ಪ್ರಾತಿನಿಧಿಕ ಚಿತ್ರ
ಇಂದು ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದ್ದು, ಮೃತ ನಾಲ್ವರ ಕುತ್ತಿಗೆ, ತಲೆ ಹಾಗೂ ಮುಖದ ಭಾಗದಲ್ಲಿ ಮಾರಾಕಾಸ್ತ್ರದಿಂದ ಭೀಕರವಾಗಿ ದಾಳಿ ಮಾಡಿರುವ ಗುರುತು ಪತ್ತೆಯಾಗಿದೆ. ಇನ್ನು ಕೊಲೆಯಾದ ರಾಜೀವ್ ಭಟ್ಟರಿಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗು ಶಾಲೆಗೆ ಹೋಗಿತ್ತು. ಉಳಿದಂತೆ ಇನ್ನೊಂದು ಮಗು ಮನೆಯಲ್ಲೇ ಉಳಿದುಕೊಂಡಿತ್ತುಕಾರವಾರ: ಒಂದೇ ಕುಟುಂಬದ (Family) ನಾಲ್ವರನ್ನು ಕೊಲೆಗೈದಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳ (Bhatkal) ತಾಲೂಕಿನ ಹಾಡವಳ್ಳಿ ಗ್ರಾಮದ ಸಮೀಪ ನಡೆದಿದೆ. ಕತ್ತಿಯಲ್ಲಿ ಕಡಿದು ನಾಲ್ವರ ಭೀಕರ ಹತ್ಯೆ ಮಾಡಿದ್ದು, ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದ ಸಾಧ್ಯತೆ ಇದ್ದು, ಪೊಲೀಸರು (Police) ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಓರ್ವ ಕೊಲೆ ಆರೋಪಿ ಶ್ರೀಧರ ಭಟ್ ಎಂಬಾತನನ್ನ ಭಟ್ಕಳ ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ದುರ್ದೈವಿಗಳನ್ನು ಶಂಭು ಭಟ್ (65), ಆತನ ಪತ್ನಿ ಮಾದೇವಿ ಭಟ್ (40), ಮಗ ರಾಜೀವ್ ಭಟ್ (34), ಹಾಗೂ ಮಗನ ಪತ್ನಿ ಕುಸುಮಾ ಭಟ್ (30) ಎಂದು ಗುರುತಿಸಲಾಗಿದೆ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಂದು ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದ್ದು, ಮೃತ ನಾಲ್ವರ ಕುತ್ತಿಗೆ, ತಲೆ ಹಾಗೂ ಮುಖದ ಭಾಗದಲ್ಲಿ ಮಾರಾಕಾಸ್ತ್ರದಿಂದ ಭೀಕರವಾಗಿ ದಾಳಿ ಮಾಡಿರುವ ಗುರುತು ಪತ್ತೆಯಾಗಿದೆ. ಇನ್ನು ಕೊಲೆಯಾದ ರಾಜೀವ್ ಭಟ್ಟರಿಗೆ ಇಬ್ಬರು ಮಕ್ಕಳಿದ್ದು, ಓರ್ವ ಮಗು ಶಾಲೆಗೆ ಹೋಗಿತ್ತು. ಉಳಿದಂತೆ ಇನ್ನೊಂದು ಮಗು ಮನೆಯಲ್ಲೇ ಉಳಿದುಕೊಂಡಿತ್ತು. ಸದ್ಯ ಇಬ್ಬರು ಮಕ್ಕಳು ಜೀವ ಉಳಿದಿದೆ
. .ದಿದೆ.ಭಾಸ್ಕರ್, ಅಪರಾಧಿ
ಇದನ್ನೂ ಓದಿ: Kalasipalyal 63 ಕೋಟಿ ರೂಪಾಯಿ ವೆಚ್ಚದ ಕಲಾಸಿಪಾಳ್ಯದ ಬಸ್ ಟರ್ಮಿನಲ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿಸರಗಳ್ಳನಿಗೆ ಎರಡು ವರ್ಷ ಗೈಲು ಶಿಕ್ಷೆವಿಜಯನಗರ: ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು (Chain Snatching ) ಹೋಗಿದ್ದ ಆರೋಪಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಹೊಸಪೇಟೆಯ (Hosapete) ಪ್ರಧಾನ ಸಿಜೆ(ಕಿ.ವಿ) ಮತ್ತು ಸಿಎಂಎಫ್.ಸಿ ನ್ಯಾಯಾಲಯದ ನ್ಯಾಯಾದೀಶರಾದ ಬಿ.ಕಿಷನ್ ಮಾಡಲಗಿ ಆದೇಶ ನೀಡಿದ್ದಾರೆ. ಹೊಸಪೇಟೆಯಲ್ಲಿ ಸೆ.27 ರಂದು 2014 ರಲ್ಲಿ ಭಾಸ್ಕರ್ ಅಪರಾಧಿ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡ ಪರಾರಿಯಾಗಿದ್ದ.ಭಾಸ್ಕರ್ ವಿರುದ್ಧ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿ ಐ ರಘುಕುಮಾರ್ ಇವರು ಅಪರಾಧಿ ವಿರುದ್ಧ ಐಪಿಸಿ ಕಲಂ 392 ದೂರು ದಾಖಲಿಸಿದ್ದರು. ಬಳಿಕ ಪಿಐ ಶ್ರೀಧರದೊಡ್ಡಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಕೀಲರಾದ ಗೀತಾ ಎಸ್.ಮಿರಜಕರ ವಾದ ಮಂಡನೆ ಮಾಡಿದ್ದು, ಸದ್ಯ ಅಪರಾಧಿ ಭಾಸ್ಕರ್ ಗೆ ಎರಡು ವರ್ಷಗಳ ಜೈಲು ಶಿಕ್ಷೆ ಐದು ಸಾವಿರ ರೂ. ದಂಡ ವಿಧಿಸಿ ಕೋರ್ಟ್ ತೀರ್ಪು
ನೀಡಿದೆ.ಅಕ್ರಮ ಬಂದೂಕು ವಶಕ್ಕೆ51ಕ್ಕೂ ಹೆಚ್ಚು ಅಕ್ರಮ ಬಂದೂಕು ವಶಪಡಿಸಿಕೊಂಡ ಕಾಫಿನಾಡ ಪೊಲೀಸ್ಚಿಕ್ಕಮಗಳೂರು: ಕೆಲ ದಿನಗಳ ಶೂಟೌಟ್ ನಿಂದ ಅಮಾಯಕರಿಬ್ಬರ ಸಾವನ್ನಪ್ಪಿದ್ದ ಬಳಿಕ ಎಚ್ಚೆತ್ತುಕೊಂಡಿರುವ ಕಾಫಿನಾಡ ಪೊಲೀಸರು (Chikkamagaluru Police) ಅನಧಿಕೃತ ಬಂದೂಕುಗಳ ಹಿಂದೆ ಬಿದ್ದಿದ್ದಾರೆ. ಅಲ್ಲದೆ ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 51ಕ್ಕೂ ಹೆಚ್ಚು ಅಕ್ರಮ ಬಂದೂಕುಗಳನ್ನು (Gun) ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಬಂದೂಕು ದುರಸ್ತಿಪಡಿಸುವ ಅಂಗಡಿಗಳ ಮೇಲೂ ಪೊಲೀಸರು ದಾಳಿ ಮಾಡಿದ್ದು, ಈ ವೇಳೆ ಭಾರೀ ಪ್ರಮಾಣದ ಅಕ್ರಮ ಬಂದೂಕು, ರಿವಾಲ್ವರ್ ಪತ್ತೆಯಾಗಿದೆ.ಈ ಸಂಬಂಧ ಮಲೆನಾಡು ಭಾಗದ ಆರು ಜನ ಆರೋಪಿಗಳ ಬಂಧನ ಮಾಡಿದ್ದಾರೆ. ಬಾಳೆಹೊನ್ನೂರು, ಬಾಳೂರು, ಕಳಸ ಹಾಗೂ ಎನ್.ಆರ್.ಪುರ ಠಾಣಾ ವ್ಯಾಪ್ತಿಯಲ್ಲಿ ದಾಳಿ ಮಾಡಿದ್ದಾರೆ. ಇದುವರೆಗೂ ಪರವಾನಿಗೆ ರಹಿತ 41, ಪರವಾನಿಗೆ ಸಹಿತ 10 ಬಂದೂಕು, ಎರಡು ರಿವಾಲ್ವರ್, 22 ರೈಫಲ್ ಗುಂಡು, 40 ಬುಕ್ ಶಾಟ್ ಗುಂಡು, ಬಂದೂಕು ನಳಿಕೆ, ಕಾಟ್ರೇಜ್ ಗಳ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಸದಾಶಿವಾಚಾರ್, ಸುಧಾಕರ್ ಆಚಾರಿ, ರಾಮಚಂದ್ರ ಆಚಾರಿ, ಸುಂದರ, ಗಂಗಾಧರ ಹಾಗೂ ಶಿವರಾಜ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಅಕ್ರಮ ಬಂದೂಕಿನಿಂದ ಇಬ್ಬರು ಯುವಕರನ್ನ ಹತ್ಯೆಗೈ
ಮೃತನ ಬೈಕ್ಇದನ್ನೂ ಓದಿ: Sa Ra Mahesh: ಮಂತ್ರಿಗಿರಿ ಆಸೆ ಇದ್ದವರು ಸತ್ತು ದೆವ್ವವಾದ್ರು! ಸದನದಲ್ಲಿ ‘ದೆವ್ವ’ಗಳ ಬಗ್ಗೆ ಸ್ವಾರಸ್ಯಕರ ಚರ್ಚೆನಾಟಕ ವೀಕ್ಷಣೆಗೆ ತೆರಳಿದ್ದ ಯುವಕನ ಮೃತದೇಹ ಪತ್ತೆಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ಪಟ್ಟಣ (Challakere) ಬಳಿ 23 ವರ್ಷದ ಯುವಕನ ಶವ ಪತ್ತೆಯಾಗಿದ್ದು, ಮೃತನನ್ನು ಚಳ್ಳಕೆರೆಯ ಕಾಟಪ್ಪನಹಟ್ಟಿಯ ಮಧು ಎಂದು ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿ ಮೃತ ಯುವಕನ ಬೈಕ್ (Bike) ಬಿದ್ದಿದ್ದು, ಅಲ್ಲಿಂದ ಸುಮಾರು 20 ಅಡಿ ದೂರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.ಮೃತ ಮಧು ದುಗ್ಗಾವರ ಗ್ರಾಮದಲ್ಲಿ ನಾಟಕ ವೀಕ್ಷಣೆಗೆ ತೆರಳಿ ಬೆಳಗಿನ ಜಾವ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದ್ದು, ಮೃತನ ಕುಟುಂಬದವರು ತಮ್ಮ ಮಗನನ್ನು ಕೊಲೆ ಮಾಡಿ ಮೃತದೇಹ ಬೀಸಾಡಿ ಹೋಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದ್ದು, ಅಪಘಾತವೋ, ಹತ್ಯೆಯೋ ಎಂಬ ಬಗ್ಗೆ ಪೊಲೀಶರು ಪರಿಶೀಲನೆ ನಡೆಸಿದ್ದಾರೆ.




Post a Comment