Snake: ನನಗೂ ಒಂದು ಟಿಕೆಟ್ ಕೊಡಿ, ಕೆಎಸ್ಆರ್‌ಟಿಸಿ ಬಸ್ ಏರಿದ ಬುಸ್ ಬುಸ್ ನಾಗಪ್ಪ! ಮುಂದೇನಾಯ್ತು ವಿಡಿಯೋ ನೋಡಿ


 ಹಾವು ಅಂದ್ರೆ ಮೈಯಲ್ಲೇ ಅದೇನೋ ಒಂಥರಾ ಫೀಲಿಂಗ್. ಅಂತದ್ರಲ್ಲಿ ಜನ ಸಂಚರಿಸೋ ಬಸ್​ನಲ್ಲೇ ಹಾವು ಪ್ರತ್ಯಕ್ಷವಾದರೆ ಪರಿಸ್ಥಿತಿ ಹೇಗಿರಬೇಡಿ ಯೋಚಿಸಿ. ಚಿಕ್ಕಬಳ್ಳಾಪುರದಲ್ಲಿ ಇಂತಹದೊಂದು ಘಟನೆ ನಡೆದಿದೆ.

ಹಾವು (Snake) ಅಂದ್ರೆ ಮೈಯಲ್ಲಿ ಅದೇನೋ ಒಂಥರಾ ಫೀಲಿಂಗ್. ಹಾವು ಕಂಡ್ರೆ ಸಾಕು ಎಲ್ಲರೂ ಎದ್ನೋ ಬಿದ್ನೋ ಅಂತಾ ಓಡ್ತಾರೆ. ಹಾವು ಪ್ರತ್ಯಕ್ಷವಾದ ಜಾಗದಲ್ಲೂ ಜನ ಓಡಾಡೋಕೆ ಹಿಂದೆ ಮುಂದೆ ನೋಡ್ತಾರೆ. ಹಾವಾ ಅಂತಾ ಜನ ಭಯ (Scared) ಬೀಳ್ತಾರೆ. ಅಂತದ್ರಲ್ಲಿ ಜನ ಸಂಚರಿಸೋ ಬಸ್​ನಲ್ಲೇ (Bus) ಹಾವು ಪ್ರತ್ಯಕ್ಷವಾದರೆ ಪರಿಸ್ಥಿತಿ ಹೇಗಿರಬೇಡಿ ಯೋಚಿಸಿ.. ಅಬ್ಬಬ್ಬಾ ಯೋಚಿಸುವಾಗಲೇ ಮೈಯೆಲ್ಲಾ ಜುಂ ಅನ್ನುತ್ತೆ. ಚಿಕ್ಕಬಳ್ಳಾಪುರದಲ್ಲಿ (Chikkaballapura) ಇಂತಹದೊಂದು ಘಟನೆ ನಡೆದಿದೆ. ಬುಸ್ ಬುಸ್​ ನಾಗಪ್ಪ (Cobra) ಸರ್ಕಾರಿ ಬಸ್​ ಏರಿದ್ದಾನೆ. ಪಾಪ ಅದೆಲ್ಲಿಗೆ ಪ್ರಯಾಣ ಮಾಡ್ಬೇಕಿತ್ತೋ ಗೊತ್ತಿಲ್ಲ. ಬಸ್​ನ ಇಂಜಿನ್ ಏರಿ ಕೂತಿದ್ದಾನೆ. ಮುಂದೇನಾಯ್ತು ನೋಡಿ.

ಹಾವುಗಳು ನಿರ್ಜನ ಪ್ರದೇಶದಲ್ಲಿ ಪತ್ತೆಯಾಗೋದನ್ನು ನೋಡಿದ್ದೇವೆ. ಆದರೆ ಕಾಡು ನಾಶದಿಂದ ಅಥವಾ ಆಹಾರ ಅರಸಿ ಹಾವುಗಳು ಇತ್ತೀಚೆಗೆ ಊರಿಗೆ ಲಗ್ಗೆ ಇಡ್ತಿವೆ. ಮಾತ್ರವಲ್ಲ ಅದಕ್ಕೂ ಸಿಟಿ ನೋಡ್ಬೇಕು ಅನ್ನೋ ಆಸೆಯೋ ಗೊತ್ತಿಲ್ಲ. ಈಗಿನ ದಿನಗಳಲ್ಲಿ ಸಿಟಿಯಲ್ಲೂ ಹೆಚ್ಚಾಗಿ ಹಾವುಗಳು ಕಾಣಿಸುತ್ತೆ. ಚಿಕ್ಕಬಳ್ಳಾಪುರದಲ್ಲಿ ಬಸ್​ನಲ್ಲೇ ಹಾವು ಕಾಣಿಸಿಕೊಂಡಿ


KSRTC ಬಸ್​ನಲ್ಲಿದ್ದ ನಾಗರಹಾವು

ಕೆಎಸ್​ಆರ್​ಟಿಸಿ ಬಸ್ ನಲ್ಲಿ ನಾಗರಹಾವು ಪತ್ತೆ

ಚಿಕ್ಕಬಳ್ಳಾಪುರದಲ್ಲಿ ಚಲಿಸುತ್ತಿದ್ದ ಸರ್ಕಾರಿ ಬಸ್​ನೊಳಗೆ ಏಕಾಏಕಿ ಹಾವು ಬಂದಿದೆ. ನೋಡನೋಡ್ತಿದ್ದಂತೆ ಗ್ರಾಮಾಂತರ ಸಾರಿಗೆ ಬಸ್ ಒಳಗೆ ನಾಗರಹಾವು ನುಗ್ಗಿದೆ. ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಗೆ ಗ್ರಾಮಾಂತರ ಸಾರಿಗೆ ಬಸ್ ಪ್ರಯಾಣ ಬೆಳೆಸಿತ್ತು. ಈ ವೇಳೆ ಹಾವು ಕೂಡ ಭರ್ಜರಿಯಾಗಿ ಎಂಟ್ರಿಕೊಟ್ಟಿದೆ.

ಇದನ್ನೂ ಓದಿ: ಮಲಗಿದ್ದವಳ ಮೈಮೇಲೆ ನಾಗರಹಾವಿನ ನರ್ತನ! ಸಾವಿನ ದವಡೆಯಿಂದ ಮಹಿಳೆ ಪಾರಾದ ರೋಚಕ ವಿಡಿಯೋ ಇಲ್ಲಿದೆ

 ಜೀವಭಯದಲ್ಲೇ ಕುಳಿತಿದ್ದ ಪ್ರಯಾಣಿಕರು!

ಹಾವು ಸರ್ಕಾರಿ ಬಸ್​ನೊಳಗೆ ಸೇರಿಕೊಂಡಿದೆ ಅಂದಾಗ ಪ್ರಯಾಣಿಕರ ಪರಿಸ್ಥಿತಿ ಹೇಳತೀರದಾಗಿತ್ತು. ಪ್ರಯಾಣಿಕರು ಜೀವ ಭಯದಲ್ಲೇ ಕುಳಿತಿದ್ದರು. ಮೊದಲೇ ನಾಗರಹಾವು ವಿಷ. ಹೀಗಿರೋವಾಗ ಪ್ರಯಾಣಿಕರಲ್ಲಿ ಹೆಚ್ಚಿನ ಆತಂಕ ಮನೆಮಾಡಿತ್ತು. ತಕ್ಷಣ ಬಸ್​ ನಿಲ್ಲಿಸುವಂತೆ ಪ್ರಯಾಣಿಕರು ಡ್ರೈವರ್​


ಗೆ ಸೂಚಿಸಿದರುಎದ್ನೋ ಬಿದ್ನೋ ಓಡಿದ ಪ್ರಯಾಣಿಕರು!

ನಾಗರ ಹಾವು ಕಂಡು ಭಯಭೀತರಾದ ಪ್ರಯಾಣಿಕರು ಬಸ್ ನಿಲ್ಲಿಸುತ್ತಿದ್ದಂತೆ ಜೀವಭಯದಲ್ಲೇ ಕೆಳಗಿಳಿದರು. ಬಸ್​ನಿಂದ ಇಳಿಯುತ್ತಿದ್ದಂತೆ ಕೆಲ ಪ್ರಯಾಣಿಕರು ಓಡಿದರು. ಆಗ ಡ್ರೈವರ್​, ಕಂಡಕ್ಟರ್​ ಹಾವಿಗೆ ಹುಡುಕಾಟ ನಡೆಸಿದ್ದಾರೆ. ಆಗ ನಾಗರಹಾವು ಬಸ್​ನ ಇಂಜಿನ್ ಮೇಲೆ ಸೇರಿಕೊಂಡಿರೋದು ಗೊತ್ತಾಗಿದೆ.

ಸ್ನೇಕ್ ಪೃಥ್ವಿರಾಜ್ ರಿಂದ ಹಾವು ರಕ್ಷಣೆ

ನಂತರ ಚಿಕ್ಕಬಳ್ಳಾಪುರ ಡಿಪೋ ವ್ಯವಸ್ಥಾಪಕರು ಹಾವು ಹಿಡಿಯುವ ಪರಿಣಿತ ಸ್ನೇಕ್ ಪೃಥ್ವಿರಾಜ್​ರನ್ನು ಕರೆಸಿದ್ದಾರೆ. ಅಷ್ಟರಲ್ಲಾಗಲೇ ಹಾವು ಇಂಜಿನ್​ನಿಂದ ಬಂದು ಹೆಡ್​ಲೈಟ್​ನಲ್ಲಿ ಕುಳಿತಿತ್ತು. ನಂತರ ಪೃಥ್ವಿರಾಜ್ ಹಾವು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಉರಗತಜ್ಞ ಪೃಥ್ವಿರಾಜ್​ರಿಂದ ಹಾವು ರಕ್ಷಣೆ

ಹಾವು ಕಂಡು ನಿಟ್ಟುಸಿರು ಬಿಟ್ಟ ಪ್ರಯಾಣಿಕರು

ಸ್ನೇಕ್ ಪೃಥ್ವಿರಾಜ್ ಹಾವನ್ನು ಹಿಡಿದು ಕಾಡಿಗೆ ಬಿಡ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಬಸ್​ ಶಿಡ್ಲಘಟ್ಟ ಮಾರ್ಗದತ್ತ ಚಲಿಸಿದೆ. ಆದರೂ ಹಾವು ಒಂದ್ಸಲ ಟೆನ್ಶನ್ ತಂದಿಟ್ಟಿದಂತೂ ಸತ್ಯ.

ನೆರಳಿಗೆ ಮೈಯೊಡ್ಡಿ ಮಲಗಿದ್ದಾಗ ಮಹಿಳೆ ಮೇಲೆ ನಾಗರಹಾವಿನ ನರ್ತನ!

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಲ್ಲಾಬಾದ ಗ್ರಾಮದಲ್ಲಿ. ಭಾಗಮ್ಮ ಬಡದಾಳ ಎನ್ನುವ ಮಹಿಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನದ ಹೊತ್ತಲ್ಲಿ ಸುಸ್ತಾಯ್ತು ಅಂತಾ ತನ್ನ ಹೊಲದಲ್ಲಿ ಮರದ ನೆರಳಿಗೆ ಮೈಯೊಡ್ಡಿ ಮಲಗಿದ್ದಾರೆ. ತಣ್ಣನೆಯ ಗಾಳಿಗೆ ಕೆಲವೇ ಹೊತ್ತಲ್ಲಿ ನಿದ್ರೆಗೆ ಜಾರಿದ್ದಾರೆ. ಆಗ ಹಾವು ಬೆನ್ನ ಮೇಲೆ ಬಂದಿದೆ.

ಇದನ್ನೂ ಓದಿ: ಕಾಣದಂತೆ ಮಾಯವಾಯಿತೇ ಚಿರತೆ? ಬೆಳಗಾವಿಯಲ್ಲಿ ಆಪರೇಷನ್ ಚೀತಾ ಕಂಟಿನ್ಯೂ!

ಹಾವು ತುಂಬಾ ಹೊತ್ತು ತನ್ನ ಮೈಮೇಲೆ ಇದ್ದಿದ್ದರಿಂದ ಭಾಗ್ಯಮ್ಮಗೆ ಏನೂ ತೋಚದಂತಾಗಿದೆ. ಕೊನೆಗೆ ಭಾಗ್ಯಮ್ಮ ದೇವರನ್ನು ಪ್ರಾರ್ಥಿಸಿದ್ದಾರೆ. ಶ್ರೀಶೈಲ ಮಲ್ಲಯ್ಯ ಕಾಪಾಡೋ ತಂದೆ ಎಂದು ದೇವರನ್ನು ಪ್ರಾರ್ಥಿಸಿದ್ದಾರೆ. ಅದೇನು ಅಚ್ಚರಿಯೋ.. ದೇವರ ಲೀಲೆಯೋ.. ಭಗವಂತನನ್ನು ಪ್ರಾರ್ಥಿಸಿದಾಗ ಹಾವು ಬೆನ್ನಿನಿಂದ ಇಳಿದು ಹೋಗಿದೆ.

Post a Comment

Previous Post Next Post