದು.ಯಾವುದೇ ಪಕ್ಷ ಬಹುಮತ ಪಡೆಯಲು ವಿಫಲವಾದಲ್ಲಿ ಮಧ್ಯಂತರ ಚುನಾವಣೆ ಅಥವಾ ರಾಷ್ಟ್ರಪತಿ ಆಳ್ವಿಕೆಯಂತಹ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆಯೂ ಈ ಪರಿಕಲ್ಪನೆಯಡಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲ.ಪ್ರಾದೇಶಿಕ ರಾಜಕೀಯ ಪಕ್ಷಗಳು, ಇದಕ್ಕೆ ಸಂಬಂಧಿಸಿದಂತೆ ಎರಡು ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದರಿಂದ ಸ್ಥಳೀಯ ಸಮಸ್ಯೆಗಳನ್ನು ಪ್ರಮುಖವಾಗಿ ಎತ್ತಿ ತೋರಿಸಲು ಇದರಲ್ಲಿ ಸಾಧ್ಯವಾಗುವುದಿಲ್ಲ ಹಾಗೂ ಇದರಿಂದಾಗಿ ಅವರು ತಮ್ಮ ಭವಿಷ್ಯಕ್ಕೆ ಇದು ಅಡ್ಡಿಯಾಗಬಹುದೆಂದು ವಾದಿಸುತ್ತಾರೆ. ಇದಲ್ಲದೆ, ಹಣ ಮತ್ತು ಚುನಾವಣಾ ತಂತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂಬುದೂ ಅವರ ಆತಂಕಕ್ಕೆ ಇನ್ನೊಂದು ಕಾರಣವಾಗಿದೆ.

Post a Comment

Previous Post Next Post