ಸಿ.ಟಿ. ರವಿ, ಮಾಜಿ ಸಚಿವಸಿ.ಟಿ. ರವಿ, ಮಾಜಿ ಸಚಿವಸಂಪುಟ ವಿಸ್ತರಣೆಯೂ ಆಯ್ತು, ಖಾತೆ ಹಂಚಿಕೆಯೂ ಆಯ್ತು, ಇನ್ಯಾಕೆ ತಡ? ಅಂದು ಯೋಜನೆ ಘೋಷಣೆ ಮಾಡುವಾಗ ನಿರ್ಬಂಧ ಇರಲಿಲ್ಲ, ಈಗ ಏಕೆ ಕಾರಣ ಹುಡುಕ್ತಿದ್ದೀರಾ? ಗ್ಯಾರೆಂಟಿ ಯೋಜನೆಗಳನ್ನು ತಕ್ಷಣ ಜಾರಿ ಮಾಡಿ ಎಂದು ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆಗ್ರಹಿಸಿದರು. ಚಿಕ್ಕಮಗಳೂರು: ಈಗ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಾಗಿದೆ ಕಾಂಗ್ರೆಸ್ ಪರಿಸ್ಥಿತಿ (Congress) ಎಂದು (Ex MLA) ಮಾಜಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ವ್ಯಂಗ್ಯವಾಡಿದ್ದಾರೆ.ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಟಿ ರವಿ, ನಿಮ್ಮ ಗ್ಯಾರೆಂಟಿ ಯೋಜನೆಗಳನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಮುನ್ನ ಜಾರಿ ಮಾಡಿ. ಈಗ ಕಾಂಗ್ರೆಸ್ ಪಕ್ಷ ನೆಪ ಹುಡುಕುತ್ತಿದೆ, ಏಕೆ ಹುಡುಕಬೇಕು? ಮಾಡ್ತೀವಿ ಅಂತಾ ಹೇಳಿದ್ದೀರಾ... ಜನರನ್ನ ನಂಬಿಸಿದ್ದೀರಾ... ಕೊಟ್ಟ ಮಾತು ಉಳಿಸಿಕೊಳ್ಳಿ ಎಂದು ಆಗ್ರಹಿಸಿದರು. ಇದನ್ನೂ ಓದಿ: KS Eshwrappa: ಕಾಂಗ್ರೆಸ್‌ನವರ ಅಮಲನ್ನು ಲೋಕಸಭಾ ಚುನಾವಣೆಯಲ್ಲಿ ಇಳಿಸಬೇಕು: ಕೆಎಸ್ ಈಶ್ವರಪ್ಪ ಕಿಡಿಚುನಾವಣಾ ಭಾಷಣದಲ್ಲಿ, ‘ಹೇ ಮಾದೇವಪ್ಪ... ನಿಂಗೂ ಫ್ರೀ... ನಂಗೂ ಫ್ರೀ’ ಅಂದಿದ್ರು. ಸಿಎಂ ಬಿಪಿಎಲ್ ಕಾರ್ಡ್ ಅಲ್ಲ, ಮಹದೇವಪ್ಪನೂ ಬಿಪಿಎಲ್ ಕಾರ್ಡ್ ಅಲ್ಲ. ಮೊದಲು ಕಂಡಿಷನ್ ಹಾಕಿರಲಿಲ್ಲ, ಎಲ್ಲರಿಗೂ ಎಲ್ಲಾ ಫ್ರೀ ಎಂದಿದ್ರಿ. ಈಗ ಯಾಕೆ ತಡ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ ಸಿಟಿ ರವಿ, ಮಾಡ್ತೀವಿ ಅಂತಾ ಹೇಳಿದ್ದೀರಾ... ಜನರನ್ನ ನಂಬಿಸಿದ್ದೀರಾ... ಕೊಟ್ಟ ಮಾತು ಉಳಿಸಿಕೊಳ್ಳಿ ಎಂದರು.ಇದನ್ನೂ ಓದಿ: Karnataka Cabinet Portfolio: ಕೊನೆಗೂ ಸಿದ್ದರಾಮಯ್ಯ ಸರ್ಕಾರದ ಸಚಿವರಿಗೆ ಖಾತೆ ಹಂಚಿಕೆ, ಇಲ್ಲಿದೆ ಅಧಿಕೃತ ಪಟ್ಟಿಇನ್ನು, ಸಂಪುಟ ವಿಸ್ತರಣೆಯೂ ಆಯ್ತು, ಖಾತೆ ಹಂಚಿಕೆಯೂ ಆಯ್ತು, ಇನ್ಯಾಕೆ ತಡ? ಅಂದು ಯೋಜನೆ ಘೋಷಣೆ ಮಾಡುವಾಗ ನಿರ್ಬಂಧ ಇರಲಿಲ್ಲ, ಈಗ ಏಕೆ ಕಾರಣ ಹುಡುಕ್ತಿದ್ದೀರಾ? ಗ್ಯಾರೆಂಟಿ ಯೋಜನೆಗಳನ್ನು ತಕ್ಷಣ ಜಾರಿ ಮಾಡಿ ಎಂದ ಸಿಟಿ ರವಿ, ಸಬೂಬು, ತಕರಾರು ಇಲ್ಲದೆ ಎಲ್ಲಾ ಯೋಜನೆಗಳನ್ನು ಜಾರಿ ಮಾಡಿ ಎಂದು ಹೇಳುವ ಮೂಲಕ ಗ್ಯಾರಂಟಿ ಯೋಜನೆ ಜಾರಿಗೆ ಸಮಯ ಕೇಳಿದ ಕಾಂಗ್ರೆಸ್ಸಿಗೆ ಚಾಟಿ ಬೀಸಿದರು.

Post a Comment