ಪುನೀತ್ ರಾಜ್ ಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ
ಪುನೀತ್ ರಾಜ್ ಕುಮಾರ್ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿಗೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ
ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ ಪರ್ವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ. ಪುನೀತ ಪರ್ವ (Puneetha Parva) ಕಾರ್ಯಕ್ರಮಕ್ಕಾಗಿ ಎಲ್ಲ ಭಾಷೆಯ ಚಿತ್ರರಂಗದ ಗಣ್ಯರು ಆಗಮಿಸಿದ್ದಾರೆ. ಬೃಹತ್ ವೇದಿಕೆಯಲ್ಲಿ ಮನರಂಜನಾ ಕಾರ್ಯಕ್ರಮಗಳ ಜೊತೆಗೆ ‘ಗಂಧದ ಗುಡಿ’ ಪ್ರೀ-ರಿಲೀಸ್ ಇವೆಂಟ್ (Gandhada Gudi pre-release event) ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಬಸವರಾಜ್ ಬೊಮ್ಮಾಯಿ ಭರ್ಜರಿ ಘೋಷಣೆ ಮಾಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿಯನಯದ ಗಂಧದ ಗುಡಿ ಚಿತ್ರಕ್ಕೆ ಕರ್ನಾಟಕದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ.
ಈ ಚಿತ್ರಕ್ಕೆ ಸರ್ಕಾರ ಖಂಡಿತ ತೆರಿಗೆ ವಿನಾಯಿ
ಪುನೀತ್ ರಾಜ್ ಕುಮಾರ್ ಬಗ್ಗೆ ವಿಶೇಷ ಅಭಿಮಾನ ಹೊಂದಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಅಪ್ಪು ಅಭಿನಯದ ಗಂಧದಗುಡಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಇದೇ ವೇಳೆ ಮಾತಾಡಿದ ಸಿಎಂ ಬೊಮ್ಮಾಯಿ, ನಿಸರ್ಗ, ಕಾಡು , ಪ್ರಾಣಿಗಳೊಂದಿಗೆ ತೆಗೆದಿರುವ ಸಿನಿಮಾ ಇದು. ಇದು ಕರ್ನಾಟಕ ಸಸ್ಯ ಸಂಪತನ್ನು ತೋರಿಸಿರುವ ಚಿತ್ರ. ಈ ಚಿತ್ರಕ್ಕೆ ಸರ್ಕಾರ ಖಂಡಿತ ತೆರಿಗೆ ವಿನಾಯಿತಿ ಘೋಷಿಸುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ
ನ. 1ರಂದು ಅಪ್ಪುಗೆ ಕರ್ನಾಟಕ
ಅಪ್ಪು ಅವರಿಂದ ಸ್ಪೂರ್ತಿಗೆ ಒಳಗಾದ ಯುವ ಸಮುದಾಯದ ನೋಡಿದಾಗ ಸಂತಸವಾಗುತ್ತಿದೆ. ಆದ್ರೇ ಸಣ್ಣ ವಯಸ್ಸಿನಲ್ಲಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ಅಪ್ಪು ಬಹಳಷ್ಟು ವರ್ಷ ಬದುಕಿ ಬಾಳಬೇಕಿತ್ತು. ಈ ನೋವು ಈಗಲೂ ಕಾಡುತ್ತಿದೆ. ಇದೀಗ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವು ಸಂತಸ ಹಾಗೂ ಹೆಮ್ಮೆ ತಂದಿದೆ. ನವೆಂಬರ್ 1ರಂದು ಅಪ್ಪುಗೆ ಕರ್ನಾಟಕ ರತ್ನ ನೀಡಲಿದ್ದೆವೆ . ಅದು ಎಲ್ಲಾ ಯುವಕರಿಗೆ ಪ್ರೇರಣೆ ಎಂದು ಭಾವಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದಾ
ಇದನ್ನೂ ಓದಿ: Puneeth Rajkumar: ಶೀಘ್ರದಲ್ಲೇ ಬರ್ತಿದೆ ಗಂಧದ ಗುಡಿ.. ಹೇಗಿರಲಿದೆ ಗೊತ್ತಾ ಅಪ್ಪು ಕೊನೆಯ ದೃಶ್ಯಕಾವ್ಯ
ಪುನೀತ್ ರಾಜ್ ಕುಮಾರ್ಗೆ ನಮ
ಪುನೀತ್ ರಾಜ್ಕುಮಾರ್ ಅವರಿಗೆ ಎಲ್ಲರೂ ಸೇರಿ ವಿಶೇಷ ರೀತಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಡಾ. ರಾಜ್ಕುಮಾರ್ ಕುಟುಂಬದವರು ತುಂಬ ಕಾಳಜಿ ವಹಿಸಿ ಈ ಕಾರ್ಯಕ್ರಮ ಮಾಡುತ್ತಿದ್ದಾರೆ. ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar), ಶಿವರಾಜ್ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ರಾಜ್ ಕುಟುಂಬಸ್ಥರು ಭಾಗಿ ಆಗಿದ್ದಾ
ಸುಧಾಮೂರ್ತಿ ಬಾಯಲ್ಲಿ ಅಪ್ಪು ಗುಣ
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಇನ್ಫೋಸಿಸ್ ಸುಧಾ ಮೂರ್ತಿ ಅವರು ಪುನೀತ್ ಬಗ್ಗೆ ಗುಣಗಾನ ಮಾಡಿದ್ದಾರೆ. ಒಮ್ಮೆ ವಿಮಾನ ನಿಲ್ದಾಣದಲ್ಲಿ ಪುನೀತ್ ಸಿಕ್ಕಾಗ ಅಲ್ಲೇ ಅವ್ರು ನನ್ನ ಆಶೀರ್ವಾದ ಪಡೆದ್ರು. ಈ ವೇಳೆ ನಾನು ಇಲ್ಲೆಲ್ಲಾ ಬೇಡ ಎಂದೆ. ಅದಕ್ಕೆ ಅವ್ರು ಎಲ್ಲಿದ್ರೂ ದೊಡ್ಡವರು ದೊಡ್ಡವರೇ ಎಂದ್ರು. ಅವರ ಸರಳತೆಯನ್ನು ಮೆಚ್ಚಲೇಬೇಕು. ನಾನು ಅವ್ರನ್ನು ಲೋಹಿತ್ ಎಂದೇ ಕರೆಯುತ್ತಿದ್ದೆ. ಅವ್ರು ಲೋಹಿತ್ ಎಂದೇ ನನಗೆ ಪರಿಚಯವಾಗಿದ್ದವರು ಎಂದು ಸುಧಾಮೂರ್ತಿ ಹೇಳಿದ್ರು
ಇದನ್ನೂ ಓದಿ: Puneeth Rajkumar: ಪುನೀತ ಪರ್ವದಲ್ಲಿ ತಾರೆಯರ ಸಮಾಗಮ; ಮುಗಿಲು ಮುಟ್ಟಿದ ಅಪ್ಪು ಗುಣಗಾ
ನಮ್ ಅಪ್ಪು ಸರ್ ತರ ಯಾರಿ
ಪುನೀತ್ ಬಗ್ಗೆ ಮಾತಾಡಿದ ಗಾಯಕ ವಿಜಯ್ ಪ್ರಕಾಶ್, ಅಪ್ಪು ಬಗ್ಗೆ ಕವನ ಹೇಳಿದ್ರು. ನಮ್ಮ ಅಪ್ಪು ಸರ್ ತರ ಯಾರಿಲ್ಲ ಬಿಡಿ. ಅಭಿಮಾನಿಗಳ ಹೃದಯದಲ್ಲಿ ಅಭಿಮಾನಿಗಳು ಕಟ್ಟಿದ್ದಾರೆ ಗಂಧದಗುಡಿ ಎಂದು ವಿಜಯ್ ಪ್ರಕಾಶ್ ಹೇಳಿದ್ರು
ಪುನೀತ ಪರ್ವಕ್ಕೆ ಅಭಿಮಾನಿಗಳ
ಪುನೀತ ಪರ್ವ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿದ್ದಾರೆ. ಬಹುತೇಕ ಅಭಿಮಾನಿಗಳು ಬಿಳಿ ಬಣ್ಣದ ಬಟ್ಟೆ ಧರಿಸಿ ಆಗಮಿಸಿದ್ದಾರೆ. ಅಪ್ಪು ಫೋಟೋ ಹಿಡಿದು, ಕನ್ನಡ ಧ್ವಜದ ಶಾಲು ಹಾಕಿಕೊಂಡು ಫ್ಯಾನ್ಸ್ ಆಗಮಿಸಿದ್ದಾರೆ. ಮಹಿಳೆಯರು, ಮಕ್ಕಳು ಸಹ ಪುನೀತ ಪರ್ವಕ್ಕೆ ಬಂದು ಅಪ್ಪುಗೆ ನಮನ ಸಲ್ಲಿಸಿದ್ದಾರೆ. ದಂಡು.ಲ್ಲ ನ!.ಗಾನರೆ.ನ?ರೆ.ರತ್ನ.ತಿ . ಅಪ್ಪುಗೆ ನಮನ ಸಲ್ಲಿಸಿದ್ದಾರೆ.

Post a Comment