ಸಾಂದರ್ಭಿಕ ಚಿತ್ರ
ಇದರ ಲಾಭವನ್ನು ನೇರವಾಗಿ ಕಾಲೇಜು, ಡಿಪ್ಲೊಮಾ ತರಗತಿಗಳ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಅದು ಹೇಗೆ ಅಂತೀರಾ? ಇಲ್ಲಿದೆ ಡೀಟೆಲ್ಸ್
ಮಂಗಳೂರು: ಜನನ, ಮರಣ ಪತ್ರ ಮನೆಗೆ ತಲುಪಿಸುವ ಮಹತ್ತರ ಸೇವೆ ಮೂಲಕ ಮನೆ ಮಾತಾಗಿದ್ದ ಮಂಗಳೂರು ಅಂಚೆ ವಿಭಾಗ (Mangaluru Postal Division) ಇದೀಗ ನೂತನ ಸೇವೆ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಮಂಗಳೂರು ಅಂಚೆ ವಿಭಾಗ ಆರಂಭಿಸಿದ್ದ ಜನನ/ಮರಣ ಪ್ರಮಾಣ ಪತ್ರ ಪೋಸ್ಟ್ ಮೂಲಕ ತಲುಪಿಸುವ ಸೇವೆಯು ಇದೀಗ ರಾಜ್ಯ ಮಟ್ಟದಲ್ಲಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ಮಂಗಳೂರು (Mangaluru News) ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಅವರ ನೇತೃತ್ವದಲ್ಲಿ 'ಪ್ರಾಜೆಕ್ಟ್ ಮಂಗಳ' ಎನ್ನುವ ಹೊಸ ಯೋಜನೆಯೊಂದನ್ನು (Post Services) ಪರಿಚಯಿಸಲಾಗಿದೆ. ಈಗಾಗಲೇ ಇದಕ್ಕೆ ಚಾಲನೆ ಸಿಕ್ಕಿದ್ದು, ಇದರ ಲಾಭವನ್ನು ನೇರವಾಗಿ ಕಾಲೇಜು, ಡಿಪ್ಲೊಮಾ ತರಗತಿಗಳ ವಿದ್ಯಾರ್ಥಿಗಳು ಪಡೆಯಲಿದ್ದಾರೆ. ಅದು ಹೇಗೆ ಅಂತೀರಾ? ಇಲ್ಲಿದೆ ಡೀಟೆಲ್ಸ್
ಅಂಕಪಟ್ಟಿ, ದಾಖಲೆ ಮನೆ ಬಾಗಿಲಿ
ಹೌದು, ಈ 'ಪ್ರಾಜೆಕ್ಟ್ ಮಂಗಳಾ' ಯೋಜನೆ ಮೂಲಕ ವಿದ್ಯಾರ್ಥಿಗಳು ತಮ್ಮ ಕೊನೆಯ ಸೆಮಿಸ್ಟರ್ ಅಂಕಪಟ್ಟಿ, ವರ್ಗಾವಣೆ ಪತ್ರ ಹಾಗೂ ಇತರೆ ಶೈಕ್ಷಣಿಕ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದಾಗಿದೆ. ಸದ್ಯ ಈ ಯೋಜನೆ ಪ್ರಥಮ ಹಂತವಾಗಿ ಕರ್ನಾಟಕ ಪಾಲಿಟೆಕ್ನಿಕ್ ಕಾಲೇಜು (KPT) ವಿದ್ಯಾರ್ಥಿಗಳು ಪಡೆಯಲಿದ್ದಾರೆ. ನಂತರದ ದಿನಗಳಲ್ಲಿ ಪಿಯು, ಉನ್ನತ ಶಿಕ್ಷಣ ಸಂಸ್ಥೆಗಳ ಜೊತೆಗಿನ ಒಡಂಬಡಿಕೆ ಆಗಲಿದ್ದು ಇದರಿಂದ ಮಂಗಳೂರಿನಲ್ಲಿ ಕಲಿತು ವಿದ್ಯಾಭ್ಯಾಸ ಪಡೆಯುವ ಸಾವಿರಾರು ವಿದ್ಯಾರ್ಥಿಗಳಿಗೆ ಲಾಭವಾಗಲಿದೆ
ನೇರವಾಗಿ ಮನೆ ಬಾಗಿಲಿಗೆ ಬರುತ್ತೆ ನೋಡಿ
ಅಂಚೆ ಇಲಾಖೆ ಪರಿಚಯಿಸುತ್ತಿರುವ ಈ ಹೊಸ ಯೋಜನೆಯಿಂದಾಗಿ ವಿದ್ಯಾರ್ಥಿಗಳು ಹೆಚ್ಚಿನ ಲಾಭ ಪಡೆಯಲಿದ್ದಾರೆ. ಮಂಗಳೂರಿನಲ್ಲಿ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗೆ ಒಮ್ಮೆ ಅರ್ಜಿ ಸಲ್ಲಿಸಿದ್ದಲ್ಲಿ, ಪುನಃ ಅದನ್ನು ಪಡೆಯಲು ಕಾಲೇಜಿಗೆ ಆಗಮಿಸಬೇಕಾಗುತ್ತದೆ. ಆದರೆ, ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಆರಂಭವಾದ್ದಲ್ಲಿ ವಿದ್ಯಾರ್ಥಿಗಳು ಸ್ಪೀಡ್ ಪೋಸ್ಟ್ ಮೂಲಕ ಯಾವುದೇ ರಾಜ್ಯದಲ್ಲಿದ್ದರೂ ಕನಿಷ್ಟ 2 ರಿಂದ 5 ದಿನಗಳ ಒಳಗಾಗಿ ತಮ್ಮ ದಾಖಲಾತಿ ಪತ್ರಗಳನ್ನು ಪಡೆಯಬಹುದಾಗಿದೆ
ಸ್ಪೀಡ್ ಪೋಸ್ಟ್ ನೀಡುತ್ತೆ ಮಾ
ಸ್ಪೀಡ್ ಪೋಸ್ಟ್ ಮೂಲಕ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಯಲ್ಲಿ ನೀಡಿದ ಮನೆ ಅಥವಾ ಕಚೇರಿ ವಿಳಾಸಕ್ಕೆ ತಮ್ಮ ಅಂಕಪಟ್ಟಿ, ವರ್ಗಾವಣೆ ಪತ್ರ ಸಹಿತ ಇತರೆ ದಾಖಲಾತಿಗಳನ್ನ ಪಡೆಯಬಹುದಾಗಿದೆ. ಈ ಸಮಯದಲ್ಲಿ ರವಾನೆಯಾದ ಸ್ಪೀಡ್ ಪೋಸ್ಟ್ ಯಾವ ಹಂತದಲ್ಲಿದೆ ಅನ್ನೋದನ್ನು ವೆಬ್ಸೈಟ್ ಮೂಲಕ ಟ್ರ್ಯಾಕ್ ಮಾಡಬಹುದು. ವೆಬ್ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Uttara Kannada: ಕಾಂತಾರದಲ್ಲೂ ಇರದ ದೈವ, ಉತ್ತರ ಕನ್ನಡದಲ್ಲಿ ಕ್ಷೇತ್ರಪಾಲ ಜಟಿಗನ ಆರಾ
ವಿದ್ಯಾರ್ಥಿಯೇ ಪಡೆಯಬೇಕೆಂದಿ
ರವಾನೆಯಾಗುವ ಪೋಸ್ಟ್ ಅನ್ನು ವಿದ್ಯಾರ್ಥಿಯ ಅನುಪಸ್ಥಿತಿಯಲ್ಲಿ ಅವರ ಕುಟುಂಬದ ಸದಸ್ಯರು ಪಡೆಯಬಹುದಾಗಿದೆ
ಮನೆ ಬಾಗಿಲಿಗೆ ಹೀಗೆ ತರಿಸಿಕೊಳ್ಳಿ
ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳನ್ನು ಪಡೆಯಲು ಅರ್ಜಿ ಸಲ್ಲಿಸುವ ಸಮಯದಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಪಡೆಯಲು ಇಚ್ಛಿಸುವುದಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಿ ವಿದ್ಯಾಸಂಸ್ಥೆಗೆ ನೀಡಬೇಕಾಗುತ್ತ
ಇದನ್ನೂ ಓದಿ: Dandelappa: ಪರಮಾರ ದಾಂಡೇಲಪ್ಪ ಆದ ಕಥೆ! ಇದು ಕರ್ನಾಟಕ-ಗೋವಾ ಬೆಸೆಯೋ ದೇವ
ಇತರೆ ಸೇವೆಗಳನ್ನೂ ಗಮನಿ
ಅಂಚೆ ಇಲಾಖೆ ಈಗಾಗಲೇ ಸ್ಪೀಡ್ ಪೋಸ್ಟ್ ಮೂಲಕ ಆಧಾರ್ ಕಾರ್ಡ್, ಪಾನ್ ಕಾರ್ಡ್, ಪಾಸ್ ಪೋರ್ಟ್, ಡೆಬಿಟ್/ಎಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಇನ್ನಿತರ ಸರಕಾರಿ ದಾಖಲೆ ಪತ್ರಗಳನ್ನು ತಲುಪಿಸುತ್ತಿವೆ. ಸಿರು!ದೆ..ಲ್ಲಧನೆಹಿತಿ..ಗೆ.. ಪತ್ರಗಳನ್ನು ತಲುಪಿಸುತ್ತಿವೆ.

Post a Comment