Varamahalakshmi Recipe: ವರಮಹಾಲಕ್ಷ್ಮೀ ಹಬ್ಬಕ್ಕೆ ಮಾಡಲೇಬೇಕಾದ 2 ತಿಂಡಿ! ಮಿಸ್ ಮಾಡ್ಬೇಡಿ


  ವರಮಹಾಲಕ್ಷ್ಮೀ ಹಬ್ಬ ಅಂದ್ರೆ ಹೆಣ್ಮಕ್ಕಳಿಗೆ ವಿಶೇಷ ಹಬ್ಬ. ಹಬ್ಬದ ದಿನ ಹೆಂಗಳೆಯರೆಲ್ಲಾ ಸೇರಿ ವಿಶೇಷವಾದ ಖಾದ್ಯ ತಯಾರಿಸ್ತಾರೆ. ಆದರೆ ಬ್ಯುಸಿ ಲೈಫ್ನಲ್ಲಿ ತಿಂಡಿ ಮಾಡೋದಂದ್ರೆ ಕಷ್ಟ. ಇಲ್ಲಿ ನಿಮಗೆ ಸಿಂಪಲ್ ಆಗಿ ಮಾಡಬಹುದಾದ 2 ಸಿಂಪಲ್ ರೆಸಿಪಿ ಹೇಳ್ತೀವಿ

 ವರಮಹಾಲಕ್ಷ್ಮೀ ಹಬ್ಬ ಅಂದ್ರೆ ಹೆಣ್ಮಕ್ಕಳಿಗೆ ವಿಶೇಷ ಹಬ್ಬ. ವರಮಹಾಲಕ್ಷ್ಮೀ (Varamahalakshmi) ಹಬ್ಬದಲ್ಲಿ ವಿಶೇಷ ತಿಂಡಿ ತಿನಿಸು ಇರಲೇಬೇಕು. ವರಮಹಾಲಕ್ಷ್ಮೀ (Varamahalakshmi Festival) ಹಬ್ಬದ ದಿನ ಹೆಂಗಳೆಯರೆಲ್ಲಾ ಸೇರಿ ವಿಶೇಷವಾದ ಖಾದ್ಯ (Recipe) ತಯಾರಿಸ್ತಾರೆ. ಅದರಲ್ಲೂ ವರವ ಕೊಡೋ ಮಹಾಲಕ್ಷ್ಮೀ ದೇವಿಗೆ (Goddess) ಪ್ರಿಯವಾದ ತಿಂಡಿ-ತಿನಿಸು ಮಾಡೋದ್ರಲ್ಲಿ ಹೆಂಗಳೆಯರು (Ladies) ಬ್ಯುಸಿ ಇರ್ತಾರೆ. ವಿವಿಧ ತಿಂಡಿ-ತಿನಿಸು ರೆಡಿ ಮಾಡಿ ಹೊಸ ಬಟ್ಟೆ ಉಟ್ಟು ಪೂಜೆ ಮಾಡಿ ಎಲ್ಲಾ ಖಾದ್ಯಗಳನ್ನು ನೈವೇದ್ಯವಾಗಿ ಇಟ್ಟು ಸಂಭ್ರಮಿಸ್ತಾರೆ. ಆದರೆ ಬ್ಯುಸಿ ಲೈಫ್ನಲ್ಲಿ ತಿಂಡಿ ಮಾಡೋದಂದ್ರೆ ಕಷ್ಟ. ಇಲ್ಲಿ ನಿಮಗೆ ಸಿಂಪಲ್ ಆಗಿ ಮಾಡಬಹುದಾದ 2 ರೆಸಿಪಿ ಹೇಳ್ತೀವಿ

ವರಮಹಾಲಕ್ಷ್ಮೀ ಹಬ್ಬ ಅಂದ್ರೆ ಮನೆಗೆ ಲಕ್ಷ್ಮೀಯನ್ನು ಬರಮಾಡಿಕೊಳ್ಳೋ ಹಬ್ಬ. ಹಾಗಾಗಿ ಇದು ಹೆಣ್ಣುಮಕ್ಕಳಿಗೆ ವಿಶೇಷ. ಆದರೆ ಈ ಹಬ್ಬದಂದು ಏನು ತಿಂಡಿ ಮಾಡೋದು ಅಂತಾ ಯೋಚನೆನಾ? ಸುಲಭದಲ್ಲಿ ಮಾಡೋ 2 ತಿಂಡಿ ಇಲ್ಲಿ

ಚಕ್ಕುಲಿ ಮಾಡಲು ಬೇಕಾದ ಸಾಮಾಗ್ರಿಗ

5 ಕಪ್ ಅಕ್ಕಿ ಹಿಟ್ಟುಮುಕ್ಕಾಲು ಕಪ್ ಉದ್ದಿನ ಬೇಳೆ

2 ಚಮಚ ಎ

2 ಚಮಚ ಬಿಳಿ ಎಳ್ಳು

ಸ್ವಲ್ಪ

ಕಾಲು ಚಮಚ ಕಾಳುಮೆಣಸಿನ ಪುಡಿ

ಕಾಲು ಚಮಚ ಖಾರದ 

ಜೀರಿಗೆ ಅರ್ಧ 

ರುಚಿಗೆ ತಕ್ಕಷ್ಟು ಉಪ್ಪು

ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ಸುಲಭವಾಗಿ ಮಾಡಿ ರುಚಿಕರ ಕಾಯಿ 

ಚಕ್ಕುಲಿ ಮಾಡುವ ವಿ

ಉದ್ದಿನ ಬೇಳೆ ಚೆನ್ನಾಗಿ ಕಂದು ಬಣ್ಣ ಬರೋವರೆಗೆ ಹುರಿಯಬೇಕು. ನಂತರ ಕುಕ್ಕರ್ಗೆ 2 ಕಪ್ ನೀರು ಹಾಕಿ ಉದ್ದಿನ ಬೇಳೆಯನ್ನು ಬೇಯಿಸಬೇಕು. 5 ವಿಷಲ್ ಆದ ಬಳಿಕ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು


. ಧಾನಹೋಳಿಗೆಚಮಚಪುಡಿ ತುಪ್ಪಣ್ಣೆಳುದೆ.ಕ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಬೇಕು.ಚಕ್ಕುಲಿ ಮಾಡುವ ವಿಧಾನ

ಮತ್ತೊಂದೆಡೆ ಬಾಣಲೆಗೆ ಅಕ್ಕಿ ಹಿಟ್ಟು, ಜೀರಿಗೆ, ಬಿಳಿ ಎಳ್ಳು, ಸ್ವಲ್ಪ ಖಾರದ ಪುಡಿ, ಎಣ್ಣೆ, ತುಪ್ಪ, ಉಪ್ಪನ್ನು ಹಾಕಿ ಸಣ್ಣಗೆ ಉರಿಯಲ್ಲಿಟ್ಟು 4 ನಿಮಿಷ ಹುರಿಯಬೇಕು. ಆರಿದ ಬಳಿಕ ಬೌಲ್​​ಗೆ ರುಬ್ಬಿದ ಉದ್ದಿನ ಬೇಳೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಚಪಾತಿಗಿಂತಲೂ ಗಟ್ಟಿ ಹದಕ್ಕೆ ಬಂದಾಗ ಹಿಟ್ಟನ್ನು ಚಕ್ಕುಲಿ ಮಿಷನ್​ಗೆ ಹಾಕಿ. ನಂತರ ಮಧ್ಯಮ ಉರಿಯಲ್ಲಿ ಕಾದ ಎಣ್ಣೆಗೆ ಬಿಡಿ. ಚಿನ್ನದ ಬಣ್ಣಕ್ಕೆ ತಿರುಗಿದಾಗ ಚಕ್ಕುಲಿಯನ್ನು ಉಲ್ಟಾ ಹಾಕಿ. ಅಲ್ಲಿಗೆ ಚಕ್ಕುಲಿ ರೆಡಿ.

ಕೋಡುಬಳೆ ಮಾಡಲು ಬೇಕಾದ ಸಾಮಾಗ್ರಿಗಳು

1 ಕಪ್ ಅಕ್ಕಿ ಹಿಟ್ಟು

ಕಾಲು ಕಪ್ ಮೈದಾ ಹಿಟ್ಟು

ಕಾಲು ಕಪ್ ಹುರಿಗಡಲೆ

ಕಾಲು ಕಪ್ ಕೊಬ್ಬರಿ

1 ಚಮಚ ಖಾರದ ಪುಡಿ

ಅರ್ಧ ಚಮಚ ಉಪ್ಪು

ಸ್ವಲ್ಪ ಇಂಗು

10 ಎಸಳು ಕರಿಬೇವು

ಕಾಲು ಚಮಚ ಓಂಕಾಳು

3 ಚಮಚ ಎಣ್ಣೆ

ಸ್ವಲ್ಪ ನೀರು

ಇದನ್ನೂ ಓದಿ: ಧಾಂ ಧೂಂ ಎಂದು ವರಮಹಾಲಕ್ಷ್ಮೀ ಹಬ್ಬದ ಆಚರಣೆಗೆ ಬೆಂಗಳೂರು ರೆಡಿ!

ಕೋಡುಬಳೆ ಮಾಡುವ ವಿಧಾನ

ಅಕ್ಕಿಹಿಟ್ಟು ಮತ್ತು ಮೈದಾಹಿಟ್ಟನ್ನು ಬಾಣಲೆಗೆ ಹಾಕಿ 1 ನಿಮಿಷಗಳ ಕಾಲ ಹುರಿಯಬೇಕು.

ಮತ್ತೊಂದೆಡೆ ಹುರಿಗಡಲೆಯನ್ನು ಮಿಕ್ಸಿಗೆ ಹಾಕಿ ನುಣ್ಣನೆ ರುಬ್ಬಬೇಕು.

ಈಗ ಅದೇ ಮಿಕ್ಸಿಗೆ ಕೊಬ್ಬರಿ, ಖಾರದ ಪುಡಿ, ಉಪ್ಪು, ಇಂಗು, ಕರಿಬೇವು ಹಾಕಿ ಮತ್ತೊಮ್ಮೆ ರುಬ್ಬಬೇಕು.

ಕೋಡುಬಳೆ ಮಾಡುವ

ಈಗ ಅಕ್ಕಿಹಿಟ್ಟಿನ ಬಾಣಲೆಗೆ ನೀವು ರುಬ್ಬಿದ ಸಾಮಾಗ್ರಿ, ಓಂಕಾಳು ಹಾಕಿ ಮಿಕ್ಸ್​ ಮಾಡಬೇಕು.

ಚೆನ್ನಾಗಿ ಮಿಕ್ಸ್​ ಆದ ಬಳಿಕ ಅದಕ್ಕೆ ಎರಡರಿಂದ ಮೂರು ಚಮಚದಷ್ಟು ಬಿಸಿ ಬಿಸಿ ಎಣ್ಣೆ ಹಾಕ್ಬೇಕು. ನಂತರ ಮತ್ತೊಮ್ಮೆ ಚೆನ್ನಾಗಿ ಡ್ರೈಯಾಗಿ ಕಲಸಿ ಬಳಿಕ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಕಲಸಬೇಕು.

ಚಪಾತಿ ಹಿಟ್ಟಿಗಿಂತಲೂ ಮೆದುವಾಗಿ ಬಂದ ಬಳಿಕ ಕೋಡುಬಳೆಯನ್ನು ಮಾಡಿ ಚೆನ್ನಾಗಿ ಕಾದ ಎಣ್ಣೆಗೆ ಬಿಡಬೇಕು. ಅಲ್ಲಿಗೆ ಕೋಡುಬಳೆ ಸವಿಯೋಕೆ ರೆಡಿ.

Post a Comment

Previous Post Next Post