Ganeshotsava: ಗಣೇಶೋತ್ಸವ ಆಯೋಜಕರಿಗೆ ಪೊಲೀಸರ ಖಡಕ್ ಸೂಚನೆ; ಪ್ರಕಟಣೆಯಲ್ಲಿ ಏನಿದೆ?


  ಸಾರ್ವಜನಿಕ ಸ್ಥಳಗಳಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುವ ಆಯೋಜಕರಿಗೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಗಣೇಶ ಪ್ರತಿಷ್ಠಾಪನೆ ವೇಳೆ ಬಿಬಿಎಂಪಿಯ (BBMP Permission) ಏಕಗವಾಕ್ಷಿ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ಈ ಬಾರಿ ಗಣೇಶೋತ್ಸವ ಆಚರಣೆ (Ganeshotsava Celebration) ಮಾಡುವ ಆಯೋಜಕರಿಗೆ ಪೊಲೀಸರು (Police) ಕೆಲವು ಸೂಚನೆಗಳನ್ನು ನೀಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅದ್ಧೂರಿಯಾಗಿ ಗಣೇಶೋತ್ಸವ ಆಚರಣೆ ಮಾಡುವ ಆಯೋಜಕರಿಗೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಗಣೇಶ ಪ್ರತಿಷ್ಠಾಪನೆ ವೇಳೆ ಬಿಬಿಎಂಪಿಯ (BBMP Permission) ಏಕಗವಾಕ್ಷಿ ಅನುಮತಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆ ಸೂಚಿಸಲಾಗಿದೆ. ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಸದೃಡವಾಗಿ ಚಪ್ಪರ / ಶಾಮಿಯಾನ (Shmiana) ಹಾಕತಕ್ಕದ್ದು. ಶಾಮಿಯಾನ ಹೊರತುಪಡಿಸಿ ಬೇರೆಡೆ ಬ್ಯಾನರ್ ಬಂಟಿಂಗ್ಸ್ ಹಾಕಲು ಬಿಬಿಎಂಪಿ (BBMP) ಅನುಮತಿ ಕಡ್ಡಾಯ ಎಂದು ಪೊಲೀಸರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ವಿವಾದಿತ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವಂತಿಲ್ಲ ಎಂದು ಖಡಕ್ ಆಗಿ ಪೊಲೀಸರು ಹೇಳಿದ್ದಾರೆ

ಆಯೋಜಕರ ಪರವಾಗಿ ಕಾರ್ಯಕರ್ತರು 24 ಗಂಟೆಯೂ ಮೇಲ್ವಿಚಾರಣೆ ನೋಡಿಕೊಳ್ಳತಕ್ಕದ್ದು. ಮೇಲ್ವಿಚಾರಣೆ ನೋಡಿಕೊಳ್ಳುವವರ ಮಾಹಿತಿಯನ್ನ ಪೊಲೀಸ್ ಠಾಣೆಗೆ ನೀಡಬೇಕು. ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಬಿಬಿಎಂಪಿ ಸುತ್ತೋಲೆಯಂತೆ ಸಿಸಿಟಿವಿ ಅಳವಡಿದತಕ್ಕದ್ದು. ಸ್ಥಳದಲ್ಲಿ ಅಗ್ನಿ ನಂದಕಗಳು, ನೀರು/ಮರಳಿನ ವ್ಯವಸ್ಥೆ ಇರತಕ್ಕದ್ದು ಎಂದು ಸೂಚಿಸಲಾಗಿ

ಪೊಲೀಸರು ನೀಡಿದ ಇತರೆ ಸೂಚನೆಗಳು ಇಲ್ಲಿವೆ

* ಶಾಮಿಯಾನ ಅಥವಾ ಗಣೇಶ ಪ್ರತಿಷ್ಠಾಪನೆ ಮಾಡುವ ಸುತ್ತಮುತ್ತ ಕಟ್ಟಿಗೆ, ಉರುವಲು, ಸೀಮೆಎಣ್ಣೆ ಇರದಂತೆ ಎಚ್ಚರ ವಹಿಸತಕ್ಕದ್ದು. ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಓರ್ವ ಎಲೆಕ್ಟ್ರಿಶಿಯನ್ ಇರತಕ್ಕ

*ಸಮರ್ಪಕವಾಗಿ ಬೆಳಕು ಹಾಗೂ ವಿದ್ಯುತ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇ

ಇದನ್ನೂ ಓದಿ:  Gowri Ganesh Festival: ಗೌರಿ ಹಬ್ಬದಂದು ಈ ವಸ್ತುಗಳನ್ನು ದಾನ ಮಾಡಿದ್ರೆ ದೇವಿ ಆಶೀರ್ವಾದ ಇರಲಿದೆಯಂ

ಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಆಗಮನ ನಿರ್ಗಮನ ವ್ಯವಸ್ಥೆ ಸೂಕ್ತವಾಗಿರಬೇಕು

*ಬ್ಯಾರಿಕೇಡ್ ಅಳವಡಿಸಿ ಸ್ವಯಂ ಸೇವಕರನ್ನ ಸ್ಥಳದಲ್ಲಿ‌ ನಿಯೋಜಿಸತಕ್ಕದ್ದು


. .ತೆಕು.ದ್ದುದೆ.. ನಿಯೋಜಿಸತಕ್ಕದ್ದು.ಗಣೇಶ ಚತುರ್ಥಿ

*ಮೆರವಣಿಗೆ ಸಂದರ್ಭದಲ್ಲಿ ಅಹಿತಕರ ಘಟನೆಗಳಾಗದಂತೆ ಆಯೋಜಕರು ಎಚ್ಚರ ವಹಿಸಬೇಕು.

*ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆಗೆ ಅವಕಾಶ

*ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ಸ್ಥಳಿಯ ಠಾಣೆಗೆ ನೀಡಬೇಕು

*ಆಯೋಜಕರು, ಅಧ್ಯಕ್ಷರು, ಪದಾಧಿಕಾರಿಗಳ ಹೆಸರು, ವಿಳಾಸ, ನಂಬರ್​ ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು

*ಲೇಸರ್ ಪ್ರೊಜೆಕ್ಷನ್ ಮಾಡಲು ಅವಕಾಶವಿಲ್ಲ

*ಸೂಕ್ಷ್ಮ, ಅತಿಸೂಕ್ಷ್ಮ ಸ್ಥಳಗಳಲ್ಲಿ ಮೆರವಣಿಗೆ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನ ಸಿಡಿಸುವಂತಿಲ್ಲ.

*ಕಾರ್ಯಕ್ರಮ ಆಯೋಜನೆಗಾಗಿ ಬಲವಂತದ ವಂತಿಗೆ ವಸೂಲಿ ಮಾಡಿದರೆ ಕಠಿಣ ಕಾನೂನು ಕ್ರಮ

*ಆಯೋಜಕರು, ಕಾರ್ಯಕರ್ತರನ್ನ ಗುರುತಿಸಲು ಅನುಕೂಲವಾಗುವಂತೆ ಶರ್ಟ್ / ಕ್ಯಾಪ್ ಧರಿಸಿರಬೇಕು

*ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಕಡೆ ಪೊಲೀಸರಿಗೆ ಮಾಹಿತಿ‌ ನೀಡಿ ಭದ್ರತೆ ಪಡೆಯಬೇಕು

*ವಿಸರ್ಜನಾ ಮೆರವಣಿಗೆ ನಿಗದಿತ ಸಂದರ್ಭದಲ್ಲಿ ನಡೆಯತಕ್ಕದ್ದು

*ಮೆರವಣಿಗೆ ಸಂದರ್ಭದಲ್ಲಿ ವಿದ್ಯುತ್ ತಂತಿ ಮತ್ತು ಮರದ ಕೊಂಬೆಗಳ ಬಗ್ಗೆ ಸೂಕ್ತ ಎಚ್ಚರ ವಹಿಸಬೇಕು.

ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ

ಹಗ್ಗಜಗ್ಗಾಟ, ವಿವಾದದಿಂದ ಕೂಡಿದ್ದ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ (Idgah Maidan) ಗಣೇಶ ಹಬ್ಬ (Ganesha Festival) ಆಚರಿಸಲು ಕರ್ನಾಟಕ ಹೈಕೋರ್ಟ್ (Karnataka High Court)​ ಗ್ರೀನ್​ ಸಿಗ್ನಲ್ ನೀಡಿದೆ.

ಚಾಮರಾಜಪೇಟೆ ಮೈದಾನದಲ್ಲಿ ಈವರೆಗೆ ಬಕ್ರೀದ್​ ಹಬ್ಬ ಮಾತ್ರ ಆಚರಿಸಲಾಗ್ತಿತ್ತು. ಈ ಬಾರಿ ವಿವಾದದ (Controversy) ಬಳಿಕ ಗಣೇಶ ಹಬ್ಬಕ್ಕೆ ಮನವಿ ಮಾಡಲಾಗಿತ್ತು. ಆದರೆ ಇದಕ್ಕೆ ವಕ್ಫ್​ ಬೋರ್ಡ್ (Waqf Board)​, ಶಾಸಕ ಜಮೀರ್​ ವಿರೋಧಿಸಿದ್ದ


ರು. ಬಳಿಕ ವಿವಾದ ಹೈಕೋರ್ಟ್​ ಮೆಟ್ಟಿಲೇರಿತ್ತು.ಸಾಂದರ್ಭಿಕ ಚಿತ್ರ

ಇದನ್ನೂ ಓದಿ: Ganesh Festival: ಗಣೇಶ ಹಬ್ಬದ ದಿನಾಂಕ, ಪೂಜೆ ಶುಭ ಮುಹೂರ್ತದ ಬಗ್ಗೆ ಇಲ್ಲಿದೆ ಮಾಹಿತಿ

ಈದ್ಗಾ ಮೈದಾನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಹೈಕೋರ್ಟ್ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿತ್ತು. ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಅರ್ಜಿ ವಿಚಾರಣೆಯಲ್ಲಿ ಗಣೇಶ ಹಬ್ಬಕ್ಕೆ ಅನುಮತಿ ನೀಡಿ ಆದೇಶ ನೀಡಿದೆ.

Post a Comment

Previous Post Next Post