Top 5 News Mysuru: ಸಾಂಸ್ಕೃತಿಕ ವೈಭವಕ್ಕೆ ಕ್ಷಣಗಣನೆ, ವಿದ್ಯುತ್ ದೀಪಾಲಂಕಾರ; ಮೈಸೂರಿನ ಟಾಪ್ ನ್ಯೂಸ್​​ಗಳು ಇವತ್ತಿನ ಮೈಸೂರು ದಸರಾ ಕುರಿತ ಪ್ರಮುಖ ಸುದ್ದಿಗಳು ಇಲ್ಲಿವೆ


  ಸಾಂದರ್ಭಿಕ ಚಿತ್ರ

ಮೈಸೂರು ದಸರಾಗೆ (Mysuru Dasara 2022) ಬೆರಳಣಿಕೆ ದಿನಗಳು ಉಳಿದಿವೆ. ಸೆಪ್ಟೆಂಬರ್ 26ರಿಂದ ದಸರಾ ವೈಭವ (Cultural Activities) ಶುರುವಾಗಲಿದ್ದು, ಅಕ್ಟೋಬರ್ 3ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲಾಡಳಿತ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸೆ.26ರಂದು ನಾದಸ್ವರ, ವೀರಭದ್ರ ಕುಣಿತ, ಸೆ.27ರಂದು ಕಂಸಾಳೆ, ಸೆ.28 ಹಾರ್ಮೋನಿಯಂ, ಸೆ.29 ಪೊಲೀಸ್ ಬ್ಯಾಂಡ್, ಸೆ.30 ಭಕ್ತಿ ಸಂಗೀತ, ಅ.1 ಜಾನಪದ ಗಾಯನ, ಅ.2ರಂದು ಜಾನಪದ ಸಂಗೀತ, ಅ.3ರಂದು ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ

ಮೈಸೂರು ನಗರಕ್ಕೆ ವಿದ್ಯುತ್ ದೀಪಾಲಂಕಾ

ವಿಶ್ವವಿಖ್ಯಾತ ದಸರಾ ಹಿನ್ನೆಲೆ ಮೈಸೂರು ನಗರವನ್ನು ವಧುವಿನಂತೆ ಸಿಂಗರಿಸಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳ ದುರಸ್ತಿ ಕಾರ್ಯ ಮತ್ತು ವಿದ್ಯುತ್ ದೀಪಗಳ ಅಳವಡಿಕೆ ಮಾಡಲಾಗುತ್ತಿದೆ. ಮೈಸೂರು ಸಿಟಿ ಕಾರ್ಪೊರೇಷನ್ ಪ್ರವಾಸಿಗರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ 42.5 ಕಿಮೀ ವ್ಯಾಪ್ತಿಯಲ್ಲಿ ವಿದ್ಯುತ್ ದೀಪ ಬೆಳಗಿಸಲು ಸಜ್ಜಾಗಿದೆ. ಆದ್ರೆ ಮುಡಾದಿಂದ ಗ್ರೀನ್ ಸಿಗ್ನಲ್ ಸಿಗಬೇಕಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಣಿಪಾಲ್ ಆಸ್ಪತ್ರೆ ಜಂಕ್ಷನ್‌ನಿಂದ ಕೇಬಲ್ ಹಾಕುವ ಕಾಮಗಾರಿ ಆರಂಭವಾಗಿದೆ. ನಗರದ ವಿವಿಧಡೆ ಕೇಬಲ್ ಹಾಕುವ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯುದ್ದಕ್ಕೂ ಎರಡು ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳಿವೆ. ಇಲ್ಲಿ ಸುಮಾರು 4 ಸಾವಿರಕ್ಕೂ ಎಲ್ಇಡಿ ದೀಪಗಳ ಅಳವಡಿಸುವ ಕಾರ್ಯ ಇದೆ


. ರ. ಇದೆ ಮೈಸೂರು ಅರಮನೆ

3.ಒಂದು ದಿನದ ಆರೋಗ್ಯ ತಪಾಸಣಾ ಶಿಬಿರ

ಇಂದು ಬೆಳಗ್ಗೆ ಜೆಎಲ್​ಬಿ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ 'ಆರೋಗ್ಯ ಕರ್ನಾಟಕ' ಯೋಜನೆ ಅಡಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯ್ತು. ಈ ಆರೋಗ್ಯ ಶಿಬಿರ ಉದ್ಘಾಟಿಸಿದ ಶಾಸಕ ಎಸ್.ಎ.ರಾಮದಾಸ್, ಜಿಲ್ಲೆಯಾದ್ಯಂತ ಈ ಶಿಬಿರದಲ್ಲಿಒಂದು ಸಾವಿರಕ್ಕೂ ಅಧಿಕ ಜನರು ತಪಾಸಣೆ ಮಾಡಿಕೊಳ್ಳುವ ನಿರೀಕ್ಷೆಗಳಿವೆ. ಹೃದಯ, ಗರ್ಭಾವಸ್ಥೆ, ಸ್ತ್ರೀರೋಗ, ಮಕ್ಕಳ, ನೇತ್ರ, ಕ್ಯಾನ್ಸರ್, ದಂತವೈದ್ಯಕೀಯ, ಮನೋವೈದ್ಯಕೀಯ, ಇಎನ್ಟಿ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಯನ್ನು ಇಲ್ಲಿ ನಡೆಸಲಾಗುತ್ತದೆ.

ಇದನ್ನೂ ಓದಿ: Basavaraj Bommai: ಪೇಸಿಎಂ ಪೋಸ್ಟರ್ ಅಂಟಿಸಿ ಸಿಎಂ ಬೊಮ್ಮಾಯಿಗೆ ಅಪಮಾನ; ಸಿಸಿಬಿಗೆ ಪ್ರಕರಣ ವರ್ಗಾವಣೆ ಮಾಡಿ ಆದೇಶ

ಈ ವೇಳೆ ಡಿಎಚ್ಒ ಡಾ.ಕೆ.ಎಚ್. ಪ್ರಸಾದ್, ಆರ್‌ಸಿಒ ಡಾ.ಜಯಂತ್, ಡಿಎಸ್​ಓ ಡಾ.ಮಹದೇವಪ್ರಸಾದ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು. ಏತನ್ಮಧ್ಯೆ ಎಂಸಿಸಿ ಪೌರಕಾರ್ಮಿಕರಿಗೂ ಟೌನ್ ಹಾಲ್​ನಲ್ಲಿ ಆರೋಗ್ಯ ಶಿಬಿರ ನಡೆ


ಸಲಾಯ್ತು.ಆರೋಗ್ಯ ಶಿಬಿರ

4.ಪ್ರವಾಸೋದ್ಯಮ ಸಚಿವರಿಗೆ ದಸರಾಗೆ ಆಹ್ವಾನ

ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (CM Basavaraj Bommai) ಸೇರಿದಂತೆ ವಿವಿಧ ಸಚಿವರನ್ನ ಭೇಟಿಯಾದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ (Minister ST Somashekhar) ನಾಡಹಬ್ಬಕ್ಕೆ ಆಗಮಿಸಿದರು. ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ರವರನ್ನು ಭೇಟಿಯಾದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ದಸರಾಗೆ ಆಹ್ವಾನ ನೀಡಿದರು.

ಇದನ್ನೂ ಓದಿ: BBMP: ಗುತ್ತಿಗೆದಾರರಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಕೊಟ್ರು ಬಿಗ್​ ಶಾಕ್; ಕಾಮಗಾರಿ ಬಗ್ಗೆ ದೂರುಗಳಿದ್ರೆ ಬಿಲ್​ ಪಾವತಿಗೆ ಬ್ರೇಕ್!

ಸೆಪ್ಟೆಂಬರ್ 26-2022 ರಿಂದ ಆರಂಭವಾಗಲಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿ, ಮೈಸೂರು ಪೇಟ ತೊಡಿಸಿ ಆನಂದ್ ಸಿಂಗ್ ಅವರನ್ನು ಸನ್ಮಾನಿಸಲಾಯಿತು. ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಅವರನ್ನು ಸಹ ದಸರಾಗೆ ಆಹ್ವಾ


ನಿಸಲಾಯ್ತು.ಬೆಂಗಳೂರಿಂದ ಮೈಸೂರು ಮೂಲಕ ಕಾರವಾರಕ್ಕೆ ತೆರಳುತ್ತಿದ್ದ ರೈಲು ಸೇವೆಯನ್ನು ವಾರದಲ್ಲಿ 3 ದಿನಕ್ಕೆ ಇಳಿಸಿದ್ದರಿಂದ ಮೈಸೂರಿಗರಿಗೆ ತೊದರೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಮನವಿ ಮಾಡಿಕೊಂಡಾಗ ಕಳೆದ ತಿಂಗಳು ರೈಲು ಸೇವೆಯನ್ನು ಮಂಗಳೂರಿನವರೆಗೂ ವಾರದಲ್ಲಿ 6 ದಿನಕ್ಕೆ ರೈಲ್ವೆ ಸಚಿವ @AshwiniVaishnaw ji ವಿಸ್ತರಿಸಿ ಕೊಟ್ಟಿದ್ದರು.
5.ಕಾರವಾರ ರೈಲು ವಿಸ್ತರಣೆ

ಬೆಂಗಳೂರಿಂದ ಮೈಸೂರು ಮೂಲಕ ಕಾರವಾರಕ್ಕೆ ತೆರಳುತ್ತಿದ್ದ ರೈಲು ಸೇವೆಯನ್ನು ವಾರದಲ್ಲಿ 3 ದಿನಕ್ಕೆ ಇಳಿಸಿದ್ದರಿಂದ ಮೈಸೂರಿಗರಿಗೆ ತೊದರೆಯಾಗಿತ್ತು. ಇದೀಗ ಈ ಸೇವೆ ಮತ್ತೆ ಆರು ದಿನಕ್ಕೆ ವಿಸ್ತರಣೆಯಾಗಿದೆ. ಈ ಹಿನ್ನೆಲೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸಂಸದ ಪ್ರತಾಪ್ ಸಿಂಹ ಟ್ವಿಟರ್ ಮೂಲಕ ಧನ್ಯವಾದ ತಿಳಿಸಿದ್ದಾರೆ.

Post a Comment

Previous Post Next Post