ಬಿಎಸ್ ಯಡಿಯೂರಪ್ಪ
ನಿನ್ನೆ ತಡರಾತ್ರಿ ತಮ್ಮ ಹೊನ್ನಾಳಿ ನಿವಾಸದಲ್ಲಿ ಸಾಕಷ್ಟು ಬೆಂಬಲಿಗರ ಜೊತೆ ಮಾತನಾಡುತ್ತಿದ್ದ ವೇಳೆ ಕಣ್ಣೀರೇ ಹಾಕಿಬಿಟ್ಟ ರೇಣುಕಾಚಾರ್ಯ, ಕ್ಷೇತ್ರದ ಜನರಿಗೆ ಸಾಕಷ್ಟು ಕೆಲಸ ಮಾಡಿ ಕೊಟ್ಟರೂ ಗೆಲ್ಲಲಿಲ್ಲ ಅಂತ ಅತ್ತಿದ್ದಾರೆ.ದಾವಣಗೆರೆ: ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಉಂಟಾಗಿದೆ. ಕಮಲ ಪಾಳಯದ ಹೀನಾಯ ಸೋಲಿನಿಂದ ಹೊರಬರಲು ಕೇಸರಿ ನಾಯಕರು ಇನ್ನೂ ಪ್ರಯತ್ನಪಡುತ್ತಲೇ ಇದ್ದಾರೆ. ಈ ಮಧ್ಯೆ ಹೊನ್ನಾಳಿ ಶಾಸಕರಾಗಿದ್ದ ಎಂಪಿ ರೇಣುಕಾಚಾರ್ಯ (MP Renukacharya) ಅವರು ತಮ್ಮ ಸೋಲಿನಿಂದ ಕಂಗಾಲಾಗಿದ್ದಾರೆ. ಇಷ್ಟು ಮಾತ್ರವಲ್ಲದೇ ರಾಜಕೀಯ ನಿವೃತ್ತಿಗೂ (Political Retirement) ಮುಂದಾಗಿದ್ದಾರೆ.ನಿನ್ನೆ ನಡೆದ ಚುನಾವಣಾ ಫಲಿತಾಂಶದಲ್ಲಿ ಒಂದು ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಳ್ಳದೆ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಎಂಪಿ ರೇಣುಕಾಚಾರ್ಯ, ಸೋಲನ್ನು ಅರಗಿಸಲಾರದೆ ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ನಿನ್ನೆ ತಡರಾತ್ರಿ ತಮ್ಮ ಹೊನ್ನಾಳಿ ನಿವಾಸದಲ್ಲಿ ಸಾಕಷ್ಟು ಬೆಂಬಲಿಗರ ಜೊತೆ ಮಾತನಾಡುತ್ತಿದ್ದ ವೇಳೆ ಕಣ್ಣೀರೇ ಹಾಕಿಬಿಟ್ಟ ರೇಣುಕಾಚಾರ್ಯ, ಕ್ಷೇತ್ರದ ಜನರಿಗೆ ಸಾಕಷ್ಟು ಕೆಲಸ ಮಾಡಿ ಕೊಟ್ಟರೂ ಗೆಲ್ಲಲಿಲ್ಲ ಅಂತ ಅತ್ತಿದ್ದಾರೆ.

Post a Comment