Bad Habits: ನೀವು ಒಳ್ಳೆಯವ್ರೇ, ಆದ್ರೆ ನಿಮಗೆ ಗೊತ್ತಿಲ್ಲದೇ ಈ ಕೆಟ್ಟ ಅಭ್ಯಾಸಗಳು ಆರೋಗ್ಯ ಹಾಳು ಮಾಡುತ್ತೆ!


 ಕೆಟ್ಟ ಅಭ್ಯಾಸಗಳು

ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವು ಮೈಗೂಡಿಸಿಕೊಂಡಿರುವ ಯಾವೆಲ್ಲಾ ದುರಭ್ಯಾಸಗಳು ಹೇಗೆ ನಮ್ಮ ಆರೋಗ್ಯಕ್ಕೆ ಹಾನಿಕರ ಎಂಬ ಬಗ್ಗೆ ಇಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕರು, ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿಸ್ಟ್ ಆಗಿರುವ ಡಾ. ನಿತಿ ಕೃಷ್ಣ ರೈಜಾಡಾ ಹೇಳಿದ್ದಾರೆ.ಯಾರೇ ಆಗಲಿ ಅವರವರ ಭವಿಷ್ಯ ಬದಲಾಯಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ನೀವು ನಿಮ್ಮ ಕೆಲವು ಕೆಟ್ಟ ಅಭ್ಯಾಸಗಳನ್ನು (bad habits) ಬದಲಾಯಿಸಲು ಖಂಡಿತ ಸಾಧ್ಯವಿದೆ. ಖಂಡಿತವಾಗಿಯೂ ಈ ಕೆಟ್ಟ ಅಭ್ಯಾಸಗಳನ್ನು ಬದಲಾಯಿಸಿಕೊಂಡರೆ ಅದು ನಿಮ್ಮ ಉತ್ತಮ ಭವಿಷ್ಯಕ್ಕೆ ಸಹಾಯ ಮಾಡುತ್ತದೆ. ಹೀಗಂತ ಸ್ವತಃ ಕಟ್ಟುನಿಟ್ಟಿನ ಜೀವನಶೈಲಿ (strict lifestyle) ಫಾಲೋ ಮಾಡುತ್ತಿದ್ದ ಮತ್ತು ಅತ್ಯುತ್ತಮ ಉದಾಹರಣೆಯಾಗಿದ್ದ ಗೌರವಾನ್ವಿತ ಭಾರತದ ಮಾಜಿ ರಾಷ್ಟ್ರಪತಿ (former President of India), ದಿವಂಗತ ಡಾ. ಅಬ್ದುಲ್ ಕಲಾಂ (Dr. Abdul Kalam) ಹೇಳಿದ್ದರು. ಹಾಗಾಗಿ ನಾವೂ ಸಹ ನಮಗೆ ಗೊತ್ತಿಲ್ಲದೇ ನಮ್ಮ ಮೈಗೂಡುವ ಮತ್ತು ಬಿಡಲಾಗದ ಕೆಲವು ಕೆಟ್ಟ ಅಭ್ಯಾಸಗಳಿಂದ ಜೀವನಶೈಲಿ ಕೆಟ್ಟು ಹೋಗುತ್ತದೆ. ಅಂತಹ ಕೆಲವು ದುರಭ್ಯಾಸಗಳ ಬಗ್ಗೆ ತಿಳಿಯೋಣ.ಗ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವು ಮೈಗೂಡಿಸಿಕೊಂಡಿರುವ ಯಾವೆಲ್ಲಾ ದುರಭ್ಯಾಸಗಳು ಹೇಗೆ ನಮ್ಮ ಆರೋಗ್ಯಕ್ಕೆ ಹಾನಿಕರ ಎಂಬ ಬಗ್ಗೆ ಇಲ್ಲಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕರು, ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿಸ್ಟ್ ಆಗಿರುವ ಡಾ. ನಿತಿ ಕೃಷ್ಣ ರೈಜಾಡಾ ಹೇಳಿದ್ದಾರೆ.ನಿದ್ದೆಗೆಡುವ ದುರಾಭ್ಯಾಸ:ವಯಸ್ಕರರು ಪ್ರತಿ ರಾತ್ರಿ 6 ರಿಂದ 8 ಗಂಟೆಗಳ ಉತ್ತಮ ಗುಣಮಟ್ಟದ ನಿದ್ರೆ ಮಾಡಬೇಕು. ನಿದ್ರಾಹೀನತೆಯು ಭಾವನೆ ಬದಲಾವಣೆ, ಕಿರಿಕಿರಿ ಉಂಟು ಮಾಡುವಿಕೆ, ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಮತ್ತು ಜ್ಞಾಪನ ಸಮಸ್ಯೆ, ಅರಿವಿನ ಸಮಸ್ಯೆಗೆ ಕಾರಣವಾಗುತ್ತದೆ. ಇದು ಬೊಜ್ಜು, ಮಧುಮೇಹ, ಹೃದ್ರೋಗ ದೈಹಿಕ ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಜೈವಿಕ ಅಸಮತೋಲನ ಸ್ತನ, ಅಂಡಾಶಯ, ಪ್ರಾಸ್ಟೇಟ್ ಮತ್ತು ಕರುಳಿನ ಕ್ಯಾನ್ಸರ್‌ಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಿಸುತ್ತದೆ.ನಿಮ್ಮ ಮೊಬೈಲ್ ಫೋನ್ ಅನ್ನು ದೂರವಿಡುವ ಮೂಲಕ ಸಾಕಷ್ಟು ನಿದ್ದೆ ಮಾಡಿ. ಉತ್ತಮ ನಿದ್ದೆ ಮಾಡುವ ಉತ್ತಮ ಅಭ್ಯಾಸ ಬೆಳೆಸಿಕೊಳ್ಳಿ. ಧ್ಯಾನ ಅಥವಾ ಸಾವಧಾನತೆಯ ಕಲೆ ಕಲಿಯಿರಿ. ಆಳ ಉಸಿರಾಟದ ತಂತ್ರಗಳನ್ನು ಕಲಿಸುವ ಹಲವಾರು ಅಪ್ಲಿಕೇಶನ್‌ಗಳ ಸಹಾಯ, ಅರಿವಿನ ವರ್ತನೆಯ ಚಿಕಿತ್ಸೆಗಾಗಿ ವೃತ್ತಿಪರ ಸಹಾಯ ಪಡೆಯಿರಿ. ಕೆಫೀನ್ ಹೊಂದಿರುವ ಪಾನೀಯ ಮತ್ತು ಹೆಚ್ಚುವರಿ ಕಾಫಿ ಕೂಡ ನಿದ್ದೆಗೆ ಅಡ್ಡಿಪಡಿಸುತ್ತದೆ ಎಂಬುದು ತಿ


ಳಿದಿರಲಿ.ಡಾ. ನಿತಿ ಕೃಷ್ಣ ರೈಜಾಡಾ, ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ನಿರ್ದೇಶಕರು, ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೋ-ಆಂಕೊಲಾಜಿಸ್ಟ್ತಂಬಾಕು ಸೇವನೆ:ತಂಬಾಕು ಸೇವನೆಗೆ ವೈದ್ಯಕೀಯವಾಗಿ ಅನುಮತಿ ಸಿಗುವುದೇ ಇಲ್ಲ. ಆದ್ದರಿಂದ ಧೂಮಪಾನ, ತಂಬಾಕು ಜಗಿಯುವುದು ಅಥವಾ ನಶ್ಯ, ಹುಕ್ಕಾ ಕಟ್ಟುನಿಟ್ಟಾಗಿ ತ್ಯಜಿಸಬೇಕು. ನಿಮ್ಮ ಧೂಮಪಾನ ಪ್ರಚೋದಕಗಳನ್ನು ಗುರುತಿಸಿ ಮತ್ತು ನಿಮ್ಮ ಚಟವನ್ನು ಬಿಡಲು ಯತ್ನಿಸಿ. ಇದನ್ನು ಬಿಡಲು ವೃತ್ತಿಪರರ ಸಹಾಯ ಪಡೆದುಕೊಳ್ಳಿ, ಸಮಾಲೋಚನೆ ಮತ್ತು ಕಾರ್ಯಸಾಧ್ಯವಾದ ಕ್ರಿಯಾ ಯೋಜನೆ, ಔಷಧಿಗಳ ಮೂಲಕ ಡಿ-ಅಡಿಕ್ಷನ್ ಸಹಾಯ ಪಡೆಯಿರಿ.ಧೂಮಪಾನಕೆಟ್ಟ ಆಹಾರ ಪದ್ಧತಿ:ಇದು ಬಹುಶಃ ಎಲ್ಲರಲ್ಲಿ ಕಂಡು ಬರುವ ದುರಾಭ್ಯಾಸವಾಗಿದೆ. ಹೆಚ್ಚು ಸಂಸ್ಕರಿಸಿದ ಆಹಾರ ತಿನ್ನುವುದು, ಅತಿಯಾಗಿ ತಿನ್ನುವುದು, ಅನಿಯಮಿತ ಆಹಾರ ಕ್ರಮ, ಮಧ್ಯರಾತ್ರಿಯ ತಿಂಡಿ, ಅತಿಯಾದ ಕ್ಯಾಲೋರಿ ಸೇವನೆ ಮುಂತಾದವು ಉತ್ತಮವಲ್ಲ. ಸ್ಥೂಲಕಾಯತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಂತಹ ಎಲ್ಲಾ ವ್ಯವಸ್ಥಿತ ಕಾಯಿಲೆಗಳಿಗೆ ಕಾರಣವಾಗುತ್ತದೆ.ಅವು ಅನೇಕ ಕ್ಯಾನ್ಸರ್‌ಗಳ ಅಪಾಯ ಹೆಚ್ಚಿಸುತ್ತವೆ. ನೀವು ಸೇವಿಸುವ ಆಹಾರದಲ್ಲಿ ಸಾಕಷ್ಟು ಫೈಬರ್ ಇರಲಿ. ಮಾಂಸಾಹಾರಿಗಳಾಗಿದ್ದರೆ ಕೆಂಪು ಮಾಂಸ ಸೇವನೆ ಕಡಿಮೆ ಮಾಡಿ. ಸಕ್ಕರೆ ಸೇವನೆ ಪ್ರಮಾಣ ಕಡಿಮೆ ಮಾಡಿ. ಪ್ರತಿದಿನ 2-3 ಲೀಟರ್ ನೀರು ಕುಡಿಯಿರಿ. ಉತ್ತಮ ಆಹಾರ ಯೋಜನೆ ರೂಪಿಸಿ. ಇದು ಆರೋಗ್ಯಕರ ಜೀವನಕ್ಕೆ ಮೂಲಾಧಾರ. ಮಾರ್ಗದರ್ಶನಕ್ಕಾಗಿ ಆಹಾರ ತಜ್ಞರನ್ನು ಭೇಟಿ ಮಾಡುವುದು ಅತ್ಯಗತ್ಯ.ಕುಡಿತದ ಚಟ ಬಿಡಿ:ಮದ್ಯಸೇವನೆ, ನಿಯಮಿತವಾಗಿ ಆಲ್ಕೊಹಾಲ್ ಸೇವಿಸುವುದು ಹಾನಿ ಮಾಡುತ್ತದೆ. ಇದು ಯಕೃತ್ತು ತೊಂದರೆ, ಕ್ಯಾನ್ಸರ್‌ಗೆ ಕಾರಣವಾಗಬಹುದು.ಕುಳಿತೇ ಇರಬೇಡಿ:ನಮ್ಮ ಜೀವನ ಶೈಲಿ ಬದಲಾಗಿದೆ. ದಿನದ ಬಹುಕಾಲ ಕುಳಿತ್ತಿರುತ್ತೇವೆ. ಮೇಜಿನ ಎದುರು ಕೆಲಸ ಮಾಡುತ್ತೇವೆ ಮತ್ತು ನಂತರ ಮತ್ತೆ ಟಿವಿ ಅಥವಾ ಗ್ಯಾಜೆಟ್‌ಗಳ ಮುಂದೆ ಇರುತ್ತೇವೆ. ಪ್ರತಿ ಒಂದು ಗಂಟೆಯಲ್ಲಿ ಕನಿಷ್ಠ 5-10 ನಿಮಿಷಗಳ ಕಾಲ ಮೇಜಿನಿಂದ ಎದ್ದು ಓಡಾಡಿ. ಸುತ್ತಲೂ ಚಲಿಸಬೇಕು. ಪ್ರತಿ ದಿನ ಒಂದರಿಂದ ಎರಡು ಗಂಟೆಗಳ ಕಾಲ ಎಲ್ಲಾ ಗ್ಯಾಜೆಟ್ ಆಫ್ ಮಾಡುವುದು ಮತ್ತು ಮನೆಯಿಂದ ಹೊರಗಿರುವುದು ಮತ್ತೊಂದು ನಿಯಮ. ಗಾಳಿ, ಪ್ರಕೃತಿಯನ್ನು ಆಸ್ವಾದಿಸಿ. ದೇಹ ಬೆವರಲಿ. ಇದು ಆರೋಗ್ಯ ಕಾಪಾಡಲು ಸಹಕಾರಿ.ಇದನ್ನೂ ಓದಿ: ಈ 5 ಅಭ್ಯಾಸಗಳು ಗ್ರಹ ದೋಷಕ್ಕೆ ಕಾರಣವಾಗುತ್ತೆ ಎಚ್ಚರಕೆಟ್ಟ ಅಭ್ಯಾಸಗಳಿಗೆ ಬಲಿಯಾಗುವುದು ಸುಲಭ. ಅದರಿಂದ ಹೊರಬರುವುದು ಸುಲಭ. ಹಾಗಾಗಿ ಉತ್ತಮ ಅಭ್ಯಾಸಗಳನ್ನು ಪ್ರಾರಂಭಿಸಿ. ದುಶ್ಚಟಗಳ ಭಾರವಾದ ಸರಪಳಿಯಿಂದ ಹೊರಗೆ ಬನ್ನಿ. ಇದು ನಿಮ್ಮ ದೇಹ, ನಿಮ್ಮ ಜೀವನ ಕಾಪಾಡುತ್ತದೆ.

Post a Comment

Previous Post Next Post