Cylinder Gas: 500 ರೂಪಾಯಿಗೆ ಸಿಲಿಂಡರ್ ಗ್ಯಾಸ್​! ಹೊಸ ದರ ಘೋಷಿಸಿದ ಸಿಎಂ


 ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ಅವರು ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಮುಂದಿನ ವರ್ಷ, ಅಂದರೆ 2023ರ ಏಪ್ರಿಲ್ 1 ರಿಂದ BPL ಕಾರ್ಡ್​ದಾರರಿಗೆ 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಒದಗಿಸುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಘೋಷಿಸಿದ್ದಾರೆ. (ಸಾಂದರ್ಭಿಕ ಚಿತ್ರ)
ಬಡತನ ರೇಖೆಗಿಂತ ಕೆಳಗಿನ ಎಲ್ಲ ಕುಟುಂಬಗಳಿಗೂ 500 ರೂಪಾಯಿಗೆ ಸಿಲಿಂಡರ್ ಗ್ಯಾಸ್ ಒದಗಿಸುವುದಾಗಿ ಅವರು ಘೋಷಣೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ ಅವರು ಕೇಂದ್ರ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. (ಸಾಂದರ್ಭಿಕ ಚಿತ್ರ)
ಇಡೀ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಬೆಲೆ ಏರಿಕೆಯ ಭೀತಿಯಲ್ಲಿ ಮಧ್ಯಮ ಮತ್ತು ಬಡ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ. (ಸಾಂದರ್ಭಿಕ ಚಿತ್ರ)
ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ), ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರೀಯ ತನಿಖಾ ದಳಗಳಿಂದ (ಸಿಬಿಐ) ಜನರು ಭಯಭೀತರಾಗಿದ್ದರು. ಆದರೆ ಈಗ ಈ ಏಜೆನ್ಸಿಗಳು ಮೇಲಿಂದ ಮೇಲೆ ಯಾವ ಆದೇಶ ಬರುತ್ತದೆ ಎಂದು ಯೋಚಿಸುತ್ತಿವೆ ಎಂದು ಅವರು ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. (ಸಾಂದರ್ಭಿಕ ಚಿತ್ರ)ಒಟ್ಟಾರೆ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದು ಬಿಪಿಎಲ್ ಕಾರ್ಡ್​ದಾರರಿಗೆ 500 ರೂಪಾಯಿಗೆ ಸಿಲಿಂಡರ್ ಗ್ಯಾಸ್ ನೀಡುವುದಾಗಿ ಅಶೋಕ್ ಗೆಹ್ಲೋಟ್ ಘೋಷಣೆ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ)

Post a Comment

Previous Post Next Post