Zameer Ahmed Khan: ಡಿಸೆಂಬರ್​ನಲ್ಲಿ ಕಾದಿದೆ ಬಿಜೆಪಿಗೆ ಬಿಗ್​ ಶಾಕ್​​; ಎಚ್​ಡಿಕೆಗೂ ಜಮೀರ್​ ಸವಾಲ್!


 ಶಾಸಕ ಜಮೀರ್ ಅಹ್ಮದ್ ಖಾನ್ಳಿ

 ನವೆಂಬರ್ ಕಳೆದು ಡಿಸೆಂಬರ್ನಲ್ಲಿ ನೋಡಿ ಎಷ್ಟು ಜನ ಬಿಜೆಪಿ (BJP) ಬಿಟ್ಟು ಆಚೆ ಬರುತ್ತಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಶಾಸಕ ಜಮೀರ್ ಅಹ್ಮದ್ ಹೇಳಿದ್ದಾ

 ಧಾರವಾಡ (ಅ.21): ಡಿಸೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಬಾಂಬ್ ಬ್ಲಾಸ್ಟ್ ಆಗುತ್ತದೆ. ಹೊಸ ವರ್ಷಕ್ಕೆ (New Year) ನಾವು ಸಿಹಿ ಸುದ್ದಿ ಕೊಡ್ತೇವಿ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ (Jameer Ahmed Khan) ಭವಿಷ್ಯ ನುಡಿದಿದ್ದಾರೆ. ಬಿಜೆಪಿಯಲ್ಲಿ ಬಹಳಷ್ಟು ಗೊಂದಲ ಇದ್ದು, ನವೆಂಬರ್‌ವರೆಗೆ ಕಾಯಿರಿ, ನವೆಂಬರ್ ಕಳೆದು ಡಿಸೆಂಬರ್ನಲ್ಲಿ ನೋಡಿ ಎಷ್ಟು ಜನ ಬಿಜೆಪಿ (BJP) ಬಿಟ್ಟು ಆಚೆ ಬರುತ್ತಾರೆ ಎನ್ನುವುದು ಗೊತ್ತಾಗುತ್ತದೆ.  ರಮೇಶ್ ಜಾರಕಿಹೊಳಿ (Ramesh Jarakiholi) ಮಾತ್ರವಲ್ಲ ಇನ್ನೂ ಬಹಳ ಜನ ಬೇಸತ್ತಿದ್ದಾರೆ. ಎಷ್ಟು ಜನ ಬರ್ತಾರೆ ಅಂತ ನಾನು ಅಂದಾಜು ಹೇಳುವುದಿಲ್ಲ. ನವೆಂಬರ್‌ನಲ್ಲಿ ಎಲ್ಲಾ ಹೇಳುತ್ತೇವೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ

ಬಿಜೆಪಿಯಿಂದ ರಮೇಶ್ ಜಾರಕಿಹೊಳಿ 

ರಾಸಲೀಲೆ ಸಿಡಿ ಹಾಗೂ ಕಳೆದ ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋಲು . ಈ ಎರಡು ಕಾರಣಗಳಿಂದ ರಮೇಶ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ನಾಯಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಅಷ್ಟಾಗಿ ಪಕ್ಷ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ

ಕುಮಾರಸ್ವಾಮಿಗೆ ಜಮೀರ್ ಸವಾ

ರಾಜಕೀಯದಲ್ಲಿ ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಡುತ್ತೇವೆ ಎನ್ನುತ್ತಲೇ ಜಮೀರ್ ಅಹ್ಮದ್ ಹೆಚ್ ಡಿ ಕುಮಾರಸ್ವಾಮಿಗೂ ಸವಾಲ್ ಹಾಕಿದ್ದಾರೆ. ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ 59 ಸ್ಥಾನ ಇತ್ತು. ಆದರೆ ಕುಮಾರಸ್ವಾಮಿಗೆ ಆ ನಂ. ತಲುಪಲು ಆಗಿಲ್ಲ. ಸಿದ್ದರಾಮಯ್ಯ ಹೋದ ಮೇಲೆ 40 ಸೀಟ್‌ಗೆ ಬಂತು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆದ್ರೂ, ಆ ಬಳಿಕ ಆದ ಚುನಾವಣೆಯಲ್ಲಿ 28 ಸ್ಥಾನ ಬಂತು. 2013ರ ಚುನಾವಣೆಯಲ್ಲಿ 123 ಸೀಟ್ ಗೆಲ್ಲುತ್ತೇವೆ ಅಂದ್ರು ನಮ್ಮದೇ ಸರ್ಕಾರ ಅಂತ ಹೇಳಿಕೊಂಡರು ಆದರೆ 37 ಸೀಟ್‌ಗೆ ಬಂದಿದ್ದರು ಎಂದು ವ್ಯಂಗ್ಯವಾಡಿದ್ದಾರೆ. ಮೊದಲು ಆ ನಂ. ತಲುಪಲು ಅವರಿಗೆ ಹೇಳಿ. ಈಗ 123 ಅಂತ ಹೇಳುತ್ತಿದ್ದಾರೆ. ಮೊದಲು ಅವರು 59 ಸ್ಥಾನಗಳನ್ನು ಕ್ರಾಸ್ ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದ್ದಾ

ಜಿಟಿಡಿ ಜೊತೆ ಸಂಧಾನ ಸಕ್ಸ

 ಮೈಸೂರು: ಇಂದು ಬೆಳಗ್ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ, ಸ್ಥಳೀಯ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಜೊತೆಯಲ್ಲಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ದೇವೇಗೌಡರು, ಮೈಸೂರು ಜಿಲ್ಲೆಯ ಉಸ್ತುವಾರಿಯನ್ನು ಜಿ.ಟಿ ದೇವೇಗೌಡ ಅವರಿಗೆ ನೀಡಲಾಗಿದೆ. ಅವರ ನಾಯಕತ್ವದಲ್ಲಿ ಎಲ್ಲವೂ ನಡೆಯುತ್ತದೆ. ಅವರ ತೀರ್ಮಾನವೇ ಅಂತಿಮ. ಈ ಬಗ್ಗೆ ಯಾರಾದರೂ ಅಪಸ್ವರ ಎತ್ತಿದರೆ ನಾನು ಸಹಿಸುವುದಿಲ್ಲ. ಅವರು ಹೊರಗೆ ಹೋಗಬಹುದು ಎಂದು ಎಚ್ಚರಿಕೆ ನೀಡಿದ

ಶಾಸಕ ಜಿ ಟಿ ದೇವೇಗೌಡ ಮಾತನಾಡಿ, ಜನವರಿ ತಿಂಗಳಿನಲ್ಲಿ ಹೆಚ್.ಡಿ ದೇವೇಗೌಡರು ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ ನಡೆಸಲಿದ್ದಾರೆ. ಇಂದು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಕುಳಿತು ನನಗೆ ಇನ್ನೊಂದು ತಿಂಗಳಿನಲ್ಲಿ ನಡೆದಾಡುವ ಶಕ್ತಿ ಕೊಡು ಎಂದು ಬೇಡಿಕೊಂಡಿದ್ದು, ಅವರನ್ನು ನೋಡಿ ನಮಗೆ ಆಶ್ಚರ್ಯ ಆಗಿದೆ ಎಂದ

ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಸ್ಪರ್ಧೆ ಮಾಡುತ್ತೇನೆ. ಮಗ ಹರೀಶ್ ಗೌಡ ಹುಣಸೂರು, ಕೆ.ಆರ್ ನಗರದಿಂದ ಸಾರಾ ಮಹೇಶ್, ಪಿರಿಯಾ ಪಟ್ಟಣದಿಂದ ಕೆ. ಮಾದೇವ್, ಟಿ.ನರಸೀಪುರದಿಂದ ಅಶ್ವಿನ್, ಹೆಚ್.ಡಿ ಕೋಟೆಯಿಂದ ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯ ಪ್ರಕಾಶ್ ಅವರಿಗೆ ಬಹುತೇಕ ಟಿಕೆಟ್ ಅಂತಿಮವಾಗಿದೆ ಎಂದರು.ಮೂರು ವರ್ಷಗಳ ನಂತರ ನಿನ್ನೆಯಿಂದ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ನನ್ನ ಮನಸ್ಸಿನಲ್ಲಿ ಯಾವುದೇ ಗೊಂದಲ ಇಲ್ಲ. ನಾನು ಸಮಾಧಾನವಾಗಿದ್ದೇನೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಜಿ.ಟಿ ದೇವೇಗೌಡ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ರು.ರು.ಸ್ರೆ.ಲು.ದೂರ.ರೆ.ಗೆ ಮಾಹಿತಿ ನೀಡಿದರು.

Post a Comment

Previous Post Next Post