ಪ್ರಾತಿನಿಧಿಕ ಚಿತ್ರ
ಮಹಾರಾಷ್ಟ್ರದ ಅಂಬರ್ನಾಥ್ನಲ್ಲಿ ಅತ್ತೆ ಮತ್ತು ಸೊಸೆ ನಡುವೆ ಜಗಳ ನಡೆದಿದೆ. ಟಿವಿಯಲ್ಲಿ ವಾಲ್ಯೂಮ್ ಜಾಸ್ತಿ ಇಟ್ಟ ಕಾರಣ ಈ ಜಗಳ ಶುರುವಾಗಿದೆ. ಕೊನೆಗೆ ಸೊಸೆ ಅತ್ತೆಯ ಕೈಗೆ ಕಚ್ಚಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಅತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ
ಗಂಡ-ಹೆಂಡತಿ (Husband-Wife) ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಹಾಗಿದ್ರೆ ಅತ್ತೆ (Mother in Law)-ಸೊಸೆ (daughter-in-law) ಜಗಳ?. ಕೆಲವೊಮ್ಮೆ ಅತ್ತೆ –ಸೊಸೆ ಜಗಳವಾದರೆ ಮನೆಯೊಂದು ಮೂರು ಬಾಗಿಲು ಆಗುವ ಪರಿಸ್ಥಿತಿ ಉಂಟಾಗುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಅತ್ತೆ ಅಥವಾ ಸೊಸೆ ಇಬ್ಬರಲ್ಲಿ ಯಾರಾದರು ಒಬ್ಬರು ಸುಮ್ಮನಾದರೆ ಒಳ್ಳೆಯದು. ಏಕೆಂದರೆ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು. ಆದರೆ ಇಬ್ಬರು ಜಗಳಕ್ಕೆ (Fight) ಇಳಿದರೆ ಸಂಬಂಧದಲ್ಲಿ ಬಿರುಕು ಮೂಡುವುದು ಸಹಜ. ಅದರಂತೆ ಮಹಾರಾಷ್ಟ್ರದ (Maharastra) ಅಂಬರ್ನಾಥ್ನಲ್ಲಿ ಅತ್ತೆ ಮತ್ತು ಸೊಸೆ ನಡುವೆ ಜಗಳ ನಡೆದಿದೆ. ಟಿವಿಯಲ್ಲಿ ವಾಲ್ಯೂಮ್ ಜಾಸ್ತಿ ಇಟ್ಟ ಕಾರಣ ಈ ಜಗಳ ಶುರುವಾಗಿದೆ. ಕೊನೆಗೆ ಸೊಸೆ ಅತ್ತೆಯ ಕೈಗೆ ಕಚ್ಚಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಅತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ
ಗಂಗಾಗಿರಿಯ ಅಪಾರ್ಟ್ಮೆಂಟ್ವೊಂದರಲ್ಲಿ ಈ ಘಟನೆ ನಡೆದಿದೆ. ಸಾಮಾನ್ಯವಾಗಿ ಮಹಿಳೆಯರಿಗೆ ತಮಗಿಷ್ಟವಾದ ಧಾರಾವಾಹಿಯನ್ನು ಸರಿಯಾಗಿ ನೋಡಬೇಕು ಎಂಬುದು ಇರುತ್ತದೆ. ಅದೇಷ್ಟೇ ಮನೆ ಕೆಲಸವಿದ್ದರು ಆ ಧಾರಾವಾಹಿಯ ಸಮಯಕ್ಕೆ ಮಹಿಳೆಯರು ಟಿವಿ ಮುಂದೆ ಬಂದು ಹಾಜರಿರುತ್ತಾರೆ. ಒಂದು ವೇಳೆ ಗಂಡ ಬೇರೆ ಚಾನಲ್ ನೋಡುತ್ತಿದ್ದರಂತೂ ರಿಮೋಟ್ ಎಳೆದುಕೊಂಡು ಧಾರಾವಾಹಿ ವೀಕ್ಷಿಸಲು ಮುಂದಾಗುತ್ತಾರೆ. ಆದರೆ ಗಂಗಾಗಿರಿ ಅಪಾರ್ಟ್ಮೆಂಟ್ನಲ್ಲಿ ಅತ್ತೆ ವೃಶಾಲಿ (60) ಪೂಜೆ ಮಾಡುತ್ತಿದ್ದರು. ಇತ್ತ ಸೊಸೆ ವಿಜಯಾ (32) ಟಿವಿ ನೋಡುತ್ತಿದ್ದರು. ಆದರೆ ಸೊಸೆಯ ಟಿವಿ ನೋಡುವ ಆತುರದಲ್ಲಿ ಟಿವಿಯ ಸೌಂಡ್ ಕೂಡ ಜಾಸ್ತಿ ಇಟ್ಟಿದ್ದರು. ಇದು ಅತ್ತೆಯ ಪೂಜೆಗೆ ಭಂಗ ತರುತ್ತಿತ್ತು
ಟಿವಿ ಸೌಂಡ್ ಕಡಿಮೆ ಮಾ
ಅತ್ತೆ ಇದೇ ವಿಚಾರಕ್ಕೆ ಕೋಪಗೊಂಡಿದ್ದಾರೆ. ಪೂಜೆ ಮಾಡುವ ವೇಳೆ ಟಿವಿಯ ಸೌಂಡ್ ಜೋರಾಗಿ ಇಟ್ಟಿರುವುದಕ್ಕೆ ಸೊಸೆ ಮೇಲೆ ಅತ್ತೆ ಕೋಪಗೊಂಡಿದ್ದಾರೆ. ಮಾತ್ರವಲ್ಲದೆ ಟಿವಿ ಸೌಂಡ್ ಕಡಿಮೆ ಮಾಡು ಎಂದು ಸೊಸೆ ಬಳಿ ಹೇಳಿದ್ದಾರೆ. ಆದರೆ ಅತ್ತೆ ಮಾತನ್ನು ಕೇಳಿಸದೆ ಸೊಸೆ ಸುಮ್ಮನಾಗಿದ್ದಾರೆ. ಇದರಿಂದ ಕೋಪಗೊಂಡು ಅತ್ತೆ ಟಿವಿಯನ್ನು ಆಫ್ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಟಿವಿ ಆಫರ್ ಮಾಡಿದ ಕಾರಣಕ್ಕೆ ಅತ್ತೆಯ ಮೇಲೆ ಸೊಸೆ ಕೋಪಗೊಂಡು ಅವರ 3 ಬೆರಳುಗಳಿಗೆ ಕಚ್ಚಿದ್ದಾ
ಅತ್ತೆ ಇಷ್ಟಕ್ಕೆ ಸುಮ್ಮನಾಗದೆ ಸೊಸೆಗೆ ತಕ್ಕ ಪಾಠ ಕಳಿಸಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೊಸೆಯ ವಿಜಯಾ ವಿರುದ್ಧ ಅತ್ತೆ ವೃಶಾಲಿ ದೂರು ನೀಡಿದ್ದಾ
ಇದನ್ನೂ ಓದಿ: Bharat Jodo Yatra: 5 ತಿಂಗಳಲ್ಲಿ 3500 KM: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ
ಅಂಬರನಾಥ್ (ಪೂರ್ವ)ದ ಶಿವಾಜಿ ನಗರ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅಶೋಕ್ ಭಗತ್ ಮಾತನಾಡಿ, ಅಂಬರನಾಥ್ ಪ್ರದೇಶದ ಶಿವಾಜಿ ನಗರದ 60 ವರ್ಷದ ಮಹಿಳೆ ವೃಶಾಲಿ ಮೂರು ಬೆರಳುಗಳಿಗೆ ಸೊಸೆ ವಿಜಯಾ ಕಚ್ಚಿದ್ದಾರೆ ಎಂದು ನಮಗೆ ದೂರು ಬಂದಿದೆ. ವಿಜಯಾ ಜೋರಾಗಿ ಟಿವಿ ನೋಡುತ್ತಿದ್ದರು ಮತ್ತು ಅದನ್ನು ಕಡಿಮೆ ಮಾಡುವಂತೆ ಅತ್ತೆ ಕೇಳಿದಾಗ, ವಾಲ್ಯೂಮ್ ಕಡಿಮೆ ಮಾಡುವುದಿಲ್ಲ ಎಂದು ಹೇಳಿ ವಾದವನ್ನು ಪ್ರಾರಂಭಿಸಿದಳು. ಅತ್ತೆ ಕೊನೆಗೆ ಸಿಟ್ಟಿನಿಂದ ಟಿವಿ ಸ್ವಿಚ್ ಆಫ್ ಮಾಡಿದರು. ಸಿಟ್ಟಿಗೆದ್ದು ಅತ್ತೆಯ ಬಲಗೈಯ ಮೂರು ಬೆರಳುಗಳನ್ನು ಕಚ್ಚಿ ತೀವ್ರವಾಗಿ ಸೊಸೆ ಗಾಯಗೊಳಿಸಿದ್ದಾರೆ. ಅತ್ತೆಯನ್ನು ವೈದ್ಯಕೀಯ ಚಿಕಿತ್ಸೆಗೆ ಕಳುಹಿಸಿ ಸೊಸೆಯ ವಿರುದ್ಧ ಪ್ರಕರಣ ದಾಖಲಿಸಿದೆವು ಎಂದು ಹೇಳಿದ್ದಾ
ಇದನ್ನೂ ಓದಿ: Umesh Katti Death: ಉಮೇಶ್ ಕತ್ತಿ ನಿಧನಕ್ಕೆ ಹೆಚ್ಡಿಕೆ, ಬಿಎಸ್ವೈ, ಸಿದ್ದರಾಮಯ್ಯ ಸಂ
ಪ್ರಕರಣದಂತೆ ಕಳೆದ ಕೆಲವು ವರ್ಷಗಳಿಂದ ಅತ್ತೆ ಮತ್ತು ಸೊಸೆ ನಡುವೆ ಜಗಳ ನಡೆಯುತ್ತಲೇ ಇದೆ. ಇದು ನ್ಯಾಯಾಲಯದ ಮೆಟ್ಟಿಲೇರಿದೆ. ಇದು ಕೌಟುಂಬಿಕ ಕಲಹದ ವಿಚಾರವಾಗಿದ್ದರಿಂದ ನಾವು ಇನ್ನೂ ಸೊಸೆಯನ್ನು ಬಂಧಿಸಿಲ್ಲ ಎಂದು ಇನ್ಸ್ಪೆಕ್ಟರ್ ತಿಳಿಸಿದ್ದಾರೆ ತಾಪರೆ.!ರೆ.ರೆ.ಡು...ಪೆಕ್ಟರ್ ತಿಳಿಸಿದ್ದಾರೆ

Post a Comment