Congress Meeting: ಭಿನ್ನಮತ ಶಮನಕ್ಕೆ ‘ಹೈ’ ಸರ್ಕಸ್​; ಇಂದು ಖರ್ಗೆ, ರಾಹುಲ್‌ ನೇತೃತ್ವದಲ್ಲಿ ಸಭೆ


  ಕಾಂಗ್ರೆಸ್ ಹೈಕಮಾಂಡ್ ಸಭೆ (ಸಾಂದರ್ಭಿಕ ಚಿತ್ರ)Congress High Command: ಇಂದು ನಡೆಯುವ ಸಭೆಯಲ್ಲಿ ಸಮನ್ವಯ ಸಮಿತಿ ರಚನೆ ಬಗ್ಗೆಯೂ ನಿರ್ಧಾರವಾಗೋ ಸಾಧ್ಯತೆ ಇದೆ. ಜೊತೆಗೆ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.ಬೆಂಗಳೂರು: ಕಾಂಗ್ರೆಸ್ (Congress) ಭಿನ್ನಮತ ಶಮನಕ್ಕೆ ಹೈಕಮಾಂಡ್ (High command) ಭಾರೀ ಕಸರತ್ತು ನಡೆಸುತ್ತಿದೆ. ಸಚಿವರ ವಿರುದ್ಧ ಶಾಸಕರು (MLAs) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ (Mallikarjun Kharge) ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ಸಭೆ ನಡೆಯಲಿದೆ. ಇನ್ನು ಈ ಬಗ್ಗೆ ಸಿಎಲ್‌ಪಿ ಸಭೆಯಲ್ಲೂ (CLP Meeting) ಚರ್ಚೆ ಮಾಡಲಾಗಿತ್ತು. ಇಂದು ನಡೆಯುವ ಸಭೆಯಲ್ಲಿ ಸಮನ್ವಯ ಸಮಿತಿ ರಚನೆ ಬಗ್ಗೆಯೂ ನಿರ್ಧಾರವಾಗೋ ಸಾಧ್ಯತೆ ಇದೆ. ಜೊತೆಗೆ ಲೋಕಸಭೆ ಚುನಾವಣೆ ಸಿದ್ಧತೆ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.ದೆಹಲಿಯಲ್ಲಿರೋ ಡಿಸಿಎಂ ಡಿಕೆ ಶಿವಕುಮಾರ್ ರಾತ್ರಿ ಮಧ್ಯಪ್ರದೇಶ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕ ಕಮಲ್ ನಾಥ್‌ ಅವರವ್ನ ಭೇಟಿಯಾದ್ರು. ಉಭಯ ನಾಯಕರು ಕೆಲವು ಗಂಟೆಗಳ ಕಾಲ ಹಲವು ವಿಚಾರಗಳ ಬಗ್ಗೆ ಚರ್ಚಿಸಿದರು.ಇಂದು ದೆಹಲಿಗೆ ಹೋಗ್ತಿದ್ದೇನೆ. ಪಕ್ಷದ ಕೆಲಸ ಇದೆ. ಸರ್ಕಾರದ ಕೆಲಸ ಇದೆ ಅಂತ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಲೋಕಸಭೆ ಚುನಾವಣೆ, ಪಕ್ಷದ ಹಿತದೃಷ್ಟಿಯಿಂದ ಹೋಗ್ತಿದ್ದೇವೆ. ಗ್ಯಾರಂಟಿ ಜನರಿಗೆ ತಲುಪುತ್ತಿದೆಯಾ.? ಅಂತ ಮಾಹಿತಿ ಚರ್ಚೆ ಮಾಡುತ್ತೇವೆ ಅಂತ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.ನನಗೆ ಆಹ್ವಾನ ಬಂದಿಲ್ಲದೆಹಲಿಯಲ್ಲಿ ನಡೆಯುವ ಎಐಸಿಸಿ ಅಧ್ಯಕ್ಷ ಸಭೆಗೆ ನನಗೆ ಆಹ್ವಾನ ಬಂದಿಲ್ಲ. ನನಗೆ ಕರೆಯದೇ ನಾನು ಹೋಗೋದು ಹೇಗೆ ಎಂದು ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಅಲ್ಲದೇ ನನಗೆ ಗೊತ್ತಿರೋ ಹಾಗೆ ಲೋಕಸಭಾ ಚುನಾವಣೆಗೆ ಪೂರಕವಾಗಿ ಚರ್ಚೆಸಲು ಪಕ್ಷದ ಮುಖಂಡರನ್ನ ಕರೆದಿದ್ದಾರೆ. ನಾವು ಸಂಘಟನೆಗೆ ಬಗ್ಗೆ ಮಾತಾಡಲು ಸಿದ್ಧರಿದ್ದೇವೆ ಅಂದ್ರು. ಇದನ್ನೂ ಓದಿ: Belagavi Politics: ತವರಿನಲ್ಲೇ ಸವದಿಗೆ ಬಿಗ್ ಶಾಕ್ ಕೊಟ್ಟ ರಮೇಶ್ ಜಾರಕಿಹೊಳಿದೆಹಲಿಯತ್ತ ಬಿಆರ್ ಪಾಟೀಲ್ಆಳಂದ ಶಾಸಕ ಬಿ.ಆರ್.ಪಾಟೀಲ್ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ದೆಹಲಿ ನಾಯಕರು ನಮಗೆ ಏನು ಹೇಳಿಲ್ಲ. ನನಗೆ ದೆಹಲಿಯಿಂದ ಕರೆ ಬಂದಿಲ್ಲ. ಬೇರೆ ಕೆಲಸಕ್ಕೆ ನಾನು ದೆಹಲಿಗೆ ಬಂದಿದ್ದೇನೆ. ದೆಹಲಿಯಲ್ಲಿ ಪುಲ್ವಮಾ ದಾಳಿ ಬಗ್ಗೆ ವಿಚಾರ ಸಂಕೀರ್ಣ ಇತ್ತು. ಹಾಗಾಗಿ ನಾನು ದೆಹಲಿಗೆ ಬಂದಿದ್ದೇನೆ ಯಾರಿಗೆ ಕರೆದಿದ್ದಾರೆ ಅವರು ಹೋಗ್ತಾರೆ ಎಂದು ಹೇಳಿದರು.

Post a Comment

Previous Post Next Post