ಸಾಂದರ್ಭಿಕ ಚಿತದಯಾಘಾತ ಹೆಚ್ಚುತ್ತಿರೋದೇಕೆ, ಹೃದಯದ ಕಾಳಜಿ ವಹಿಸೋದು ಹೇಗೆ? ಹೃದಯ ವೈಫಲ್ಯ ಹಾಗೂ ಅದರ ಬಗ್ಗೆ ಕೆಲವು ಮುಖ್ಯ ವಿಷಯಗಳ ಬಗ್ಗೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಕಾವೇರಿ ಹಾಸ್ಪಿಟಲ್ಸ್‌ನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಗಣೇಶ್ ನಲ್ಲೂರು ಶಿವು ಅವರು ಮಾಹಿತಿ ನೀಡಿದ್ದಾರೆ. ಇಲ್ಲಿದೆ ಅದರ ಸಂಪೂರ್ಣ ವಿವರ..ಹೃದಯದ ಆರೋಗ್ಯ (Heart Health) ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇತ್ತೀಚಿನ ದಿನಗಳಲ್ಲಿ ಹೃದಯ ವೈಫಲ್ಯ (Heart Failure) ಹಾಗೂ ಹೃದಯ ಸಂಬಂಧಿ ಕಾಯಿಲೆಗಳು (Heart Related Diseases) ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದಕ್ಕೆ ಮುಖ್ಯವಾಗಿ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿ ಸಹ ಕಾರಣವಾಗಿರುತ್ತದೆ. ಹಾಗಾಗಿ ನಿಮ್ಮ ಆಹಾರ ಮತ್ತು ವಿಹಾರದ ಬಗ್ಗೆ ಸೂಕ್ತ ಕಾಳಜಿ ವಹಿಸಬೇಕು ಅಂತಾರೆ ತಜ್ಞರು. ಹೃದಯ ವೈಫಲ್ಯ ಹಾಗೂ ಅದರ ಬಗ್ಗೆ ಕೆಲವು ಮುಖ್ಯ ವಿಷಯಗಳ ಬಗ್ಗೆ ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ ಕಾವೇರಿ ಹಾಸ್ಪಿಟಲ್ಸ್‌ನ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಗಣೇಶ್ ನಲ್ಲೂರು ಶಿವು ಅವರು ಏನ್ ಹೇಳಿದ್ದಾರೆ ಎಂಬುದನ್ನ ಇಲ್ಲಿ ತಿಳಿಯೋಣಹೃದಯದ ಆರೋಗ್ಯ ಕಾಪಾಡಿಕೊಳ್ಳಿಜೀವನದ ಲಯ ತಪ್ಪದಂತೆ ಕಾಪಾಡಲು ಮೊದಲು ಉತ್ತಮ ಜೀವನಶೈಲಿಯತ್ತ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಇರುವುದೊಂದೇ ಬದುಕು ಅದನ್ನು ಚೆನ್ನಾಗಿ ಕಾಯ್ದುಕೊಳ್ಳಲು ಪ್ರಯತ್ನ ಮಾಡಬೇಕು. ಅದಕ್ಕಾಗಿ ಮುಖ್ಯವಾಗಿ ಹೃದಯದ ಆರೋಗ್ಯದತ್ತ ಗಮನಹರಿಸಬೇಕು ಅಂತ ಡಾ. ಗಣೇಶ್ ನಲ್ಲೂರು ಶಿವು ಸಲಹೆ ನೀಡುತ್ತಾಹೃದಯ ವೈಫಲ್ಯ ಎಂದರೇಹೃದಯವು ಸ್ನಾಯುವಿನಿಂದ ನಿರ್ಮಿತವಾಗಿದೆ. ಇದು ಮೆದುಳು, ಮೂತ್ರಪಿಂಡ ಸೇರಿದಂತೆ ದೇಹದ ಪ್ರಮುಖ ಅಂಗಗಳಿಗೆ ಹಾಗೂ ದೇಹದ ಎಲ್ಲಾ ಭಾಗಗಳಿಗೆ ರಕ್ತ ಪಂಪ್ ಮಾಡುವ ಮುಖ್ಯ ಕೆಲಸ ಮಾಡುತ್ತದೆಯಾವಾಗ ಹೃದಯವು ದೇಹದ ಈ ಪ್ರಮುಖ ಅಂಗಗಳಿಗೆ ಹಾಗೂ ಭಾಗಗಳಿಗೆ ಅಗತ್ಯವಾದ ರಕ್ತ ಪೂರೈಕೆ ಮಾಡಲು ಸಾಧ್ಯವಾಗದೇ ವಿಫಲವಾಗುತ್ತದೆಯೋ, ಆಗ ಇದನ್ನು ಹೃದಯ ವೈಫಲ್ಯ ಎಂದು ಕರೆಯುತ್ತಾಹೃದಯ ವೈಫಲ್ಯದ ರೋಗ ಲಕ್ಷಣಗಳು ಮತ್ತು ಸಂಕೇತಗಳು ಯಾವುವುಹೃದಯ ವೈಫಲ್ಯದ ವೇಳೆ ಸಾಮಾನ್ಯವಾಗಿ ಕಂಡು ಬರುವ ಲಕ್ಷಣಗಳು ಅಂದರೆ ವಾಕಿಂಗ್ ಅಥವಾ ಇತರೆ ಚಟುವಟಿಕೆ ವೇಳೆ ಉಸಿರಾಟದ ತೊಂದರೆ, ಕಾಲು ಅಥವಾ ಹೊಟ್ಟೆಯಲ್ಲಿ ಊತ, ಆಯಾಸ ಮತ್ತು ಅಶಕ್ತತೆ ಉಂಟಾಗುವುಯಾರಿಗೆ ಹೃದಯ ವೈಫಲ್ಯದ ಅಪಾಯ ಹೆಚ್ಚುಹೃದಯಾಘಾತ, ಆಂಜಿಯೋಪ್ಲ್ಯಾಸ್ಟಿ ಅಥವಾ ಪರಿಧಮನಿಯ ಬೈಪಾಸ್ ಕಸಿ ಮಾಡಿದ ಇತಿಹಾಸ ಹೊಂದಿರುವ ರೋಗಿಗಳಿಗೆ ಹೃದಯ ವೈಫಲ್ಯ ಅಪಾಯ ಹೆಚ್ಚು ಇರುತ್ತದೆ. ಇದರ ಜೊತೆಗೆ ದೀರ್ಘಕಾಲದ ಅನಿಯಂತ್ರಿತ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಸಹ ಹೃದಯ ವೈಫಲ್ಯಕ್ಕೆ ಕಾರಣ ಆಗುಇನ್ನು ವೈರಲ್ ಸೋಂಕು ಹಾಗೂ ಯುವ ರೋಗಿಗಳೂ ಸಹ ಹೃದಯ ವೈಫಲ್ಯಕ್ಕೆ ತುತ್ತಾಗುತ್ತಾರೆ. ಇದನ್ನು ವೈರಲ್ ಮಯೋಕಾರ್ಡಿಟಿಸ್ ಅಥವಾ ರೋಗಿಗಳಲ್ಲಿ ಸಂಧಿವಾತ ಹೃದಯ ಕಾಯಿಲೆ ಎಂದು ಕರೆಯುತ್ತಾಹೃದಯ ವೈಫಲ್ಯ ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ಯಾವ ಪರೀಕ್ಷೆ ಮಾಡಲಾಗುತ್ತಹೃದಯ ವೈಫಲ್ಯ ಪತ್ತೆ ಹಚ್ಚಲು ಮತ್ತು ಚಿಕಿತ್ಸೆ ನೀಡಲು ವೈದ್ಯರು ಸಾಮಾನ್ಯವಾಗಿ ಇಸಿಜಿ, ಎಕೋಕಾರ್ಡಿಯೋಗ್ರಾಮ್ ಮತ್ತು ರಕ್ತ ಪರೀಕ್ಷೆ ಮಾಡ್ತಾರೆ. ಎಕೋಕಾರ್ಡಿಯೋಗ್ರಾಮ್ ಹೃದಯದ ಅಲ್ಟ್ರಾಸೌಂಡ್ ಪರೀಕ್ಷೆ ಆಗಿಹಾಗೂ ಹೃದಯದ ಕ್ರಿಯಾತ್ಮಕ ಮತ್ತು ಹೃದಯದಲ್ಲಿನ ವಿವಿಧ ಕವಾಟಗಳ ಕಾರ್ಯ ನಿರ್ವಹಣೆಯ ಸಾಮರ್ಥ್ಯ ಹೇಗಿದೆ ಎಂದು ತಿಳಿಯಲು ಎಕೋಕಾರ್ಡಿಯೋಗ್ರಾಮ್ ವೈದ್ಯರಿಗೆ ಸಹಾಯ ಮಾಡುತ್ತದೆ
. ದೆ.ದೆ?ರೆ.ತ್ತದೆ.?ದು.?ರೆ..ನು?ರೆ...ಮ್ ವೈದ್ಯರಿಗೆ ಸಹಾಯ ಮಾಡುತ್ತದೆ.ಡಾ. ಗಣೇಶ್ ನಲ್ಲೂರು ಶಿವು, ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್, ಕಾವೇರಿ ಹಾಸ್ಪಿಟಲ್ಸ್, ಎಲೆಕ್ಟ್ರಾನಿಕ್ ಸಿಟಿ, ಬೆಂಗಳೂರುಇನ್ನು ರಕ್ತಹೀನತೆ, ಮೂತ್ರಪಿಂಡ ವೈಫಲ್ಯ, ಯಕೃತ್ತಿನ ವೈಫಲ್ಯ ಮತ್ತು ಥೈರಾಯ್ಡ್ ಸಮಸ್ಯೆ ಹಾಗೂ ಹೃದಯ ವೈಫಲ್ಯದ ಕಾರಣ ತಿಳಿಯಲು ರಕ್ತ ಪರೀಕ್ಷೆ ಮಾಡುತ್ತಾರೆ.ಹೃದಯಾಘಾತ ಪತ್ತೆ ಹಚ್ಚಿದ ನಂತರ ವೈದ್ಯರು ಹೃದಯದ ನಾಳಗಳಲ್ಲಿನ ಬ್ಲಾಕ್ ಪತ್ತೆ ಮಾಡಲು ಪರಿಧಮನಿಯ ಆಂಜಿಯೋಗ್ರಾಮ್ ಅನ್ನು ಹೃದಯ ವೈಫಲ್ಯಕ್ಕೆ ಕಾರಣವೆಂದು ಹೇಳಲಾಗುತ್ತದೆ.ಹೃದಯ ವೈಫಲ್ಯಕ್ಕೆ ಚಿಕಿತ್ಸೆ ಏನಿದೆ?ಹೃದಯ ವೈಫಲ್ಯ ಸಮಸ್ಯೆ ತೆಗೆದು ಹಾಕಲು ವೈದ್ಯರು, ರೋಗಿಗೆ ಹೆಚ್ಚುವರಿ ದ್ರವ ತೆಗೆದು ಹಾಕಲು ಔಷಧಿ ಮತ್ತು ಹೃದಯದ ಕಾರ್ಯ ಚಟುವಟಿಕೆಯನ್ನು ಮತ್ತೆ ಚೆನ್ನಾಗಿರಿಸಲು ಇತರೆ ಔಷಧ ತೆಗೆದುಕೊಳ್ಳಲು ಶಿಫಾರಸ್ಸು ಮಾಡ್ತಾರೆ.ಹೃದಯ ವೈಫಲ್ಯಕ್ಕೆ ಇರುವ ಇತರೆ ಚಿಕಿತ್ಸೆಯ ಆಯ್ಕೆಗಳು ಯಾವುವು?ಚಿಕಿತ್ಸೆ ನೀಡುವ ಮೊದಲು ಹೃದಯ ವೈಫಲ್ಯಕ್ಕೆ ಕಾರಣ ಏನೆಂದು ವೈದ್ಯರು ತಿಳಿಯುತ್ತಾರೆ. ಇದು ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿ, ಪರಿಧಮನಿಯ ಬೈಪಾಸ್ ಕಸಿ ಮತ್ತು ಕವಾಟ ಬದಲಾವಣೆಯನ್ನು ಒಳಗೊಂಡಿರುತ್ತದೆ.ವಿಶೇಷ ರೀತಿಯ ಪೇಸ್ ಮೇಕರ್‌ಗಳು ಅಂದ್ರೆ ಹೃದಯ ಮರುಸಿಂಕ್ರೊನೈಸೇಶನ್ ಥೆರಪಿ ಇದೆ. ಇದು ರೋಗಿಗಳಲ್ಲಿ ರೋಗ ಲಕ್ಷಣಗಳು ಮತ್ತು ಆರೋಗ್ಯ ಸ್ಥಿತಿ ಸುಧಾರಿಸಲು ಸಹಕಾರಿ. ಪರಿಸ್ಥಿತಿ ಗಂಭೀರವಾಗಿದ್ದಾಗ ಎಡ ಹೃದಯದ ಸಹಾಯ ಸಾಧನಗಳು ಮತ್ತು ಹೃದಯ ಕಸಿಯ
ಬಗ್ಗೆ ಹೇಳಲಾಗುತ್ತದೆ.ಸಾಂದರ್ಭಿಕ ಚಿತ್ರರೋಗಿಗಳು ಏನು ಮಾಡಬೇಕು?- ವೈದ್ಯರು ಸೂಚಿಸಿದ ಔಷಧಿಗಳನ್ನು ಪ್ರಾಮಾಣಿಕವಾಗಿ ಸೇವಿಸಬೇಕು.- ವೈದ್ಯರ ಸಮಾಲೋಚನೆ ನಂತರ ಸಲಹೆಯನ್ನು ಪಾಲಿಸುವುದು.- ವಾಕಿಂಗ್ ಮತ್ತು ನಿಯಮಿತ ವ್ಯಾಯಾಮ ಮಾಡಬೇಕು.- ಪ್ರತಿದಿನ ಉಪ್ಪಿನ ಸೇವನೆ ಕಡಿಮೆ ಮಾಡಬೇಕು.- ವೈದ್ಯರು ಸೂಚಿಸಿದಂತೆ ದಿನಕ್ಕೆ ದ್ರವ ಸೇವನೆ ಪ್ರಮಾಣ ನಿರ್ಬಂಧಿಸಬೇಕು.- ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು.- ರೋಗ ಲಕ್ಷಣಗಳು ಉಲ್ಬಣಗೊಂಡರೆ ತುರ್ತು ವೈದ್ಯಕೀಯ ಸಹಾಯ ಪಡೆಯಬೇಕು.ಇದನ್ನೂ ಓದಿ: 'ಎದೆ ಬಡಿತ' ಜೋರಾಗಿದೆಯಾ? ಇದು ಪ್ರೀತಿಯೊಂದೇ ಅಲ್ಲ, ಹೃದಯದ ಕಾಯಿಲೆಯೂ ಆಗಿರಬಹುದು!ಮುನ್ಸೂಚನೆ ಕ್ರಮ ಏನು?ಹೃದಯ ವೈಫಲ್ಯದ ಪರಿಣಾಮಗಳು ಕ್ಯಾನ್ಸರ್ ಕಾಯಿಲೆಗಿಂತ ಕೆಟ್ಟದಾಗಿರುತ್ತದೆ. ಹಾಗಾಗಿ ರೋಗಿಗಳು ತ್ವರಿತವಾಗಿ ಚಿಕಿತ್ಸೆ ಪಡೆಯಬೇಕು. ಆರೋಗ್ಯ ಸುಧಾರಣೆಗೆ ವೈದ್ಯರ ಸಲಹೆ ಪಾಲನೆ ಕಡ್ಡಾಯವಾಗಿ ಮಾಡಬೇಕು.



Post a Comment