Big News: ಪ್ರಧಾನಿಯಾಗ್ತಾರಾ ಕೆಸಿಆರ್? ಹೆಚ್​ಡಿಕೆ ನೀಡುವರೇ ಬೆಂಬಲ?


  ಕೆ ಚಂದ್ರಶೇಖರ್ ರಾವ್ ಮತ್ತು ಹೆಚ್ ಡಿ ಕುಮಾರಸ್ವಾಮಿ

ಸದ್ಯ ಹುಟ್ಟಿಕೊಂಡಿರುವ ಅನುಮಾನಗಳು ಕೆ.ಚಂದ್ರಶೇಖರ್ ರಾವ್ ಹೊಸ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುತ್ತಾರೆಯೇ ಅಥವಾ ಟಿಆರ್ಎಸ್ ಅನ್ನು ರಾಷ್ಟ್ರೀಯ ಪಕ್ಷವಾಗಿ ಪರಿವರ್ತಿಸುತ್ತಾರೆಯೇ ಎಂಬ ಪ್ರಶ್ನೆಗಳು ಸಹ ತಲೆಎತ್ತಿವೆ

 ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (Telangana CM K Chandrashekar Rao) ರಾಷ್ಟ್ರೀಯ ರಾಜಕಾರಣ ಪ್ರವೇಶಿಸುವ ಸುಳಿವು ನೀಡಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಯೋಜನೆ ರೂಪಿಸುತ್ತಿರುವ ಅವರು ದಸರಾ ಹಬ್ಬದ (Dasara Festival) ವೇಳೆಗೆ ಈಕುಇರತು ಮಹತ್ವದ ಘೋಷಣೆಯನ್ನು ಮಾಡಲಿದ್ದಾರೆ ಎಂದು ವರದಿಯಾಗಿದೆ.  ಅಲ್ಲದೇ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಮೂಲಕ 2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಿ (PM Candidate) ಸ್ಪರ್ಧಿಸುವ ಬಲವಾದ ಇಚ್ಛೆಯನ್ನೂ ಅವರು ಹೊಂದಿದ್ದಾರೆ ಎಂದು ಹೇಳಲಾಗಿದೆ

ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಭಾನುವಾರ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಸ್ಪಷ್ಟನೆ ನೀಡುವ ಸಾಧ್ಯತೆ ಇದೆ. ಅಲ್ಲದೇ ಅಕ್ಟೋಬರ್ 5 ರಂದು ದಸರಾ ಸಂದರ್ಭದಲ್ಲಿರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿ

ಹೊಸ ಪಕ್ಷ ಅಥವಾ ಈಗಿನ ಪಕ್ಷವೇ ಮಾರ್ಪಾಟು

ಆದರೆ ಸದ್ಯ ಹುಟ್ಟಿಕೊಂಡಿರುವ ಅನುಮಾನಗಳು ಕೆ.ಚಂದ್ರಶೇಖರ್ ರಾವ್ ಹೊಸ ರಾಷ್ಟ್ರೀಯ ಪಕ್ಷವನ್ನು ಪ್ರಾರಂಭಿಸುತ್ತಾರೆಯೇ ಅಥವಾ ಟಿಆರ್ಎಸ್ ಅನ್ನು ರಾಷ್ಟ್ರೀಯ ಪಕ್ಷವಾಗಿ ಪರಿವರ್ತಿಸುತ್ತಾರೆಯೇ ಎಂಬ ಪ್ರಶ್ನೆಗಳು ಸಹ ತಲೆಎತ್ತಿವೆ. ಸದ್ಯ ಈಗ ಇರುವ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷವನ್ನೇ ಭಾರತೀಯ ರಾಷ್ಟ್ರ ಸಮಿತಿ ಎಂದು ಬದಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ

ಇದೇ ಮೊದಲಲ್ಲ ರಾಷ್ಟ್ರ ರಾಜಕಾರಣದ ಸುಳಿ

ಅಂದಹಾಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ರಾಷ್ಟ್ರೀಯ ಪಕ್ಷವನ್ನು ಆರಂಭಿಸುವ ಬಗ್ಗೆ ಸುಳಿವು ನೀಡಿರುವುದು ಇದೇ ಮೊದಲಲ್ಲ. ಏಪ್ರಿಲ್ 27 ರಂದು ನಡೆದ ಟಿಆರ್‌ಎಸ್ ಸಭೆಯೊಂದರಲ್ಲಿ ಅವರು ಈಕುರಿತು ಮೊದಲ ಸುಳಿವು ನೀಡಿದ್ದರು

ವಿವಿಧ ವರ್ಗಗಳ ಜೊತೆ ಸಭೆ, ನಂತರವೇ ನಿರ್ಧಾ

ಮುಂದಿನ ದಿನಗಳಲ್ಲಿ ದೇಶದ ಕೆಲವು ಬುದ್ಧಿಜೀವಿಗಳು, ಚಿಂತಕರು, ಯುವ ಸಂಘಗಳು ಮತ್ತು ಮಹಿಳಾ ಸಂಘಟನೆಗಳೊಂದಿಗೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿ

ಈ ಸಭೆಗಳ ಪ್ರತಿಕ್ರಿಯೆಯ ಆಧಾರದ ಮೇಲೆ, ಕೆಸಿಆರ್ ರಾಷ್ಟ್ರ ರಾಜಕೀಯಕ್ಕೆ ಹೇಗೆ ಧುಮುಕಬೇಕು? ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮ ಅಸ್ತಿತ್ವವನ್ನು ಬಲಪಡಿಸಬೇಕು ಎಂಬುದರ ಕುರಿತು ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿ

ಇದನ್ನೂ ಓದಿ: Tiger Cub: ಬೆಕ್ಕಿಗೆ ಬಣ್ಣ ಹಚ್ಚಿ ಹುಲಿಮರಿ ಎಂದು ಮಾರಾ

25 ರಾಜ್ಯಗಳ ರೈತ ಪ್ರತಿನಿಧಿಗಳು ಇತ್ತೀಚೆಗೆ ತೆಲಂಗಾಣಕ್ಕೆ ಭೇಟಿ ನೀಡಿ  ಬಿಜೆಪಿಯನ್ನು ಸೋಲಿಸಲು ಎಲ್ಲಾ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಾಯಕತ್ವ ವಹಿಸುವಂತೆ ಕೆ. ಚಂದ್ರಶೇಖರ್ ರಾವ್ ಬಳಿ ಕೇಳಿಕೊಂಡಿದ್ದರು. ಆನಂತರವಷ್ಟೇ ಚಂದ್ರಶೇಖರ್ ರಾವ್ ರಾಷ್ಟ್ರ ರಾಜಕೀಯದ ಕುರಿತು ಇನ್ನಷ್ಟು ತ್ವರಿತ ನಿರ್ಧಾರ ಕೈಗೊಳ್ಳಲು ಯೋಚಿಸಿದ್ದಾರೆ ಎನ್ನಲಾಗಿ

ಇದನ್ನೂ ಓದಿ: Tyre Secrete: ವಾಹನ ಟೈರ್ಗಳ ಕಪ್ಪು ಬಣ್ಣದ ರಹಸ್ಯ! ಏಕೆ ಬೇರೆ ಬಣ್ಣದಲ್ಲಿರುವುದಿಲ್ಲ

ಯಾರೆಲ್ಲ ಸ್ಪರ್ಧಿಗಳು? ಯಾರೆಲ್ಲ ಬೆಂಬಲಿ

ಸದ್ಯಕ್ಕೆ ಕಾಂಗ್ರೆಸ್ ಪಕ್ಷವು ಕೆ.ಚಂದ್ರಶೇಖರ್ ರಾವ್ ಅವರ ಜೊತೆ ಕೈಜೋಡಿಸಲು ಉತ್ಸುಕವಾಗಿಲ್ಲ. ಮತ್ತೊಂದೆಡೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಹ ರಾಷ್ಟ್ರ ರಾಜಕಾರಣದ ಮೇಲೆ ಕಣ್ಣಿಟ್ಟಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಯೇ ಎಂದು ವ್ಯಾಖ್ಯಾನಿಸಲಾಗಿದೆ. ಈ ಎಲ್ಲರೂ ಕೆ. ಚಂದ್ರಶೇಖರ್ ರಾವ್ ಅವರಿಗೆ ಬೆಂಬಲ ನೀಡುವರೋ ಅಥವಾ ಸ್ಪರ್ಧೆ ನೀಡುವರೋ ಕಾದುನೋಡಬೇಕಿದೆ. ಗರು??ದೆ.ಟ!ವೆ.ದೆ.ರ.ವು.?ವೆ...ರ್ಧೆ ನೀಡುವರೋ ಕಾದುನೋಡಬೇಕಿದೆ.

Post a Comment

Previous Post Next Post