Chitradurga News: ಮೃತ ಸನ್ಯಾಸಿಯ ಪುಟ್ಟ ಮನೆಯಲ್ಲಿ 30 ಲಕ್ಷಕ್ಕೂ ಹೆಚ್ಚು ಹಣ ಪತ್ತೆ!


 ಮೃತಪಟ್ಟ ಸನ್ಯಾಸಿ ಮತ್ತುಅವರ ಮನೆ

 ಗಂಗಾಧರ ಶಾಸ್ತ್ರಿಯವರು ಬೇರೆಯವರು ಮಾಡಿದ ಅಡುಗೆ ಸೇವಿಸುತ್ತಿರಲಿಲ್ಲ. ಒಬ್ಬಂಟಿಯಾಗಿಯೇ ಜೀವನ ಕಳೆದಿದ್ದ ಅವರು ಮನೆಯೊಳಗೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. ಚಪ್ಪಲಿಯನ್ನೂ ಹಾಕುತ್ತಿರಲಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.ಚಿತ್ರದುರ್ಗ: ಒಂಟಿಯಾಗಿ ಬದುಕು ನಡೆಸಿದ್ದ ಸನ್ಯಾಸಿಯೋರ್ವರು ಮೃತಪಟ್ಟಿದ್ದು, ಅವರ ಮನೆಯಲ್ಲಿ (Chitradurga News) ಲಕ್ಷಾಂತರ ರೂಪಾಯಿ ಹಣ ಪತ್ತೆಯಾದ ವಿಚಿತ್ರ ಘಟನೆಯೊಂದು (Viral News) ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಗಂಗಾಧರ ಶಾಸ್ತ್ರಿ ಎಂಬ 70 ವರ್ಷದ ಸನ್ಯಾಸಿಯೊಬ್ಬರು ವಾಸವಿದ್ದರು. ಒಂಟಿಯಾಗಿ ಬದುಕು ಸವೆಸಿದ್ದ ಗಂಗಾಧರ ಶಾಸ್ತ್ರಿ ಅವರು ಶಾಸ್ತ್ರ ಹೇಳುವುದು, ಶುಭ ಕಾರ್ಯದ ಪೂಜೆ ಮಾಡಿಸುವ ಮೂಲಕ ಜೀವನ ನಡೆಸುತ್ತಿದ್ದ


ರು ವಾರದ ಹಿಂದೆ ಮೃತಪಟ್ಟಿದ್ದ ಸನ್ಯಾಸಿ

ಗಂಗಾಧರ ಶಾಸ್ತ್ರಿಯವರಿಗೆ 16 ಎಕರೆ‌ ಜಮೀನಿದ್ದು 4 ಎಕರೆ ತೆಂಗಿನ ತೋಟ, ಗದ್ದೆ ಹೊಂದಿದ್ದರು. ಆದರೆ ವಾರದ ಹಿಂದೆ ಅವರು ಮೃತಪಟ್ಟಿದ್ದರು. ತೆಂಗಿನ ರಾಶಿ, ಅಟ್ಟದ ಮೇಲೂ ಹಣ ಪತ್ತೆ!ಕಳೆದ 2 ದಿನ ಹಿಂದೆ ಭಕ್ತರು ಗಂಗಾಧರ ಶಾಸ್ತ್ರಿ ಅವರ ಮನೆ ಪರಿಶೀಲಿಸಿದಾಗ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಮನೆಯಲ್ಲಿ ಇಟ್ಟಿದ್ದ ತೆಂಗಿನಕಾಯಿ ರಾಶಿ, ಮನೆಯ ಅಟ್ಟದಲ್ಲೂ ಹಣ ಪತ್ತೆಯಾಗಿರುವುದು ಅಚಚರಿ ಮೂಡಿಸಿದೆಇದನ್ನೂ ಓದಿ: Chitradurga News: ಮಾನವ ರಹಿತ ತಪಸ್ ಯುಎವಿ ಹಾರಾಟ ಯಶಸ್ವಿ, ಇಲ್ಲಿದೆ ವಿಡಿಯೋ 30 ಲಕ್ಷಕ್ಕೂ ಅಧಿಕ ಹಣಭಕ್ತರಿಂದ ಕಾಣಿಕೆಯಾಗಿ ಬಂದ ಕಾಣಿಕೆ ಹಣವೇ 46 ಸಾವಿರ ರೂ.ಹೆಚ್ಚು ಪತ್ತೆಯಾಗಿದೆ. ಕೃಷಿ ಮತ್ತಿತರೆ ಆದಾಯದಿಂದ ಬಂದ 30 ಲಕ್ಷಕ್ಕೂ ಅಧಿಕ ಹಣ ಸಹ ಗಂಗಾಧರ ಶಾಸ್ತ್ರಿಯವರ ಮನಯಲ್ಲಿ ಪತ್ತೆಯಾಗಿದೆ.ಚಪ್ಪಲಿಯನ್ನೂ ಹಾಕದ ಸನ್ಯಾಸಿಗಂಗಾಧರ ಶಾಸ್ತ್ರಿಯವರು ಬೇರೆಯವರು ಮಾಡಿದ ಅಡುಗೆ ಸೇವಿಸುತ್ತಿರಲಿಲ್ಲ. ಒಬ್ಬಂಟಿಯಾಗಿಯೇ ಜೀವನ ಕಳೆದಿದ್ದ ಅವರು ಮನೆಯೊಳಗೆ ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. ಚಪ್ಪಲಿಯನ್ನೂ ಹಾಕುತ್ತಿರಲಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.ಇದನ್ನೂ ಓದಿ: Chitradurga Viral News: ಕತ್ತೆಯ ಸಾವಿಗೆ ಇಡೀ ಊರಿನಲ್ಲಿ ಶೋಕಾಚರಣೆ, ಸಮಾಧಿ ನಿರ್ಮಿಸಿ ಭಾವುಕರಾದ ಜನರುನಿರ್ಮಾಣವಾಗಲಿದೆ ಗಂಗಾಧರ ಶಾಸ್ತ್ರಿ ಗದ್ದುಗೆಜುಲೈ 7ಕ್ಕೆ ಭಕ್ತರ ಸಭೆ ಕರೆದು ಸಮಿತಿ ರಚನೆಗೆ ಸ್ಥಳೀಯರು ನಿರ್ಧಾರ ಮಾಡಿದ್ದಾರೆ. ಜೊತೆಗೆ ಜಮೀನಿನಲ್ಲಿ ಗಂಗಾಧರ ಶಾಸ್ತ್ರಿ ಗದ್ದುಗೆ ನಿರ್ಮಿಸಲು ಸ್ಥಳೀಯರು ನಿರ್ಧಾರ ಕೈಗೊಂಡಿದ್ದಾರೆ.

Post a Comment

Previous Post Next Post