ಸಾಂದರ್ಭಿಕ ಚಿತ್ರ
ಸಾವಿನ ಪ್ರಕರಣಗಳು ಇದುವರೆಗೆ ವರದಿಯಾಗದೇ ಇದ್ದರೂ ಇದುವರೆಗೆ ಆರು ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.ಮಹಾರಾಷ್ಟ್ರ (ಆ.1): ಮಳೆಗಾಲ (Rainy Season) ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ವೈರಸ್‌ಗಳಿಗೂ ಜೀವ ಬಂದಂತಾಗಿದ್ದು ದೇಶದಲ್ಲಿ ಇನ್‌ಫ್ಲುಯಂಜಾ ಸಬ್‌ಟೈಪ್ H3N2, ಇತ್ತೀಚೆಗೆ ವ್ಯಾಪಕವಾಗಿ ಸದ್ದುಮಾಡಿದ್ದ ವೈರಸ್‌ಗಳಾದ -H1N1 (ಹಂದಿ ಜ್ವರ) ಮತ್ತು ಸಾಂಕ್ರಾಮಿಕ ಕಾಯಿಲೆಗೆ ಕಾರಣವಾದ SARS-CoV2 ಅನ್ನು ಮೀರಿಸಿ ಪ್ರಬಲವಾಗಿ ಹರಡುತ್ತಿದೆ ಎಂಬುದಾಗಿ ವರದಿಯಾಗಿದೆ.ಮಳೆಗಾಲದಲ್ಲಿ ಹರಡುವ ಇತರ ಸಾಂಕ್ರಾಮಿಕ ಸೋಂಕುಗಳೊಂದಿಗೆ ಈ ವೈರಸ್ ಕೂಡ ಸೇರಿಕೊಂಡಿದ್ದು ಇನ್ನಷ್ಟು ಪ್ರಬಲವಾಗಿದೆ. H3N2 ಉಪವರ್ಗ ವಿಕ್ಟೋರಿಯಾ ದೇಶದಲ್ಲಿ ಕೂಡ ಸಣ್ಣ ಪ್ರಮಾಣದ ಸೋಂಕುಗಳನ್ನು ಹರಡುತ್ತಿದೆ.ಮಹಾರಾಷ್ಟ್ರದಲ್ಲಿ ಆಸ್ಪತ್ರೆಗೆ ದಾಖಲಾದ ನೂರಾರು ರೋಗಿಗಳುಇದಕ್ಕೆ ಪುರಾವೆ ಎಂಬಂತೆ ಕಳೆದ ಶನಿವಾರ ಮಹಾರಾಷ್ಟ್ರದ ಸರಕಾರಿ ಆಸ್ಪತ್ರೆಗಳಲ್ಲಿ ಸುಮಾರು 100 ರೋಗಿಗಳು ದಾಖಲಾಗಿದ್ದು ಲ್ಯಾಬ್ ಹಾಗೂ ಆಸ್ಪತ್ರೆಯ ವರದಿಯನ್ವಯ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ H3N2 ವೈರಸ್ ಪ್ರಧಾನವಾಗಿ ಪತ್ತೆಯಾಗಿದೆ.ಸಾವಿನ ಪ್ರಕರಣಗಳು ಇದುವರೆಗೆ ವರದಿಯಾಗದೇ ಇದ್ದರೂ ಇದುವರೆಗೆ ಆರು ಪ್ರಕರಣಗಳು ವರದಿಯಾಗಿದ್ದು, ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.ಉಸಿರಾಟ ಕಾಯಿಲೆಗಳ ಹರಡುವಿಕೆ ಮುಖ್ಯ ಕಾರಣವೇನು?ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ ಸುರಂಜಿತ್ ಚಟರ್ಜಿ ತಿಳಿಸಿರುವಂತೆ ಇನ್‌ಫ್ಲುಯಂಜಾ ಸಾಮಾನ್ಯವಾಗಿ ಚಳಿಗಾಲದಲ್ಲಿ ಕಂಡುಬರುವ ಒಂದು ಕಾಯಿಲೆಯಾಗಿದೆ.ಆದರೆ ನಿರಂತರ ಮತ್ತು ಭಾರೀ ಮಳೆಯಂತಹ ಹವಾಮಾನ ವೈಪರೀತ್ಯಗಳಿಂದ ಹಾಗೆಯೇ ಪ್ರವಾಹ ಮೊದಲಾದ ಪ್ರಾಕೃತಿಕ ವಿಕೋಪಗಳು, H1N1 ಮತ್ತು H3N2 ವೈರಸ್‌ಗಳಂತಹ ಉಸಿರಾಟ ಕಾಯಿಲೆಗಳ ಹಬ್ಬುವಿಕೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.ಕ್ಷಿಪ್ರವಾಗಿ ಚುರುಕುಗೊಂಡಿರುವ ವೈರಸ್ಮಳೆಗಾಲದಲ್ಲಿ ಜನರು ಬೇಗ ಒದ್ದೆಯಾಗುತ್ತಾರೆ ಅಂತೆಯೇ ಹವಾಮಾನದಲ್ಲಿ ಕೂಡ ಬದಲಾವಣೆಗಳಾಗುತ್ತವೆ. ಇನ್ನು ವಾತಾವರಣದ ಆರ್ದ್ರತೆ ಇವೆಲ್ಲವೂ ಸೇರಿ ಜನರಲ್ಲಿ ವೈರಸ್ ಹರಡುವಿಕೆ ಕ್ಷಿಪ್ರವಾಗಿ ನಡೆಯುತ್ತಿದೆ ಎಂಬುದು ವೈದ್ಯರ ಮಾತಾಗಿದೆ.ಇದನ್ನೂ ಓದಿ: Osteoporosis: ಏನಿದು ಗೊತ್ತಾ ಅಸ್ಥಿರಂಧ್ರತೆ? ಇದು ನಿಮ್ಮ ಮೂಳೆಯನ್ನೂ ಮುರಿಯುವಂತೆ ಮಾಡುತ್ತಾ?ಜನರು ಹೆಚ್ಚಿನ ನಿಗಾ ಹಾಗೂ ಮುತುವರ್ಜಿ ವಹಿಸಬೇಕುವೈದ್ಯರು ತಿಳಿಸಿರುವಂತೆ H1N1 ಮತ್ತು H3N2 ಎರಡೂ ವೈರಸ್‌ಗಳು ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ ಎಂದಾಗಿದ್ದು ಜನರು ಈ ಕುರಿತು ಎಚ್ಚರಿಕೆ ಹಾಗೂ ನಿಗಾವಹಿಸಬೇಕು ಹಾಗೂ ವ್ಯಾಕ್ಸಿನೇಶನ್‌ಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.ಈ ಕುರಿತು ಸರಕಾರ ಕೂಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ವ್ಯಾಕ್ಸಿನೇಶನ್ ನಿರ್ವಹಿಸುವ ಮುಂದಾಳತ್ವ ವಹಿಸಬೇಕು ಎಂದು ಚಟರ್ಜಿ ಸಲಹೆ ನೀಡಿದ್ದಾರೆ.6% ದಷ್ಟಿದ್ದ ಜ್ವರ ಪ್ರಕರಣಗಳು 19% ಕ್ಕೆ ಏರಿಕೆಮಹಾರಾಷ್ಟ್ರದಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ 6% ರಷ್ಟಿದ್ದ ಜ್ವರದ ಪ್ರಕರಣಗಳು ಇದೀಗ 19% ಕ್ಕೆ ಏರಿಕೆಯಾಗಿದ್ದು ಇದೊಂದು ರೀತಿ ಕಳವಳಕಾರಿಯಾಗಿದೆ ಎಂಬುದು ಚಟರ್ಜಿ ಅಭಿಪ್ರಾಯವಾಗಿದೆ.ಜನವರಿಯಿಂದ, ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರಕಾರ, 1,540 ಲ್ಯಾಬ್-ದೃಢೀಕರಿಸಿದ ಇನ್‌ಫ್ಲುಯಂಜಾ ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ ಸುಮಾರು 900 H3N2 ತಳಿಗಳಾಗಿವೆ ಎಂಬುದಾಗಿ ತಿಳಿದು ಬಂದಿದೆ.ಮಾರ್ಗಸೂಚಿಗಳನ್ನು ಜನರು ಅನುಸರಿಸಬೇಕುಈ ಸಮಯದಲ್ಲಿ ಜನರು ಕೋವಿಡ್ ಸಮಯದಲ್ಲಿದ್ದ ಅದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಜ್ಞರು ವಿನಂತಿಸಿದ್ದಾರೆ. ಅಂದರೆ ಮಾಸ್ಕ್ ಧರಿಸುವುದು, ಕೈಗಳನ್ನು ಸ್ಯಾನಿಟೈಸ್ ಮಾಡುವುದು, ಮಳೆಯಲ್ಲಿ ಒದ್ದೆಯಾಗುವುದನ್ನು ತಪ್ಪಿಸುವುದು, ಜನಜಂಗುಳಿಯಿಂದ ಅಂತರ ಪಾಲಿಸುವುದು ಹೀಗೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಪಾಲಿಸಬೇಕು ಎಂಬುದು ಚಟರ್ಜಿ ಅಭಿಪ್ರಾಯವಾಗಿದೆ.ಇದನ್ನೂ ಓದಿ: Explained: ಭಾರತೀಯರಲ್ಲಿ ಅಪಾಯಕಾರಿಯಾಗಿ ಹೆಚ್ಚುತ್ತಿರುವ ಫ್ಯಾಟಿ ಲಿವರ್ ಕಾಯಿಲೆ; ಕಾರಣಗಳೇನು?ಟೈಪ್ ಎ H3N2 ರೋಗಲಕ್ಷಣಗಳೇನು?ಸಾಮಾನ್ಯವಾಗಿ ಶೀತದೊಂದಿಗಿನ ಜ್ವರನಿರಂತರ ಕೆಮ್ಮು ಕಾಣಿಸಿಕೊಳ್ಳುವುದುಸ್ನಾಯು ಹಾಗೂ ಕೀಲುಗಳಲ್ಲಿ ನೋವು, ಸೆಳೆತಅನಾರೋಗ್ಯ (ತೀವ್ರ ಅಸ್ವಸ್ಥತೆಯ) ಭಾವನೆಸ್ರವಿಸುವ ಮೂಗುಗಂಟಲು ಕೆರೆತತಲೆನೋವುವಾಕರಿಕೆಮೈ ಕೈ ನೋವು

Post a Comment