Non Veg Recipe: ಬೇಯಿಸುವ ಮುನ್ನ ಮೀನಿಗೆ ಉಪ್ಪು ,ಅರಿಶಿಣವನ್ನು ಹಾಕಿ ಯಾಕೆ ನೆನೆಸಿಡುತ್ತಾರೆ?


 ಮೀನಿನ ಸಾರು ಮಾಡುವ ವಿಧಾನ

 ಪಾಶ್ಚಾತ್ಯ ಅಡುಗೆ ಪದ್ಧತಿಯಲ್ಲಿ ಮೀನು ಇಲ್ಲವೇ ಮಾಂಸವನ್ನು ಉಪ್ಪು, ಮೆಣಸು, ಗಿಡಮೂಲಿಕೆಗಳನ್ನು ಬಳಸಿ ನೆನೆಸಿಡಲಾಗುತ್ತದೆ

 ಭಾರತೀಯ ಪಾಕ ಪದ್ಧತಿಯಲ್ಲಿ ಅರಶಿಣ (Turmeric) ಹಾಗೂ ಉಪ್ಪು (Salt) ತನ್ನದೇ ಆದ ವಿಶೇಷ ಮಹತ್ವನ್ನು ಹೊಂದಿವೆ. ಸಾಂಪ್ರದಾಯಿಕ ಮಾಂಸಾಹಾರಿ ಅಡುಗೆ ಪದ್ಧತಿಯಲ್ಲಿ ಮೀನು ಇಲ್ಲವೇ ಮಾಂಸವನ್ನು ಬೇಯಿಸುವ ಮೊದಲು ಉಪ್ಪು, ಅರಶಿಣ ಮೊದಲಾದ ಮಸಾಲೆಗಳನ್ನು ಮಿಶ್ರ ಮಾಡಿ ನೆನೆಸಲಾಗುತ್ತದೆ. ಅದೇ ರೀತಿ ಪಾಶ್ಚಾತ್ಯ ಅಡುಗೆ ಪದ್ಧತಿಯಲ್ಲಿ ಮೀನು ಇಲ್ಲವೇ ಮಾಂಸವನ್ನು ಉಪ್ಪು, ಮೆಣಸು, ಗಿಡಮೂಲಿಕೆಗಳನ್ನು ಬಳಸಿ ನೆನೆಸಿಡಲಾಗುತ್ತದೆ. ಯಾವುದೇ ಮಾಂಸಾಹಾರಿ ಖಾದ್ಯವನ್ನು ಮಾಡುವ ಮೊದಲು, ಮಾಂಸವನ್ನು(Meat) ಉಪ್ಪು ಮತ್ತು ಅರಶಿಣದೊಂದಿಗೆ ಬೇಯಿಸಲಾಗುತ್ತದೆ. ಮೀನಿನ ಖಾದ್ಯಗಳನ್ನು ತಯಾರಿಸುವ ಸಮಯದಲ್ಲಿ ಮೀನಿನ (Fish) ದುರ್ನಾತವನ್ನು ತೆಗೆದುಹಾಕಲು ಉಪ್ಪು (Salt) ಹಾಗೂ ಅರಶಿನ ಬಳಸಿಕೊಂಡು ಮೀನನ್ನು ತೊಳೆಯುವ ಕ್ರಮ ಕೂಡ ಇದೆ

ಇದರ ಜೊತೆಗೆ ಉಪ್ಪು ಹಾಗೂ ಅರಶಿಣವನ್ನು ಪ್ರಧಾನವಾಗಿ ಬಳಸಿಕೊಂಡು ಇತರ ಮಸಾಲೆ ಪದಾರ್ಥಗಳೊಂದಿಗೆ ಮೀನು ಹಾಗೂ ಮಾಂಸವನ್ನು ನೆನೆಸಲಾಗುತ್ತದೆ. ಭಾರತದಲ್ಲಿ ಉಪ್ಪು ಹಾಗೂ ಅರಶಿಣವನ್ನು ಪ್ರಧಾನವಾಗಿ ಬಳಸಿಕೊಂಡು ಮಾಂಸ ಹಾಗೂ ಮೀನನ್ನು ನೆನೆಸುವುದನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತ

 ಹಾಗಿದ್ದರೆ ಬೇಯಿಸುವುದಕ್ಕಿಂತ ಮುನ್ನ ಈ ನೆನೆಸುವಿಕೆ ಕ್ರಿಯೆಯನ್ನು ಏಕೆ ಕೈಗೊಳ್ಳಲಾಗುತ್ತದೆ. ಇದರ ಹಿಂದಿರುವ ಉದ್ದೇಶವೇನು ಎಂಬುದನ್ನು ತಿಳಿದುಕೊಳ್ಳೋ

ಆಯ್ದ ಮಸಾಲೆಗಳನ್ನು ಬಳಸಿಕೊಂಡು ಏಕೆ ನೆನೆಸುತ್ತಾ

 ಭಾರತೀಯ ಪಾಕಪದ್ಧತಿಯು ಕೆಲವೊಂದು ಆರೋಗ್ಯಕಾರಿ ರಹಸ್ಯಗಳನ್ನು ತನ್ನೊಳಗೆ ಅಡಗಿಸಿಕೊಂಡಿದೆ. ಅರಶಿಣವನ್ನು ಭಾರತೀಯ ಪಾಕ ಪದ್ಧತಿಯಲ್ಲಿ ಔಷಧವಾಗಿ ಬಳಸಲಾಗುತ್ತದೆ ಹಾಗೂ ಅಡುಗೆಯ ಸ್ವಾದವನ್ನು ಹೆಚ್ಚಿಸುವ ಮಸಾಲೆಯಾಗಿ ಇದು ಸ್ಥಾನ ಪಡೆದುಕೊಂಡಿದೆ

ಮೀನು ಹಾಗೂ ಮಾಂಸವನ್ನು ಅರಶಿಣ ಬಳಸಿ ನೆನೆಸುವುದು ಇದು ಆಹಾರ ಪದಾರ್ಥವನ್ನು ತಾಜಾ ಆಗಿ ಇರಿಸುತ್ತದೆ ಹಾಗೂ ಉಪ್ಪು ಬಳಸುವುದು ಒಂದು ರೀತಿಯಲ್ಲಿ ಸಂರಕ್ಷಕವಾಗಿ ಕಾರ್ಯನಿರ್ವಹಿಸುತ್ತ

 ಇದನ್ನೂ ಓದಿ: ನಿಮಗೆ ಉಸಿರಾಟದ ತೊಂದರೆ, ಎದೆ ನೋವು ಇದೆಯಾ ಹಾಗದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇ ಬೇ

ಅಂತೆಯೇ ಆಹಾರದ ತಾಜಾತನವನ್ನು ಉಳಿಸುವಲ್ಲಿ ಇವೆರಡೂ ಸಹಕಾರಿಯಾಗಿದೆ. ಮೀನು ಪ್ರೋಟೀನ್‌ನ ಆಗರವಾಗಿದ್ದು ಇದು ಬೇಗನೇ ಕೆಡುತ್ತದೆ, ಇದರಿಂದ ಉಪ್ಪು ಬಳಸಿ ಅದನ್ನು ನೆನೆಸಿಡುವುದು ಮೀನನ್ನು ಹೆಚ್ಚುಕಾಲ ಹಾಳಾಗದಂತೆ ಕಾಪಾಡುತ್ತ

ಹೀಗೆ ಉಪ್ಪು ಹಾಕಿದ ಮೀನುಗಳು ಉತ್ಕರ್ಷಣ ನಿರೋಧಕ ಎಂದೆನಿಸಿದ್ದು ನಿರ್ದಿಷ್ಟ ಮಸಾಲೆಗಳನ್ನು ಬಳಸಿ ಮೀನನ್ನು ನೆನೆಸುವುದು ಆ್ಯಂಟಿರ್ಮೈಕ್ರೊಬಿಯಲ್ ಅಂಶಗಳನ್ನು ಒಳಗೊಂಡಿ

ಉಪ್ಪು ಹಾಗೂ ಅರಶಿಣವನ್ನೇ ಏಕೆ ಆರಿಸಿಕೊಳ್ಳಲಾಗಿ

ಅರಶಿಣವು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಹೊಂದಿದ್ದು ನಂಜಿನ ಅಂಶಗಳನ್ನು ನಿವಾರಿಸುತ್ತದೆ ಎಂಬುದಾಗಿ ಆಯುರ್ವೇದದಲ್ಲಿ ತಿಳಿಸಲಾಗಿ

ಹಸಿಮೀನಿನಲ್ಲಿರುವ ಸೂಕ್ಷ್ಮಜೀವಿ ಹಾಗೂ ಇತರೆ ವಿಷಕಾರಿ ಅಂಶಗಳನ್ನು ನಿವಾರಿಸಲು ಅರಶಿಣವನ್ನು ನೆನೆಸುವ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಆಹಾರವನ್ನು ತಾಜಾ ಆಗಿಡುವುದಕ್ಕೆ ಸಹಾಯ ಮಾಡುವ ಜೊತೆಗೆ ಇದು ಸೂಕ್ಷ್ಮಾಣುಜೀವಿಗಳ ಸಂತಾನಾಭಿವೃದ್ಧಿಯನ್ನೂ ತಡೆಯುತ್ತ

ಉಪ್ಪು ಕೂಡ ಕೆಲವೊಂದು ಸಂರಕ್ಷಕ ಗುಣಗಳನ್ನು ಹೊಂದಿದ್ದು ಅರಶಿಣ ಹಾಗೂ ಉಪ್ಪಿನ ಮಿಶ್ರಣ ಆಹಾರದ ರುಚಿಯನ್ನು ಇಮ್ಮಡಿಗೊಳಿಸುತ್ತದೆ ಹಾಗೂ ಬೇಯಿಸುವ ಸಮಯದಲ್ಲಿ ವಿಶಿಷ್ಟವಾದ ಸುವಾಸನೆಯನ್ನು ಒದಗಿಸುತ್ತದೆ

ಮೀನು ಹಾಗೂ ಮಾಂಸ ಕೆಡುವುದು ಬಹುಬೇಗವಾದ್ದರಿಂದ ಅವುಗಳ ನಿರ್ವಹಣೆಯಲ್ಲಿ ಕೂಡ ಕೆಲವೊಂದು ಮುನ್ನೆಚ್ಚರಿಕೆಯನ್ನು ಪಾಲಿಸಬೇ

ಮೀನು ಹಾಗೂ ಮಾಂಸವನ್ನು ಕೆಡದಂತೆ ಹೇಗೆ ಸಂರಕ್ಷಿಸಬಹು

ಮೀನು ಹಾಗೂ ಮಾಂಸವನ್ನು ಫ್ರೀಜರ್‌ನಲ್ಲಿರಿಸುವುದಕ್ಕಿಂತ ಉಪ್ಪು, ಅರಶಿಣ ಹಾಗೂ ವಿನೇಗರ್ ಬಳಸಿ ನೆನೆಸುವುದು ಪ್ರಮುಖ. ಇದು ಮಾಂಸ ಹಾಗೂ ಮೀನಿನ ತಾಜಾತನವನ್ನು ಹಾಗೆಯೇ ಇರಿಸುತ್ತ

ಇದರೊಂದಿಗೆ ಸ್ವಲ್ಪ ಕಾಳುಮೆಣಸಿನ ಪುಡಿ ಹಾಗೂ ಮೆಣಸಿನ ಹುಡಿಯನ್ನು ಚಿಮುಕಿಸುವುದು ಮೀನು ಹಾಗೂ ಮಾಂಸವನ್ನು ಹುರಿಯುವಾಗ ಖಾದ್ಯಕ್ಕೆ ಇನ್ನಷ್ಟು ಸ್ವಾದವನ್ನು ಉಂಟುಮಾಡುತ್ತದೆ.ಮೀನು ಹಾಗೂ ಮಾಂಸವನ್ನು ಎಣ್ಣೆಯಲ್ಲಿ ಹುರಿಯುವ ಮುನ್ನ ಎಣ್ಣೆಗೆ ಚಿಟಿಕೆ ಉಪ್ಪು ಸೇರಿಸುವುದು ಎಣ್ಣೆ ಸಿಡಿಯುವುದನ್ನು ತಡೆಗಟ್ಟುತ್ತದೆ ದೆ.ದು?ಕು.ದೆ.ದೆ.ದೆ?ವೆ.ದೆ.ಕುದೆ..ರೆ?ಣದೆ..ರಿಸುವುದು ಎಣ್ಣೆ ಸಿಡಿಯುವುದನ್ನು ತಡೆಗಟ್ಟುತ್ತದೆ

Post a Comment

Previous Post Next Post