Ramesh Jarkiholi: CD ಷಡ್ಯಂತ್ರ ಹಿಂದಿನ ನಾಯಕನ ಆಡಿಯೋ ರಿಲೀಸ್​​ಗೆ ರಮೇಶ್​ ಜಾರಕಿಹೊಳಿ ಸಿದ್ಧತೆ; ಹೊಸ ಬಾಂಬ್ ಸಿಡಿಸುತ್ತಾರಾ 'ಸಾಹುಕಾರ್'?


  ಮಾಜಿ ಸಚಿವ ರಮೇಶ್ ಜಾರಕಿಹೊಳಿ

ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ಸಿ.ಡಿ ಷಡ್ಯಂತರ ಹಿಂದೆ ನಾಯಕರೊಬ್ಬರ ಕೈವಾಡವಿದೆ. ರಮೇಶ್ ನನ್ನ ಆಪ್ತ ಸ್ನೇಹಿತ ಅಂತ ಹೇಳಿ ಷಡ್ಯಂತರ ಮಾಡಿರುವ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದರು

 ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಇಂದು ಬೆಳಗಾವಿಯ (Belagvi) ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಈ ವೇಳೆ ತಮ್ಮ ವಿರುದ್ಧ ಮಾಡಿದ್ದ ಸಿ.ಡಿ ಷಡ್ಯಂತರದ ಹಿಂದಿದ್ದ ನಾಯಕನ (CD Case) ಆಡಿಯೋ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ ಅವರು, ಸಿ.ಡಿ ಷಡ್ಯಂತರ ಹಿಂದೆ ನಾಯಕರೊಬ್ಬರ ಕೈವಾಡವಿದೆ. ಈ ಕುರಿತಂತೆ ರಮೇಶ್ ನನ್ನ ಆಪ್ತ ಸ್ನೇಹಿತ (Close Friend) ಅಂತ ಹೇಳಿ ಷಡ್ಯಂತರ ಮಾಡಿರುವ ಬಗ್ಗೆ ಮಾತನಾಡಿದ್ದಾರೆ ಎಂದು ತಿಳಿಸಿದ್ದರು. ಸದ್ಯ ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ವೇಳೆಯಲ್ಲಿಯೇ ತಮ್ಮ ವಿರುದ್ಧ ಪ್ರಯೋಗಿಸಲಾಗಿದ್ದ ಸಿ.ಡಿ ಷಡ್ಯಂತರವನ್ನು ವಿರೋಧಿಗಳಿಗೆ ತಿರುಗಿ ಬಾಣವಾಗಿ ಬಳಕೆ ಮಾಡಲು ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎನ್ನಲಾಗಿದೆಆಡಿಯೋದಲ್ಲಿರುವ ನಾಯಕ ಯಾ ಸದ್ಯ ರಾಜ್ಯ ರಾಜಕೀಯದಲ್ಲಿ ರಮೇಶ್ ಜಾರಕಿಹೊಳಿ ಅವರು ಹೇಳಿರುವ ಆಡಿಯೋ ಬಾಂಬ್ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಇಂದು ಸಿ.ಡಿ ಷಡ್ಯಂತ್ರದ ಹಿಂದಿರುವ ನಾಯಕನ ಆಡಿಯೋ ರಿಲೀಜ್ ಆಗುತ್ತಾ? ಸಿಡಿ‌ ತಯಾರಿಸಲು 40 ಕೋಟಿ ರೂಪಾಯಿ ಖರ್ಚು ಮಾಡಿದ್ರಾ? ಆಡಿಯೋದಲ್ಲಿರುವ ಮಹಾನಾಯಕ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಗುತ್ತಾ ಕಾದು ನೋಡಬೇಕಿದೆಇದನ್ನೂ ಓದಿ: Ramesh Jarkiholi: ಚುನಾವಣೆ ಹೊತ್ತಲ್ಲೇ ಮತ್ತೆ CD ಸಮರ; ಹೊಸ ಬಾಂಬ್ ಸಿಡಿಸಿದ ರಮೇಶ್ ಜಾರಕಿಹೊಳಿ, CDಗಾಗಿ 40 ಕೋಟಿ ರೂಪಾಯಿ ಖರ್ಚುರಮೇಶ್ ಜಾರಕಿಹೊಳಿ ಇನ್ನು, ತಮ್ಮ ವಿರುದ್ಧ ಸಿ.ಡಿ ಷಡ್ಯಂತರ ಮಾಡಿದ್ದ ನಾಯಕನನ್ನು ಮನೆಗೆ ಕಳುಹಿಸುವುದಾಗಿ ಶಪಥ ಮಾಡಿದ್ದು, ಚುನಾವಣೆ ಸಂದರ್ಭದಲ್ಲಿಯೇ ನಾಯಕನ ಹೆಸರು ಬಹಿರಂಗಕ್ಕೆ ಸಿದ್ಧತೆ ನಡೆಸಿದ್ದರಂತೆ. ಇನ್ನು ನಿನ್ನೆ ಕೊಣ್ಣೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿಯೂ ಷಡ್ಯಂತರ ಮಾಡಿದ್ದ ನಾಯಕನ ವಿರುದ್ಧ ಗುಡುಗಿದ್ದ ರಮೇಶ್ ಜಾರಕಿಹೊಳಿ, ಮಹಾನ್ ನಾಯಕನಿಗೆ ಚಾಲೆಂಜ್ ಮಾಡಲು ನಿಲ್ಲುತ್ತೇನೆ ಎಂದು ಹೇಳಿದ್ದಕೊಣ್ಣೂರ ಪಟ್ಟಣದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ರಮೇಶ್ ಜಾರಕಿಹೊಳಿ, ಪಕ್ಷ ಸಂಘಟನೆಯನ್ನು ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರೋಣಾ. 2023ರಲ್ಲಿ ಪೂರ್ಣ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ತರಬೇಕು. ಆದರೆ ನಾನು ಗೋಕಾಕ್ ನಲ್ಲಿ ಹೇಳಿದ ಮಾತು ಪದೇ ಪದೇ ಮಾಧ್ಯಮದಲ್ಲಿ ಬಂತು. ಬಿಜೆಪಿಗೆ ಸ್ಥಾನ ಕಡಿಮೆ ಬರುವುದು ಜಾರಕಿಹೊಳಿಗೆ ಮನವರಿಕೆ ಆಗಿದೆ, ಹೀಗಾಗಿ ಬೇರೆ ಪಕ್ಷದಿಂದ ಶಾಸಕರನ್ನು ಕರೆತರುವ ಮಾತನಾಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ನಾನು ಹೇಳಿದ್ದು ಸಾಂದರ್ಭಿಕ ಅನುಗುಣವಾಗಿ ಅಷ್ಟೇ ಎಂದು ಸ್ಪಷ್ಟಪಡಿಸಿದರುರಾಜಕೀಯ ನಿವೃತ್ತಿಯ ಬಗ್ಗೆ ರಮೇಶ್ ಜಾರಕಿಹೊಳಿ ಮಾಕಾಂಗ್ರೆಸ್ ಪಕ್ಷದಲ್ಲಿ ಕೆಲ ನಾಯಕರು ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಆದರೆ 2023ರ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಪೂರ್ಣ‌ ಪ್ರಮಾಣದಲ್ಲಿ ಸರ್ಕಾರ ರಚನೆ ಮಾಡಲಿದೆ. ನಿಮ್ಮ ಆಶೀರ್ವಾದದಿಂದ 6 ಸಲ ಶಾಸಕನಾಗಿದ್ದೇನೆ. 7 ಸಲ ಶಾಸಕನಾದ ಬಳಿಕ 8ನೇ ಬಾರಿ ನಿಲ್ಲಬೇಕಾ? ಬೇಡವಾ ಎಂಬ ತೀರ್ಮಾನ ತೆಗೆದುಕೊಳ್ಳಲು ನಿಮ್ಮ ಮೇಲೆ ಬಿಡುತ್ತೀನಿ. 2028ರ ಚುನಾವಣೆ ವೇಳೆಯಲ್ಲಿ ನಿವೃತ್ತಿ ಆಗಬೇಕು ವಿಚಾರ ಇದೆ. ಬೇರೆಯವರಿಗೆ ಅವಕಾಶ ಕೊಡ ಬಗ್ಗೆ ಯೋಚನೆ ಇದೆ. ಮುಂದಿನ ಚುನಾವಣೆಯಲ್ಲಿ ಕೊನೆಯದಾಗಿ ಸ್ಪರ್ಧೆ ಮಾಡುವ ವಿಚಾರ ಇದೆ ಎಂದರು


. ತು!.ರು.ಶಪಥ!.ರು?..ಡುವ ವಿಚಾರ ಇದೆ ಎಂದರು.ರಮೇಶ್​ ಜಾರಕಿಹೊಳಿಇದನ್ನೂ ಓದಿ: DK Shivakumar: ರಾಜಕೀಯವಾಗಿ ಮುಗಿಸ್ತೀನಿ ಎಂದ ರಮೇಶ್​ ಜಾರಕಿಹೊಳಿ ವಿರುದ್ಧ ಡಿಕೆಶಿ ಗುಡುಗು, ದೂರು ದಾಖಲುಅಲ್ಲದೇ, ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಯೋಚನೆ ಇರಲಿಲ್ಲ. ಮಹಾನ್ ನಾಯಕನಿಗೆ ಚಾಲೆಂಜ್ ಮಾಡಲು ನಿಲ್ಲುತ್ತೇನೆ. ಅವನನ್ನು ಮೂಲೆಗೆ ಹಚ್ಚಲು ಸ್ಪರ್ಧೆ ಮಾಡುತ್ತಿದ್ದೇನೆ. ಇಲ್ಲದಿದ್ದರೆ ಈ ಬಾರಿಯೇ ಚುನಾವಣೆಯಿಂದ ನಿವೃತ್ತಿ ಆಗುವ ಬಯಕೆ ಇತ್ತು. ನನ್ನ‌ ವಿರುದ್ಧ ಷಡ್ಯಂತ್ರ ಮಾಡಿ ಷಂಡ ರಾಜಕೀಯ ಮಾಡಿದ್ದಾನೆ. ಪೂರ್ಣ ಪ್ರಮಾಣದಲ್ಲಿ ಅವನನ್ನು ಮನೆಗೆ ಕಳುಹಿಸುವವರೆಗೂ ರಾಜಕೀಯದಿಂದ ನಿವೃತ್ತಿ ಆಗೋದಿಲ್ಲ. 2023ರ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುತ್ತೇನೆ. ಇದಕ್ಕಾಗಿ ಯಾವ‌ ತ್ಯಾಗಕ್ಕೂ ನಾನು ಸಿದ್ಧವಿದ್ದೇನೆ ಎಂದು ಹೇಳಿದ್ದರು.

Post a Comment

Previous Post Next Post