Narendra Modi: ದೆಹಲಿಯಲ್ಲಿ ನಿರ್ಮಾಣವಾಗಲಿದೆ ಹೊಸ ವಿಶ್ವವಿದ್ಯಾಲಯ; ಶಂಕುಸ್ಥಾಪನೆ ಮಾಡಲಿದ್ದಾರೆ ಪಿಎಂ ಮೋದಿ


 ನರೇಂದ್ರ ಮೋದಿ

ಜೂನ್ 30 ರಂದು ದೆಹಲಿ ವಿಶ್ವವಿದ್ಯಾನಿಲಯದ (ಡಿಯು) ಶತಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್​​ ಮೂಲಕ ಶಂಕು ಸ್ಥಾಪನೆ ಮಾಡಲಿದ್ದಾರೆ.ನಾಳೆ ಮೂರು ವಿಶ್ವವಿದ್ಯಾಲಯ (University) ಕಟ್ಟಡಗಳ ಶಂಕು ಸ್ಥಾಪನೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಜೂನ್ 30 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿ ವಿಶ್ವವಿದ್ಯಾಲಯದ (ಡಿಯು) ಮೂರು ಕಟ್ಟಡಗಳ ಶಂಕುಸ್ಥಾಪನೆ ಮಾಡಲಿದ್ದಾರೆ. ಅವರು 'ಕಾಫಿ ಟೇಬಲ್' ಎಂಬ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಟ್ಟಡಗಳು (Building) ಟೆಕ್ನಾಲಜಿ ಅಧ್ಯಾಪಕರಿಗೆ, ಕಂಪ್ಯೂಟರ್ ಕೇಂದ್ರ ಮತ್ತು ಶೈಕ್ಷಣಿಕ ಬ್ಲಾಕ್ ಆಗಿ ಮಾರ್ಪಡಲಿದೆ. ಹಲವಾರು ವಿದ್ಯಾರ್ಥಿಗಳಿಗೆ (Students) ಇದರಿಂದ ಪ್ರಯೋಜನವಾಗಲಿದೆ. ಹಾಗಾದರೆ ಹೇಗಿದೆ ಈ ವ್ಯವಸ್ಥೆ ಎಂಬ ಕುರಿತು ಇಲ್ಲಿದೆ ನೋಡಿ ಮಾಹಿತಿ.ಏಳು ಅಂತಸ್ತಿನ ಕಟ್ಟಡಗಳು ಅತ್ಯಾಧುನಿಕ ಮೂಲಸೌಕರ್ಯಗಳನ್ನು ಹೊಂದಿರುತ್ತವೆ. ನಾಳೆ ಡಿಯು ಶತಮಾನೋತ್ಸವದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿ ಉದ್ಘಾಟನೆ ಮಾಡುತ್ತಾರೆ. ಮುಂಬರುವ ಶೈಕ್ಷಣಿಕ ಅವಧಿಯಿಂದ 360 ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ ಬಿಟೆಕ್ ಕೋರ್ಸ್ ಅನ್ನು ಪ್ರಾರಂಭಿಸಲು ಡಿಯು ಸಜ್ಜಾಗಿದೆ. ಅಧ್ಯಾಪಕರ ಕಟ್ಟಡವು ಅವರ ಅಗತ್ಯಗಳನ್ನು ಪೂರೈಸುತ್ತದೆ.ಬಿಟೆಕ್​ ಕೋರ್ಸ್​​ ಇಲ್ಲಿ ಆರಂಭ

Post a Comment

Previous Post Next Post