VHP ಶೋಭಾಯಾತ್ರೆ ವೇಳೆ ಅನ್ಯ ಕೋಮಿನವರಿಂದ ಕಲ್ಲುತೂರಾಟ, ವಾಹನಗಳಿಗೆ ಬೆಂಕಿ; ದೇವಾಲಯದಲ್ಲಿ ಆಶ್ರಯ ಪಡೆದ 2500 ಮಂದಿ


  ವಿಎಚ್​ಪಿ ಯಾತ್ರೆ ವೇಳೆ ಕಲ್ಲು ತೂರಾಟ

 ವಿಶ್ವ ಹಿಂದೂ ಪರಿಷತ್​ ಶೋಭಾಯಾತ್ರೆಯ (Shobha Yatra) ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಶೋಭಾಯಾತ್ರೆ ವೇಳೆ ಏಕಾಏಕಿ ನಡೆದ ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ (Police) ಕಲ್ಪಿಸಿದ್ದರೂ ಕೂಡ ಲೆಕ್ಕಿಸದೆ ಕಲ್ಲು ತೂರಾಟ ನಡೆಸಲಾಗಿದೆ. ಹರಿಯಾಣ: ಹರಿಯಾಣದ (Haryana) ಮೇವಾತ್‌ನಲ್ಲಿ ವಿಶ್ವ ಹಿಂದೂ ಪರಿಷತ್​ ಶೋಭಾಯಾತ್ರೆಯ (Shobha Yatra) ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಶೋಭಾಯಾತ್ರೆ ವೇಳೆ ಏಕಾಏಕಿ ನಡೆದ ಕಲ್ಲು ತೂರಾಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ (Police) ಕಲ್ಪಿಸಿದ್ದರೂ ಕೂಡ ಲೆಕ್ಕಿಸದೆ ಕಲ್ಲು ತೂರಾಟ ನಡೆಸಲಾಗಿದೆ. ಎರಡೂ ಕಡೆಯಿಂದ ಸಾವಿರಾರು ಜನರು ಜಮಾಯಿಸಿದ್ದರು, ಆದರೆ ಸ್ಥಳದಲ್ಲಿ ಕೇವಲ ಎರಡು ಪೊಲೀಸ್ ವ್ಯಾನ್‌ಗಳು ಮಾತ್ರ ಇದ್ದಿದ್ದರಿಂದ ಗಲಾಟೆಯನ್ನ ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಈ ಘಟನೆ ನಂತರ ಮೇವಾತ್​ ಮತ್ತು ನುಹ್​ ಪ್ರದೇಶದಲ್ಲಿ ಇಂಟರ್​ನೆಟ್​ ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಘಟನೆಗೆ ಕಾರಣ ಕಾರಣ ಕೊಲೆ ಆರೋಪಿ? ಮೇವಾತ್‌ನಲ್ಲಿ ಕಲ್ಲು ತೂರಾಟದ ಹಿಂದೆ ಗೋ ರಕ್ಷಕ ಮೋನು ಮಾನೇಸರ್ ಹೆಸರು ಕೇಳಿಬರುತ್ತಿದೆ. ಮಾಹಿತಿಯ ಪ್ರಕಾರ, ಜುನೈದ್ ಹತ್ಯೆ ಪ್ರಕರಣದ ಆರೋಪಿ ಮೋನು ಮಾನೇಸರ್ ಎಂಬಾತನಿಂದಲೇ ಮೇವಾತ್‌ನಲ್ಲಿ ಈ ಗಲಾಟೆ ನಡೆದಿದೆ ಎನ್ನಲಾಗಿದೆ. ಮೋನು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲು ಮೇವಾತ್‌ಗೆ ಬರುವುದಾಗಿ, ಸ್ಥಳೀಯರು ಯಾತ್ರೆಯಲ್ಲಿ ಸೇರಬೇಕೆಂದು ವಿಡಿಯೋ ಬಿಡುಗಡೆ ಮಾಡಿದ್ದ, ಆದರೆ ಈ ವಿಡಿಯೋ ಕುರಿತು ಗ್ರಾಮಸ್ಥರು ಈಗಾಗಲೇ ಮೋನು ಮಾನೇಸರ್ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು.ಇದನ್ನೂ ಓದಿ: Matrimonial Fraud: ಬೆತ್ತಲೆ ವಿಡಿಯೋ ಕರೆ ಮಾಡಿ ರೆಕಾರ್ಡ್​! ಯುಕೆ ಮೂಲದ ಟೆಕ್ಕಿಯಿಂದ 1.1 ಕೋಟಿ ವಸೂಲಿ ಮಾಡಿದ ಚಾಲಾಕಿ!ಬೆಂಕಿ ಹಚ್ಚಿದ ಉದ್ರಿಕ್ತರುಸೋಮವಾರ ಯಾತ್ರೆ ನಡೆಯುತ್ತಿದ್ದಾಗ ಈ ಪ್ರದೇಶದಲ್ಲಿ ಕಲ್ಲು ತೂರಾಟದ ನಡೆದಿದೆ. ಇದೇ ವೇಳೆ ಉದ್ರಿಕ್ತರು ಅನೇಕ ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಘಟನೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ವಿಡಿಯೋಗಳಲ್ಲಿ ಕತ್ತಿಗಳನ್ನು ಇಟ್ಟುಕೊಂಡಿರುವ ಅನೇಕರು ವಾಹನಗಳಿಗೆ ಬೆಂಕಿ ಹಚ್ಚುತ್ತಿರುವ ದೃಶ್ಯ ಕಂಡು ಬಂದಿದೆ.ಶಾಂತಿ ಕಾಪಾಡಲು ಮನವಿಕಲ್ಲು ತೂರಾಟದ ಘಟನೆ ನಡೆದಿರುವುದನ್ನ ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಖಚಿತಪಡಿಸಿದ್ದಾರೆ. ಪೊಲೀಸರಿಂದ ಸೂಕ್ತ ಅನುಮತಿ ಪಡೆದ ನಂತರ ವಿಶ್ವ ಹಿಂದೂ ಪರಿಷತ್ ಸದಸ್ಯರು ಮೇವಾತ್‌ನಲ್ಲಿ ಯಾತ್ರೆಯನ್ನ ಕೈಗೊಂಡಿದ್ದರು ಎಂದು ಹೇಳಿದ್ದಾರೆ. ಆದರೆ, ಯಾತ್ರೆ ನಂದ ಗ್ರಾಮಕ್ಕೆ ತಲುಪಿದಾಗ ಇತರ ಸಮುದಾಯದ ಜನರು ಯಾತ್ರೆಗೆ ಕಲ್ಲು ತೂರಿದ್ದಾರೆ. ಸಮೀಪದ ಜಿಲ್ಲೆಗಳಿಂದ ಪೊಲೀಸ್ ತಂಡಗಳನ್ನು ಮೇವಾತ್‌ಗೆ ನಿಯೋಜಿಸಲಾಗುತ್ತಿದೆ ಎಂದು ಹೇಳಿದ ಅವರು, ರಸ್ತೆಗಳನ್ನು ನಿರ್ಬಂಧಿಸಿರುವ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಹರಿಯಾಣ ಗೃಹ ಸಚಿವರು ಮನವಿ ಮಾಡಿದ್ದಾರೆ.

Over 2500 people have taken shelter in the Nulhar Mahadev temple in Nuh of Haryana near Gurugram after they came under attack. Stones thrown, cars set on fire and mob violence in progress. Brij Mandal Jalabhishek Yatra was being held by the Vishwa Hindu Parishad and suddenly… pic.twitter.com/E2UziezIL3

— Aditya Raj Kaul (@AdityaRajKaul) July 31, 2023

[8/1, 10:14 AM] mannjunath bmb: ಮೋನು ಮಾನೇಸರ್ ಯಾರು?

ನಾಸಿರ್-ಜುನೈದ್ ಹತ್ಯೆ ಪ್ರಕರಣದಲ್ಲಿ ಮೋನು ಮಾನೇಸರ್ ಪ್ರಮುಖ ಆರೋಪಿ ಎಂದು ತಿಳಿದುಬಂದಿದೆ. ಫೆಬ್ರವರಿ 16 ರಂದು, ಹರಿಯಾಣದ ಭಿವಾನಿಯ ಲೋಹರುವಿನ ಬರ್ವಾಸ್ ಗ್ರಾಮದ ಬಳಿ ಸುಟ್ಟ ಬೊಲೆರೋದಲ್ಲಿ ಎರಡು ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಅದರಲ್ಲಿ ಮೃತರನ್ನು ನಾಸಿರ್ (25) ಮತ್ತು ಜುನೈದ್ (35) ಎಂದು ಗುರುತಿಸಲಾಗಿತ್ತು. ಇಬ್ಬರೂ ರಾಜಸ್ಥಾನದ ಭರತ್‌ಪುರ ನಿವಾಸಿಗಳಾಗಿದ್ದರು. ಭಜರಂಗದಳದ ಕಾರ್ಯಕರ್ತರು ಭರತ್‌ಪುರದಿಂದ ಇಬ್ಬರನ್ನೂ ಅಪಹರಿಸಿ ಹತ್ಯೆ ಮಾಡಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದರು. ಜುನೈದ್ ಮೇಲೆ 5 ಗೋವು ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿದ್ದವು. ಆದರೆ ನಾಸಿರ್‌ನ ಯಾವುದೇ ಅಪರಾಧ ದಾಖಲೆ ಪತ್ತೆಯಾಗಿಲ್ಲ. ಈ ಪ್ರಕರಣದ ನಂತರವೇ ಮೋನು ಮಾನೇಸರ್ ಬೆಳಕಿಗೆ ಬಂದರು.

Post a Comment

Previous Post Next Post