Election Results 2023: ಇದು ಮೋದಿ ಸೋಲಲ್ಲ, ಕಾಂಗ್ರೆಸ್​ ಏನು ದೇಶ ಗೆದ್ದಿಲ್ಲ; ಬೊಮ್ಮಾಯಿ


 ಬಸವರಾಜ್ ಬೊಮ್ಮಾಯಿ, ಹಂಗಾಮಿ ಸಿಎಂ

Basavaraj Bommai: ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯವರಿಗೆ ಒಳ್ಳೆಯದಾಗಲಿ. ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಆದಷ್ಟ ಬೇಗ ಜಾರಿ ಮಾಡಲಿ. ಕ್ಯಾಬಿನೆಟ್ ಕರೆದು ಏನು ಮಾಡ್ತಾರೆ ಎಂದು ನೋಡೋಣ ಎಂದರು. ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆ (Karnataka Assembly Election 2023) ಸೋತರೋದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೋಲಲ್ಲ. ಅವರು ಪ್ರಚಾರಕ್ಕಾಗಿ ಮಾತ್ರ ರಾಜ್ಯಕ್ಕಾಗಿ ಬಂದಿದ್ದರು. ಹಾಗಂತ ಕಾಂಗ್ರೆಸ್​​ ಏನು ಇಡೀ ದೇಶವನ್ನೇನೂ ಗೆದ್ದಿಲ್ಲ ಎಂದು ಹಂಗಾಮಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಪ್ರಮುಖರು ಎಲ್ಲರೂ ಸೇರಿ ಸೋಲಿನ ಬಗ್ಗೆ ಆಳವಾಗಿ ಚರ್ಚೆ ನಡೆಸಲಾಗಿದೆ. ಫಲಿತಾಂಶದ ಬಗ್ಗೆ ಹಾಗೂ ಬೇರೆ ಬೇರೆ ಕಡೆಯಿಂದ ಇನ್ನಷ್ಟು ಮಾಹಿತಿ ತರಿಸಿಕೊಂಡು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.ವಿಧಾನಸಭೆ ಕ್ಷೇತ್ರವಾರು ಪರಾಮರ್ಶೆ ಮಾಡಬೇಕಿದೆ. ಅಧ್ಯಕ್ಷರು ಇನ್ನು ಮೂರು ನಾಲ್ಕು ದಿನಹಳ ಒಳಗೆ ಚುನಾಯಿತ ಪ್ರತಿನಿಧಿಗಳ ಸಭೆ ಕರೆಯುತ್ತಿದ್ದಾರೆ ಮರುದಿನ ಎಲ್ಲಾ ಅಭ್ಯರ್ಥಿಗಳ ಸಭೆ ಕರೆದು ಚರ್ಚೆ ಮಾಡಲಿದ್ದಾರೆ. ಅಲ್ಲಿ ಕೂಲಂಕುಷವಾಗಿ ಚರ್ಚೆ ಮಾಡಿ, ಯಾವ ರೀತಿ ಒಗ್ಗಟ್ಟಾಗಿ ಪಕ್ಷ ಬಲವರ್ಧನೆ ಮಾಡಬೇಕೆಂದು ಚರ್ಚೆ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದರು.

Post a Comment

Previous Post Next Post