ಮಾಜಿ ಸಿಎಂ ಸಿದ್ದರಾಮಯ್ಯ, ವಿ ಸೋಮಣ್ಣ
ತಾಳ್ಮೆ ಸಹನೆ ಇಲ್ಲ ಅಂದ್ರೆ, ಸಮಸ್ಯೆ ಪರಿಹರಿಸೋಕೆ ಆಗಿಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಸಚಿವನಾಗೋಕೆ ಸೋಮಣ್ಣ ಅನ್ ಫಿಟ್ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ
ವಸತಿ ಸಚಿವ ವಿ ಸೋಮಣ್ಣ (Minister V Somanna) ಮಹಿಳೆಯ ಕಪಾಳಕ್ಕೆ ಹೊಡೆದ ವಿಡಿಯೋ (Video) ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದ್ದು, ಸಚಿವರ ವರ್ತನೆ ಬಗ್ಗೆ ವಿರೋಧ ವ್ಯಕ್ತವಾಗಿದೆ. ಸೋಮಣ್ಣ ಸಚಿವನಾಗೋಕೆ ನಾಲಾಯಕ್, ಒಬ್ಬ ಮಂತ್ರಿ ಹೆಣ್ಣು ಮಗಳ ಮೇಲೆ ಅಥವಾ ಹಿಂದುಳಿದವರ ಮೇಲೆ ಕೈ ಮಾಡೋಕಾ ಅಧಿಕಾರ ಕೊಟ್ಟಿರೋದಾ ಎಂದು ಸಿದ್ದರಾಮಯ್ಯ ಕಿಡಿಕಾರಿದ್ರು.
ಸಚಿವನಾಗೋಕೆ ಸೋಮಣ್ಣ ಅನ್ ಫಿ
ಸೋಮಣ್ಣ ಅಂತವರಲ್ಲೇ ಮಂತ್ರಿ ಮಂಡಳದಲ್ಲಿ ಇರಬಾರದು. ತಾಳ್ಮೆ ಸಹನೆ ಇಲ್ಲ ಅಂದ್ರೆ, ಸಮಸ್ಯೆ ಪರಿಹರಿಸೋಕೆ ಆಗಿಲ್ಲ ಅಂದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು. ಸಚಿವನಾಗೋಕೆ ಸೋಮಣ್ಣ ಅನ್ ಫಿಟ್ ಎಂದ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ
ಕರ್ನಾಟಕದಲ್ಲಿ ಭಾರತ ಜೋಡೋ ಯಶಸ್ವಿಯಾಗಿ
ದಾವಣಗೆರೆಯಲ್ಲಿ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಭಾರತ್ ಜೋಡೋ ಯಶಸ್ವಿಯಾಗಿದೆ. ಕರ್ನಾಟದಲ್ಲಿ 20ಕ್ಕೂ ಹೆಚ್ಚು ದಿನ ಪಾದಯಾತ್ರೆ ನಡೆದಿದೆ. ನಮ್ಮ ನಿರೀಕ್ಷೆಗೂ ಮೀರಿ ಜನ ಸೇರಿದ್ರೂ, ಭಾರತ್ ಜೋಡೋ ಯಾತ್ರೆಗೆ ಸಿಕ್ಕ ಬೆಂಬಲ ನಿರೀಕ್ಷೆಗೂ ಮೀರಿದೆ. ಬಿಜೆಪಿ ಸರ್ಕಾರ ಜನರಿಗೆ ಬೇಡವಾಗಿದೆ. ಹೀಗಾಗಿ ಜನರು ಪಾದಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿ ಸೇರಿದ್ದಾ
ಒಂದು ಆಯೋಗ ಮಾಡಿ ತನಿಖೆ ಮಾಡಲಿ
ಕಾಂಗ್ರೆಸ್ ವಿರುದ್ಧ ಬಿಜೆಪಿ ಭ್ರಷ್ಟಾಚಾರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 3 ವರ್ಷದಿಂದ ಬಿಜೆಪಿಯವರ ಬಾಯಲ್ಲಿ ಕಡಬು ಸಿಕ್ಕಿಕೊಂಡಿತ್ತಾ? 2006 ರಿಂದ ಇಲ್ಲಿವರೆಗೂ ಯಾರ್ಯಾರ ಕಾಲದಲ್ಲಿ ಏನಾಗಿದೆ ಅನ್ನೋದು ತನಿಖೆ ಮಾಡಲಿ. ಒಂದು ಆಯೋಗ ಮಾಡಿ ತನಿಖೆ ಮಾಡಲಿ. ಹಿಂದೆ ವಿರೋಧ ಪಕ್ಷದಲ್ಲಿ ಇದ್ದಾಗ ಏನು ಮಾಡಿದ್ರು ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ರು. ರೆ.ದೆ.ಟ್ .ಕಿಡಿಕಾರಿದ್ರು.

Post a Comment