ಯತ್ನಾಳ್, ಬಿಎಸ್ವೈ ಮತ್ತು ಬೊಮ್ಮಾಯಿ
ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ (Basava Jaya Mruthyunjaya Swamiji) ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವುದಾಗಿ ಹೇಳಿದ್ದ ಬಿ.ಎಸ್.ಯಡಿಯೂರಪ್ಪ ನೀಡಿಲ್ಲ. ಅವರು ಈಗ ಪಂಚಮಸಾಲಿ ಸಮಾಜದವರ ಮನಸ್ಸಿನಿಂದ ಹೊರ ಹೋಗಿದ್ದಾರ
ಮಾಜಿ ಸಿಎಂ ಯಡಿಯೂರಪ್ಪನವರನ್ನು (Former CM BS Yediyurappa) ಕರೆದುಕೊಂಡು ತಿರುಗಾಡಿದರೆ ಮುಖ್ಯಮಂತ್ರಿ ಬೊಮ್ಮಾಯಿ (CM Basavaraj Bommai) ಅವರೇ ನೀವು ಲಗಾ ಒಗಿತ್ತಿರಿ ಎಂದು ಪಂಚಮಸಾಲಿ ಮೀಸಲಾತಿ (Panchamasali Reservation) ಹೋರಾಟ ಸಮಿತಿಯ ಅಧ್ಯಕ್ಷ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (BJP MLA Basanagowda Patil Yatnal) ಹೇಳಿದ್ದಾರೆ. ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪ್ರಥಮ ಪಂಚಮಸಾಲಿ ಮೀಸಲಾತಿ ಹಕ್ಕೊತ್ತಾಯ ಬೃಹತ್ ಸಮಾವೇಶದಲ್ಲಿ ಮಾತನಾಡಿ ತಮ್ಮದೇ ಪಕ್ಷದ ನಾಯಕರಿಗೆ ಶಾಸಕ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಗೆ ಸೂಚನೆ ನೀಡಿದ್ದೇನೆ ಎಂದು ಯಡಿಯೂರಪ್ಪ ಹೇಳಿಕೆ ನೀಡುತ್ತಾರೆ. ಬೊಮ್ಮಾಯಿ ಅವರೇ ಯಡಿಯೂರಪ್ಪನ್ನು ಕರೆದುಕೊಂಡು ಪ್ರವಾಸ ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿ (BJP) ಲಗಾ ಹೊಡ್ಸತ್ತಿರಿ. ಮೌನ್ನೆ ವಿಧಾನ ಸೌಧದಲ್ಲಿ ನಾನು ಪಂಚಮಸಾಲಿ ವಿರೋಧಿ ಅಲ್ಲ ಎನ್ನುವ ಯಡಿಯೂರಪ್ಪ ಯಾಕೆ ಪಂಚಮಸಾಲಿಗೆ ಮೀಸಲಾತಿ ಕೊಡಲಿಲ್ಲ ಎಂದು ಹರಿಹಾಯ್ದರು
ಗೌಡರೇ ಶಾಂತ ಇರಿ ನೀವು ನಿಮಗೆ ಸಚಿವ ಮಾಡುತ್ತೇನೆ ಎಂದು ಎಲ್ಲರನ್ನು ಕಳಸಿ ನನಗೆ ಹೇಳಿದರು. ಆಗ ನಾನು ಹೇಳಿದೆ ಬೊಮ್ಮಾಯಿ ಅವರೇ ಇನ್ನೂ ಆರು ತಿಂಗಳು ಉಳಿತು ನಾನೇನು ಮಾಡ್ಲಿ. ನಮ್ಮ ಸಮಾಜಕ್ಕೆ 2 ಎ ಮೀಸಲಾತಿ ನೀಡಿ ಎಂದು ಹೇಳಿದೆ ಎಂದರು
. .VT:A. ಎಂದರು ಪಂಚಮಸಾಲಿ ಮೀಸಲಾತಿ
ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ
ನಾವು 2ಎ ಮೀಸಲಾತಿ ಪಡೆದೇ ಪಡೆಯುತ್ತೇವೆ. ಎಲ್ಲರೂ ಒಂದಾದರೆ ಪರಿಸ್ಥಿತಿ ಬಿಗಡಾಯಿಸುತ್ತದೆ. ನಮ್ಮ ಸಮಾಜವರು ಹೆದರುವ ಅವಶ್ಯಕತೆ ಇಲ್ಲ. ಯಾರಿಗೂ ಅಪ್ಪಾಜಿ ಅನ್ನುವ ಅವಶ್ಯಕತೆ ಇಲ್ಲ. ಪಂಚಮಸಾಲಿ ಸಮಾಜದ ಇಬ್ಬರಿಗೆ ಸಚಿವ ಸ್ಥಾನ ನೀಡಿದ್ದಾರೆ. ಅವ ಯಾರೋ ಕಿತ್ತೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡತ್ತಾನಂತೆ. ಮೊದಲು ಬೆಳಗಾವಿ ಹಾಗೂ ಹುಬ್ಬಳ್ಳಿ ಮಾಡೋ ಮಾರಾಯಾ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ (Minister Murugesh Nirani) ವಿರುದ್ಧ ಹರಿಹಾಯ್ದರು.
ಇತ್ತೀಚೆಗೆ ಬೆಳಗಾವಿಯ ಕೆಲ ಸ್ವಾಮೀಜಿಗಳು ಶಾಸಕರೊಬ್ಬರ ಮಗನ ಜನ್ಮದಿನಾಚರಣೆಗೆ ಹೋಗಿ ನೀವೇ ಉತ್ತರಾಧಿಕಾರಿ ಎಂದು ಆಶೀರ್ವಾದ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ED, IT Raid: ಸಿದ್ದರಾಮಯ್ಯ ಮನೆ ಮೇಲೆ ದಾಳಿ ಆಗಲ್ಲ ಯಾಕೆ? ಯತ್ನಾಳ್ ಕೊಟ್ಟ ಉತ್ತರ ಹೀಗಿತ್ತು
ಯಡಿಯೂರಪ್ಪ ಬಗ್ಗೆ ಮೃತ್ಯುಂಜಯ ಸ್ವಾಮೀಜಿ ಬೇಸರ
ಲಿಂಗಾಯತ ಪಂಚಮಸಾಲಿ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ (Basava Jaya Mruthyunjaya Swamiji) ಸ್ವಾಮೀಜಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡುವುದಾಗಿ ಹೇಳಿದ್ದ ಬಿ.ಎಸ್.ಯಡಿಯೂರಪ್ಪ ನೀಡಿಲ್ಲ. ಅವರು ಈಗ ಪಂಚಮಸಾಲಿ ಸಮಾಜದವರ ಮನಸ್ಸಿನಿಂದ
ಹೊರ ಹೋಗಿದ್ದಾರೆ.ಪಂಚಮಸಾಲಿ ಮೀಸಲಾತಿ
ಈಗ ಬೊಮ್ಮಾಯಿ ಅವರು ಮೀಸಲಾತಿ ಕೊಡುವುದಾಗಿ ಹೇಳಿದ್ದಾರೆ. ಮೀಸಲಾತಿ ಕೊಡಬೇಕು ಎಂದು ಈ ಬಾರಿ ಬೆಂಗಳೂರು ವಿಧಾನಸೌಧಕ್ಕೆ 25 ಲಕ್ಷ ಜನ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರಕ್ಕೆ ಎಚ್ಚರಿಕೆ ಸಂದೇಶ
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಮೇಲೆ ನಾಲ್ಕು ಬಾರಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ. ಸರಕಾರದ ಕಣ್ಣು ತೆರಿಸಲು ಅರಭಾವಿ ಮತಕ್ಷೇತ್ರದಲ್ಲಿ ಮೊದಲ ಪಂಚಮಸಾಲಿ ಬೃಹತ್ ಸಮಾವೇಶವನ್ನು ಆಯೋಜಿಲಾಗಿದ್ದು ಸರಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸುವ ಅತ್ಯಗತ್ಯವಾಗಿದೆ ಎಂದರು.
ಇದನ್ನೂ ಓದಿ: Yatnal Targets Siddaramaiah: ಬಿಜೆಪಿಯವರು ತಾಲಿಬಾನಿಗಳು ಎಂದ ಸಿದ್ದರಾಮಯ್ಯಗೆ ಯತ್ನಾಳ್ ತಿರುಗೇಟು
ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಮಾಜಿ ಸಚಿವರಾದ ಎ.ಬಿ.ಪಾಟೀಲ್, ಶಶಿಕಾಂತ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ದಿನೇಶ್ ಪಾಟೀಲ್, ರುದ್ರಣ್ಣ ಚಂದರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



Post a Comment