ಸುಪ್ರೀಂ ಕೋರ್ಟ್ಶ
ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ನ್ಯಾಯಾಂಗಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಅಕ್ರಮ ಲಾಭದ ಆರೋಪದ ಕುರಿತು ಯಾವುದೇ ನೇರ ಮೌಖಿಕ ಅಥವಾ ವಿಡಿಯೋ ಸಾಕ್ಷಿಗಳಿಲ್ಲದಿದ್ದಲ್ಲಿ, ಸಾಂದರ್ಭಿಕ ಸಾಕ್ಷ್ಯದ ಆಧಾರದ ಮೇಲೆ ಸಾರ್ವಜನಿಕ ನೌಕರನನ್ನು ಅಪರಾಧಿ ಎಂದು ಪರಿಗಣಿಸಬಹುದು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಾಲಯದ ಈ ತೀರ್ಪಿನ ನಂತರ ಈಗ ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಿದೆ
ನವದೆಹಲಿ(ಡಿ.16): ಲಂಚ (Bribe) ಪಡೆದು ಭ್ರಷ್ಟಾಚಾರ (Corruption) ಮಾಡುವ ಸರ್ಕಾರಿ ಅಧಿಕಾರಿಗಳು (Govt Officials) ಇನ್ನು ಸುರಕ್ಷಿತರಲ್ಲ, ಯಾಕೆಂದರೆ ಭ್ರಷ್ಟ ಸರ್ಕಾರಿ ಅಧಿಕಾರಿಗಳಿಗೆ ತಕ್ಷಣ ಶಿಕ್ಷೆ ವಿಧಿಸಲು ಸಾಧ್ಯವಾಗುವ ಮಹತ್ವದ ನಿರ್ಧಾರವೊಂದನ್ನು ಸುಪ್ರೀಂ ಕೋರ್ಟ್ (Supreme Court) ಜಾರಿಗೊಳಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸರ್ಕಾರಿ ಅಧಿಕಾರಿಗಳನ್ನು ಅಪರಾಧಿಗಳೆಂದು ನಿರ್ಣಯಿಸಲು ಇನ್ನು ಮುಂದೆ ನೇರ ಸಾಕ್ಷ್ಯಗಳ ಅಗತ್ಯವಿಲ್ಲ. ಆರೋಪಿ ಅಧಿಕಾರಿ ಲಂಚದ ಮೊತ್ತಕ್ಕೆ ಬೇಡಿಕೆಯಿಟ್ಟಿರುವುದು ಮತ್ತು ಸ್ವೀಕರಿಸಿರುವುದು ಸಾಂದರ್ಭಿಕ ಸಾಕ್ಷ್ಯಗಳ ಮೂಲಕ ಸಾಬೀತಾದರೆ, ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅವರನ್ನು ಅಪರಾಧಿ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ನೀಡಿದೆ
ಭ್ರಷ್ಟ ಸಾರ್ವಜನಿಕ ಸೇವಕರ ಬಗ್ಗೆ ನ್ಯಾಯಾಲಯಗಳು ಕನಿಕರ ತೋರಬಾರದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ. ಭ್ರಷ್ಟ ಸರ್ಕಾರಿ ಅಧಿಕಾರಿಗಳನ್ನು ನ್ಯಾಯಾಂಗಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಭ್ರಷ್ಟಾಚಾರ ಪ್ರಕರಣದಲ್ಲಿ ಅಕ್ರಮ ಲಾಭದ ಆರೋಪದ ಕುರಿತು ಯಾವುದೇ ನೇರ ಮೌಖಿಕ ಅಥವಾ ವಿಡಿಯೋ ಸಾಕ್ಷ್ಯಾಧಾರಗಳಿಲ್ಲದಿದ್ದಲ್ಲಿ ಸಾಂದರ್ಭಿಕ ಸಾಕ್ಷ್ಯದ ಆಧಾರದ ಮೇಲೆ ಸಾರ್ವಜನಿಕ ಸಿಬ್ಬಂದಿಯನ್ನು ಅಪರಾಧಿ ಎಂದು ಪರಿಗಣಿಸಲಾಗುತ್ತದೆ ಸುಪ್ರೀಂ ಕೋರ್ಟ್ನ ಸಂವಿಧಾನ ಪೀಠ ಹೇಳಿ
Supreme Court: ಆಸ್ತಿ ವ್ಯವಹಾರಗಳಲ್ಲಿನ ತೆರಿಗೆ ವಂಚನೆಗೆ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್
ದೂರುದಾರ ಮೃತಪಟ್ಟ ಅಥವಾ ಇನ್ನಾವುದೇ ಕಾರಣದಿಂದ ನೇರ ಸಾಕ್ಷಿ ನೀಡಲು ಸಾಧ್ಯವಾಗದಿದ್ದರೂ, ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ನೌಕರನನ್ನು ಅಪರಾಧಿ ಎಂದು ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪೀಠವು, 'ದೂರುದಾರರು ಪ್ರತಿಕೂಲವಾಗಿ ತಿರುಗಿದರೆ ಅಥವಾ ಮರಣಹೊಂದಿದರೆ ಅಥವಾ ವಿಚಾರಣೆಯ ಸಮಯದಲ್ಲಿ ಸಾಕ್ಷ್ಯವನ್ನು ನೀಡಲು ಸಾಧ್ಯವಾಗದಿದ್ದರೆ, ಇನ್ನೊಬ್ಬ ಸಾಕ್ಷಿಯ ಮೌಖಿಕ ಅಥವಾ ದಾಖಲೆಯ ಸಾಕ್ಷ್ಯವನ್ನು ಸ್ವೀಕರಿಸುವ ಮೂಲಕ ಕಾನೂನುಬಾಹಿರ ಪ್ರಯೋಜನವನ್ನು ಪಡೆಯುವ ಅಪರಾಧವು ಶಿಕ್ಷಾರ್ಹವಾಗಿದೆ. ಸಾಂದರ್ಭಿಕ ಸಾಕ್ಷ್ಯದ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗುತ್ತದೆ ಎಂದಿದ್ದಾ
ನ್ಯಾಯಮೂರ್ತಿ ಎಸ್‌ಎ ನಜೀರ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ದೂರುದಾರರ ಜೊತೆಗೆ ಪ್ರಾಸಿಕ್ಯೂಷನ್ ಕೂಡ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು. ಈ ಮೂಲಕ ಅಪರಾಧಿಯಾಗಿರುವ ಭ್ರಷ್ಟ ಸಾರ್ವಜನಿಕ ಸೇವಕರನ್ನು ಶಿಕ್ಷೆಗೆ ಒಳಪಡಿಸಬಹುದು ಮತ್ತು ಆಡಳಿತವನ್ನು ಶುದ್ಧ ಮತ್ತು ಭ್ರಷ್ಟಾಚಾರ ಮುಕ್ತವಾಗಿರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ. ಸಾರ್ವಜನಿಕ ಸೇವಕನನ್ನು ಖುಲಾಸೆಗೊಳಿಸಿದ ಪರಿಣಾಮವಾಗಿ ವಿಚಾರಣೆಯನ್ನು ದುರ್ಬಲಗೊಳಿಸಬಾರದು ಅಥವಾ ಅಂತ್ಯಗೊಳಿಸಬಾರದು ಎಂದು ಪೀಠ ಹೇಳಿದೆ. ದೂರುದಾರರ ಸಾಕ್ಷ್ಯ (ನೇರ ಅಥವಾ ಪ್ರಾಥಮಿಕ) ಅನುಪಸ್ಥಿತಿಯಲ್ಲಿ, ಅಪರಾಧದ ಬಗ್ಗೆ ಪೂರ್ವಭಾವಿ ತೀರ್ಮಾನವನ್ನು ತೆಗೆದುಕೊಳ್ಳಲು ಅನುಮತಿ ಇದೆ ಎಂದು ಪೀಠ ಹೇಳಿದೆ
Congress Protest: ಡಬಲ್ ಇಂಜಿನ್ ಸರ್ಕಾರದಲ್ಲಿ ಭ್ರಷ್ಟಾಚಾರವೂ ಡಬಲ್! ಕಡೂರಿನಲ್ಲಿ ಕಾಂಗ್ರೆಸ್
ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಎಎಸ್ ಬೋಪಣ್ಣ, ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಮತ್ತು ನ್ಯಾಯಮೂರ್ತಿ ಬಿವಿ ನಾಗರತ್ನ ಅವರನ್ನೂ ಈ ಪೀಠದಲ್ಲಿ ಸೇರಿಸಲಾಗಿದೆ. ಅಕ್ರಮ ಲಾಭದ ಬೇಡಿಕೆಗೆ ಸಂಬಂಧಿಸಿದಂತೆ ನೇರ ಅಥವಾ ಪ್ರಾಥಮಿಕ ಸಾಕ್ಷ್ಯಾಧಾರಗಳ ಅನುಪಸ್ಥಿತಿಯಲ್ಲಿ, ಇತರ ಸಾಕ್ಷ್ಯಗಳ ಆಧಾರದ ಮೇಲೆ ಸಾರ್ವಜನಿಕ ನೌಕರನ ತಪ್ಪಿನ ಬಗ್ಗೆ ಊಹೆಯ ಮೌಲ್ಯಮಾಪನವನ್ನು ಮಾಡಬಹುದೇ ಎಂಬ ಪ್ರಶ್ನೆಯನ್ನು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ಆದೇಶವನ್ನು ನೀಡಿದೆ. ಕಿಡಿ.ರೆ.!ದೆ...ವನ್ನು ನೀಡಿದೆ.

Post a Comment