ಮೃತ ಯುವತಿ ರಕ್ಷಿತಾ
ಮಗಳ ಸಾವಿನ ನೋವಿನಲ್ಲೂ ಕಾಫಿನಾಡಿನ ಕುಟುಂಬವೊಂದು ಸಾರ್ಥಕತೆ ಮೆರೆದಿದ್ದಾರೆ. ರಕ್ಷಿತಾಳ ಪೋಷಕರಾದ ಲಕ್ಷ್ಮಿ ಬಾಯಿ, ಶೇಖರ್ ನಾಯ್ಕ್ ಅವರು ಮಗಳ ಅಂಗಾಂಗ ದಾನಕ್ಕೆ ಮುಂದಾಗಿದ್ದಾರೆ
ಚಿಕ್ಕಮಗಳೂರು (ಸೆ.21) : ಮಗಳ ಸಾವಿನ ನೋವಿನಲ್ಲೂ ಕಾಫಿನಾಡಿನ ಕುಟುಂಬವೊಂದು ಸಾರ್ಥಕತೆ ಮೆರೆದಿದ್ದಾರೆ. ಕಾಫಿನಾಡು ಇತಿಹಾಸದ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಲಿದೆ ಈ ಪ್ರಕರಣ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸೋಮನಹಳ್ಳಿ (Somanahalli) ತಾಂಡ್ಯದ ರಕ್ಷಿತಾ (Rakshita) ಎಂಬ ಯುವತಿ. ಚಿಕ್ಕಮಗಳೂರು (Chikkamagaluru) ನಗರದ ಬಸವನಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (Collage) ವ್ಯಾಸಂಗ ಮಾಡ್ತಿದ್ದ ಯುವತಿ, ಮೊನ್ನೆ ಮನೆಗೆ ಹಿಂದಿರುವಾಗ ಬಸ್ಸಿನಿಂದ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು
ಚಿಕಿತ್ಸೆಗೆ ಫಲಿಸದೇ ಕೊನೆಯುಸಿರೆಳೆದ ರಕ್ಷಿ
ಗಾಯಗೊಂಡಿದ್ದ ರಕ್ಷಿತಾಳನ್ನ ಸ್ಥಳೀಯರು, ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಿದ್ರು. ಆದ್ರೆ ತಾನೊಂದು ಬಗೆದರೆ, ದೈವವೊಂದು ಬಗೆದಂತೆ ಅನ್ನೋ ಹಾಗೆ ರಕ್ಷಿತಾಳ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದರಿಂದ ಬದುಕಿಸಲು ಸಾಧ್ಯವೇ ಇಲ್ಲ ಎಂದ್ರು ವೈದ್ಯರು ತಿಳಿಸಿದ್ರು. ಕೊನೆಗೆ ರಕ್ಷಿತಾಳ ಬೇರೆಲ್ಲಾ ಅಂಗಾಂಗಗಳಿಗೆ ಯಾವುದೇ ತೊಂದರೆಯಾಗದ ಹಿನ್ನೆಲೆಯಲ್ಲಿ ಅವುಗಳ ದಾನಕ್ಕೆ ನೀವು ಮುಂದಾಗಬಹುದು ಎಂದು ವೈದ್ಯರು ರಕ್ಷಿತ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ
ಮಗಳ ಅಂಗಾಂಗ ದಾನಕ್ಕೆ ಮುಂದಾದ ಪೋಷ
ಇಂತಹ ದುಃಖದ ಸ್ಥಿತಿಯಲ್ಲೂ ರಕ್ಷಿತಾಳ ಪೋಷಕರಾದ ಲಕ್ಷ್ಮಿ ಬಾಯಿ, ಶೇಖರ್ ನಾಯ್ಕ್ ಮಗಳ ಅಂಗಾಂಗ ದಾನಕ್ಕೆ ಮುಂದಾಗಿ ಆಕೆಯ ಸಾವಿಗೆ ಸಾರ್ಥಕತೆ ಕೊಡಿಸಲು ಮುಂದಾಗಿದ್ದಾರೆ. ಎರಡು ಕಣ್ಣುಗಳು, ಹೃದಯ, ಎರಡು ಕಿಡ್ನಿಗಳು, ಎರಡು ಶ್ವಾಸಕೋಶಗಳು ಸೇರಿ ಒಟ್ಟು ಒಂಭತ್ತು ಮಂದಿಗೆ ರಕ್ಷಿತಾಳ ಅಂಗಾಂಗಗಳನ್ನ ಜೋಡಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿಯೇ ಈಗಾಗಲೇ ಚಿಕ್ಕಮಗಳೂರಿಗೆ ಬೆಂಗಳೂರು, ಚೆನ್ನೈಯಿಂದ ನುರಿತ ವೈದ್ಯರ ತಂಡ ಆಗಮಿಸಿ
ಅಂಗಾಂಗಗಳನ್ನ ರವಾನೆಗೆ ಸಿದ್ಧ
ನಾಳೆ ಬೆಳಗ್ಗೆ 10.30ರಿಂದ 12 ಗಂಟೆಯೊಳಗೆ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಐಸಿಯುನಲ್ಲಿರುವ ರಕ್ಷಿತಾಳ ಅಂಗಾಂಗಳನ್ನ ತೆಗೆಯುವ ಪ್ರಕ್ರಿಯೆ ನಡೆಯಲಿದೆ. ಕೂಡಲೇ ಎರಡು ಹೆಲಿಕ್ಯಾಪ್ಟರ್ ಮೂಲಕ ರಕ್ಷಿತಾಳ ಅಂಗಾಂಗಗಳನ್ನ ರವಾನೆ ಮಾಡಲು ಜಿಲ್ಲಾಡಳಿತ ಸಿದ್ದತೆ ನಡೆಸಿದೆ
ಇದನ್ನೂ ಓದಿ: BBMP: ಗುತ್ತಿಗೆದಾರರಿಗೆ ಬಿಬಿಎಂಪಿ ಮುಖ್ಯ ಆಯುಕ್ತರು ಕೊಟ್ರು ಬಿಗ್ ಶಾಕ್; ಕಾಮಗಾರಿ ಬಗ್ಗೆ ದೂರುಗಳಿದ್ರೆ ಬಿಲ್ ಪಾವತಿಗೆ ಬ್ರೇ
ಬಡತನಲ್ಲಿದ್ದ ತಂದೆ-ತಾಯಿಗೆ ಉಜ್ವಲ ಭವಿಷ್ಯ ಕೊಡಬೇಕು ಅನ್ನೋ ಉದ್ದೇಶ ರಕ್ಷಿತಾಳಾದ್ದಾಗಿತ್ತು, ಆದ್ರೆ ಇದೀಗ ರಕ್ಷಿತಾಳೇ ಇಲ್ಲಾವಾಗುತ್ತಿರೋದು ನಿಜಕ್ಕೂ ದುರಂತವೇ ಸರಿ. ಇಷ್ಟಾದ್ರೂ ಮಗಳ ಸಾವಿನ ದುಃಖದಲ್ಲೂ ಆಕೆಯ ಅಂಗಾಂಗಗಳನ್ನ ದಾನ ಮಾಡಲು ನಿರ್ಧರಿಸಿರುವ ತಂದೆ-ತಾಯಿಗೆ ನಿಜಕ್ಕೂ ಹ್ಯಾಟ್ಸಾಫ್ ಹೇಳಲೇ ಬೇ
ಸಾವಿನಲ್ಲೂ ಸಾರ್ಥಕತೆ ಮೆರೆದ ರಕ್ಷಿ
ಅದೇನೆ ಆಗಲಿ, 9 ಮಂದಿಯ ಜೀವಕ್ಕೆ ಬೆಳಕಾಗಿ ಸಾವಿನಲ್ಲೂ ಸಾರ್ಥಕತೆ ತೋರುತ್ತಿರುವ ರಕ್ಷಿತಾಳ ಈ ಸಮಾಜಕ್ಕೆ ಮಾದರಿಯೇ ಸರಿ. ಈ ಮೂಲಕ ಕಾಫಿನಾಡು ಇದೇ ಮೊದಲಬಾರಿಗೆ ಇಂಥದೊಂದು ಅಪರೂಪದ ಪ್ರಕರಣಕ್ಕೆ ಸಾಕ್ಷಿಯಾಗುತ್ತಿರೋದು ಮತ್ತೊಂದು ವಿ
ಇದನ್ನೂ ಓದಿ: Environmentalist Suicide: ತನ್ನ ಹೋರಾಟಕ್ಕೆ ಸಿಗಲಿಲ್ಲ ನ್ಯಾಯ; ತಾನೇ ಬೆಳೆಸಿದ ಮರಕ್ಕೆ ನೇಣು ಬಿಗಿದುಕೊಂಡ ಪರಿಸರ ಪ್ರೇಮಿ ವೀರಾಚಾ
ನಾಳೆ ವೈದ್ಯರ ಶಸ್ತ್ರ ಚಿಕಿತ್ಸೆಯಿಂದ ಅಂಗಾಂಗ ರ
ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ವೈದ್ಯರ ವಿಶೇಷ ತಂಡ ನಾಳೆ ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮಾಡಿ ಅಂಗಾಂಗ ಗಳನ್ನ ಹೊರತೆಗೆದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಗೆ ರವಾನೆ ಮಾಡಲಿದ್ದಾರೆ.. ವಾನೆರಿ!ಶೇಷ.ತಾಕು.ಕ್!.ತೆದೆ.ಕರು .ತಾ..ಪಾಲ್ ಆಸ್ಪತ್ರೆ ಗೆ ರವಾನೆ ಮಾಡಲಿದ್ದಾರೆ..

Post a Comment