Shivamogga: ಶೂ ಒಳಗೆ ಅಡಗಿ ಕುಳಿತಿದ್ದ ನಾಗರಹಾವು; ಮನೆ ಮಂದಿಯೆಲ್ಲಾ ಶಾಕ್!​


 ಶೂ ಒಳಗೆ ಅಡಗಿ ಕುಳಿತಿದ್ದ ನಾಗರಹಾವು ಕಂಡು ವ್ಯಕ್ತಿಯೊಬ್ಬರು ಬೆಚ್ಚಿಬಿದ್ದಿದ್ದಾರೆ. ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಕುಮಾರ್ ಎಂಬುವರ ಮನೆಯ ಶೂನಲ್ಲಿ ನಾಗರಹಾವು ಅಡಗಿ ಕುಳಿತ್ತು.

ಶಿವಮೊಗ್ಗ (ಜು. 02): ಇವತ್ತು ನಾಗರ ಪಂಚಮಿ (Nagara Panchami) ಎಲ್ಲರೂ ಕಲ್ಲಿನ ನಾಗನಿಗೆ ಹಾಲೆರೆದು ಪೂಜೆ ಮಾಡಿ ಕೈ ಮುಗಿದು ಬರ್ತಾರೆ. ಆದ್ರೆ ಶಿವಮೊಗ್ಗದಲ್ಲಿ (Shivamogga) ಬೆಳ್ಳಂ ಬೆಳಗ್ಗೆ ವಾಕಿಂಗ್ಗೆ ಹೋಗೋಣ ಅಂತ ಶೂ ಹಾಕಿಕೊಳ್ಳಲು ಹೋದವನಿಗೆ ಶಾಕ್ ಆಗಿದೆ. ಶೂ ಒಳಗೆ ಅಡಗಿ ಕುಳಿತಿದ್ದ ನಾಗರಹಾವು (Cobra) ಕಂಡು ವ್ಯಕ್ತಿಯೊಬ್ಬರು ಬೆಚ್ಚಿಬಿದ್ದಿದ್ದಾರೆ. ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಘಟನೆ ನಡೆದಿದೆ. ಕುಮಾರ್ (Kumar) ಎಂಬುವರ ಮನೆಯ ಶೂನಲ್ಲಿ ನಾಗರಹಾವು ಅಡಗಿ ಕುಳಿತ್ತಿತ್ತು. 

ಸ್ನೇಕ್ ಕಿರಣ್​ರಿಂದ ನಾಗರ ಹಾವಿನ ರಕ್ಷಣೆ

7 ಇಂಚಿನ ಶೂ ನಲ್ಲಿ 3 ಅಡಿಯ ನಾಗರಾಜ ಅಡಗಿ ಕುಳಿತಿದ್ದ. ಹಾವು ಕಂಡು ಭಯಭೀತರಾದ ಮನೆ ಮಂದಿ ಶಿವಮೊಗ್ಗದ ಸ್ನೇಕ್​ ಕಿರಣ್ ಅವರಿಗೆ ಕರೆ ಮಾಡಿದ್ದಾರೆ


.ತಕ್ಷಣ ಸ್ಥಳಕ್ಕೆ ಬಂದ ಉರಗ ಪ್ರೇಮಿ ಸ್ನೇಕ್ ಕಿರಣ್ ನಾಗರ ಹಾವನ್ನು ಹಿಡಿದುಕೊಂಡು ಹೋಗಿದ್ದಾರೆ. ಬಳಿ ಕುಮಾರ್​ ಕುಟುಂಬಸ್ಥರೆಲ್ಲಾ ನಿಟ್ಟುಸಿರು ಬಿಟ್ಟಿದ್ದಾರೆ.

Post a Comment

Previous Post Next Post