108 ಆ್ಯಂಬುಲೆನ್ಸ್
Public Vahini News: ಆರೋಗ್ಯ ಸಚಿವರ ಸೂಚನೆ ಮೇರೆಗೆ ಸಭೆ ಆಗಿದೆ. ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ 108 ಸೇವೆ ನಿಲ್ಲಬಾರದು. ಸರ್ಕಾರ 4 ಆಶ್ವಾಸನೆ ನೀಡಿದೆ, ಜಿವಿಕೆ ಕೂಡ ಅದಕ್ಕೆ ಒಪ್ಪಿಕೊಂಡಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದ್ರು
ಬೆಂಗಳೂರು: 108 ಆ್ಯಂಬುಲೆನ್ಸ್ ಆರೋಗ್ಯ ಸಿಬ್ಬಂದಿ (108 Health Works) ಸಮಸ್ಯೆ ಕೊನೆಗೂ ಇತ್ಯರ್ಥವಾಗಿದೆ. ಒಂದು ವಾರದೊಳಗೆ ವೇತನ ನೀಡುವುದಗಿ ಜಿವಿಕೆ (GVK) ಸಂಸ್ಥೆ ಭರವಸೆ ನೀಡಿದೆ. ಸಮಸ್ಯೆಗೆ ಸಂಬಂಧಿಸಿದಂತೆ ಆರೋಗ್ಯ ಸೌಧದಲ್ಲಿ ಆರೋಗ್ಯ ಇಲಾಖೆ ಆಯುಕ್ತರ ಜೊತೆಗೆ, 108 ಆ್ಯಂಬುಲೆನ್ಸ್ ನೌಕರರ ಸಂಘ ಸಭೆ ನಡೆಸಿದ್ರು. 2 ತಿಂಗಳಿಂದ ವೇತನವಿಲ್ಲದೆ ಬೇಸತ್ತಿದ್ದ ಸಿಬ್ಬಂದಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ಇಂದು ಸಭೆ ನಡೆಸಿ ಒಂದು ತೀರ್ಮಾನಕ್ಕೆ ತೆಗೆದುಕೊಳ್ಳಲಾಗಿದೆ
ಸಿಬ್ಬಂದಿಗೆ ಸಂಬಳ ನೀಡದ ಜಿವಿಕೆ ಸಂಸ್ಥೆ
ಸಿಬ್ಬಂದಿಗಳಿಗೆ ವೇತನ ನೀಡಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ ಜೆವಿಕೆ ಕಂಪನಿಯವರು 108 ಆರೋಗ್ಯ ಕವಚ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ 108 ಆರೋಗ್ಯ ಕವಚ ಸಿಬ್ಬಂದಿ ದಸರಾ ಹಬ್ಬ ಆಚರಿಸಿಲ್ಲ. ಇಂದು 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಆಯುಧ ಪೂಜೆ ಕೂಡ ಮಾಡಿಲ್ಲ. 108 ಆರೋಗ್ಯ ಕವಚ ಸಿಬ್ಬಂದಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಂಬಳಕ್ಕಾಗಿ ರಾಜ್ಯ ಸರ್ಕಾರ 25 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ ಜಿವಿಕೆ ಕಂಪನಿ ಸಿಬ್ಬಂದಿಗಳಿಗೆ ಸಂಬಳ ಮಾತ್ರ ನೀಡಿರಲಿಲ್ಲ
ಮೂರು ಸಾವಿರ ಸಿಬ್ಬಂದಿ
108 ಆರೋಗ್ಯ ಕವಚದ ಅಡಿಯಲ್ಲಿ ಮೂರು ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಂಪನಿ ಇನ್ನೂ ಸಂಬಳ ಬಿಡುಗಡೆ ಮಾಡಿಲ್ಲ. ಕೂಡಲೇ ರಾಜ್ಯ ಸರ್ಕಾರ, ಆರೋಗ್ಯ ಸಚಿವರು ಮಧ್ಯಪ್ರವೇಶ ಮಾಡಬೇಕು. ಎರಡು ದಿನದಲ್ಲಿ ಸಂಬಳ ಬಿಡುಗಡೆ ಮಾಡುವಂತೆ ಮಾಡಬೇಕು ಎಂದು 108 ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಆಕ್ರೋಶ ವ್ಯಕ್ತಪಡಿಸಿದ್ದಾ
ಇದನ್ನೂ ಓದಿ: S.C, S.T ಮೀಸಲಾತಿ ಹೆಚ್ಚಳ ಫಿಕ್ಸ್; ಸರ್ವಪಕ್ಷಗಳ ಸಮ್ಮತದಿಂದ ನಿರ್ಧಾರ- ಸಿಎಂ ಬೊಮ್ಮಾಯಿ
ಆರೋಗ್ಯ ಇಲಾಖೆ ಆಯುಕ್ತರ ಸ್ಪಷ್ಟ
ಸಭೆ ಬಳಿಕ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಸ್ಪಷ್ಟನೆ ನೀಡಿದ್ದಾರೆ. 108 ಸೇವೆ ಸಿಬ್ಬಂದಿ ಸಮಸ್ಯೆ ಬಗ್ಗೆ ಚರ್ಚೆ ಆಗಿದೆ. ಎರಡು ತಿಂಗಳ ವೇತನ ಪಾವತಿ ಆಗಿಲ್ಲ ಎಂದಿದ್ರು. ಜಿವಿಕೆ ಕೂಡ ಅದನ್ನ ಒಪ್ಪಿಕೊಂಡಿದೆ ಎಂದ್ರು. ಆರೋಗ್ಯ ಸಚಿವರ ಸೂಚನೆ ಮೇರೆಗೆ ಸಭೆ ಆಗಿದೆ. ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ 108 ಸೇವೆ ನಿಲ್ಲಬಾರದು. ಸರ್ಕಾರ 4 ಆಶ್ವಾಸನೆ ನೀಡಿದೆ, ಜಿವಿಕೆ ಕೂಡ ಅದಕ್ಕೆ ಒಪ್ಪಿಕೊಂಡಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿ
ಮುಂದಿನ ವಾರದೊಳಗೆ ಸಂಬಳ ಆಗುತ್ತೆ
ಇನ್ಮುಂದೆ ಸಂಬಳ ಇತರ ವೆಚ್ಚಗಳು ಸೇರಿ ಒಟ್ಟು ಬಿಡುಗಡೆ ಮಾಡ್ತೇವೆ. ಮುಂದಿನ ವಾರದೊಳಗೆ ಎಲ್ಲ ಸಂಬಳ ಸಮಸ್ಯೆ ಬಗೆಹರಿಯಲಿದೆ. ಸರ್ಕಾರ ವರ್ಷಕ್ಕೆ 52 ಕೋಟಿ ಬಿಡುಗಡೆ ಮಾಡಿದೆ. ಮುಂದೆ ಅನುದಾನ ಬೇಕಿದ್ದರೂ ಸರ್ಕಾರ ನೀಡುತ್ತದೆ. 15% ಸ್ಯಾಲರಿ ಹೈಕ್ ಬಗ್ಗೆ ಬೇಡಿಕೆ ಇತ್ತು, ಮುಂದಿನ ದಿನಗಳಲ್ಲಿ ಅದು ಜಾರಿ ಆಗುತ್ತದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಹೇಳಿದ್ದಾ
ಇದನ್ನೂ ಓದಿ: Children Missing: ಬೆಂಗಳೂರಿನಲ್ಲಿ ಮೂವರು ಮಕ್ಕಳು ನಾಪತ್ತೆ; ಪೊಲೀಸರಿಂದ ಹು
ಅಗತ್ಯ ಸೌಲಭ್ಯ ನೀಡುವುದಾಗಿ ಭ
ಈ ಹಿಂದೆ 674 ಸಿಬ್ಬಂದಿ ಮುಷ್ಕರ ಮಾಡಿದ್ದರಿಂದ ಕೆಲಸದಿಂ
ತೆಗೆಯಲಾಗಿತ್ತು. ಅವರನ್ನ ವಾಪಸ್ ತೆಗೆದುಕೊಳ್ಳಲಾಗುತ್ತಿದೆ. ಸಿಬ್ಬಂದಿ ಶೌಚಾಲಯ ವ್ಯವಸ್ಥೆ ಕೇಳಿದ್ರು, ಈ ಸಂಬಂಧ ಆಸ್ಪತ್ರೆಯ ಆಡಳಿತದ ಬಗ್ಗೆ ಮಾತನಾಡಿದ್ದೇವೆ. ಅಗತ್ಯ ಸೌಲಭ್ಯಗಳನ್ನು ನೀಡುವುದಾಗಿ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಭರವಸೆ ನೀಡಿದ್ದಾರೆ. ದರವಸೆಡುಕಾಟರೆ.ದ್ರು.ನೆರೆ. ಕೆಲಸ. .. ಆಯುಕ್ತ ರಂದೀಪ್ ಭರವಸೆ ನೀಡಿದ್ದಾರೆ.

Post a Comment