Free Bus: ಶಕ್ತಿ ಯೋಜನೆ ಹಣ ಬಿಡುಗಡೆ; ಯಾವ ನಿಗಮಗಳಿಗೆ ಎಷ್ಟು ಹಣ?


 ಶಕ್ತಿ ಯೋಜನೆ ಹಣ ಬಿಡುಗಡೆ (ಸಾಂದರ್ಭಿಕ ಚಿತ್ರ)

Congress Government: ಕಾಂಗ್ರೆಸ್ ಸರ್ಕಾರ (Congress Government) ಜೂನ್ 11ರಂದ ಶಕ್ತಿ ಯೋಜನೆ ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರು ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ (Transport Corporation) ಶಕ್ತಿ ಯೋಜನೆಯ (Shakti Scheme) ಮೊದಲ ಕಂತಿನ ಹಣವನ್ನು (Money) ಬಿಡುಗಡೆಗೊಳಿಸಿದೆ. ರಾಜ್ಯ ಸರ್ಕಾರ ಸಾರಿಗೆ ನಿಗಮಗಳಿಗೆ 125.48 ಕೋಟಿ ಹಣ ಬಿಡುಗಡೆ ಮಾಡಿದೆ. ಶಕ್ತಿ ಯೋಜನೆ ಅಡಿ ವಿತರಿಸಿದ ಶೂನ್ಯ ಟಿಕೆಟ್​​ಗಳ (Free Ticket) ಹಣ ಮೊದಲ ಕಂತಿನ ರೂಪದಲ್ಲಿ ನಾಲ್ಕು ನಿಗಮಗಳಿಗೂ ಪ್ರತೇಕ ಹಣ ಬಿಡುಗಡೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ (Congress Government) ಜೂನ್ 11ರಂದ ಶಕ್ತಿ ಯೋಜನೆ ಆರಂಭಿಸಿದೆ. ಈ ಯೋಜನೆಯಡಿಯಲ್ಲಿ ರಾಜ್ಯದ ಮಹಿಳೆಯರು ಸಾರಿಗೆ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇಲ್ಲಿಯವರಗೆ ಒಟ್ಟು ನಾಲ್ಕು ನಿಗಮಗಳಲ್ಲಿ 29 ಕೋಟಿ 32 ಲಕ್ಷ 49 ಸಾವಿರದ 151 ಶೂನ್ಯ ದರದ ಟಿಕೆಟ್ ನೀಡಲಾಗಿದೆ. ಒಟ್ಟು ನಾಲ್ಕು ನಿಗಮಗಳ ಶೂನ್ಯ ಟಿಕೆಟ್ ದರದ ಮೌಲ್ಯ 687 ಕೋಟಿ 49 ಲಕ್ಷದ 57 ಸಾವಿರದ 753 ರೂಪಾಯಿ ಆಗಿದೆ.ಯಾವ ನಿಗಮಗಳಿಗೆ ಎಷ್ಟು ಹಣ ಬಿಡುಗಡೆ?KSRTC - 47.15 ಕೋಟಿ ರೂಪಾಯಿBMTC - 21.85 ಕೋಟಿ ರೂಪಾಯಿNWRTC- 32.57 ಕೋಟಿ ರೂಪಾಯಿ KKRTC - 23.90 ಕೋಟಿ ರೂಪಾಯಿಬೆಲೆ ಏರಿಕೆ 6ನೇ ಗ್ಯಾರಂಟಿ ಎಂದ ಬೊಮ್ಮಾಯಿ ಟೀಕೆಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಎಲ್ಲ ವಸ್ತುಗಳ ಬೆಲೆಗಳ ಏರಿಕೆಯ ಗ್ಯಾರಂಟಿ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Former CM Basavaraj Bommai) ಹರಿಹಾಯ್ದಿದ್ದಾರೆ. ವಿದ್ಯುತ್ ದರ ಏರಿಕೆಯ ಶಾಕ್, ಟೊಮ್ಯಾಟೋ ಸಹಿತ ಎಲ್ಲ ತರಕಾರಿಗಳ ಬೆಲೆ ಏರಿಕೆ, ನಂದಿನಿ ಹಾಲು, ಮೊಸರು, ಮಜ್ಜಿಗೆ ಬೆಲೆ ಏರಿಕೆ, ಹೋಟೆಲ್​ಗಳಲ್ಲಿ ತಿಂಡಿಗಳ ಬೆಲೆ ಏರಿಕೆ, ಬಜೆಟ್​ನಲ್ಲಿ ಅಬಕಾರಿ ತೆರಿಗೆ ಹೆಚ್ಚಳ, ಮೋಟರ್ ವೆಹಿಕಲ್ ತೆರಿಗೆ ಹೆಚ್ಚಳ, ಸ್ಟ್ಯಾಂಪ್ ಡ್ಯೂಟಿ ಹೆಚ್ಚಳದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆ ಆಗಲಿ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.ಇದನ್ನೂ ಓದಿ: Congress Meeting: ಭಿನ್ನಮತ ಶಮನಕ್ಕೆ ‘ಹೈ’ ಸರ್ಕಸ್​; ಇಂದು ಖರ್ಗೆ, ರಾಹುಲ್‌ ನೇತೃತ್ವದಲ್ಲಿ ಸಭೆಇನ್ನು ಗ್ಯಾರಂಟಿ ಯೋಜನೆಗಳಿಗೆ ಎಸ್​​ಸಿ ಎಸ್​ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಬಳಕೆ ಮಾಡ್ತಿದ್ದಾರೆ ಅಂತಾ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್‌ ಇಲಾಖೆಯಲ್ಲಿ ಮೇಜರ್‌ ಸರ್ಜರಿರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. ಬರೋಬ್ಬರಿ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಗೊಳಿಸಿ ಡಿಜಿ ಐಜಿಪಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ನಗರದಲ್ಲಿ ಸುಮಾರು 67 ಇನ್​ಸ್ಪೆಕ್ಟರ್‌ಗಳ ವರ್ಗಾವಣೆಯಾಗಿದೆ.

Post a Comment

Previous Post Next Post