ಪ್ರಾತಿನಿಧಿಕ ಚಿತ್ರ
Mass Shooting:ಇಂದು ಬೆಳಿಗ್ಗೆ ಇಲ್ಕ್ ಮಿಲ್ಸ್ ನಲ್ಲಿರುವ ಎರಡು ಅಂತಸ್ಥಿನ ಮನೆಯಲ್ಲಿ ವಾಸವಾಗಿದ್ದ ಒಂದು ದಂಪತಿ ಮತ್ತು ಅವರ ಮೂವರು ಮಕ್ಕಳು ಗುಂಡಿನ ದಾಳಿಯಲ್ಲಿ ಸತ್ತಿದು ಐವರ ಮೃತದೇಹ ಪತ್ತೆಯಾಗಿದೆ
Mass Shooting: ಹಾಡಹಗಲೇ ಮನೆಗೆ ನುಗ್ಗಿ ಮಾನವೀಯತೆಯೇ ಇಲ್ಲದೆ ಜನರನ್ನು ಗುಂಡಿಕ್ಕಿ ಕೊಲ್ಲುವ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಮೇರಿಕಾದಲ್ಲಿ ಇಂದು ಅರಣ್ಯ ಪ್ರದೇಶದ ನಡುವೆ ಇರುವ ಮನೆಯಲ್ಲಿ ಗುಂಡಿನ ದಾಳಿ ನಡೆದಿದೆ. ಇದೇ ರೀತಿಯ ಘಟನೆಗಳು ಈ ಹಿಂದೆಯೂ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಕಾನೂನು (Law) ಎಷ್ಟೆ ಭದ್ರವಾಗಿದ್ದರೂ ಸಹ ಗುಂಡಿನ ದಾಳಿಗಳು (Gun Attack) ಸಂಭವಿಸುವುದು ಇನ್ನೂ ನಿಂತಿಲ್ಲ. ಅಮೇರಿಕಾದ (America) ಮೇರಿಲ್ಯಾಂಡ್ (Maryland) ಪ್ರದೇಶದ ಮನೆಯೊಂದರ ಮೆಲೆ ಗುಂಡಿನದಾಳಿ ನಡೆದಿದ್ದು ಐದು ಜನರು ಸತ್ತಿರುವು (Death) ತಿಳಿದುಬಂದಿದೆ. ಹಾಗಾದರೆ ಈ ಹತ್ಯೆ ಹೇಗಾಯ್ತು ಮತ್ತು ಯಾಕಾಯ್ತು ಅನ್ನೋ ಕುತೂಹಲ ನಿಮಗಿದ್ರೆ ಇದನ್ನು ಓದಿ
ಗುಂಡಿನ ದಾ
ಅಮೇರಿಕದ ಮೇರಿಲ್ಯಾಂಡ್ ಎಂಬಲ್ಲಿ ಇಂದು ನಡೆದಿರುವ ಗುಂಡಿನದಾಳಿ ಈಗ ಮುನ್ನಲೆಗೆ ಬಂದಿದೆ. ಈ ಘಟನೆ ಜರುಗುವ ಮೊದಲು ಇದೇ ಮನೆಯಿಂದ ವ್ಯಕ್ತಿಯೊಬ್ಬರು 911 ಡಯಲ್ ಮಾಡಿ ಪೊಲೀಸರಿಗೆ ಕರೆ ಮಾಡಿ ದಾಳಿ ನಡೆಯುವ ಕುರಿತು ತಿಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಯಲ್ಲಿ ಐವರು ಪ್ರಾಣ ಬಿಟ್ಟಿದ್ದಾರೆ
ಐವರ ಪ್ರಾಣ ಹಾ
ಇಂದು ಬೆಳಿಗ್ಗೆ ಇಲ್ಕ್ ಮಿಲ್ಸ್ ನಲ್ಲಿರುವ ಎರಡು ಅಂತಸ್ಥಿನ ಮನೆಯಲ್ಲಿ ವಾಸವಾಗಿದ್ದ ಒಂದು ದಂಪತಿ ಮತ್ತು ಅವರ ಮೂವರು ಮಕ್ಕಳು ಗುಂಡಿನ ದಾಳಿಯಲ್ಲಿ ಸತ್ತಿದ್ದು ಐವರ ಮೃತದೇಹ ಪತ್ತೆಯಾಗಿದೆ ಎಂದು ಸೆಸಿಲ್ ಕೌಂಟಿ ಶೆರಿಪ್ ಸ್ಕಾಟ್ ಆಡಮ್ಸ್ ಹೇಳಿದ್ದಾರೆ. ಮೂರು ಮಕ್ಕಳು ಮೂರು ಬೇರೆ ಬೇರೆ ತರಗತಿಯಲ್ಲಿ ಕಲಿಯುತ್ತಿದ್ದು 5,7 ಮತ್ತು 8 ನೇ ತರಗತಿಯಲ್ಲಿ ಓದುತ್ತಿದ್ದರು ಎಂದಿದ್ದಾರೆ. ಅಧಿಕಾರಿಗಳು ಸತ್ತವರ ಗುರುತುಗಳನ್ನು ಬಹಿರಂಗ ಪಡಿಸಿಲ್ಲ. ಆದರೆ ಸುತ್ತ ಮುತ್ತಲಿನ ಜನರಿಗೆ ನೀವು ಸುರಕ್ಷಿತರಾಗಿರಿದ್ದೀರಿ ಭಯ ಪಡುವ ಅವಶ್ಯಕತೆಯಿಲ್ಲ ಎಂದು ಭರವಸೆ ನೀಡಿದ್ದಾ
ಇದನ್ನೂ ಓದಿ:ಸೋನಾಲಿ ಸಾವನ್ನಪ್ಪಿದ ಕರ್ಲೀಸ್ ರೆಸ್ಟೋರೆಂಟ್ ಧ್ವಂಸ ಬೇಡ ಎಂದ ಸುಪ್ರೀಂ
ಘಟನೆ ಸಂಭವಿಸಿದ ಸ್ಥ
ಇದು ಬಾಲ್ಟಿವೋರ್ನ ಈಶಾನ್ಯಕ್ಕೆ ಸುಮಾರು 97 ಕಿ.ಮಿ ಮತ್ತು ಡೆಲವೇರ್ ರಾಜ್ಯದ ರೇಖೆಯ ಪಶ್ಚಿಮಕ್ಕೆ ಸುಮಾರು ಮೈಲಿಗಳಷ್ಟು ದೂರ ಹರಡಿಕೊಂಡಿರುವ ಅರಣ್ಯ ಪ್ರದೇಶಗಳ ನಡುವೆ ಇರುವ ಮನೆಯಾಗಿತ್ತು. ಅಲ್ಲಿ ಸುತ್ತಮುತ್ತಲಿನ ಜನ ಈ ಘಟನೆಯಿಂದ ಭಯಭೀತರಾಗಿದ್ದು ಅಧಿಕಾರಿಗಳಿಗೆ ಪದೆ ಪದೆ ಕರೆ ಮಾಡುತ್ತಿದ್ದಾರೆ ಎಂದು ಆಡಮ್ಸ್ ತಿಳಿಸಿದ್ದಾ
ಇದನ್ನೂ ಓದಿ:ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿ ಬಿಡುಗಡೆ ಮಾಡಿದ ವಿಶ್ವಸಂಸ್ಥೆ: ಭಾರತಕ್ಕೆ ಎಷ್ಟನೇ ಸ್ಥಾ
ಹತ್ಯೆ ಯಾಕಾಗಿರ
ಬೆಳಿಗ್ಗೆ ಒಂಬತ್ತು ಗಂಟೆಗೆ ಕರೆಮಾಡಿ ಗುಂಡಿನ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ತಕ್ಷಣ ಪೊಲೀಸ್ ತಂಡವು ಸ್ಥಳಕ್ಕೆ ತೆರಳಿದಾಗ ಅಲ್ಲಿ ಒಟ್ಟು ಐವರ ಶವ ಪತ್ತೆಯಾಗಿದೆ. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು ಅರೆ ಸ್ವಯಂ ಚಾಲಿತ ಬಂದೂಕು ಬಳಸಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದುವರೆಗೂ ಕೊಲೆಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳೂ ಸಹ ನಿರಾಕರಿಸಿದ್ದಾರಂ
ರಜೆಗಾಗಿ ಮನೆಗೆ ಬಂದಿದ್ದ ಮಕ್ಕ
ಮನೆಯ ವಿವಿಧ ಭಾಗಗಳಲ್ಲಿ ಮೃತದೇಹಗಳು ಬಿದ್ದಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ನೆರೆಮನೆ ವಾಸಿ ಟಾಮ್ ಡ್ರಿಸ್ಕಾಲ್ ಈ ದಂಪತಿ ಮತ್ತು ಇವರ ಮೂರು ಮಕ್ಕಳು ಐದು ವರ್ಷಗಳಿಂದ ಅಲ್ಲೆ ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಅವರ ಮಕ್ಕಳು ಕಲಿಕೆಗಾಗಿ ಹಾಸ್ಟೆಲ್ನಲ್ಲಿ ವಾಸಿಸುತ್ತಿದ್ದರು. ಕ್ರಿಸ್ಮಸ್ ಹಾಗು ಇನ್ನಿತರ ರಜಾ ದಿನಗಳಲ್ಲಿ ಮಾತ್ರ ಅವರು ಮನೆಗೆ ಬರುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಮೃತರಾದ ಮೂವರು ಮಕ್ಕಳಲ್ಲಿ ಇಬ್ಬರು ಹುಡುಗಿಯರು ಮತ್ತು ಒಬ್ಬ ಹುಡುಗ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಳು!ತೆ.ಬಹುದು?ನ?ರೆ.ಳ:!ರೆ.ನಿ:.ಳಿ:. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Post a Comment