ಹನಿಟ್ರ್ಯಾಪ್ ಕೇಸ್‌ನಲ್ಲಿ ಚಿನ್ನದ ವ್ಯಾಪಾರಿ
ಚಿನ್ನದಂಗಡಿ ಮಾಲೀಕ ಹಾಗೂ ಬಿಜೆಪಿ ಮುಖಂಡನ ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. FIRನಲ್ಲಿ ಉಲ್ಲೇಖಿಸಿದ ಅಂಶವೇ ಬೇರೆ, ಅಸಲಿಗೆ ನಡೆದಿದ್ದೆ ಬೇರೆ ಆಗಿದೆಯಂತೆ. ಹನಿಟ್ರ್ಯಾಪ್ ಪ್ರಕರಣಕ್ಕೆ ಆಡಿಯೋ, ವಿಡಿಯೋ ಹೊಸಟ್ವಿಸ್ಟ್ ನೀಡಿದೆ.
ಮಂಡ್ಯ: ದಕ್ಷಿಣ ಕನ್ನಡ (Dakshina Kannada) ಮೂಲದ ಚಿನ್ನದ ವ್ಯಾಪಾರಿಯೂ (Gold Trader) ಆಗಿರುವ ಬಿಜೆಪಿ ಮುಖಂಡರೊಬ್ಬರನ್ನು (BJP Leader) ಹನಿಟ್ರ್ಯಾಪ್ ಕೇಸ್‌ನಲ್ಲಿ (Honeytrap Case) ಸಿಲುಕಿಸಲಾಗಿತ್ತು ಅಂತ ಹೇಳಲಾಗಿತ್ತು. ಯುವತಿ (Girl) ಹಾಗೂ ಕೆಲವು ದುಷ್ಕರ್ಮಿಗಳು ಚಿನ್ನದ ಉದ್ಯಮಿಯನ್ನು ಹನಿಟ್ರ್ಯಾಪ್‌ನಲ್ಲಿ ಸಿಲುಕಿಸಿ, ಬೆದರಿಸಿದ್ದಾರೆ. ಅವರಿಂದ 50 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿದ್ದಾರೆ ಎನ್ನಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಶೆಟ್ಟಿ ಎಂಬುವರು ಮಂಡ್ಯ ನಗರದಲ್ಲಿ (Mandya City) ಶ್ರೀನಿಧಿ ಗೋಲ್ಡ್ (Srinidhi Gold) ಮಾಲೀಕರಾಗಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಇವರು ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ನಾಲ್ವರು ಮೈಸೂರಿಗೆ (Mysuru) ಡ್ರಾಪ್ ಕೊಡುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದರು. ನಂತರ ಚಿನ್ನದ ಪರೀಕ್ಷೆಗೆಂದು ಅಪಹರಿಸಿದ್ದಾರೆ (Kidnap). ಜಗನ್ನಾಥ ಶೆಟ್ಟಿ ಅವರನ್ನು ಅಪಹರಿಸಿ ಲಾಡ್ಜ್ ರೂಮ್ಗೆ ಕರೆದೊಯ್ಯುತ್ತಿದ್ದಾರೆ. ರೂಮ್ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 50 ಲಕ್ಷ ಪಡೆದಿದ್ದಾರೆ ಅಂತ ಖುದ್ದು ಜಗನ್ನಾಥ್ ಶೆಟ್ಟಿಯವರೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಈ ಕೇಸ್‌ನ ತನಿಖೆ ಮುಂದುವರೆದಿದ್ದು, ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಚಿನ್ನದಂಗಡಿ ಮಾಲೀಕನ ಹನಿಟ್ರ್ಯಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್
ಚಿನ್ನದಂಗಡಿ ಮಾಲೀಕ ಹಾಗೂ ಬಿಜೆಪಿ ಮುಖಂಡನ ಹನಿಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. FIRನಲ್ಲಿ ಉಲ್ಲೇಖಿಸಿದ ಅಂಶವೇ ಬೇರೆ, ಅಸಲಿಗೆ ನಡೆದಿದ್ದೆ ಬೇರೆ ಆಗಿದೆಯಂತೆ. ಹನಿಟ್ರ್ಯಾಪ್ ಪ್ರಕರಣಕ್ಕೆ ಆಡಿಯೋ, ವಿಡಿಯೋ ಹೊಸಟ್ವಿಸ್ಟ್ ನೀಡಿದೆ ಯುವತಿಯನ್ನು ಲಾಡ್ಜ್‌ಗೆ ಕರೆದಿದ್ದ ಉದ್ಯಮಿ
ತಾನು ಲೆಕ್ಚರರ್ ಎಂದು ವಿದ್ಯಾರ್ಥಿನಿಯನ್ನ ಪುಸಲಾಯಿಸಿದ್ದ ಚಿನ್ನದ ವ್ಯಾಪಾರಿ. ವಿದ್ಯಾರ್ಥಿನಿಯನ್ನ ಮೈಸೂರಿನ ಲಾಡ್ಜ್‌ಗೆ ಕರೆಸಿಕೊಂಡಿದ್ದ, ಈ ವೇಳೆ ಅಲರ್ಟ್ ಆದ ವಿದ್ಯಾರ್ಥಿನಿ ಕಡೆಯ ಟೀಮ್ ತಕ್ಷಣ ಮೈಸೂರಿನ ದರ್ಶನ್ ಲಾಡ್ಜ್‌ಗೆ ನುಗ್ಗಿದ್ದಾರೆ. ಒಳ ನುಗ್ಗುತ್ತಿದ್ದಂತೆ ಗ್ಯಾಂಗ್ ವಿಡಿಯೋ ಚಿತ್ರೀಕರಣ ಮಾಡಿದ್ದು, ಯುವತಿ, ಜಗನ್ನಾಥ ಶೆಟ್ಟಿಗೆ ಮನಬಂದಂತೆ ಥಳಿಸಿದ್ದಾರೆ.
ಇದನ್ನೂ ಓದಿ: PFI ಕಾರ್ಯಕರ್ತರಿಂದ NIA ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ; ಭಜರಂಗದಳ ಖಂಡನೆ
ಹನಿಟ್ರ್ಯಾಪ್ ಮಾಡಿದ್ದಾರೆ ಅಂತ ಆರೋಪಿಸಿದ್ದ ಉದ್ಯಮಿ
ಇನ್ನು ಜಗನ್ನಾಥ್ ಶೆಟ್ಟಿ ತನ್ನನ್ನು ಹನಿಟ್ರ್ಯಾಪ್ ಮಾಡಿದ್ದಾರೆ ಅಂತ ಆರೋಪಿಸಿದ್ದರು. ಈ ಬಗ್ಗೆ ಆಗಸ್ಟ್ 19ರಂದು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
50 ಲಕ್ಷ ವಸೂಲಿ ಮಾಡಿದ್ದಾರೆ ಅಂತ ದೂರು
ತನ್ನನ್ನು ಥಳಿಸಿ, ರೂಮ್ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ ಅಂತ ಜಗನ್ನಾಥ ಶೆಟ್ಟಿ ದೂರಿನಲ್ಲಿ ತಿಳಿಸಿದ್ದರು. ಅಂತಿಮವಾಗಿ ತಾನು ಹನಿಟ್ರ್ಯಾಪ್ ಗ್ಯಾಂಗ್‌ಗೆ 50 ಲಕ್ಷ ರೂಪಾಯಿ ನೀಡಿ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದೆ. ಆದರೆ ಇಷ್ಟಕ್ಕೆ ಸುಮ್ಮನಾದ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಇದರಿಂದ ಬೇಸತ್ತು ದೂರು ನೀಡುತ್ತಿದ್ದೇನೆ ಎಂದಿದ್ದರು.
ಇದನ್ನೂ ಓದಿ: Praveeen Nettaru Murder: ಎನ್ಐಎ ತನಿಖೆಯಲ್ಲಿ ಪ್ರವೀಣ್ ಹತ್ಯೆಯ ಉದ್ದೇಶ ಬಹಿರಂಗ
ತನಿಖೆ ಚುರುಕುಗೊಳಿಸಿರುವ ಮಂಡ್ಯ ಪೊಲೀಸರು
ಸದ್ಯ ಜಗನ್ನಾಥ ಶೆಟ್ಟಿ ನಡೆ ಬಗ್ಗೆ ಹಲವು ಅನುಮಾನ ಶುರುವಾಗಿದೆ. ಇದೇ ಕೇಸ್‌ಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದು, ಮಂಡ್ಯ ಪಶ್ಚಿಮ ವಿಭಾಗ ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಇದೀಗ ತನಿಖೆ ನಡೆಯುತ್ತಿರುವಾಗಲೇ ಆಡಿಯೋ ಹಾಗೂ ವೀಡಿಯೋ ದೊರೆತಿದ್ದು, ಪ್ರಕರಣಕ್ಕೆ ತಿರುವು ಸಿಕ್ಕಿದೆ.


Post a Comment