Yogi Adityanath: ಜ್ಞಾನವಾಪಿಯನ್ನ ಮಸೀದಿ ಎಂದು ಕರೆದರೆ ವಿವಾದವಾಗುತ್ತದೆ! ತ್ರಿಶೂಲ ಇರೋದನ್ನ ಪ್ರಶ್ನಿಸಿದ ಸಿಎಂ ಯೋಗಿ


 ಯೋಗಿ ಆದಿತ್ಯನಾಥ್

ಜ್ಞಾನವಾಪಿ ಎಎಸ್‌ಐ ಸರ್ವೆ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಆಗಸ್ಟ್‌ 3ರಂದು ಹೊರಬೀಳುವ ಮುನ್ನ ಸಿಎಂ ಯೋಗಿ ಆದಿತ್ಯನಾಥ್‌ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.ಕ್ನೋ: ಉತ್ತರ ಪ್ರದೇಶದ (Uttar Pradesh) ಜ್ಞಾನವಾಪಿ (Gyanvapi) ಮಸೀದಿಯ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಜ್ಞಾನವಾಪಿ ಮಸೀದಿ ವಿಚಾರವಾಗಿ ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ಎರಡೇ ಪದಗಳಲ್ಲಿ ನೀಡಿರುವ ಪ್ರತಿಕ್ರಿಯೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ಜ್ಞಾನವಾಪಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಸರಕಾರ ಪ್ರಯತ್ನಿಸುತ್ತಿದೆ. ನಾವು ಈ ವಿವಾದಕ್ಕೆ ಪರಿಹಾರಗಳನ್ನು ಬಯಸುತ್ತಿದ್ದೇವೆ. ಜ್ಞಾನವಾಪಿ ಒಳಗೆ ತ್ರಿಶೂಲವಿದೆ, ಜ್ಯೋತಿರ್ಲಿಂಗ, ದೈವ ಪ್ರತಿಮೆಗಳನ್ನು ಕಾಣಬಹುದು. ಆದರೂ ಹಿಂದೂಗಳು ಈ ಪ್ರತಿಮೆಗಳನ್ನು ಇಟ್ಟಿಲ್ಲ. ಇದನ್ನು ಜ್ಞಾನವಪಿ ಮಸೀದಿ ಎಂದು ಕರೆದರೆ ವಿವಾದವಾಗುತ್ತದೆ ಎಂದು ಸಿಎಂ ಯೋಗಿ ಹೇಳಿದ್ದಾರೆ.ಮುಂದುವರಿಸಿ ಜ್ಞಾನವಾಪಿ ವಿವಾದಕ್ಕೆ ಸರಕಾರ ಪರಿಹಾರ ಬಯಸಿದೆ. ಮುಸ್ಲಿಂ ಸಮಾಜದಿಂದ ಚಾರಿತ್ರಿಕ ಪ್ರಮಾದ ನಡೆದಿದ್ದು, ಅದನ್ನು ಬಗೆಹರಿಸಲು ಮುಸ್ಲಿಂ ಸಮಾಜದ ಪ್ರತಿವಾದಿಗಳು ಮುಂದಾಗಬೇಕು. ಜ್ಞಾನವಾಪಿ ಮಸೀದಿಯಾಗಿದ್ದರೆ ಅಲ್ಲಿ ತ್ರಿಶೂಲ ಏಕೆ ಇದೆ? ಎಂದು ಪ್ರಶ್ನಿಸಿದ್ದಾರೆ.ಸಮೀಕ್ಷೆ ಕುರಿತು ಆಗಸ್ಟ್​ 3ಕ್ಕೆ ತೀರ್ಪುಜ್ಞಾನವಾಪಿ ಎಎಸ್‌ಐ ಸಮೀಕ್ಷೆ ವಿಚಾರದಲ್ಲಿ ಮೊದಲ ಬಾರಿಗೆ ಯೋಗಿ ಆದಿತ್ಯನಾಥ್ ಅವರ ಪ್ರತಿಕ್ರಿಯೆ ಮುನ್ನೆಲೆಗೆ ಬಂದಿದೆ. ವಾಸ್ತವವಾಗಿ, ವಾರಣಾಸಿ ಜಿಲ್ಲಾ ನ್ಯಾಯಾಲಯವು ಜ್ಞಾನವಾಪಿ ಕ್ಯಾಂಪಸ್‌ನ ವಿವಾದಿತ ವಾಜು ಖಾನಾ ಭಾಗವನ್ನು ಹೊರತುಪಡಿಸಿ ಎಲ್ಲಾ ಪ್ರದೇಶಗಳ ಎಎಸ್‌ಐ ಸಮೀಕ್ಷೆಗೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಮಸೀದಿ ಸಮಿತಿ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ನಂತರ ಸರ್ವೆ ನಿಲ್ಲಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಹೈಕೋರ್ಟ್‌ಗೆ ವರ್ಗಾಯಿಸಿತ್ತು. ಹೈಕೋರ್ಟ್ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಇದರ ತೀರ್ಪನ್ನು ಕಾಯ್ದಿರಿಸಲಿದೆ.ಎಎಸ್‌ಐ ಸಮೀಕ್ಷೆಯ ಕುರಿತು ತೀರ್ಪು ಶೀಘ್ರ ಹೊರಬೀಳಲಿದ್ದು, ಮಸೀದಿಯಲ್ಲಿ ಸಮೀಕ್ಷೆ ನಡೆಯಬೇಕೆ? ಅಥವಾ ಬೇಡವೇ ಎನ್ನುವುದನ್ನ ನ್ಯಾಯಾಲಯ ಶೀಘ್ರದಲ್ಲೇ ಬಗೆಹರಿಸಲಿದೆ. ಸರ್ವೆ ಕಾರ್ಯ ನಡೆಸಬಾರದು ಎಂದು ಮಸೀದಿ ಸಮಿತಿಯು ನ್ಯಾಯಾಲಯದಲ್ಲಿ ವಾದಿಸಿದೆ. ಆದರೆ ತೀರ್ಪು ಬೀಳುವ ಮುನ್ನವೇ ಈ ವಿಚಾರದಲ್ಲಿ ರಾಜಕೀಯ ಬಿಸಿ ಏರಿದೆ.ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಹಿಂದೂಗಳಿಗೆ ಮೊದಲ ಜಯ; ASI ಸರ್ವೆಗೆ ಕೋರ್ಟ್​ ಸೂಚನೆಜ್ಞಾನವಾಪಿಯ ಗೋಡೆಗಳು ಸಾಕ್ಷಿಯಾಗಿವೆಜ್ಞಾನವಾಪಿ ಮಸೀದಿ ವಿವಾವದದ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಮೊದಲ ಬಾರಿಗೆ ಬಹಿರಂಗ ಹೇಳಿಕೆ ನೀಡಿದ್ದು, ಜ್ಞಾನವಾಪಿ ಗೋಡೆಗಳು ಜೈಕಾರ ಹಾಕುವ ಮೂಲಕ ಕೂಗಿ ಹೇಳುತ್ತಿವೆ. ಅಲ್ಲಿನ ಪರಿಸ್ಥಿತಿಯನ್ನು ತೋರಿಸುತ್ತಿದೆ. ಜ್ಞಾನವಾಪಿ ವಿಚಾರದಲ್ಲಿ ಐತಿಹಾಸಿಕ ಪ್ರಮಾದ ನಡೆದಿದೆ. ಆದುದರಿಂದ ಅದನ್ನು ಮಸೀದಿ ಎಂದು ಕರೆಯುವುದು ತಪ್ಪಾಗುತ್ತದೆ ಎಂದಿದ್ದಾರೆ.ಮಸೀದಿ ಒಳಗೆ ತ್ರಿಶೂಲ ಏಕಿದೆ?ಅಲ್ಲದೆ ಅದು ಮಸೀದಿಯಾದರೆ, ದೇವರು ದೃಷ್ಟಿ ಕೊಟ್ಟಿರುವ ಯಾವುದೇ ವ್ಯಕ್ತಿಯೂ ಜ್ಞಾನವಾಪಿ ಮಸೀದಿ ಆವರಣದಲ್ಲಿ ತ್ರಿಶೂಲವನ್ನು ಕಾಣಬಹುದು. ಈ ಹಿನ್ನಲೆಯಲ್ಲಿ ಮಸೀದಿ ಒಳಗೆ ತ್ರಿಶೂಲ ಏಕೆ ಇದೆ? ನಾವಂತೂ ಮಸೀದಿ ಒಳಗೆ ತ್ರಿಶೂಲ ಇಟ್ಟಿಲ್ಲ. ಇನ್ನು ಈ ಮಸೀದಿ ಆವರಣದಲ್ಲಿ ಜ್ಯೋತಿರ್ಲಿಂಗ, ದೈವ ಪ್ರತಿಮೆಗಳೂ ಇವೆ ಸಿಎಂ ಹೇಳಿದ್ದಾರೆ. ಈ ತಪ್ಪಿನ ಬಗ್ಗೆ ಮುಸ್ಲಿಂ ಸಮುದಾಯದಿಂದಲೇ ಪ್ರಸ್ತಾವನೆ ಬರಬೇಕಿದೆ. ಇದನ್ನು ಮಸೀದಿ ಎಂದು ಕರೆಯುವ ವಿವಾದವಿರುತ್ತದೆ. ಸರ್ಕಾರ ಈ ವಿವಾದಕ್ಕೆ ಪರಿಹಾರ ಬಯಸುತ್ತದೆ.ಇದನ್ನೂ ಓದಿ: Gyanvapi Case: ಜ್ಞಾನವ್ಯಾಪಿ ಮಂದಿರವೋ? ಮಸೀದಿಯೋ? ವೈಜ್ಞಾನಿಕ ಸರ್ವೇ ಆರಂಭ! ಹೆಚ್ಚಿದ ಕುತೂಹಲರಾಜಕೀಯಕ್ಕೆ ತಿರುಗುತ್ತಿರುವ ಮಸೀದಿ ವಿವಾಜ್ಞಾನವಾಪಿ ಎಎಸ್‌ಐ ಸರ್ವೆ ಪ್ರಕರಣದಲ್ಲಿ ಅಲಹಾಬಾದ್‌ ಹೈಕೋರ್ಟ್‌ ತೀರ್ಪು ಆಗಸ್ಟ್‌ 3ರಂದು ಹೊರಬೀಳುವ ಮುನ್ನ ಸಿಎಂ ಯೋಗಿ ಆದಿತ್ಯನಾಥ್‌ ನೀಡಿರುವ ಹೇಳಿಕೆ ಇದೀಗ ಬಹುಮುಖ್ಯವಾಗಿ ಪರಿಗಣಿಸಲ್ಪಟ್ಟಿದೆ. ಒಂದೆಡೆ ಸಮಾಜವಾದಿ ಪಕ್ಷದ ಸ್ವಾಮಿ ಪ್ರಸಾದ್ ಮೌರ್ಯ ಅವರು ಬೌದ್ಧ ದೇವಾಲಯಗಳನ್ನು ಕೆಡವಿ ಹಿಂದೂ ದೇವಾಲಯಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಅದೇ ಸಮಯದಲ್ಲಿ ಇದೀಗ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ದೊಡ್ಡ ಹೇಳಿಕೆಯೊಂದು ಮುನ್ನೆಲೆಗೆ ಬಂದಿದೆ.2021ರಿಂದ ಜ್ಞಾನವಾಪಿ ಮಸೀದಿ ವಿವಾದ ಭಾರೀ ಚರ್ಚೆಯಲ್ಲಿದೆ. ಹಿಂದೂ ಮಹಿಳೆಯರು ಜ್ಞಾನವಾಪಿ ಮಸೀದಿ ಆವರಣದಲ್ಲಿ ಇರುವ ಪ್ರತಿಮೆಗಳ ಪೂಜೆಗೆ ಅವಕಾಶ ನೀಡಬೇಕು ಎಂದು ಉತ್ತರ ಪ್ರದೇಶ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

Post a Comment

Previous Post Next Post