ಟೈಫಾಯಿಡ್ ಜ್ವರಹೆಚ್ಚಾಗಿ ಮಳೆಗಾಲದಲ್ಲಿ ಬರುವ ಟೈಫಾಯಿಡ್ ಜ್ವರ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಅದರಲ್ಲಿಯೂ ಟೈಫಾಯಿಡ್ ಜ್ವರ ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಟೈಫಾಯಿಡ್ ಜ್ವರ ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಇದಕ್ಕೆ ಕಾರಣ ಹೊರಗೆ ಸಿಗುವ ಬೇಯಿಸದಿರುವ ಆಹಾರ ಸೇವಿಸಿರುವುದಾಗಿದೆ.ಹೆಚ್ಚಾಗಿ ಮಳೆಗಾಲದಲ್ಲಿ ಬರುವ ಟೈಫಾಯಿಡ್ ಜ್ವರ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ಅದರಲ್ಲಿಯೂ ಟೈಫಾಯಿಡ್ ಜ್ವರ ಹೆಚ್ಚಾಗಿ ವಯಸ್ಕರಲ್ಲಿ ಕಾಣಿಸಿಕೊಳ್ಳುತ್ತಿದೆ.ಹಸಿ ಮೊಟ್ಟೆಯಿಂದ ಹಿಡಿದು ಕಚ್ಚಾ ಆಹಾರದವರೆಗೆ ಅಂದರೆ ಚಾಟ್ಸ್, ಫ್ರೂಟ್ಸ್, ಸಲಾಡ್ ಇದೆಲ್ಲದಕ್ಕೂ ಬಳಸುವ ಪದಾರ್ಥಗಳನ್ನು ತೊಳೆಯದೇ, ಬೇಯಿಸದೇ ಜನ ಸೇವಿಸುತ್ತಿದ್ದಾರೆ. ಈ ಹಿನ್ನೆಲೆ 3-4 ವಾರಗಳ ಹಿಂದೆ ದಿನಕ್ಕೆ 3-4 ದಾಖಲಾಗುತ್ತಿದ್ದ ಟೈಫಾಯಿಡ್ ಜ್ವರ ಪ್ರಕರಣಗಳು ಈಗ ಪ್ರತಿದಿನ 15-20 ಪ್ರಕರಣಗಳು ದಾಖಲಾಗುತ್ತಿದೆ ಎಂದು ಆಸ್ಟರ್ ಸಿಎಂಐ ಆಸ್ಪತ್ರೆಯ ಹಿರಿಯ ಸಲಹೆಗಾರ್ತಿ, ನಿಯೋನಾಟಾಲಜಿ ಮತ್ತು ಪೀಡಿಯಾಟ್ರಿಕ್ಸ್ ಡಾ ಪರಿಮಳಾ ವಿ ತಿರುಮಲೇಶ್ ತಿಳಿಸಿದ್ದಾರೆ.ಎರಡು ವಾರಗಳ ಹಿಂದೆಯಷ್ಟೇ ಶಾಲೆಗಳು ಪ್ರಾರಂಭವಾಗಿದ್ದು, ಮಕ್ಕಳು ಶಾಲೆಗೆ ಬೇಯಿಸಿದ ಆಹಾರವನ್ನು ಟಿಫನ್ ಬಾಕ್ಸ್ನಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಹಾಗಾಗಿ ಮಕ್ಕಳಲ್ಲಿ ಟೈಫಾಯಿಡ್ ಪ್ರಕರಣ ಕಡಿಮೆ ಕಂಡುಬಂದಿದೆ. ಆದರೆ ಒಂದೆರಡು ವಾರಗಳಿಂದ ವಯಸ್ಕರು ಹೆಚ್ಚಾಗಿ ಟೈಫಾಯ್ಡ್ ಜ್ವರಕ್ಕೆ ಒಳಗಾಗುತ್ತಿದ್ದಾರೆ
.ಟೈಫಾಯಿಡ್ ಜ್ವರ ಹೊಂದಿರುವ ಸುಮಾರು 40% ವಯಸ್ಕರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ , 10 ರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಉಳಿದವರಿಗೆ ಒಪಿಡಿ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.ಇನ್ನೂ ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ಆಂತರಿಕ ವೈದ್ಯಕೀಯ ವಿಭಾಗದ ಹಿರಿಯ ಸಲಹೆಗಾರ ಡಾ.ಬಾಲಕೃಷ್ಣ ಜಿ.ಕೆ. ಅವರು, ಕಳೆದ ಒಂದು ವಾರದಿಂದ ದಿನಕ್ಕೆ 2-3 ಟೈಫಾಯಿಡ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೊದಲು ಟೈಫಾಯಿಡ್ ಪ್ರಕರಣಗಳೇ ಇರಲಿಲ್ಲ. ಆದರೆ ಈಗೀಗ ಹೆಚ್ಚಾಗಿ ವರದಿಯಾಗುತ್ತಿದೆ. ಇದಕ್ಕೆ ಕಲುಷಿತ ಮಳೆನೀರು, ಸರಿಯಾಗಿ ಬೇಯಿಸಿದ ಆಹಾರ ಮತ್ತು ಕಲುಷಿತ ತರಕಾರಿಗಳೇ ಕಾರಣ ಎಂದು ಹೇಳಿದ್ದಾರೆ.ಅಲ್ಲದೇ BBMP (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಆರೋಗ್ಯ ಆಯುಕ್ತ ತ್ರಿಲೋಕ್ ಚಂದ್ರ ಕೂಡ, ಕಳೆದ ಮೂರು ವಾರಗಳಲ್ಲಿ ಕನಿಷ್ಠ 117 ಟೈಫಾಯಿಡ್ ಪ್ರಕರಣಗಳನ್ನು ದಾಖಲಾಗಿದೆ. ಮೇ ತಿಂಗಳಲ್ಲಿ ಟೈಫಾಯಿಡ್ ಪ್ರಕರಣಗಳ ಸಂಖ್ಯೆ 141ಕ್ಕೆ ತಲುಪಿದ್ದು, ಹೊರಗಿನ ಫುಡ್ ತಿನ್ನುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ.



Post a Comment