Bangalore University Student: ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರು ವಿವಿ ವಿದ್ಯಾರ್ಥಿನಿ ಶಿಲ್ಪಾ ಸಾವು


  ಮೃತ ಶಿಲ್ಪಾ

ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಶಿಲ್ಪಾ ಶ್ರೀಧರ್ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಳೆದ 14 ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು

ಕಳೆದ 14 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ(Bangalore university Student) ಶಿಲ್ಪಾ ಇಂದು ಮೃತರಾಗಿದ್ದಾರೆ. ಬಸ್ ಹತ್ತುವಾಗ ಆಯತಪ್ಪಿ ಬಿದ್ದಿದ್ದ ಶಿಲ್ಪಾ ಮೇಲೆ ಬಿಎಂಟಿಸಿ ಬಸ್ (BMTC Bus) ಹರಿದಿತ್ತು. ಅಕ್ಟೋಬರ್ 11ರಂದು ಅಪಘಾತ (Accident) ನಡೆದಿತ್ತು. ಈ ಘಟನೆ ಬಳಿಕ ರಸ್ತೆಗೆ ಇಳಿದಿದ್ದ ವಿವಿ ವಿದ್ಯಾರ್ಥಿಗಳು (Bangalore university Student Protest) ಖಾಸಗಿ ಬಸ್ (Private Bus) ಓಟಾಟಕ್ಕೆ ಬ್ರೇಕ್ ಹಾಕಬೇಕೆಂದು ದೊಡ್ಡ ಪ್ರತಿಭಟನೆ ಕೂಡಾ ನಡೆಸಿದ್ದರು. ಈಗಲೂ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದೆ. ಶಿಲ್ಪಾ ಆರೋಗ್ಯ ಚೇತರಿಕೆಗಾಗಿ ಸಾವಿರಾರರು ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದ್ದರು. ಆದ್ರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಶಿಲ್ಪಾ ಮೃತರಾಗಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್ ಮೂಲದ ಶಿಲ್ಪಾ ಶ್ರೀಧರ್ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಪ್ರಥಮ ಎಂಎಸ್ಸಿ ಗಣಿತ ಶಾಸ್ತ್ರದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಕಳೆದ 14 ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು.

Post a Comment

Previous Post Next Post