ಮಲ್ಲಿಕಾರ್ಜುನ ಖರ್ಗೆ
ಮೋದಿ ಬೇರೆಯವರು ಮಾಡಿದ ಕೆಲಸವನ್ನ ಒಪ್ಪುವುದಿಲ್ಲ. 53 ವರ್ಷದಲ್ಲಿ ಕಾಂಗ್ರೆಸ್ ದೇಶಕ್ಕೆ ಏನ್ ಮಾಡಿದೆ ಅಂತಾರೆ. ಏರ್‌ಪೋರ್ಟ್, ಸಂಸತ್ ಮಾಡಿದಿವಿ ಅಂತಾರೆಅವುಗಳನ್ನೂ ನಾವೆ ಮಾಡಿದ್ದು ಎಂದರು. ಚುನಾವಣೆಗೂ ಮುನ್ನ ಕಾಂಗ್ರೆಸ್ (Congress)ನೀಡಿದ್ದ ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಚಾಲನೆ ಸಿಕ್ಕಿದೆ. ಮೈಸೂರಿನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದಾರೆ ಅವರು ಹೇಳಿದ ಕೆಲವೊಂದು ಅಂಶಗಳನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.ರಾಹುಲ್ ಗಾಂಧಿ ಕಾಂಗ್ರೆಸ್ ಏನ್ ವಾಗ್ದಾನ ಮಾಡುತ್ತೋ, ನುಡಿಯುತ್ತೋ ಅದರಂತೆ ನಡೆಯುತ್ತೆ ಎಂದು ಹೇಳಿದ್ದಾರೆ. ಆ ಮಾತನ್ನ ನಾನು ಹೇಳ್ತೇನೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೊಟ್ಟ ಮಾತನ್ನ ಉಳಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ. ನಾನು ಹಲವಾರು ಕಡೆ ಹೋದಾಗ ಕರ್ನಾಟಕದಲ್ಲಿ ಆದ ರೀತಿಯಲ್ಲಿ ನಾವು ಮಾಡಬೇಕು ಅಂತ ಹೇಳ್ತಾರೆ. ನೀವು ಹೊಸ ಯೋಜನೆಯನ್ನ ನಮಗೆ ಹೇಳಿ ಆ ಗ್ಯಾರೆಂಟಿಯನ್ನ ನಾವು ಜಾರಿ ಮಾಡ್ತೇವೆ ಅಂತಾರೆ. ಇದನ್ನೂ ಓದಿ: Gruha Lakshmi Scheme: 5 ಗ್ಯಾರಂಟಿ ಸುಳ್ಳು ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟಿದ್ದೇವೆ: ಮೋದಿಗೆ ರಾಹುಲ್ ಟಾಂಗ್!ಗ್ಯಾರೆಂಟಿ ಬಗ್ಗೆ ಅಮಿತ್ ಶಾ ಮೋದಿ ಬೋಗಸ್ ಅಂದ್ರು ಆದ್ರೆ ಇಂದು ಸಾಬೀತು ಮಾಡಿ ತೋರಿಸಲಾಗಿದೆ. ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತೆ ಅಂತ ಹೇಳಿದ್ರು, ಮೋದಿ ಬೇರೆಯವರು ಮಾಡಿದ ಕೆಲಸವನ್ನ ಒಪ್ಪುವುದಿಲ್ಲ. 53 ವರ್ಷದಲ್ಲಿ ಕಾಂಗ್ರೆಸ್ ದೇಶಕ್ಕೆ ಏನ್ ಮಾಡಿದೆ ಅಂತಾರೆ. ಏರ್‌ಪೋರ್ಟ್, ಸಂಸತ್ ಮಾಡಿದಿವಿ ಅಂತಾರೆಅವುಗಳನ್ನೂ ನಾವೆ ಮಾಡಿದ್ದು ಎಂದರು.ನಾವು ಕಟ್ಟಿದ್ದಕ್ಕೆ ಸುಣ್ಣ ಬಣ್ಣ ಹೊಡೆದು ಉದ್ಘಾಟನೆ ಮಾಡೋದು ಮೋದಿ ಕೆಲಸ. ಮೋದಿ ರಿಪೋರ್ಟ್ ಕಾರ್ಡ್ ಕೊಡಬೇಕು ಎಂದು ಹೇಳಿದ್ದಾರೆ.ಆದರೆ ನಾವು ಏನ್ ಮಾಡಿದ್ವಿ ಅಂತ ರಿಪೋರ್ಟ್ ಕಾರ್ಡ್ ಕೊಡ್ತೀವಿ. ನೆಹರು ಕಾಲದಿಂದಲೂ ರಿಪೋರ್ಟ್ ಕಾರ್ಡ್ ಕೊಡಲು ಸಿದ್ದ. ಅವರಿಗೆ ಹೇಳಿಕೋಳ್ಳೋಕೆ ಏನು ಇಲ್ಲ, ಬರೀ ಟೀಕೆ ಮಾಡೋದು. 47 ರಲ್ಲಿ ಶಿಕ್ಷಿತರ ಸಂಖ್ಯೆ 18% ಇತ್ತು, 13-14 ರವರೆಗೆ 74% ಬಂತು. ಇದನ್ನ ಕಾಂಗ್ರೆಸ್ ಅಲ್ವೇ ಮಾಡಿದ್ದು? ಎಂದರುಈ ಕೆಲಸವನ್ನ ಬಿಜೆಪಿಯವ್ರು ಮಾಡ್ತಾರ? ಎಂದು ಪ್ರಶ್ನೆ ಮಾಡಿದ್ದಾರೆ. ಗುಜರಾತ್‌ಗೆ ಹೋಲಿಸಿಕೊಳ್ಳಿ , ಶಿಶುಗಳ ಸಾವಿನ ಪ್ರಮಾಣ ಜಾಸ್ತಿ ಇದೆ. ಇವತ್ತು ನರೇಗ ನಾವು ತಂದಿದ್ದು ಜನರಿಗೆ ಕೆಲಸ ಕೊಡಲು, ಹೊಟ್ಟೆಗೆ ಅನ್ನ ಕೊಡುವ ಸಲಯವಾಗಿ ಆಹಾರ ಭದ್ರತಾ ಕಾಯ್ದೆ ತಂದರು ಎಂದಿದ್ದಾರೆ. ದೇಶಕ್ಕಾಗಿ ಹೊಸ ಸಂವಿಧಾನ ಕೊಟ್ಟಿದ್ದು ಕಾಂಗ್ರೆಸ್ನೆಹರು, ಅಂಬೇಡ್ಕರ್ ಈ ಸಂವಿಧಾನ ಕೊಟ್ಟಿದ್ದು. ಸಂವಿಧಾನ ಮಾಯವಾದರೆ ನಾವೆಲ್ಲಾ ಸತ್ತ ಹಾಗೆ ಎಂಬ ಮಾತನ್ನಾಡಿದ್ದಾರೆ.ಪ್ರಜಾಪ್ರಭುತ್ವ ಉಳಿಸದಿದ್ದರೆ ಮುಂದಿನ ಪೀಳಿಗೆಯನ್ನ ಗುಲಾಮರನ್ನಾಗಿ ಮಾಡಿದಂತೆ. 18 ವರ್ಷದ ಯುವಕಯುವತಿಯರಿಗೆ ಮತದಾನದ ಹಕ್ಕನ್ನ ಕೊಟ್ಟಿದ್ದು ಕಾಂಗ್ರೆಸ್. ನೀವೆಲ್ಲಾ ಒಗ್ಗಟ್ಟಾದರೆ ಈ ಫ್ಯಾಸಿಸ್ಟ್, ಡಿಕ್ಟೆಟರ್ ಸರ್ಕಾರವನ್ನ ಒದ್ದು ಓಡಿಸಬಹುದು ಎಂದು ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದ್ದಾರೆ.

Post a Comment