Narendra Modi: ಯಡಿಯೂರಪ್ಪ ಭಾಷಣ ನನಗೆ ಸ್ಪೂರ್ತಿ ನೀಡಿದೆ; ಬಿಎಸ್‌ವೈ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ ಪ್ರಧಾನಿ ಮೋದಿ


 ಬಿಎಸ್‌ವೈ ಮತ್ತು ನರೇಂದ್ರ ಮೋದಿಮಾಜಿ ಸಿಎಂ ಯಡಿಯೂರಪ್ಪ ವಿಧಾನಸಭೆ ಅಧಿವೇಶನದಲ್ಲಿ ಮಾಡಿದ ಕೊನೆಯ ಭಾಷಣವನ್ನು ಶೇರ್ ಮಾಡಿರುವ ಪ್ರಧಾನಿ ಮೋದಿ, ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಫೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ ಎಂದು ಹೇಳಿದ್ದಾರೆನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ (BS Yediyurappa) ಅವರು ಕರ್ನಾಟಕ ಬಿಜೆಪಿಯ (Karnataka BJP) ಅಗ್ರಗಣ್ಯ ನಾಯಕ. ಕರ್ನಾಟಕದಲ್ಲಿ ಬಿಜೆಪಿ ಈ ಮಟ್ಟಿಗೆ ಬೆಳೆಯಬೇಕೆಂದರೆ ಅದರಲ್ಲಿ ಬಿಎಸ್‌ವೈ (BSY) ಶ್ರಮದ ಮುಂದೆ ಇತರ ನಾಯಕರ ಪಾಲು ಅರ್ಧದಷ್ಟು ತೂಗೋದು ಕೂಡ ಕಡಿಮೆ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದರೂ ಕೂಡ ಪೂರ್ಣಾವಧಿಗೆ ಸಿಎಂ ಆಗುವ ಭಾಗ್ಯವನ್ನು ಕಳೆದುಕೊಂಡವರು ಬಿಎಸ್‌ವೈ. ಇದಕ್ಕೆ ಸಾಕ್ಷಿ ಅವರು ಸಿಎಂ ಸ್ಥಾನ ತ್ಯಜಿಸಿದಾಗ ಮಾಡಿದ ಭಾಷಣದಲ್ಲಿ ಭಾವುಕರಾಗಿದ್ದುಬಿಎಸ್‌ ಯಡಿಯೂರಪ್ಪ ಅವರು ವಿಧಾನಸಭೆ ಅಧಿವೇಶನದಲ್ಲಿ ಮಾಡಿದ ತಮ್ಮ ಕೊನೆಯ ಭಾಷಣದಲ್ಲೂ ಭಾವುಕರಾಗಿದ್ದರು. ತಾನು ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುತ್ತಿದ್ದರೂ ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತಂದು ವಿರಮಿಸ್ತೇನೆ ಎಂದು ಹೇಳಿದ್ದರು. ತಾನು ಚುನಾವಣಾ ರಾಜಕಾರಣದಿಂದ ನಿವೃತ್ತಿ ಹೊಂದುವ ಬಗ್ಗೆ ಮಾತನಾಡಿದಾಗ ಕಾಂಗ್ರೆಸ್‌ ನಾಯಕರ ಸಹಿತ ಪಕ್ಷಾತೀತವಾಗಿ ತಾವು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು. ನಿಮ್ಮ ಅನುಭವ ನಮಗೆ ಬೇಕು ಎಂದು ಹೇಳಿದ್ದಇದನ್ನೂ ಓದಿ: Siddaramaiah: ಯಡಿಯೂರಪ್ಪನಿಗೆ ಮೋಸ ಮಾಡಿದ್ಯಾರ್‌ರೀ? ಇದೇ ಎಚ್‌ಡಿ ಕುಮಾರಸ್ವಾಮಿ: ಸಿದ್ದರಾಮಯ್ಯ ಕಿಡಿಬಿಎಸ್‌ವೈ ಭಾಷಣ ನನಗೆ ಸ್ಪೂರ್ತಿ ಎಂದ ಇದೀಗ ಬಿಎಸ್‌ ಯಡಿಯೂರಪ್ಪ ಅವರು ವಿಧಾನಸಭೆ ಅಧಿವೇಶನದಲ್ಲಿ ಮಾಡಿದ ಕೊನೆಯ ಭಾಷಣವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶೇರ್ ಮಾಡಿಕೊಂಡಿದ್ದಾರೆ. ಯಡಿಯೂರಪ್ಪ ಅವರು ಮಾಡಿದ ಪೂರ್ಣ ಭಾಷಣವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿರುವ ಪಿಎಂ ಮೋದಿ, ಯಡಿಯೂರಪ್ಪ ಅವರ ಭಾಷಣ ನನಗೆ ಸ್ಫೂರ್ತಿದಾಯಕ ಎಂದು ಹೇಳಿದ್ದಾರೆ. ಅಲ್ಲದೇ ಯಡಿಯೂರಪ್ಪ ಅವರ ಭಾಷಣದಲ್ಲಿ ನಮ್ಮ ಪಕ್ಷದ ನೈತಿಕತೆ ಅಡಕವಾಗಿದೆ ಎಂದು ಹೇಳಿಕೊಂಡಿದ್ದಾರೆಬಿಎಸ್‌ವೈ ಮಾಡಿರುವ 21 ನಿಮಿಷಗಳ ಭಾಷಣದ ಕ್ಲಿಪ್‌ನ್ನು ರಾಜ್ಯ ಬಿಜೆಪಿ ಘಟಕ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿತ್ತು. ಇದನ್ನು ರೀಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಒಬ್ಬ ಕಾರ್ಯಕರ್ತನಾದ ನನಗೆ ಈ ಭಾಷಣ ಅತ್ಯಂತ ಸ್ಫೂರ್ತಿದಾಯಕ ಎಂದೆನಿಸಿದೆ. ಇದರಲ್ಲಿ ನಮ್ಮ ಪಕ್ಷದ ನೈತಿಕತೆಯೂ ಅಡಕವಾಗಿದೆ. ಇದು ಖಂಡಿತವಾಗಿಯೂ ಇತರ ಕಾರ್ಯಕರ್ತರಿಗೂ ಸ್ಫೂರ್ತಿ ನೀಡುತ್ತದೆ ಎಂದು ಕನ್ನಡದಲ್ಲಿ ಬರೆದುಕೊಂಡಿದ್ದಾಇದನ್ನೂ ಓದಿ: Karnataka Election 2023: ಬಿಎಸ್ವೈ ಜೊತೆ ಪ್ರಧಾನಿ ಮೋದಿ 1 ಗಂಟೆ ಮಾತುಕತೆ; ಮತ್ತೆ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮಣೆ'ಇದು ನನ್ನ ಕೊನೆಯ ಭಾಬುಧವಾರ ವಿಧಾನಸಭೆಯಲ್ಲಿ ತಮ್ಮ ಕೊನೆಯ ಭಾಷಣವನ್ನು ಮಾಡಿದ್ದ ಮಾಜಿ ಸಿಎಂ ಯಡಿಯೂರಪ್ಪ, ಪಕ್ಷ ನಿಷ್ಠೆಯ ಬಗ್ಗೆ ಮಾತನಾಡಿದ್ದರು. ‘ಇದು ನನ್ನ ಕೊನೆಯ ಭಾಷಣ. ನಾನು ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಹೀಗಾಗಿ ನಾನು ಮತ್ತೆ ಈ ವಿಧಾನಸಭೆಯ ಒಳಗೆ ಬರುವ ಪ್ರಶ್ನೆ ಉದ್ಭವಿಸುವುದಿಲ್ಲ. ನಾನು ಪಕ್ಷದಲ್ಲಿ ಇರುವಷ್ಟು ದಿನ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಎಲ್ಲಾ ರೀತಿಯ ಸಹಕಾರ ಮಾಡಿದರು. ಪಕ್ಷದಲ್ಲಿ ವಿಶೇಷ ಸ್ಥಾನಮಾನ ನೀಡಿದ್ದರು. ನನ್ನ ಬದುಕಿನ ಕೊನೆಯುಸಿರು ಇರುವ ತನಕ ನಾನು ಬಿಜೆಪಿಯನ್ನು ರಾಜ್ಯ ಮತ್ತು ದೇಶದಲ್ಲಿ ಅಧಿಕಾರಕ್ಕೆ ತರಲು ಶಕ್ತಿ ಮೀರಿ ಕಾರ್ಯಕರ್ತನಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಮುಂದುವರಿದು ಮಾತನಾಡಿದ್ದ ಬಿಎಸ್‌ವೈ, ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಅದೇ ರೀತಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್‌ ಕೂಡಾ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು ಸತ್ಯ ಎಂದು ಹೇಳಿದ್ದರು. ರು.ಷಣ'!ರೆ..ಮೋದಿರು... ಸತ್ಯ ಎಂದು ಹೇಳಿದ್ದರು.

Post a Comment

Previous Post Next Post