Supreme Court: ಇನ್ಮುಂದೆ ಸೋಶಿಯಲ್ ಮೀಡಿಯಾದಲ್ಲೂ ನ್ಯಾಯಾಧೀಶರನ್ನು ದೂಷಿಸುವಂತಿಲ್ಲ; ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ


 ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಾ ವಿಚಾರದಲ್ಲೂ ಅಪಸ್ವರ ಎತ್ತುವ ಕೃತ್ಯಗಳು ನಡೆಯುತ್ತಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಮಾಡುವ ಅಪಮಾನಕರ ಸುದ್ದಿಗಳ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
 ನ್ಯಾಯಾಧೀಶರನ್ನು ದೂಷಣೆ ಮಾಡುವುದು ಅಕ್ಷಮ್ಯವಾಗಿದ್ದು, ಹೀಗಾಗಿ ಸಾಮಾಜಿಕ ಜಾಲತಾಣದಲ್ಲೂ ಕೂಡ ಯಾರೊಬ್ಬರೂ ನ್ಯಾಯಾಧೀಶರನ್ನು ದೂಷಣೆ ಮಾಡುವಂತಿಲ್ಲ ಅಥವಾ ಅಪವಾದ ಹೊರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನಿಮ್ಮ ಪರವಾಗಿ ತೀರ್ಪು ಬಾರದಿದ್ದಾಗ ನೀವು ನ್ಯಾಯಾಧೀಶರನ್ನು ದೂಷಿಸುವುದು ಸರಿಯಲ್ಲ ಎಂದಿರುವ ಸುಪ್ರೀಂ ಕೋರ್ಟ್, ನ್ಯಾಯಾಂಗದ ಸ್ವಾತಂತ್ರ್ಯವೆಂದರೆ ಕೇವಲ ಕಾರ್ಯಾಂಗದಿಂದ ಸ್ವತಂತ್ರವಾಗಿರುವುದಲ್ಲ. ಹೊರಗಿನ ಶಕ್ತಿಗಳಿಂದಲೂ ಸ್ವತಂತ್ರವಾಗಿರುವುದಾಗಿದೆ ಎಂದು ಉಚ್ಛ ನ್ಯಾಯಾಲಯ ಹೇಳಿದೆ.ಅರ್ಜಿದಾರರು ನ್ಯಾಯಾಧೀಶರನ್ನು ದೂಷಿಸಿದ್ದಾರೆ. ನ್ಯಾಯಾಧೀಶರ ಮೇಲೆ ಆರೋಪ ಹೊರಿಸುವ ಮೊದಲು ಅವರು ಎರಡು ಬಾರಿ ಯೋಚಿಸಬೇಕಿತ್ತು. ನ್ಯಾಯಾಧೀಶರ ವ್ಯಕ್ತಿತ್ವಕ್ಕೆ ಆದ ಹಾನಿ ಬಗ್ಗೆಯೂ ಅವರು ಯೋಚಿಸಬೇಕಿತ್ತು. ಇದು ಇತರರಿಗೆ ಪಾಠವಾಗಬೇಕು ಸುಪ್ರೀಂ ಕೋರ್ಟ್ ಪೀಠ ಎಚ್ಚರಿಸಿದೆ.ಜಿಲ್ಲಾ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿದ್ದಕ್ಕಾಗಿ ಮಧ್ಯಪ್ರದೇಶ ಹೈಕೋರ್ಟ್ ವ್ಯಕ್ತಿಯೊಬ್ಬರಿಗೆ 10 ದಿನಗಳ ಜೈಲು ಶಿಕ್ಷೆ ವಿಧಿಸಿರುವುದನ್ನು ಸುಪ್ರೀಂ ಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರಿದ್ದ ರಜಾಕಾಲದ ಪೀಠವು, ಈ ವಿಚಾರದಲ್ಲಿ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯಪ್ರವೇಶಿಸಲು ಇಷ್ಟಪಡುವುದಿಲ್ಲ ಎಂದು ಹೇಳಿದೆ.ಅರ್ಜಿದಾರರು ಮೇ 27ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಇದು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ಶಿಕ್ಷೆ ಅವಧಿ ವಿಪರೀತವಾಯಿತು’ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು. ಆಗ ನ್ಯಾಯಪೀಠ, ‘ನಾವು ಇಲ್ಲಿರುವುದು ಸರಿ ತಪ್ಪುಗಳನ್ನು ನಿರ್ಧರಿಸುವುದಕ್ಕೇ ಹೊರತು ಇಂತಹ ವ್ಯಕ್ತಿಗಳಿಗೆ ಕರುಣೆ ತೋರುವುದಕ್ಕಲ್ಲ’ ಎಂದು ಖಾರವಾಗಿ ಹೇಳಿ ಅರ್ಜಿಯನ್ನು ತಿರಸ್ಕರಿಸಿದೆ.

7/ 7

Post a Comment

Previous Post Next Post