Uttar Pradesh: ಯೋಗಿ ಸರ್ಕಾರದ ಮಹತ್ವದ ಹೆಜ್ಜೆ: ರೇಪ್​ ಕೇಸಲ್ಲಿ ಸಿಗಲ್ಲ ನಿರೀಕ್ಷಣಾ ಜಾಮೀನು, ಮಸೂದೆ ಅಂಗೀಕಾರ!


  ಯೋಗಿ ಆದಿತ್ಯನಾಥ್

ಯುಪಿ ಸರ್ಕಾರವು ಸಿಆರ್‌ಪಿಸಿಯನ್ನು ತಿದ್ದುಪಡಿ ಮಾಡಲು ಕಠಿಣ ಕ್ರಮವನ್ನು ತೆಗೆದುಕೊಂಡಿದೆ. ಮಹಿಳೆಯರ ವಿರುದ್ಧದ ಗಂಭೀರ ಪ್ರಕರಣದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡದಿರುವ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಅಸೆಂಬ್ಲಿ ಅಂಗೀಕರಿಸಿದ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಉತ್ತರ ಪ್ರದೇಶ ತಿದ್ದುಪಡಿ) ಮಸೂದೆ 2022ರ ಅನ್ವಯ ಅತ್ಯಾಚಾರದ ಆರೋಪಿಗಳಿಗೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನನ್ನು ನಿರಾಕರಿಸುತ್ತದೆ.

 ಲಕ್ನೋ(ಸೆ.24): ಉತ್ತರ ಪ್ರದೇಶದಲ್ಲಿ (Uttar Pradesh) ಮಹಿಳೆಯರ ಮೇಲಿನ ಗಂಭೀರ ಅಪರಾಧಗಳ ಬಗ್ಗೆ ಯೋಗಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಅತ್ಯಾಚಾರ ಸೇರಿದಂತೆ ಮಹಿಳೆಯರ ವಿರುದ್ಧದ ಗಂಭೀರ ಅಪರಾಧಗಳ ಪ್ರಕರಣಗಳಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗದಂತೆ ನೋಡಿಕೊಳ್ಳಲು ಯೋಗಿ ಸರ್ಕಾರವು ಅಸೆಂಬ್ಲಿಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ (ಉತ್ತರ ಪ್ರದೇಶ ತಿದ್ದುಪಡಿ) ಮಸೂದೆ 2022 ಅನ್ನು ಅಂಗೀಕರಿಸಿದೆ. ಈ CrPC ತಿದ್ದುಪಡಿ ಮಸೂದೆಯ ಪ್ರಕಾರ, ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗುವವರಿಗೆ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಇನ್ನು ಈ ಮಸೂದೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಲಿದೆ.


WWW.publicvahini.com

ಇದನ್ನೂ ಓದಿ: ಕಾಂಗ್ರೆಸ್​ ಕೈ ಬಿಟ್ಟಿದ್ದೇಕೆ ಆಜಾದ್? ಬಯಲಾಯ್ತು ಒಳಗಿನ ಗುಟ್ಟು, ಇಲ್ಲಿದೆ Exclusive ಇನ್​ಸೈಡ್​ ಸ್ಟೋರಿ!

 ವಾಸ್ತವವಾಗಿ, ಗುರುವಾರ, ಕ್ರಿಮಿನಲ್ ಪ್ರೊಸೀಜರ್ ಕೋಡ್ (ಉತ್ತರ ಪ್ರದೇಶ ತಿದ್ದುಪಡಿ) ಮಸೂದೆ 2022 ಅನ್ನು ಯುಪಿ ಅಸೆಂಬ್ಲಿಯಲ್ಲಿ ಮಂಡಿಸಿ ಅದನ್ನು ಅಂಗೀಕರಿಸಲಾಯಿತು. ಈ ಮಸೂದೆಯು ರಾಜ್ಯಕ್ಕೆ ಸಂಬಂಧಿಸಿದಂತೆ CrPC, 1973 ಸೆಕ್ಷನ್ 438 ಅನ್ನು ತಿದ್ದುಪಡಿ ಮಾಡಲು ಪ್ರಸ್ತಾಪಿಸುತ್ತದೆ. ಈ ವಿಭಾಗವು ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ಅಥವಾ ಸೆಷನ್ ನ್ಯಾಯಾಲಯದ ಅಧಿಕಾರವನ್ನು ವ್ಯಾಖ್ಯಾನಿ


ಸಿದೆ. ಲೈಂಗಿಕ ಅಒರಾಧಗಳಿಗೆ ನಿರೀಕ್ಷಣಾ ಜಾಮೀನು ಇಲ್ಲ


ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ಅಪರಾಧಗಳಲ್ಲಿ ನಿರೀಕ್ಷಣಾ ಜಾಮೀನು ಲಭ್ಯವಾಗದಿರುವುದು ಆರೋಪಿಗಳು ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್ ಖನ್ನಾ ಸದನಕ್ಕೆ ತಿಳಿಸಿದರು. ಹಕ್ಕು ಅರ್ಜಿ ಸಲ್ಲಿಸುವ ಅವಧಿಯನ್ನು ಮೂರು ತಿಂಗಳಿಂದ ಮೂರು ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಸುರೇಶ್ ಕುಮಾರ್ ಖನ್ನಾ ಹೇಳಿದರು. ಜತೆಗೆ, ಮರಣ ಹೊಂದಿದಲ್ಲಿ ಕನಿಷ್ಠ 5 ಲಕ್ಷ ಮತ್ತು ಶಾಶ್ವತ ಅಂಗವೈಕಲ್ಯ ಉಂಟಾದರೆ 1 ಲಕ್ಷ ರೂ.ಗಳನ್ನು ಮಂಜೂರು ಮಾಡಲು ನ್ಯಾಯಮಂಡಳಿಗೆ ಅಧಿಕಾರ ನೀಡಲಾಗುವುದು ಎಂಬ ನಿಬಂಧನೆ ಇದೆ. ಆದಾಗ್ಯೂ, ಹೆಚ್ಚಿನ ಮೊತ್ತವನ್ನು ಮಂಜೂರು ಮಾಡುವ ಬಗ್ಗೆ ನ್ಯಾಯಮಂಡಳಿ ನಿರ್ಧಾರ ತೆಗೆದುಕೊಳ್ಳಬಹುದು.

ಇದನ್ನೂ ಓದಿ: ಮೋದಿ ಕಾರ್ಯಕ್ರಮದಲ್ಲಿ ನಳಿನ್ ಕಟೀಲ್ ವಿರುದ್ಧ ಆಕ್ರೋಶಕ್ಕೆ ಸಿದ್ಧತೆ!

ಸಂತ್ರಸ್ತರ ರಕ್ಷಣೆಗೆ ಮಸೂದೆ

ಅದೇ ಸಮಯದಲ್ಲಿ, ಮಹಿಳೆ ಮತ್ತು ಬಾಲಕಿಯರ ಮೇಲಿನ ಅಪರಾಧಗಳ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಳ್ಳುವುದು, ಲೈಂಗಿಕ ಅಪರಾಧಗಳಲ್ಲಿ ಜೈವಿಕ ಸಾಕ್ಷ್ಯಗಳ ತ್ವರಿತ ಸಂಗ್ರಹವನ್ನು ಖಚಿತಪಡಿಸುವುದು, ಜೈವಿಕ ಪುರಾವೆಗಳ ಅಳಿಸುವಿಕೆಯನ್ನು ತಡೆಯುವುದು, ಅಗತ್ಯ ತಿದ್ದುಪಡಿಗಳನ್ನು ಮಾಡಲು ನಿರ್ಧರಿಸಲಾಗಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಾಕ್ಷಿ ನಾಶಪಡಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಮತ್ತು ಸಂತ್ರಸ್ತರ ರಕ್ಷಣೆಗಾಗಿ ಇದನ್ನು ಪರಿಚಯಿಸಲಾಗಿದೆ. ಇದು ಮಾತ್ರವಲ್ಲದೆ, ಯೋಗಿ ಸರ್ಕಾರವು ಉತ್ತರ ಪ್ರದೇಶದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಹಾನಿ ಮರುಪಡೆಯುವಿಕೆ ತಿದ್ದುಪಡಿ ಮಸೂದೆ 2022 ಅನ್ನು ಸಹ ಅಂಗೀಕರಿಸಿದೆ.

ಮದರಸಾ ಆಯ್ತು ಈಗ ವಕ್ಫ್ ಬೋರ್ಡ್ ಆಸ್ತಿಗಳ ಸಮೀಕ್ಷೆ ನಡೆಸಲು ಆದೇಶ ಹೊರಡಿಸಿದ ಸಿಎಂ ಯೋಗಿ!

ಯುಪಿಯಲ್ಲಿ ಮದರಸಾಗಳ ನಂತರ, ರಾಜ್ಯದ ಯೋಗಿ ಸರ್ಕಾರವು ವಕ್ಫ್ ಮಂಡಳಿಯ ಆಸ್ತಿಗಳ ಸಮೀಕ್ಷೆಯನ್ನು ಸಹ ನಡೆಸಲಿದೆ. ಒಂದು ತಿಂಗಳೊಳಗೆ ಸಮೀಕ್ಷೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚಿಸಿದ್ದಾರೆ. ಇದೇ ವೇಳೆ ವಕ್ಫ್ ಮಂಡಳಿಯ ಆಸ್ತಿಗಳನ್ನು ಕಂದಾಯ ದಾಖಲೆಗಳಲ್ಲಿ ದಾಖಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ರಾಜ್ಯಾದ್ಯಂತ 75 ಜಿಲ್ಲೆಗಳಲ್ಲಿರುವ ಎಲ್ಲ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ದಾಖಲಿಸಬೇಕು ಎಂದಿದ್ದಾರೆ.

Post a Comment

Previous Post Next Post