ಪ್ರಧಾನಿ ನರೇಂದ್ರ ಮೋದಿ
ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಆದರೆ ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ನೀವು ಸಹ ಪ್ರಪಂಚದಲ್ಲಿ ಕೊರೊನಾ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೀರಾ, ಹೀಗಾಗಿ ಮುಂಜಾಗ್ರತೆ ವಹಿಸಬೇಕಾಗಿದೆ. ಮಾಸ್ಕ್ ಮತ್ತು ಕೈ ತೊಳೆಯುವಂತಹ ಮುನ್ನೆಚ್ಚರಿಕೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ನಾವು ಜಾಗರೂಕರಾಗಿದ್ದರೆ, ನಾವು ಎಲ್ಲರೂ ಸುರಕ್ಷಿತರಾಗಿರುತ್ತಾರೆ ಮತ್ತು ನಮ್ಮ ಸಂತೋಷಕ್ಕೂ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ್ದಾರೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Prim minister Narendra modi) ಅವರು 2022 ರ ಕೊನೆಯ ಆವೃತ್ತಿಯ 'ಮನ್ ಕಿ ಬಾತ್' (Mann ki Baat) ಕಾರ್ಯಕ್ರಮದಲ್ಲಿ ಇಂದು ಮಾತನಾಡಿದರು. ಈ ವೇಳೆ ಭಾರತ ದೇಶದಲ್ಲಿ (India) ಕೊರೊನ ವೈರಸ್ (Corona Virus) ಹೆಚ್ಚಾಗುತ್ತಿರುವುದರಿಂದ ಸೋಂಕಿನಿಂದ ಸುರಕ್ಷಿತವಾಗಿರಲು ಮಾಸ್ಕ್ (Mask) ಧರಿಸುವುದು ಮತ್ತು ಆಗಾಗ ಕೈ ತೊಳೆಯುವುದು (Hand Wash) ಸೇರಿದಂತೆ ಎಲ್ಲಾ ಕೋವಿಡ್ -19 (Covid-19 Guidelines) ನಿಯಮಗಳನ್ನು ಪಾಲಿಸುವಂತೆ ದೇಶದ ನಾಗರಿಕರಿಗೆ (Citizens) ಸಲಹೆ ನೀಡಿದ್ದಾರೆ ಕೊರೊನಾ ಬಗ್ಗೆ ಮುಂಜಾಗ್ರೆತೆ ವಹಿಸಿ
ಇದೇ ವೇಳೆ ಅನೇಕ ಮಂದಿ ರಜೆಯ ಮೂಡ್ನಲ್ಲಿದ್ದಾರೆ. ಈ ಹಬ್ಬವನ್ನು ಸಂಭ್ರಮದಿಂದ ಆಚರಿಸಿ, ಆದರೆ ಸ್ವಲ್ಪ ಜಾಗರೂಕರಾಗಿರಿ. ಏಕೆಂದರೆ ನೀವು ಸಹ ಪ್ರಪಂಚದಲ್ಲಿ ಕೊರೊನಾ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೀರಾ, ಹೀಗಾಗಿ ಮುಂಜಾಗ್ರತೆ ವಹಿಸಬೇಕಾಗಿದೆ. ಮಾಸ್ಕ್ ಮತ್ತು ಕೈ ತೊಳೆಯುವಂತಹ ಮುನ್ನೆಚ್ಚರಿಕೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ನಾವು ಜಾಗರೂಕರಾಗಿದ್ದರೆ, ನಾವು ಎಲ್ಲರೂ ಸುರಕ್ಷಿತರಾಗಿರುತ್ತಾರೆ ಮತ್ತು ನಮ್ಮ ಸಂತೋಷಕ್ಕೂ ಯಾವುದೇ ಅಡ್ಡಿಯಾಗುವುದಿಲ್ಲ ಎಂ
ಹೊಸ ವರ್ಷಕ್ಕೆ ಶುಭಾಶಯ ಕೋರಿದ ಮೋ
ಮತ್ತೆ 'ಮನ್ ಕಿ ಬಾತ್' ನ ಮುಂದಿನ ಆವೃತ್ತಿಯನ್ನು 2023 ರಲ್ಲಿ ಪ್ರಸಾರ ಮಾಡಲಾಗುವುದು ಎಂದು ಹೇಳುತ್ತಾ, ಮೋದಿ ಅವರು ಹೊಸ ವರ್ಷದ ಶುಭಾಶಯವನ್ನು ಜನರಿಗೆ ಕೋರಿದರು. ಮತ್ತೆ ನಾನು ನಿಮ್ಮನ್ನು 2023ರಲ್ಲಿ ಭೇಟಿಯಾಗುತ್ತೇನೆ. ಈ ಹೊಸ ವರ್ಷದ ಹೊಸ್ತಿಲಿನಲ್ಲಿ ನಾನು ಎಲ್ಲರಿಗೂ ಹೊಸ ವರ್ಷದ ಶುಭಾಶಯ ಸಲ್ಲಿಸುತ್ತೇನೆ. ಮುಂದಿನ ವರ್ಷವೂ ಭಾರತಕ್ಕೆ ವಿಶೇಷವಾಗಲಿದೆ ಮತ್ತು ನಾವು ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ತಿಳಿಸಿದರು
ಹೊಸ ವರ್ಷಕ್ಕೆ ಏನು ಮಾತನಾಡಬೇಕೆಂದು ಸಲಹೆ ನೀಡುವಂತೆ ಜನರಿಗೆ ಮನವಿ
ನಂತರ ಮನ್ ಕೀ ಬಾತ್ 100ನೇ ಸಂಚಿಕೆ ಕುರಿತಂತೆ ಮಾತನಾಡಿದ ಅವರು, ನನ್ನ ಪ್ರೀತಿಯ ದೇಶವಾಸಿಗಳೇ, ಈಗ ನಾವು ನಿಧಾನವಾಗಿ 'ಮನ್ ಕಿ ಬಾತ್' ನ 100ನೇ ಸಂಚಿಕೆಯ ಅಭೂತಪೂರ್ವ ಮೈಲಿಗಲ್ಲಿನತ್ತ ಸಾಗುತ್ತಿದ್ದೇವೆ. ನನಗೆ ಅನೇಕ ದೇಶವಾಸಿಗಳಿಂದ ಪತ್ರಗಳು ಬಂದಿವೆ, ಅದರಲ್ಲಿ 100 ನೇ ಸಂಚಿಕೆಯ ಬಗ್ಗೆ ಬಹಳ ಜಿಜ್ಞಾಸೆಯನ್ನು ವ್ಯಕ್ತಪಡಿಸಿದ್ದಾರೆ. 100 ನೇ ಸಂಚಿಕೆಯಲ್ಲಿ ನಾನು ಏನು ಮಾತನಾಡಬೇಕು ಮತ್ತು ಅದನ್ನು ಹೇಗೆ ವಿಶೇಷವಾಗಿಸಬೇಕು ಎಂಬುದಕ್ಕೆ ನಿಮ್ಮ ಸಲಹೆಗಳನ್ನು ನೀವು ನನಗೆ ಕಳುಹಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿ
ಕರ್ನಾಟಕ ಶಿವಮೊಗ್ಗ ಜಿಲ್ಲೆಯ ದಂಪತಿಗೆ ಮೋದಿಯಿಂದ ಮೆಚ್ಚು
ಇದೇ ವೇಳೆ ಅಡಿಕೆ ನಾರಿನಿಂದ ಉತ್ಪನ್ನಗಳನ್ನು ತಯಾರಿಸುತ್ತಿರುವ ಕರ್ನಾಟಕದ ದಂಪತಿ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ನೇಹಿತರೇ, ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶ್ರೀಮನ್ ಸುರೇಶ್ ಮತ್ತು ಅವರ ಪತ್ನಿ ಶ್ರೀಮತಿ ಮೈಥಿಲಿ ಎಂಬ ದಂಪತಿಯೊಬ್ಬರು ಅಡಿಕೆ ನಾರಿನಿಂದ ಮಾಡಿದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಕಳುಹಿಸುತ್ತಿದ್ದಾ
ರೆ. ಗೆದರು..ದಿದರು..ಹಿಸುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ
ಅನೇಕ ಅಲಂಕಾರಿಕ ವಸ್ತುಗಳನ್ನು ಇವರು ತಯಾರಿಸುತ್ತಿದ್ದಾರೆ. ವೀಳ್ಯದೆಲೆ ನಾರಿನಿಂದ ಟ್ರೇಗಳು, ತಟ್ಟೆಗಳು ಮತ್ತು ಕೈಚೀಲಗಳು ಈ ನಾರಿನಿಂದ ಚಪ್ಪಲಿಗಳನ್ನು ಸಹ ಮಾಡಿದ್ದು, ಇವು ಬಹಳ ಇಷ್ಟವಾಗುವಂತಿದೆ. ಇಂದು ಈ ದಂಪತಿ ತಯಾರಿಸಿದ ಉತ್ಪನ್ನಗಳನ್ನು ಲಂಡನ್ ಮತ್ತು ಯುರೋಪಿನ ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: Shobha Karandlaje: ‘ಮೋದಿ ಹಣ, ಸಿದ್ದರಾಮಯ್ಯ ಹೆಸರು; ಇದೇ ಅವರ ಸಾಧನೆ’- ಸಚಿವೆ ಶೋಭಾ ಕರಂದ್ಲಾಜೆ
ಮೋದಿ ಮನ್ ಕಿ ಬಾತ್ ನಲ್ಲಿ ಮಾತನಾಡಿದ ಗದಗ ಜಿಲ್ಲೆಯ ಕುಟುಂಬ
ಮನ್ ಕೀ ಬಾತ್‌ನಲ್ಲಿ ಗದಗ ಜಿಲ್ಲೆಯ ಕಾ.ವೆಂ. ಶ್ರೀನಿವಾಸ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಬಂದ ಲಾಭದಲ್ಲಿ ಕಳೆದ 25 ವರ್ಷಗಳಿಂದ ಕಲೆ ಸಂಸ್ಕೃತಿ ಉಳಿಸುವಲ್ಲಿ ಕಾವೆಂಶ್ರೀ ಮಹತ್ತರ ಪ್ರಯತ್ನ ಮಾಡಿದ್ದಾರೆ. ಮೂಲತ: ಸಾಗರದವರಾದ ಕಾ.ವೆಂ.ಶ್ರೀನಿವಾಸ ಗದಗ ನಗರದಲ್ಲಿ ಹಲವು ದಶಕಗಳಿಂದ ಹೊಟೆಲ್ ಉದ್ಯಮ ನಡೆಸುತ್ತಿದ್ದಾರೆ. ಅವರ ಸಾಧನೆ ಗುರುತಿಸಿ ಪ್ರಧಾನಿ ಮೋದಿ ಮನ್ ಕಿ ಬಾತ್ ನಲ್ಲಿ ಮಾತನಾಡಿದ್ದು ಕುಟುಂಬಸ್ಥರಲ್ಲಿ ಸಂತಸ ತರಿಸಿದೆ.


Post a Comment