ಪ್ಯಾನ್ಕಾರ್ಡ್
ಇದೀಗ ದೇಶದ ಬಜೆಟ್ ಮಂಡನೆ 2023ರ ಪ್ರಕ್ರಿಯೆ ನಡೆಯುತ್ತಿದ್ದು, ಈ ಮಂಡನೆಯಲ್ಲಿ ಡಿಜಿಟಲ್ ವ್ಯವಸ್ಥೆ ಇನ್ನಷ್ಟು ಸುಲಭವಾಗುವಂತೆ ಮಾಡಲು ಎಲ್ಲಾ ಡಿಜಿಟಲ್ ಡೇಟಾಗಳನ್ನು ಒಂದೇ ಫೈಲ್ನಲ್ಲಿ ಸಿಗುವಂತೆ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕಾಗಿ ಇನ್ಮುಂದೆ ಪ್ಯಾನ್ ಕಾರ್ಡ್ ಮೂಲಕವೇ ಕೆವೈಸಿ ಪ್ರಕ್ರಿಯೆ ಸರಳೀಕರಣಕ್ಕೆ ಒತ್ತು ನೀಡಲಾಗುತ್ತಿದೆ.ಇದೀಗ ದೇಶದ ಸಾಮಾನ್ಯ ಬಜೆಟ್ ಮಂಡನೆ ಪ್ರಕ್ರಿಯೆ ನಡೆಯುತ್ತಿದ್ದು, ಈ ಬಜೆಟ್ನಲ್ಲಿ ಕೆವೈಸಿ ಪ್ರಕ್ರಿಯೆಯನ್ನು ಇನ್ನೂ ಸರಳವಾಗಿ ಕಾರ್ಯ ನಿರ್ವಹಿಸಲು ಪ್ಯಾನ್ ಮೂಲಕವೇ ಸಾಧ್ಯವಾಗುವಂತೆ ಮಾಡುವುದಾಗಿ ಘೋಷಿಸಿದ್ದಾರೆ. ಎಲ್ಲಾ ಡಿಜಿಟಲ್ ವ್ಯವಸ್ಥೆಗಳಿಗೆ ಇನ್ನುಮುಂದೆ ಪ್ಯಾನ್ ಅನ್ನು ಗುರುತಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ಹೇಳಿದರು. ಮುಂದಿನ ದಿನಗಳಲ್ಲಿ ಏಕೀಕೃತ ಫೈಲಿಂಗ್ ಪ್ರಕ್ರಿಯೆಯನ್ನು ಸೆಟಪ್ ಮಾಡಲಾಗುತ್ತದೆ. ಇನ್ನು ಒಂದೇ ಪೋರ್ಟಲ್ ಮೂಲಕ ಎಲ್ಲಾ ಡೇಟಾಗಳು ಲಭ್ಯವಿರುತ್ತದೆ ಎಂದು ಹೇಳಿದ್ದಾರೆ.ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಹೆಚ್ಚಳಇದೀಗ ಭಾರತದಲ್ಲಿ ಮೊಬೈಲ್ ಫೋನ್ಗಳ ಉತ್ಪಾದನೆಯನ್ನು ಹೆಚ್ಚಳ ಮಾಡುವುದಾಗಿ ಈ ಬಾರಿಯ ಯೂನಿಯನ್ ಬಜೆಟ್ 2023ರ ಬಜೆಟ್ ಮಂಡನೆಯಲ್ಲಿ ತಿಳಿಸಿದ್ದಾರೆ. ಆದರೆ ಈ ಮಧ್ಯೆ ಮೊಬೈಲ್ ಫೋನ್, ಕ್ಯಾಮೆರಾ ಲೆನ್ಸ್ ಆಮದು ಸುಂಕದಲ್ಲಿ ಬೆಲೆಯನ್ನು ಇಳಿಕೆ ಮಾಡಿದೆ. ಜೊತೆಗೆ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ಆಮದು ಮಾಡಿಕೊಳ್ಳುವವರಿಗೂ ಗುಡ್ನ್ಯೂಸ್ ಅನ್ನು ನೀಡಿದೆ. ಅದೇನೆಂದರೆ ಬ್ಯಾಟರಿನ್ನು ಆಮದು ಮಾಡಿಕೊಳ್ಳುವವರಿಗೂ ಆಮದು ಸುಂಕದಲ್ಲೂ ಬೆಲೆ ಇಳಿಕೆ ಮಾಡಿದೆ.

Post a Comment