ಭೀಕರ ರಸ್ತೆ ಅಪಘಾತ
ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದು, ಮಗು ಸೇರಿ ಹಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.ಮೈಸೂರು: ಖಾಸಗಿ ಬಸ್ (Private Bus) ಮತ್ತು ಇನೋವಾ ಕಾರು (Innova Car) ನಡುವೆ ನಡೆದ ಭೀಕರ ಅಪಘಾತದಲ್ಲಿ (Accident) ಕಾರಿನಲ್ಲಿದ್ದ 6 ಜನ ಸ್ಥಳದಲ್ಲೇ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಳ್ಳೇಗಾಲದ (Kollegala) ಟಿ.ನರಸೀಪುರ ಮುಖ್ಯರಸ್ತೆಯಲ್ಲಿ ನಡೆದಿದೆ. ಭೀಕರ ಅಪಘಾತದಲ್ಲಿ ಇನೋವಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಟಿ ನರಸೀಪುರದ ಕುರುಬೂರು ಗ್ರಾಮದ ಪಿಂಜರ ಪೋಲ್ ಭೀಕರ ಅಪಘಾತ ನಡೆದಿದೆ. ಇನ್ನು, ಕಾರಿನಲ್ಲಿ ಸಿಲುಕಿರುವ ವ್ಯಕ್ತಿಗಳನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ (Hospital) ದಾಖಲಿಸುವ ಪ್ರಯತ್ನ ಮಾಡಿದ್ದು, ಮಗು (Child) ಸೇರಿ ಹಲವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕಾರಿನಲ್ಲಿದ್ದ ಮಗು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದು, ಟಿ.ನರಸೀಪುರ ಪೊಲೀಸ್ ಠಾಣೆ (T Narasipura Police) ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.ಅಂತರ್ ರಾಜ್ಯ ಮನೆಗಳ್ಳರ ಬಂಧನಮನೆಯ ಬೀಗ ಮುರಿದು ಚಿನ್ನಾಭರಣ, ನಗದು ದೋಚಿದ್ದ ಖದೀಮರನ್ನು ಆನೇಕಲ್ (Anekal) ಉಪವಿಭಾಗದ ಹೆಬ್ಬಗೋಡಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನ ಮಾಡಿದ್ದಾರೆ. ತಮಿಳುನಾಡು (Tamil Nadu) ಮೂಲದ ಸರವಣ (39), ದಿನೇಶ್ (33) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 155 ಗ್ರಾಂ ಚಿನ್ನ (Gold), 210 ಗ್ರಾಂ ಬೆಳ್ಳಿ, ನಗದು ಸೇರಿದಂತೆ ಒಟ್ಟು 9,75,000 ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಇದನ್ನೂ ಓದಿ: Bengaluru Crime: ಒಂಟಿ ವೃದ್ಧೆಯ ಕೈಕಾಲು ಕಟ್ಟಿ, ಬಾಯಿಗೆ ಟೇಪ್ ಹಾಕಿ ಕುತ್ತಿಗೆ ಹಿಸುಕಿ ಕೊಲೆ; ಬೆಚ್ಚಿಬಿದ್ದ ಏರಿಯಾ ಜನ! ವಿಧಾನಸಭಾ ಚುನಾವಣೆಯ (Assembly Election) ದಿನ ಕೈಚಳಕ ತೋರಿದ್ದ ಕಳ್ಳರು, ಮತದಾನ ಮಾಡಲು ಹೋಗಿದ್ದಾಗ ವೇಳೆ ಹಾಡಹಗಲೇ ಕಳ್ಳರ ಮಾಡಿ ಪರಾರಿಯಾಗಿದ್ದರು. ಹರೀಶ್ ಎಂಬುವವರ ಮನೆಯಲ್ಲಿ ಅಸಾಮಿಗಳು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಸದ್ಯ ಅಂತರ್ ರಾಜ್ಯ ಕಳ್ಳರನ್ನ ಬಂಧಿಸುವಲ್ಲಿ ಯಶಸ್ಸಿಯಾದ ಹೆಬ್ಬಗೋಡಿ ಪೊಲೀಸರು ಯಶಸ್ವಿಯಾಗಿದ್ದಾರೆ.

Post a Comment