PM Modi: ಕುಟುಂಬ ರಾಜಕಾರಣದ ವಿರುದ್ಧ ಮೋದಿ ಕಿಡಿ, ನೀವು ನಿಮ್ಮ ಮಕ್ಕಳು ಚೆನ್ನಾಗಿರಬೇಕು ಅಂದರೆ ಬಿಜೆಪಿಗೆ ಮತ ನೀಡಿ ಅಂತ ಮನವಿ


 ನರೇಂದ್ರ ಮೋದಿ

ನಿಮ್ಮ ಮಕ್ಕಳು ಅಭಿವೃದ್ಧಿ ಹೊಂದಬೇಕಾದರೆ, ನಿಮ್ಮ ಮಗ, ಹೆಣ್ಣು ಮಗಳು ಚೆನ್ನಾಗಿರಬೇಕಾದರೆ, ನಿಮ್ಮ ಕುಟುಂಬ ಚೆನ್ನಾಗಿರಬೇಕು ಎಂದು ನೀವು ಭಾವಿಸಿದರೆ ಬಿಜೆಪಿಗೆ ಮತ ಹಾಕಬೇಕು ದೇಶದ ಜನತೆಗೆ ಮೋದಿ ಮನವಿ ಮಾಡಿದ್ದಾರೆ.ಭೋಪಾಲ್: ಮಧ್ಯ ಪ್ರದೇಶದಲ್ಲಿ (Madhya Pradesh) ಮಂಗಳವಾರ ಪ್ರಧಾನಿ ಮೋದಿ 5 ಹೊಸ ವಂದೇ ಭಾರತ್ (Vande Bhart)​ ರೈಲಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಸರ್ಕಾರ (BJP Government) ಅಧಿಕಾರಕ್ಕೆ ಬಂದು 9 ವರ್ಷಗಳನ್ನು ಪೂರೈಸಿದ ಹಿನ್ನಲೆಲ್ಲಿ 10 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು (BJP workers) ಉದ್ದೇಶಿಸಿ ಮೇರೆ ಬೂತ್​ ಸಬ್ಸೆ ಮಜಬೂತ್ (Mera Booth Sabse Majboot)​ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 3000ಕ್ಕೂ ಹೆಚ್ಚು ಮಂದಿ ಇದ್ದ ಕಾರ್ಯಕ್ರಮದಲ್ಲಿ ಮೋದಿ ಅವರು ಕಾರ್ಯಕರ್ತರ ಬಗ್ಗೆ ಪ್ರಶಂಸೆಗಳ ಸುರಿಮಳೆ ಸುರಿಸಿದರು. ಪಕ್ಷಕ್ಕೆ ನೀವೆ ದೊಡ್ಡ ಶಕ್ತಿ, ನಮ್ಮ ಪಕ್ಷ ದೇಶಕ್ಕಾಗಿ ದುಡಿಯುವ ಪಕ್ಷ. ಆದರೆ ಕೆಲವು ಪಕ್ಷಗಳು ಕುಟುಂಬಕ್ಕಾಗಿ ಕೆಲಸ ಮಾಡುತ್ತಿವೆ. ಕಾರ್ಯಕರ್ತರನ್ನು ಬಳಸಿಕೊಳ್ಳುತ್ತಿವೆ ಎಂದು ಕುಟುಂಬ ರಾಜಕಾರಣದ ವಿರುದ್ಧ ಹರಿಯಾಯ್ದರು.ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿಭೋಪಾಲ್‌ನಲ್ಲಿ ನಡೆದ 'ಮೇರಾ ಬೂತ್, ಸಬ್ಸೆ ಮಜಬೂತ್​' ಸಭೆಯಲ್ಲಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಅವರು ಬಿಜೆಪಿ ಮಣಿಸಲು ಪಣತೊಟ್ಟಿರುವ ಕಾಂಗ್ರೆಸ್, ಆರ್‌ಜೆಡಿ, ಎನ್‌ಸಿಪಿ, ಸಮಾಜವಾದಿ ಪಕ್ಷ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದರು. ನಿಮ್ಮ ಕುಟುಂಬದ ಮಕ್ಕಳು ಚೆನ್ನಾಗಿರಲು ಮತ್ತು ಉಜ್ವಲ ಭವಿಷ್ಯವನ್ನು ಹೊಂದಬೇಕಾದರೆ ಬಿಜೆಪಿಗೆ ಮತ ನೀಡಿ ಎಂದು ದೇಶದ ಜನತೆಯನ್ನು ಕೇಳಿಕೊಂಡರು.ಇದನ್ನೂ ಓದಿ: PM Modi: ಮೋದಿ ನನ್ನ ಮಗನಿದ್ದಂತೆ, ನನ್ನ 15 ಎಕರೆ ಜಮೀನನ್ನು ಅವರಿಗೆ ಕೊಡ್ತೇನೆ! 100 ವರ್ಷದ ಅಜ್ಜಿ ಹೀಗೆ ಹೇಳುತ್ತಿರೋದ್ದೇಕೆ?ಬಿಜೆಪಿಗೆ ಮತ ನೀಡಿ, ಕುಟುಂಬ ರಾಜಕಾರಣಕ್ಕೆ ಮುಕ್ತಿ ನೀಡಿನೀವು ಯಾದವ್ ಕುಟುಂಬದ ಪುತ್ರರು ಮತ್ತು ಪುತ್ರಿಯರ ಅಭಿವೃದ್ಧಿಯಾಬೇಕಾದರೆ ಎಸ್‌ಪಿಗೆ ಮತ ನೀಡಿ. ಲಾಲು ಪ್ರಸಾದ್ ಯಾದವ್ ಕುಟುಂಬದ ಹಿತ ಬೇಕಾದರೆ ಆರ್​ಜೆಡಿಗೆ ಮತ ನೀಡಿ. ಶರದ್ ಪವಾರ್ ಅವರ ಕುಟುಂಬದ ಪುತ್ರರು ಮತ್ತು ಪುತ್ರಿಯರ ಒಳಿತನ್ನು ನೀವು ಬಯಸಿದರೆ, ಎನ್‌ಸಿಪಿಗೆ ಮತ ನೀಡಿ. ಅಬ್ದುಲ್ಲಾ ಕುಟುಂಬದ ಪುತ್ರರು ಮತ್ತು ಪುತ್ರಿಯರ ಒಳಿತಿಗಾಗಿ ನ್ಯಾಷನಲ್ ಕಾನ್ಫರೆನ್ಸ್​ಗೆ ಮತ ನೀಡಿ. ಕರುಣಾನಿಧಿ ಕುಟುಂಬ ಉತ್ತಮವಾಗಬೇಕಾದರೆ ಡಿಎಂಕೆಗೆ ಮತ ನೀಡಿ. ಕೆಸಿಆರ್ (ಕೆಸಿಆರ್) ಕುಟುಂಬದ ಪುತ್ರರು ಮತ್ತು ಪುತ್ರಿಯರ ಅಭಿವೃದ್ಧಿ ಬಯಸಿದರೆ, BRSಗೆ ಮತ ನೀಡಿ ಎಂದ ಮೋದಿ, ನಿಮ್ಮ ಮಕ್ಕಳು ಅಭಿವೃದ್ಧಿ ಹೊಂದಬೇಕಾದರೆ, ನಿಮ್ಮ ಮಗ, ಹೆಣ್ಣು ಮಕ್ಕಳು ಚೆನ್ನಾಗಿರಬೇಕಾದರೆ, ನಿಮ್ಮ ಕುಟುಂಬ ಚೆನ್ನಾಗಿರಬೇಕು ಎಂದು ಭಾವಿಸಿದರೆ ಬಿಜೆಪಿಗೆ ಮತ ಹಾಕಬೇಕು ಎಂದು ಹೇಳಿದರು.ನೆರೆರಾಷ್ಟ್ರಗಳ ಸ್ಥಿತಿ ದೇಶಕ್ಕೆ ಬಾರದಂತೆ ನೋಡಿಕೊಳ್ಳಲಾಗಿದೆತಮ್ಮ ಭಾಷಣದುದ್ದಕ್ಕೂ ಬಿಜೆಪಿಯ ಯಶಸ್ಸಿನ ಹಲವು ಅಂಶಗಳನ್ನು ಎತ್ತಿ ತೋರಿಸಿದರು. ದೇಶದಲ್ಲಿನ ಹಣದುಬ್ಬರ ಪರಿಸ್ಥಿತಿಯನ್ನು ಭಾರತ ಸರ್ಕಾರ ತನ್ನ ಸ್ವಂತ ಉಪಕ್ರಮದಿಂದ ಹೇಗೆ ನಿರ್ವಹಿಸಿದೆ ಎಂದು ಹೇಳಿದರು. ಉಕ್ರೇನ್‌ನಲ್ಲಿನ ಯುದ್ಧದ ಪ್ರತಿಕೂಲತೆಯನ್ನು ಹೇಗೆ ಜಯಿಸಿತು ಎಂಬುದನ್ನು ವಿವರಿಸಿದರು. ಅವರು ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿನ ಹಣದುಬ್ಬರದ ಪರಿಸ್ಥಿತಿಯನ್ನು ಎತ್ತಿ ತೋರಿಸಿ, ಭಾರತ ಹೇಗೆ ಪರಿಸ್ಥಿತಿಯನ್ನ ನಿಭಾಯಿಸಿದೆ ಎಂಬುದನ್ನು ಒತ್ತಿ ಹೇಳಿದರು.ಇದನ್ನೂ ಓದಿ: Mera Booth Sabse Majboot ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರನ್ನ ಹೊಗಳಿ, ವಿಪಕ್ಷಗಳಿಗೆ ಚಳಿ ಬಿಡಿಸಿದ ಮೋದಿ! ಹೈಲೈಟ್ಸ್ ಇಲ್ಲಿದೆತುಷ್ಟೀಕರಣ ಮಾಡಲ್ಲಕಟ್ ಮನಿ ವಿಚಾರವನ್ನೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಕೆಲವರು ತಮ್ಮ ಪಕ್ಷಕ್ಕಾಗಿಯೇ ಬದುಕುತ್ತಾರೆ ಮತ್ತು ಪಕ್ಷದ ಲಾಭವನ್ನು ನೋಡುತ್ತಾರೆ. ಯಾವಾಗಲೂ ತುಷ್ಟೀಕರಣದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಮತ್ತೊಂದೆಡೆ ಬಿಜೆಪಿ ಯಾವತ್ತೂ ತುಷ್ಟೀಕರಣದ ಹಾದಿ ಹಿಡಿದಿಲ್ಲ. ಮತಬ್ಯಾಂಕ್​ ರಾಜಕಾರಣದ ಮಾಡುತ್ತಿರುವುದರಿಂದಲೇ ಬಡ ಮುಸ್ಲಿಮರು ಇಂದಿಗೂ ಅದೇ ಸ್ಥಿತಿಯಲ್ಲಿದ್ದಾರೆ. ಆದರೆ ಬಿಜೆಪಿ ತುಷ್ಟೀಕರಣ ಮಾಡಲ್ಲ, ದೇಶದ ಜನರ ಸಂತುಷ್ಟೀಕರಣ ಕಲ್ಪನೆಯಲ್ಲಿ ಸಾಗುತ್ತಿದೆ ಎಂದರು.ಮುಸ್ಲಿಮರನ್ನು ಕೆಲವು ಪಕ್ಷಗಳು ಮತಕ್ಕಾಗಿ ಬಳಸಿಕೊಳ್ಳುತ್ತಿವೆ. ಮತಕ್ಕಾಗಿ ಯಾವೆಲ್ಲಾ ಪಕ್ಷಗಳು ತಮ್ಮನ್ನು ಪ್ರಚೋದಿಸಿ ರಾಜಕೀಯವಾಗಿ ಬಳಸಿಕೊಂಡಿವೆ. ಇದನ್ನು ಅವರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ನೀವು, ನಿಮ್ಮ ಪುತ್ರ, ಪುತ್ರಿಯರು ಚೆನ್ನಾಗಿ ಇರಬೇಕೆಂದರೆ ಬಿಜೆಪಿ ಮತ ನೀಡಿ, ಕುಟುಂಬ ರಾಜಕೀಯವನ್ನು ದೂರವಿಡಿ ಎಂದು ಹೇಳಿದರು.

Post a Comment

Previous Post Next Post