HD Kumaraswamy: ದಲಿತಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್​ಗೆ ತಿರುಗೇಟು ಕೊಟ್ಟು ಸವಾಲು ಹಾಕಿದ ಮಾಜಿ ಸಿಎಂ ಎಚ್​ಡಿಕೆ!


 ರಾಜ್ಯಪಾಲರಿಗೆ ದೂರು

ದಲಿತ ಮುಖ್ಯಮಂತ್ರಿ ಮಾಡಲು ಇದೇ ಸಕಾಲ. ದಲಿತರನ್ನೇ ಸಿಎಂ ಮಾಡಲಿ. ನುಡಿದಂತೆ ನಡೆಯುವ ಪಕ್ಷಕ್ಕೆ ಇದು ಅಸಾಧ್ಯವೇನಲ್ಲ ಎಂದು ಎಚ್​ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.ಬೆಂಗಳೂರು: ನಿನ್ನೆಯ ಘಟನೆಗೆ ಆಡಳಿತ ಪಕ್ಷದ ಉದ್ದಟತನದ ಪ್ರವೃತ್ತಿ ಕಾರಣ. ಮಾಹಘಟ್‌ ಬಂಧನ್‌ (Mahagathbandhan ) ನಾಯಕರ ಕರೆತರಲು ಡಿಪಿಆರ್‌ನಿಂದ (DPR) ಆದೇಶ ಹೋಗಿದೆ. ಬಿಜೆಪಿ (BJP) ಈ ವಿಚಾರ ಪ್ರಸ್ತಾಪಿಸಿದಾಗ ಗೊಂದಲ ಆಯ್ತು. ಬಳಿಕ ಸಂಧಾನ ಸಭೆಯಲ್ಲಿ ಆಡಳಿತ ಪಕ್ಷದ ನಾಯಕರು ನಾನೇನು ತಪ್ಪು ಮಾಡಿಲ್ಲ ಅಂತ ಪ್ರತಿಷ್ಠೆ ವ್ಯಕ್ತಪಡಿಸಿದ್ದರು. ನನ್ನ ಪ್ರಕಾರ ಅದನ್ನ ಎರಡು ನಿಮಿಷದಲ್ಲಿ ಬಗೆಹರಿಸಬಹುದಿತ್ತು, ರಾಜ್ಯಕ್ಕೆ (State) ಬಂದ ಗಣ್ಯರಿಗೆ (Elite) ಸ್ವಾಗತ ಮಾಡಲು ಕಳಿಸಿದ್ದೀವಿ ಅಂತ ಹೇಳಿದರೆ ಆಗಿತ್ತು. ವಿಷಾಧ ವ್ಯಕ್ತಪಡಿಸೋದು ಬೇಕಾಗಿರಲಿಲ್ಲ, ಮುಂದೆ ಹೀಗೆ ಆಗದಂತೆ ನೋಡಿಕೊಳ್ತಿವಿ ಅಂತ ಹೇಳಿದ್ರೆ ಆಗಿತ್ತು ಎಂದು ಎಚ್​ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.ಲಮಾಣಿಗೆ ಡೆಪ್ಯೂಟಿ ಸ್ಪೀಕರ್! ರಾಜ್ಯಪಾಲರಿಗೆ ಸ್ಪೀಕರ್ ವಿರುದ್ಧ ದೂರು ದಾಖಲಿಸುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್​ಡಿಕೆ, ನಾನ್ಯಾರಿಗೂ ಹೆದರಲ್ಲ ಅಂತ ರೋಷಾವೇಶದಿಂದ ಹೇಳ್ತಾರೆ. ಇತ್ತ ಸ್ಪೀಕರ್ ನೀವ್ಯಾರು ದೇಶ ಪ್ರೇಮಿಗಳಲ್ಲ ಅಂತಾರೆ. ನಾವೆಲ್ಲಾ ದೇಶ ವಿರೋದಿಗಳ, ದೇಶ ವಿರೋಧಿ ಆಗಲು ಏನ್ ಮಾಡಿದ್ದೀವಿ, ಶಾಸಕರೇನು ಸಣ್ಣ ಮಕ್ಕಳಾ ಅಂತ ಪ್ರಶ್ನೆ ಮಾಡಿದರು. ಇದೇ ವೇಳೆ ದಲಿತಾಸ್ತ್ರ ಪ್ರಯೋಗಿಸಿದ ಕಾಂಗ್ರೆಸ್ ನಾಯಕರಿಗೆ ತಿರುಗೇಟು ಕೊಟ್ಟ ಅವರು, ಪುಟ್ಟರಂಗಶೆಟ್ಟರು ಬಿಟ್ಟು ಹೋದರು ಅಂತ ಲಮಾಣಿಗೆ ಡೆಪ್ಯೂಟಿ ಸ್ಪೀಕರ್ ಮಾಡಿದ್ದೀರಿ. ರಾಜಕೀಯ ಲಾಭಕ್ಕೆ ದಲಿತರು ಅಂತ ಬಳಸಲು ಮುಂದಾಗಿದ್ದೀರಿ. ಪ್ರಿಯಾಂಕ್ ಖರ್ಗೆ ನೀವೇ ಸ್ಪೀಕರ್ ಆಗಿ ಬಂಜಾರ ಸಮುದಾಯ ಲಮಾಣಿಗೆ ಸಚಿವ ಸ್ಥಾನ ಕೊಡಬಹುದಿತ್ತು ಅಲ್ವಾ ಎಂದರು. ದಾನಿಶ್ ಅಲಿಗೆ ಕಾರು ಕೊಟ್ಟಿಲ್ಲನೀವೇ ಸನ್ನೆ ಮಾಡಿ ಸ್ಪೀಕರ್ ಘನತೆ ಯಾಕೆ‌ ಹಾಳು ಮಾಡ್ತೀರಾ? ಸದನದ ಬಾವಿಗಿಳಿದವರೆ ಹೇಳ್ತಾರೆ ಯಾರು ಸನ್ನೆ ಮಾಡಿದರೂ ಅಂತ. ನಾನು ಪ್ರಮಾಣ ವಚನ ಮಾಡಿದಾಗ ಯಾವ ಐಎಎಸ್ ಅಧಿಕಾರಿಯನ್ನು ಯಾರಿಗೂ ನಿಯೋಜನೆ ಮಾಡಿಲ್ಲ. ಯಾವುದೇ ಸಂದರ್ಭದಲ್ಲಿ ದಾನಿಶ್ ಅಲಿಯವರಿಗೆ ಸರ್ಕಾರದ ಆತಿಥ್ಯ ಕೊಟ್ಟಿಲ್ಲ. ಅವರು ಬಂದಾಗ ಸರ್ಕಾರದ ಕಾರು ಕೊಟ್ಟಿಲ್ಲ. ನನ್ನ ಮೇಲೆ ಕಪ್ಪು ಚುಕ್ಕೆ ಇಡಲು ಹೊರಟಿದ್ದೀರಿ, ನಾಚಿಕೆ, ಮಾನ,ಮಾರ್ಯಾದೆ ಇದ್ದರೆ ನನ್ನ ಕಾಲದಲ್ಲಿ ಏನಾಗಿದೆ ಸತ್ಯ ಹೊರಗಿಡಿ ಎಂದು ಸವಾಲು ಹಾಕಿದರು.ಇದನ್ನೂ ಓದಿ: Anna Bhagya Scheme: ಅನ್ನಭಾಗ್ಯ ಯೋಜನೆಗೆ ಮುಗಿಯದ ರಗಳೆ; 15 ಲಕ್ಷ ಕಾರ್ಡ್ ಅಕೌಂಟ್‌ಗಳು ಇನ್ ಆಕ್ಟಿವ್ಕಾಂಗ್ರೆಸ್ ಸರ್ಕಾರವೇ ಜೀವಂತ ಸಾಕ್ಷಿ!ಟ್ವಿಟರ್​ನಲ್ಲೂ ಆಕ್ರೋಶ ಹೊರಹಾಕಿರುವ ಎಚ್​ಡಿಕೆ, ಕೆಲವೊಮ್ಮೆ ಅಧಿಕಾರ ಮತ್ತು ಅಜ್ಞಾನ ಒಟ್ಟೊಟ್ಟಿಗೆ ಸಾಗುತ್ತವೆ! ಅದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಜೀವಂತ ಸಾಕ್ಷಿ! 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಪ್ರಮಾಣ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ ಹೊರರಾಜ್ಯಗಳ ಗಣ್ಯರಿಗೆ ಆತಿಥ್ಯ ನೀಡಲು ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿರಲಿಲ್ಲವೆ ಎಂದು ಕೆಲವರು ಪ್ರಶ್ನಿಸಿದ್ದಾರೆ!ಸ್ವತಃ ಮುಖ್ಯಮಂತ್ರಿಗಳು, ಸಂಸದೀಯ ಸಚಿವರು, ಇನ್ನೂ ಕೆಲ ಮಂತ್ರಿಗಳು ಸದನವನ್ನೇ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಆಗ ನಾನು ಕೇವಲ ನಿಯೋಜಿತ ಮುಖ್ಯಮಂತ್ರಿ. ರಾಜಭವನದ ಆದೇಶದ ಮೇರೆಗೆ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಎಲ್ಲಾ ವ್ಯವಸ್ಥೆ ಮಾಡಿರುತ್ತದೆ ಎಂಬುದು ಇವರಿಗೆ ತಿಳಿಯದೆ?ಸ್ವಯಂಘೋಷಿತ ಸಂವಿಧಾನ ತಜ್ಞರಿಗೆ ಶೋಭೆಯೇ?ಪ್ರಮಾಣವನ್ನೇ ಸ್ವೀಕರಿಸದ ನಿಯೋಜಿತ ಮುಖ್ಯಮಂತ್ರಿ ಯಾವುದಾದರೂ ಆದೇಶ ನೀಡಲು ಸಾಧ್ಯವೇ? ಇಷ್ಟಕ್ಕೂ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭಕ್ಕೂ, ಪಕ್ಷದ ಕಾರ್ಯಕ್ರಮಕ್ಕೂ ಹೋಲಿಕೆಯೇ? ಇಷ್ಟು ಸಾಮಾನ್ಯ ತಿಳಿವಳಿಕೆ ಸ್ವತಃ ಮುಖ್ಯಮಂತ್ರಿ ಹಾಗೂ ಸಂಸದೀಯ ಸಚಿವರಿಗೆ ಇಲ್ಲ ಎಂದರೆ ಏನು ಹೇಳುವುದು? ಇಂಡಿಯಾ ಒಕ್ಕೂಟದ ಸಭೆಗೆ ಬಂದ ಹೊರರಾಜ್ಯಗಳ ನಾಯಕರಿಗೆ ಐಎಎಸ್ ಅಧಿಕಾರಿಗಳನ್ನು ಚಾಕರಿಗೆ ಬಿಟ್ಟಿದ್ದು ತಪ್ಪು ಎಂಬುದು ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಗಿಳಿಪಾಠ ಒಪ್ಪಿಸುವ ಸ್ವಯಂಘೋಷಿತ ಸಂವಿಧಾನ ತಜ್ಞರಿಗೆ ಶೋಭೆಯೇ?ದಲಿತಪ್ರೇಮ ಇದ್ದರೆ ಸಚಿವಗಿರಿಯನ್ನು ಲಮಾಣಿಗೆ ಬಿಟ್ಟುಕೊಡಿಉಪ ಸಭಾಧ್ಯಕ್ಷರು ದಲಿತರೆನ್ನುವ ಟ್ರಂಪ್ ಕಾರ್ಡ್ ತೇಲಿಬಿಟ್ಟಿದೆ ಸರಕಾರ. ದಲಿತರೆನ್ನುವ ಕಾರಣಕ್ಕೆ ಉಪ ಸಭಾಧ್ಯಕ್ಷರ ಮೇಲೆ ಅನುಕಂಪದ ಹೊಳೆ ಹರಿಸುವ ಕಾಂಗ್ರೆಸ್, ಅವರಿಗೆ ಸಚಿವ ಸ್ಥಾನವನ್ನೇ ನೀಡಬಹುದಿತ್ತು. ನೀಡಲಿಲ್ಲ ಯಾಕೆ? ಶಾಸಕ ಪುಟ್ಟರಂಗಶೆಟ್ಟಿ ಅವರು ಬೇಡವೇ ಬೇಡ ಎಂದ ಹುದ್ದೆಯನ್ನು ರುದ್ರಪ್ಪ ಲಮಾಣಿ ಅವರ ತಲೆಗೆ ಕಟ್ಟಿದ್ದು ಯಾಕೆ? ಇಂಥ ಅತಿಯಾದ ಜಾಣತನ, ಭಂಡತನ ಯಾಕೆ? ಸಂಪುಟ ರಚನೆ ವೇಳೆ ರುದ್ರಪ್ಪ ಲಮಾಣಿ ಅವರು ದಲಿತರೆನ್ನುವುದು ಕಾಂಗ್ರೆಸ್'ಗೆ ಗೊತ್ತಿರಲಿಲ್ಲವೇ? ದಲಿತ ಕಾರ್ಡ್ ಬಿಟ್ಟ ಪ್ರಿಯಾಂಕ್ ಖರ್ಗೆ ಅಥವಾ ಕೃಷ್ಣ ಭೈರೇಗೌಡರಿಗೆ ಅಷ್ಟು ದಲಿತಪ್ರೇಮ ಇದ್ದರೆ ಅವರ ಸಚಿವಗಿರಿಯನ್ನು ಲಮಾಣಿ ಅವರಿಗೇ ಬಿಟ್ಟುಕೊಟ್ಟು ಈ ಇಬ್ಬರಲ್ಲಿ ಒಬ್ಬರು ಉಪ ಸಭಾಧ್ಯಕ್ಷರಾಗಲಿ.ಅಷ್ಟೇ ಅಲ್ಲ, ದಲಿತ ಮುಖ್ಯಮಂತ್ರಿ ಕೂಗು ಕಾಂಗ್ರೆಸ್ ಪಕ್ಷದಲ್ಲಿ ಬಹಳ ದಿನಗಳಿಂದ ಇದೆ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಹುದ್ದೆ ಕೈ ತಪ್ಪುವಂತೆ ಮಾಡಲಾಗಿತ್ತು. ಈಗ ದಲಿತ ಮುಖ್ಯಮಂತ್ರಿ ಮಾಡಲು ಇದೇ ಸಕಾಲ. ದಲಿತರನ್ನೇ ಸಿಎಂ ಮಾಡಲಿ. ನುಡಿದಂತೆ ನಡೆಯುವ ಪಕ್ಷಕ್ಕೆ ಇದು ಅಸಾಧ್ಯವೇನಲ್ಲ. ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

Post a Comment

Previous Post Next Post