ಗೃಹಲಕ್ಷ್ಮಿ ಯೋಜನೆ ಉದ್ಘಾಟನೆ
Gruhalakshmi Inauguration: ಭಾರತ್ ಜೋಡೋ ಯಾತ್ರೆ ವೇಳೆ ನಿಮ್ಮ ಮಾತನ್ನ ಆಲಿಸಿದ್ದೆ, ನೀವು ತೋರಿದ ದಾರಿಯಿಂದ ಗ್ಯಾರಂಟಿ ಯೋಜನೆ ಮಾಡಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.ಮೈಸೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೆ (Gruhalakshmi Scheme Inauguration) ಅದ್ಧೂರಿ ಚಾಲನೆ ಸಿಕ್ಕಿದೆ. ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ (Mysuru Maharaja Ground) ಕಾಂಗ್ರೆಸ್ ಸರ್ಕಾರದ 4ನೇ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿ ಯೋಜನೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಚಾಲನೆ ನೀಡಿದ್ದರು. ಲಕ್ಷಾಂತರ ಮಹಿಳೆಯರು (Woman) ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ (Rahul Gandhi) ಅವರು, ಚುನಾವಣೆ ವೇಳೆ ಕಾಂಗ್ರೆಸ್ (Congress) ನಾಯಕರು ಐದು ಗ್ಯಾರೆಂಟಿ ಭರವಸೆ ಕೊಟ್ಟಿದ್ದೆವು, ನಮಗೊಂದು ಬದ್ದತೆ ಇತ್ತು, ಕಾಂಗ್ರೆಸ್ ಕೊಟ್ಟ ಮಾತನ್ನ ಮಾಡಿ ತೋರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಟನ್ ಒತ್ತಿ ಕೋಟ್ಯಾಂತರ ಮಹಿಳೆಯರ ಅಕೌಂಟಿಗೆ ಹಣ (Money) ಹಾಕಿದ್ದೇವೆ ಎಂದು ತಿಳಿಸಿದರು.ನಮ್ಮ ಮತ್ತು ಕರ್ನಾಟಕ ಸರ್ಕಾರದ ಭರವಸೆ ಈಡೇರಿದೆಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ನೇರವಾಗಿ ಹಣ ಜಮಾ ಆದಂತೆ ಪ್ರತಿ ತಿಂಗಳು ಹಣ ಜಮಾ ಆಗುತ್ತೆ. ಇದು ನಮ್ಮ ಮತ್ತು ಕರ್ನಾಟಕ ಸರ್ಕಾರದ ಭರವಸೆ. ನಾವು ಉಚಿತ ಪ್ರಯಾಣ ಬಗ್ಗೆ ಮತ್ತೊಂದು ಭರವಸೆ ಕೊಟ್ಟಿದ್ದೆವು, ಅದಕ್ಕೆ ಶಕ್ತಿ ಎಂಬ ಹೆಸರಿಟ್ಟು ಅದನ್ನ ಜಾರಿಗೊಳಿಸಿದ್ದೇವೆ.ಅದರಂತೆ ಮಹಿಳೆಯರು ಹಣ ನೀಡದೆ ಉಚಿತ ಪ್ರಯಾಣ, ಅನ್ನದ ಭಾಗ್ಯದ ಫಲಾನುಭವಿಗಳಿಗೆ ಹತ್ತು ಕೆಜಿ ಉಚಿತ ಅಕ್ಕಿ. 200 ಯೂನಿಟ್ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಜಾರಿ ಮಾಡಿದ್ದೇವೆ. ಯುವ ನಿಧಿ ಬಿಟ್ಟರೆ ಎಲ್ಲವೂ ಮಹಿಳೆಯರಿಗೆ ಮೀಸಲಾದ ಕಾರ್ಯಕ್ರಮಗಳು, ಪದವೀಧರ ಯುವಕರಿಗೆ ಪ್ರತಿತಿಂಗಳಿ ಮೂರು ಸಾವಿರ ಹಣ ನೀಡ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.ಇದನ್ನೂ ಓದಿ: Karnataka Politics: ‘ಡಿಸೆಂಬರ್ಗೆ ಲೋಕಸಭಾ ಚುನಾವಣೆ’ ಬಿಜೆಪಿ ಲೆಕ್ಕಾಚಾರ ಬಿಚ್ಚಿಟ್ಟ ಜಗದೀಶ್ ಶೆಟ್ಟರ್!ಗೃಹಲಕ್ಷ್ಮೀ ಯೋಜನೆ ಹಿಂದೆ ಆಳವಾದ ಯೋಚಿತ ಕಲ್ಪನೆ ಇದೆ, ಇದು ಮಹತ್ವಪೂರ್ಣವಾದ ಉದ್ದೇಶ. ಮರಕ್ಕಿಂತ ಮರ ದೊಡ್ಡದಿರುತ್ತೆ, ಬೇರು ಗಟ್ಟಿಯಾಗಿದ್ದರೆ ಎಂಥಾ ಬಿರುಗಾಳಿ ಬಂದರೂ ಮರ ಏನು ಆಗಲ್ಲ. ಕಟ್ಟಡ ಭದ್ರವಾಗಿರಲು ಅಡಿಪಾಯ ಮುಖ್ಯ. ಅದರಂತೆ ಸದೃಢ ಸಮಾಜ ನಿರ್ಮಾಣಕ್ಕೆ ನಾವು ಅಡಿಪಾಯ. ಕರ್ನಾಟಕದಲ್ಲಿ 600 ಕಿಮೀ ನಡೆದಾಗ ನಿಮ್ಮ ಜೊತೆ ಮಾತನಾಡಿದೆ. ಆಗ ನನಗೆ ಮನಗಂಡಿದ್ದು ಬೆಲೆ ಎಏರಿಕೆಯ ಬಿಸಿ, ತೈಲ ಬೆಲೆ, ಗ್ಯಾಸ್ ಬೆಲೆ, ದಿನಸಿ ಪದಾರ್ಥ. ನಡೆಯುತ್ತಾ ನಡೆಯುತ್ತಾ ನನಗೆ ಅನುಭವ ಆಯಿತು. ಕರ್ನಾಟಕದ ಅಡಿಪಾಯ ಮಹಿಳೆಯರು ಅಂತ ಗೊತ್ತಾಯ್ತು, ಬೇರು ಇಲ್ಲದೆ ಮರ ಇಲ್ಲವೋ ಅದೇ ರೀತಿ ಮಹಿಳೆಯರಿಲ್ಲದೆ ಕರ್ನಾಟಕವಿಲ್ಲ.ಐತಿಹಾಸಿಕ ಕಾರ್ಯಕ್ರಮ ಮಹಿಳೆಯರಿಗೆ ಅರ್ಪಣೆ!ಈ ರಾಜ್ಯದ ವಿವಿಧ ಭಾಗದಲ್ಲಿ ರಾಜ್ಯದ ಬುಡ ಮಹಿಳೆಯರು, ಈ ಕಾರ್ಯಕ್ರಮವನ್ನ ಕೇವಲ ಇಲ್ಲಿ ಮಾತ್ರ ಅಲ್ಲ ರಾಜ್ಯದ ಎಲ್ಲಾ ಕಡೆ ಉದ್ಘಾಟನೆ ಮಾಡುತ್ತಿದ್ದೇವೆ. ಐತಿಹಾಸಿಕ ಕಾರ್ಯಕ್ರಮವನ್ನ ಮಹಿಳೆಯರಿಗೆ ಅರ್ಪಣೆ ಮಾಡಿದ್ದೇವೆ. 12 ಸಾವಿರ ಕಡೆ ಕಾರ್ಯಕ್ರಮ ನಡೆಯುತ್ತಾ ಇದೆ, ಕರ್ನಾಟಕದ ಮೂಲೆ ಮೂಲೆಗಳಿಂದ ಮಹಿಳೆಯರು ಬಂದಿದ್ದಾರೆ ಅವರಿಗೆ ಸ್ವಾಗತ ಮಾಡುತ್ತೇನೆ.ಕರ್ನಾಟಕ ಸರ್ಕಾರ ನೂರು ವರ್ಷ ಪೂರೈಸಿದೆ, ನಾವು ಕೊಟ್ಟ ಮಾತನ್ನ ಉಳಿಸಿಕೊಂಡಿದ್ದೇವೆ. ನಾನು ಇಲ್ಲಿಗೆ ಬರುವಾಗ ಸಹೋದರಿಯೊಬ್ಬಳು ರಾಕಿ ಕಟ್ಟಿದರು. ಕರ್ನಾಟಕದ ಅಕ್ಕತಂಗಿಯರಿಗೆ ರಾಕಿ ಹಬ್ಬದ ಉಡುಗೊರೆಯಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ. ಯಾವ ಜಾತಿ ಧರ್ಮಕ್ಕೆ ಸೇರಿದ್ದರೂ ಎಲ್ಲರನ್ನೂ ಒಗ್ಗೂಡಿಸಿ ಕೊಂಡೊಯ್ಯಬೇಕು.ಗ್ಯಾರೆಂಟಿಗಳು ಜಾರಿಯಾಗಲ್ಲ ಅಂತ ದೆಹಲಿ ಸರ್ಕಾರ ಹೇಳಿತ್ತುಕರ್ನಾಟಕ ಸರ್ಕಾರ ಗ್ಯಾರಂಟಿಗಳು ಇಡೀ ದೇಶದಲ್ಲೇ ಮಾದರಿಯಾಗಿ ಕೊಡ್ತೇನೆ. ಕರ್ನಾಟಕ ದೇಶದಕ್ಕೆ ದಿಕ್ಸೂಚಿಯಾಗಿ ನಿಂತಿರುವ ರಾಜ್ಯ, ನಾವು ಈ ಐದು ಯೋಜನೆ ತಂದಾಗ ಆಗಲ್ಲ ಅಂತ ದೆಹಲಿ ಸರ್ಕಾರ ಹೇಳಿತ್ತು. ಗ್ಯಾರೆಂಟಿಗಳು ಜಾರಿಯಾಗಲ್ಲ ಅಂತ ದೆಹಲಿ ಸರ್ಕಾರ ಹೇಳಿತ್ತು. ನಮ್ಮ ವಿರೋಧಿಗಳು ಸಾಧ್ಯವಿಲ್ಲ ಅಂತ ಹೇಳಿದ್ದರು. ಪ್ರಧಾನಿಯೇ ಖುದ್ದು ಕಾಂಗ್ರೆಸ್ ಸತ್ಯಕ್ಕೆ ದೂರವಾದ ಸುಳ್ಳು ಹೇಳುತ್ತಿದೆ ಅಂತ ಹೇಳಿದ್ದರು. ಇಂದು ಹಣ ಜಮಾ ಆಗಿದೆ, ವಿಶ್ವದಲ್ಲೇ ಮಾದರಿಯಾದ ಕಾರ್ಯಕ್ರಮ.ಇಡೀ ದೇಶದಲ್ಲೇ ಇಷ್ಟು ಮೊತ್ತದ ಕಾರ್ಯಕ್ರಮ ಇಲ್ಲ, ಇದರಿಂದ ಮಹಿಳೆಯರಿಗೆ ರಕ್ಷಣೆ ಸಿಗುತ್ತಿದೆ. ಮಕ್ಕಳಿಗೆ ಪುಸ್ತಕ, ಶಿಕ್ಷಣ ಪಡೆಯಲು ಅನುಕೂಲ. ಕರ್ನಾಟಕದ ರಾಜ್ಯದ ಅಕ್ಕ-ತಂಗಿಯರು ರಾಜ್ಯದ ಏಳಿಗೆಗೆ ಕಾರಣ, ಯಾರಿಂದಲಾದರೂ ಅಭಿವೃದ್ಧಿ ಆಗಿದ್ದರೆ ನಿಮ್ಮಿಂದ ಮಾತ್ರ.ನಾವು ಯಾವತ್ತು ಸುಳ್ಳು ಹೇಳಲ್ಲ, ಆಗಲ್ಲ ಅಂದರೆ ಆಗಲ್ಲ ಅಂತ ಹೇಳ್ತೀವಿ. ಇದು ನಮ್ಮ ಯೋಜನೆಯಲ್ಲ ನಿಮ್ಮ ಯೋಜನೆ. ಭಾರತ್ ಜೋಡೋ ಯಾತ್ರೆ ವೇಳೆ ನಿಮ್ಮ ಮಾತನ್ನ ಆಲಿಸಿದ್ದೆ, ಕಾಂಗ್ರೆಸ್ ಪಕ್ಷ ಇದನ್ನ ಥಿಂಕ್ ಟ್ಯಾಂಕ್ ಮಾಡಿಲ್ಲ. ಉದ್ಯಮಿಗಳಿಗಳಿಗೆ ಮಾಡಿದ ಯೋಜನೆಯಲ್ಲ. ನೀವು ತೋರಿದ ದಾರಿಯಿಂದ ಈ ಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.

Post a Comment