ಬಂಧಿತರು
ಗಲಾಟೆಯಿಂದ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆ ಪೊಲೀಸರು ರೂಟ್ ಮಾರ್ಚ್ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ
ಶಿವಮೊಗ್ಗದ ಸೀಗೆಹಟ್ಟಿ (Seegehatti, Shivamogga), ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ (Stone Pelting) ಗಲಭೆ ಪ್ರಕರಣ ಸಂಬಂಧ ಪೊಲೀಸರು (Police) ಅಲರ್ಟ್ ಆಗಿದ್ದಾರೆ. ಸೋಮವಾರ ಗಲಾಟೆ ಮಾಡಿದ್ದ ಮೂವರನ್ನ ಶಿವಮೊಗ್ಗ ಪೊಲೀಸರು (Shivamogga Police) ಬಂಧಿಸಿದ್ದಾರೆ. 22 ವರ್ಷದ ಮಾರ್ಕೆಟ್ ಫೌಜಾನ್, 21 ವರ್ಷದ ಅಜ್ಹರ್ ಅಲಿಯಾಸ್ ಅಜ್ಜು, ಫರಾಜ್ ಬಂಧಿತ ಆರೋಪಿಗಳು. ಸೋಮವಾರ ರಾತ್ರಿ 2 ಬೈಕ್ಗಳಲ್ಲಿ (Bike) ಬಂದು ದಾಂಧಲೆ ಮಾಡಿದ್ದರು ಎನ್ನಲಾಗಿದೆ. ಈ ಮೂವರ ವಿರುದ್ಧ ಈ ಹಿಂದೆ ಅನೇಕ ಪ್ರಕರಣಗಳು ದಾಖಲು ಆಗಿದ್ದವು. ಗಲಾಟೆಯಿಂದ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆ ಪೊಲೀಸರು ರೂಟ್ ಮಾರ್ಚ್ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ
ಗಾಂಧಿ ಬಜಾರ್, ಬಿಎಚ್ ರಸ್ತೆ, ಸೀಗೆ ಹಟ್ಟಿ ಹಾಗೂ ಹಳೆ ಶಿವಮೊಗ್ಗ ಪ್ರದೇಶಗಳಲ್ಲಿ ರೂಟ್ ಮಾರ್ಚ್ ಮಾಡಲಾಗಿದೆ. ರಾಮಣ ಶೆಟ್ಟಿ ಪಾರ್ಕ್, ಗಾಂಧಿ ಬಜಾರ್ ಹಾಗೂ ಓಟಿ ರಸ್ತೆಯಲ್ಲಿ ಡಿಎಆರ್ ತುಕಡಿಗಳು ಹಾಗೂ ಕೆಎಸ್ಆರ್ಪಿ ತುಕಡಿಯ 1000ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದ
ಹರ್ಷ ಸೋದರಿಗೆ ಬೆದರಿ
ಮೂರು ದಿನದ ಹಿಂದೆ ಸಾವರ್ಕರ್ ಸಾಮ್ರಾಜ್ಯ ಜಾಥಾ ವೇಳೆ ಗಲಾಟೆ ಆಗಿದೆ. ಮುಸ್ಲಿಂ ಯುವಕನ ಕಾರು ಜಖಂಗೊಳಿಸಿದ ಆರೋಪದಡಿ ಹತ್ಯೆಯಾದ ಹರ್ಷನ ಅಕ್ಕ ಅಶ್ವಿನಿ ಮೇಲೆ ದೂರು ದಾಖಲಾಗಿದೆ. ಇದಾದ ಮರುದಿನವೇ ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಯುವಕ ಮೇಲೆ ಕಲ್ಲಿನಿಂದ ದಾಳಿ ನಡೆದಿದ್ದು ಮೂರು ಮುಸ್ಲಿಂ ಯುವಕರ ಮೇಲೆ ದೂರು ದಾಖಲಾಗಿ
ಪ್ರಕಾಶ್ ಎಂಬ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿಡಲಾಗ್ತಿದೆ. ಮೃತ ಹರ್ಷನ ಮನೆ ಬಳಿ ದಾಳಿ ನಡೆಸಿ ಅವಾಚ್ಯವಾಗಿ ಬೈದು ಹರ್ಷನಿಗಾದ ಗತಿಯೇ ನಿಮಗೂ ಆಗುತ್ತೆ ಅಂತ ಬೆದರಿಕೆ ಹಾಕಿದ್ದಾರಂತೆ ರಾತ್ರಿ 11.15ರ ಸುಮಾರಿಗೆ ಮೂವರಿಂದ ಕೃತ್ಯ ನಡೆದಿದೆ ಅಂತ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು
ಇದನ್ನೂ ಓದಿ: Male Mahadeshwara Temple: ಮಲೆ ಮಹದೇಶ್ವರನಿಗೆ ಹಾಲರುವೆ ಸೇವೆ; ಬಾಲಕಿಯರು ಹೊತ್ತು ತಂದ ನೀರಲ್ಲಿ ಮಾದಪ್ಪನಿಗೆ ಅಭಿಷೇ
ಜೀವ ಬೆದರಿಕೆ ಹಾಕಿದ್ರು: ಹರ್ಷನ ಸೋದರಿ ಹೇಳಿ
ಅಪರಿಚಿತರ ದಾಳಿ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಹರ್ಷ ಸೋದರಿ ಅಶ್ವಿನಿ, ನಮ್ಮ ಕುಟುಂಬಕ್ಕೆ ಪೊಲೀಸರು ಭದ್ರತೆ (Police Protection) ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಅಪರಿಚಿತರು ಮಚ್ಚು, ಲಾಂಗ್ ಝಳಪಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ಹರ್ಷನ ಸ್ನೇಹಿತರ ಹೆಸರನ್ನ ಕೂಗುವ ಮೂಲಕ ಬೆದರಿಕೆ ಹಾಕಿದ
ಮೂರು ಅಥವಾ ನಾಲ್ಕು ಬೈಕ್ನಲ್ಲಿ ಬಂದ ಅಪರಿಚಿತರು ಅಲ್ಲಿ ನಿಂತಿದ್ದ ಮಹಿಳೆಯರ ತಲೆಗೆ ಹೊಡೆದಿದ್ದಾರೆ. ನಮ್ಮ ಬಳಿ ನಿಂತಿದ್ದ ಬೈಕ್ ಬೀಳಿಸಿ, ಬೀಡೋದೇ ಇಲ್ಲ ಎಂದು ಹೇಳಿದರು. ಇಲ್ಲಿಂದ ನೇರವಾಗಿ ಜ್ಞಾನಪ್ರಭಾ ಶಾಲೆ ಬಳಿ ಒಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಇಡೀ ಏರಿಯಾದಲ್ಲಿ ಸುತ್ತಿ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ ಎಂದರು
ಹರ್ಷ ಸತ್ತಾಗಲೇ ಒಂದಿಬ್ಬರನ್ನು ಎನ್ಕೌಂಟರ್ ಮಾಡಿದ್ರೆ ಈ ರೀತಿಯ ಪ್ರಕರಣಗಳು ಪುನಾರ್ವತಿತ ಆಗುತ್ತಿರಲಿಲ್ಲ. ಅಪರಾಧ ಮಾಡಿ ಜೈಲಿನಲ್ಲಿ ವಿಲಾಸಿಯಾಗಿ ಬದುಕುಬಹುದು ಅಂತ ಅವರಿಗೆ ಗೊತ್ತಿದೆ. ಅವರಿಗೆ ಅಲ್ಲೇ ಎಲ್ಲಾ ಸಿಗುತ್ತೆ ಅಂತ ಗೊತ್ತಿದೆ. ಹಾಗಾಗಿ ಇಂತಹ ಕೃತ್ಯಗಳು ನಡೆಯುತ್ತಿವೆ
ಇದನ್ನೂ ಓದಿ: Bengaluru: ಪಟಾಕಿ ಹಚ್ಚಿ ಜನರ ಮೇಲೆಸೆದು ಪುಂಡಾಟ; ಪ್ರಶ್ನಿಸಿದ್ದಕ್ಕೆ ಕುತ್ತಿಗೆ ಮೂಳೆ ಮುರಿಯೋ ಹಾಗೆ ಹೊಡೆ
ಸೋದರ ಹರ್ಷ ನಿಧನದ ಬಳಿಕ ನಾವೇ ಹೊರಗಡೆ ಹೋಗುತ್ತಿದ್ದೇವೆ. ಹಾಗಾಗಿ ಸರ್ಕಾರ ನಮ್ಮ ಕುಟುಂಬದ ಭದ್ರತೆ ಬಗ್ಗೆ ಗಮನ ನೀಡಬೇಕು ಎಂದು ಅಶ್ವಿನಿ ಮನವಿ ಮಾಡಿಕೊಂಡರು. ದ್ರು..ರು.ಕೆಕ.ದೆ.ಕೆರು..ನಿ ಮನವಿ ಮಾಡಿಕೊಂಡರು.

Post a Comment