H D Kumaraswamy: ಮೊಮ್ಮಗನ ಜೊತೆ ಹೆಚ್​ಡಿಕೆ ಕೇಕ್​ ಕಟಿಂಗ್! ಫ್ಯಾಮಿಲಿ ಜೊತೆ ಬರ್ತ​ಡೇ ಸೆಲೆಬ್ರೇಷನ್​


 ಇಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಸಡಗರ, ಕುಟುಂಬಸ್ಥರ ಜೊತೆ ಕುಮಾರಸ್ವಾಮಿ ಬರ್ತಡೇ ಆಚರಿಸಿದ್ದಾರೆ.
ಮೊಮ್ಮಗನ ಜೊತೆ ಕುಮಾರಸ್ವಾಮಿ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ನಿಖಿಲ್ ಕುಮಾರಸ್ವಾಮಿ ಪುತ್ರ ತಾತನಿಗೆ ಸಿಹಿ ಮುತ್ತಿನ ಗಿಫ್ಟ್ ನೀಡಿದ್ದಾನೆ.ತಂದೆಯವರ ಜನ್ಮದಿನದ ನಿಮಿತ್ತ ನಮ್ಮ ಮನೆಯಲ್ಲಿ ಭಗವಂತನ ಪೂಜೆ ಬಳಿಕ ಕೇಕ್ ಕತ್ತರಿಸಿ ಅವರಿಗೆ ಶುಭಕೋರಿದ್ದಾಗಿ ನಿಖಿಲ್ ಕುಮಾರಸ್ವಾಮಿ ಅವರು ಫೋಟೋ ಹಂಚಿಕೊಂಡಿದ್ದಾರೆ.
ಅಪ್ಪ ಅವರು ಮೊಮ್ಮಗನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದು ಇದು ನನಗೆ ಭಾವುಕ ಕ್ಷಣವಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ನಿಖಿಲ್ ಪತ್ನಿ ರೇವತಿ ಅವರು ಉಪಸ್ಥಿತರಿದ್ರು.
ಅಪ್ಪನಿಗೆ ನಿಖಿಲ್ ಪ್ರೀತಿಯ ಶುಭಾಶಯ ಬಿಳಿಸಿದ್ದಾರೆ. ನನ್ನ ಆತ್ಮಶಕ್ತಿ, ನನ್ನ ಪಾಲಿನ ಸ್ಫೂರ್ತಿ ಮತ್ತು ಚೈತನ್ಯ, ಸದಾ ನನ್ನನ್ನು ವಾತ್ಸಲ್ಯದಿಂದ ಪೊರೆಯುವ ವಾತ್ಸಲ್ಯಮಯಿ, ನನ್ನ ಪ್ರೀತಿಯ ಅಪ್ಪ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.


ನಿಮಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಆ ಭಗವಂತ ನಿಮಗೆ ಎಲ್ಲವನ್ನೂ ಒಳ್ಳೆಯದನ್ನೇ ಮಾಡಲಿ ಹಾಗೂ ಜನಸೇವೆ ಮಾಡಲು ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಿಖಿಲ್ ಪೋಸ್ಟ್ ಮಾಡಿದ್ದಾರೆHDK ಹುಟ್ಟುಹಬ್ಬದ ಹಿನ್ನೆಲೆ ರಾಮನಗರದಲ್ಲಿ ಶ್ರೀ ಶ್ರೀದೇವಿ, ಶ್ರೀ ಭೂದೇವಿ ಮತ್ತು ಶ್ರೀ ಶ್ರೀನಿವಾಸ ದೇವರ ಪುರಪ್ರವೇಶ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

Post a Comment

Previous Post Next Post