ವಿವಾದಕ್ಕೆ ಒಳಗಾದ ಜ್ಞಾನವಾಪಿ ಮಸೀದಿ
ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ 'ಶಿವಲಿಂಗ'ದ ವಯಸ್ಸನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್‌ನಂತಹ ವೈಜ್ಞಾನಿಕ ತನಿಖೆಗಾಗಿ ಹಿಂದೂ ಅರ್ಜಿದಾರರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಹಿಂದೂ ಪರ ಅರ್ಜಿಯನ್ನು ವಜಾಗೊಳಿಸಿದೆ
ವಾರಣಾಸಿ, ಉತ್ತರ ಪ್ರದೇಶ: ತೀವ್ರ ವಿವಾದಕ್ಕೆ ಒಳಗಾಗಿರುವ ಜ್ಞಾನವಾಪಿ ಮಸೀದಿ ಕೇಸ್‌ಗೆ (Gnanavapi Masjid Case) ಸಂಬಂಧಿಸಿದಂತೆ ಉತ್ತರ ಪ್ರದೇಶದ (Uttar Pradesh) ವಾರಣಾಸಿ ಕೋರ್ಟ್ (Varanasi Court) ಮಹತ್ವದ ತೀರ್ಪು ನೀಡಿದೆ. ಮಸೀದಿಯಲ್ಲಿ ಕಾಣಿಸಿಕೊಂಡಿರುವ 'ಶಿವಲಿಂಗ'ದ (Shivalinga) ಕಾರ್ಬನ್ ಡೇಟಿಂಗ್ ಪರೀಕ್ಷೆ (Carbon dating test) ನಡೆಸಬೇಕು ಎಂದು ಸಲ್ಲಿಸಲಾಗಿರುವ ಅರ್ಜಿಯನ್ನು ವಾರಾಣಸಿ ಕೋರ್ಟ್ ವಜಾಗೊಳಿಸಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ 'ಶಿವಲಿಂಗ'ದ ವಯಸ್ಸನ್ನು ನಿರ್ಧರಿಸಲು ಕಾರ್ಬನ್ ಡೇಟಿಂಗ್‌ನಂತಹ ವೈಜ್ಞಾನಿಕ ತನಿಖೆಗಾಗಿ ಹಿಂದೂ ಅರ್ಜಿದಾರರ (Hindu applicant) ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಹಿಂದೂ ಪರ ಅರ್ಜಿಯನ್ನು ವಜಾಗೊಳಿಸಿದೆ. ಕಾರ್ಬನ್ ಡೇಟಿಂಗ್‌ನಂತಹ ಯಾವುದೇ ಸಮೀಕ್ಷೆಯು ಮಸೀದಿಯೊಳಗಿನ ಸ್ಥಳವನ್ನು ಮುಚ್ಚುವ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ (Violation of Supreme Court order) ಎಂದು ವಾರಣಾಸಿಯ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ
ಕಾರ್ಬನ್ ಡೇಟಿಂಗ್ ಟೆಸ್ಟ್‌ಗೆ ಮನವಿ ಮಾಡಿದ್ದ ಅರ್ಜಿದಾ
ಮೇ 16ರಂದು ಜ್ಞಾನವಾಪಿ ಮಸೀದಿಯ ಆವರಣದೊಳಗೆ ವಿಡಿಯೋ ಸಮೀಕ್ಷೆ ನಡೆಸಲಾಗಿತ್ತು. ಮುಸ್ಲಿಮರು ನಮಾಜ್‌ಗೂ ಮುನ್ನ ಬಳಸುತ್ತಿದ್ದ 'ವಝೂಖಾನ' ಕೊಳದ ಸಮೀಪ ಶಿವಲಿಂಗದ ಆಕೃತಿ ಪತ್ತೆಯಾಗಿತ್ತು ಎಂದು ಈ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಆ ಆಕೃತಿಯನ್ನು ಕಾರ್ಬನ್ ಡೇಟಿಂಗ್‌ಗೆ ಒಳಪಡಿಸಬೇಕು, ಈ ಮೂಲಕ ಪತ್ತೆಯಾಗಿದ್ದು ಕಾರಂಜಿಯೋ, ಶಿವಲಿಂಗವೋ ಎಂಬುವುದನ್ನು ದೃಢಪಡಿಸಬೇಕು ಎಂದು ಜ್ಞಾನವಾಪಿ, ಶೃಂಗಾರ ಗೌರಿ ಮೊಕದ್ದಮೆಯ ಹಿಂದೂ ಪರ ಅರ್ಜಿದಾರರು ಮನವಿ ಮಾಡಿದ್ದರು
ಮುಸ್ಲಿಂ ಪರ ವಕೀಲರು ಹೇಳಿದ್ದೇನು
ಮುಸ್ಲಿಂ ಪರ ವಕೀಲ ಮುಮ್ತಾಜ್ ಅಹ್ಮದ್ ಅವರು ಯಾವುದೇ ವಸ್ತುವಿನ ಕಾರ್ಬನ್ ಡೇಟಿಂಗ್ ಮಾಡಲು ಸಾಧ್ಯವಿಲ್ಲ. ಕಾರ್ಬನ್ ಡೇಟಿಂಗ್ ಹೆಸರಿನಲ್ಲಿ ವಸ್ತು ಹಾನಿಗೊಳಗಾದರೆ, ಅದು ಸುಪ್ರೀಂ ಕೋರ್ಟ್‌ನ ಆದೇಶವನ್ನು ಧಿಕ್ಕರಿಸಿದಂತೆ ಆಗುತ್ತದೆ ಎಂದು ಪ್ರತಿಪಾದಿಸಿದ್ದರು
. ?.ರರು..ದಿಸಿದ್ದರು.ಮಸೀದಿಯೊಳಗೆ ಶಿವಲಿಂಗ ಎನ್ನಲಾದ ಆಕೃತಿ
ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?
ವಾರಾಣಾಸಿ ಜಿಲ್ಲಾ ಕೋರ್ಟ್ ಹೇಳಿದ್ದೇನು?
ಇನ್ನು ವಾರಾಣಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಪತ್ತೆಯಾದ ಆಕೃತಿಯನ್ನು ಸುರಕ್ಷಿತವಾಗಿಡಲು ಸುಪ್ರೀಂ ಕೋರ್ಟ್ ಈ ಹಿಂದೆ ಸೂಚಿಸಿದೆ. ಹೀಗಿರುವಾಗ ಅದನ್ನು ಪರೀಕ್ಷೆಗೊಳಪಡಿಸುವುದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಕಾರ್ಬನ್ ಡೇಟಿಂಗ್‌ನಂತಹ ಯಾವುದೇ ಸಮೀಕ್ಷೆಯು ಮಸೀದಿಯೊಳಗಿನ ಸ್ಥಳವನ್ನು ಮುಚ್ಚುವ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ (Violation of Supreme Court order) ಎಂದು ವಾರಣಾಸಿಯ ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ.
ಏನಿದು ಕಾರ್ಬನ್ ಡೇಟಿಂಗ್ ಟೆಸ್ಟ್?
ಕಾರ್ಬನ್ ಡೇಟಿಂಗ್ ಎನ್ನುವುದು ಪುರಾತತ್ತ್ವ ತಜ್ಞರು ವಸ್ತುಗಳ ವಯಸ್ಸನ್ನು ಅಂದಾಜು ಮಾಡಲು ಜಾಗತಿಕವಾಗಿ ಬಳಸುವ ಸಾಧನಗಳಲ್ಲಿ ಒಂದು. ಆದಾಗ್ಯೂ, ಬಂಡೆ, ಕಲ್ಲುಗಳ ವಯಸ್ಸನ್ನು ಕಂಡುಹಿಡಿಯಲು ಭೂವಿಜ್ಞಾನಿಗಳು ಇದನ್ನು ಬಳಸುವುದಿಲ್ಲ, ಏಕೆಂದರೆ ಕಾರ್ಬನ್ ಡೇಟಿಂಗ್ 50,000 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಬಂಡೆಗಳ ವಯಸ್ಸನು ಮಾತ್ರ ನಿಖರವಾಗಿ ಹೇಳುತ್ತದೆ.
ಇದನ್ನೂ ಓದಿ: Gyanvapi Masjid Case Timeline: ಜ್ಞಾನವಾಪಿ ಪ್ರಕರಣ, 1991 ರಿಂದ ಈವರೆಗೆ ಏನಾಯ್ತು? ಇಲ್ಲಿದೆ ಟೈಂಲೈನ್
ಸುಪ್ರೀಂ ಕೋರ್ಟ್‌ನಲ್ಲೂ ನಡೆಯುತ್ತಿರುವ ವಿಚಾರಣೆ
ಐದು ಹಿಂದೂ ಮಹಿಳೆಯರು ಮಸೀದಿ ಸಂಕೀರ್ಣದೊಳಗಿನ ದೇಗುಲದಲ್ಲಿ ವರ್ಷಪೂರ್ತಿ ಪ್ರಾರ್ಥನೆಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಲೇ ಇದೆ. ಈ ವಿಚಾರಣೆಗೆ ಪ್ರತಿಕ್ರಿಯೆಯಾಗಿ ಕೆಳ ನ್ಯಾಯಾಲಯದ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ನಡೆಸಿದ ವೀಡಿಯೊ ಸಮೀಕ್ಷೆಯಲ್ಲಿ ಈ ವರ್ಷದ ಆರಂಭದಲ್ಲಿ 'ಶಿವಲಿಂಗ' ಪತ್ತೆಯಾಗಿದೆ. ಆ ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ.


Post a Comment