ಈ ಹಿನ್ನೆಲೆ ಮಕ್ಕಳಿಗೆ ಬೇರೆ ಬೇರೆ ಗುಣಮಟ್ಟದ ಆಹಾರ ನೀಡುವಂತೆ ಕೇಂದ್ರ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಸೂಚನೆ ಹಿನ್ನೆಲೆ ಹೊಸ ಮೆನು ಸಿದ್ಧವಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರ 2022-23ನೇ ಸಾಲಿನ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ (Poshan abhiyaan) ಶಾಲೆಗಳ ಮಧ್ಯಾಹ್ನ ಊಟದ (Mid Day Meal) ಮೆನು ಸಿದ್ಧಪಡಿಸಿದೆ. ಹೊಸ ಮೆನು ಕಂಡು ವಿದ್ಯಾರ್ಥಿಗಳು (Students) ಸಂತೋಷ ವ್ಯಕ್ತಪಡಿಸಿದ್ದಾರೆ. ಹೊಸ ಮೆನುವಿಗೆ ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ಮುಂದೆ ಶಾಲಾ ವಿದ್ಯಾರ್ಥಿಗಳಿಗೆ ಅವರ ಪ್ರದೇಶಕ್ಕೆ ಅನುಗುಣವಾಗಿ ಬಗೆ ಬಗೆಯ ಊಟ ಸಿಗಲಿದೆ. ಇದರ ಜೊತೆಗೆ ಮಕ್ಕಳಿಗೆ ಗುಣಮಟ್ಟದ ಆಹಾರ (Quality Food) ಲಭ್ಯವಾಗಲಿದೆ. ಪ್ರತಿ ದಿನ ಮಧ್ಯಾಹ್ನ ಮಕ್ಕಳಿಗೆ ಒಂದೇ ರೀತಿಯ ಆಹಾರ ನೀಡೋದರಿಂದ ಅಪೌಷ್ಟಿಕತೆ ಹೆಚ್ಚಾಗುವ ಸಾಧ್ಯತೆಗಳಿತ್ತು. ಈ ಹಿನ್ನೆಲೆ ಮಕ್ಕಳಿಗೆ ಬೇರೆ ಬೇರೆ ಗುಣಮಟ್ಟದ ಆಹಾರ ನೀಡುವಂತೆ ಕೇಂದ್ರ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಸೂಚನೆ ಹಿನ್ನೆಲೆ ಹೊಸ ಮೆನು ಸಿದ್ಧವಾಗಿದೆ.
ಕೇಂದ್ರ ಸರ್ಕಾರದ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ ಪರಿಷ್ಕೃತ ಮೆನು ಸಿದ್ಧಪಡಿಸಿದೆ. ಈ ಮೆನು ಆಧರಿಸಿ ಶಾಲೆಗಳು ಮಕ್ಕಳಿಗೆ ಬಿಸಿಯೂಟ ನೀಡಬೇಕು ಎಂದು ಹೇಳಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದಾಗಿ ಈ ಹೊಸ ಮೆನುವಿಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಹೊಸ ಆಹಾರ ಪಟ್ಟಿಯಲ್ಲಿ ಏನೇನಿದೆ?
ಸೋಮವಾರ: ಅನ್ನ, ಸಾಂಬಾರು
ಮಂಗಳವಾರ: ಪಲಾವ್, ದಾಲ್ ತೊವ್ವೆ, ಅಥವಾ ಟೊಮೆಟೊ ಬಾತ್ ಹಾಗೂ ತರಕಾರಿ ಪಲ್ಯ
ಬುಧವಾರ: ಅನ್ನ, ರಸಂ ಮತ್ತು ಕಾಳು ಪಲ್ಯ ಅಥವಾ ತರಕಾರಿ ಪಲ್ಯ
ಗುರುವಾರ: ಅನ್ನ, ಸಾಂಬಾರು
ಶುಕ್ರವಾರ: -ಬಿಸಿ ಬೇಳೆ ಬಾತ್
ಶನಿವಾರ: ಉಪ್ಪಿಟ್ಟು ಅಥವಾ ಚಪಾತಿ ಮತ್ತು ಪಲ್ಯ
ಇದನ್ನೂ ಓದಿ: HD Kumaraswamy ಬೆಂಗಾವಲು ವಾಹನ ಅಪಘಾತ; ಐವರಿಗೆ ಗಾಯ
ಸಾಂದರ್ಭಿಕ ಚಿತ್ರಈ ಪ್ರಕಾರವೇ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಮಕ್ಕಳಿಗೆ ಆಹಾರ ವಿತರಣೆ ಆಗಬೇಕು. ಈಗಾಲೇ ಬಹುತೇಕ ಶಾಲೆಗಳು ಈ ಮೆನು ಪಾಲಿಸಿಕೊಂಡು ಬರುತ್ತಿದ್ದು, ಮಕ್ಕಳಿಂದಲೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.
ಊಟದಲ್ಲಿ ಈ ಪದಾರ್ಥಗಳು ಕಡ್ಡಾಯ
ಇನ್ನೂ ಪ್ರತಿ ಮೆನು ಅಂದರೆ ಊಟದಲ್ಲಿ ತರಕಾರಿ ಜೊತೆಯಲ್ಲಿ ಬೇಳೆ ಅಥವಾ ಕಾಳು ಕಡ್ಡಾಯಗೊಳಿಸಲಾಗಿದೆ. ಸ್ಥಳೀಯ ಆಹಾರ ಪದ್ಧತಿಗೆ ಪ್ರಾಮುಖ್ಯತೆಯನ್ನ ನೀಡಲಾಗಿದೆ. ಸ್ಥಳೀಯ ಆಹಾರ ಪದ್ಧತಿಯಂತೆ ಅಡುಗೆಗಳಲ್ಲಿ ತರಕಾರಿ ಮತ್ತು ಸಾಂಬಾರ ಪದಾರ್ಥಗಳನ್ನು ಸೂಚನೆ ನೀಡಲಾಗಿದೆ. ತರಕಾರಿಯಲ್ಲಿ ವಿಶೇಷವಾಗಿ ಗೆಡ್ಡೆ, ಗೆಣಸು ಬಳಸಲು ಹೇಳಲಾಗಿದೆ.
ಸಾಂದರ್ಭಿಕ ಚಿತ್ರಇನ್ನೂ ಆಹಾರದಲ್ಲಿ ಬಳಸುವ ಸಾಂಬರ್ ಪುಡಿ ಮತ್ತು ಇತರೆ ಸಾಮಾಗ್ರಿಗಳು ಪ್ರಮಾಣೀಕೃತ ಮತ್ತು ಉತ್ತಮ ಗುಣಮಟ್ಟ ಹೊಂದಿರಬೇಕು ಎಂದು ಖಡಕ್ ಆಗಿ ಸೂಚನೆ ನೀಡಲಾಗಿದೆ. ಇವುಗಳ ಜೊತೆ ವಾರಕ್ಕೆ ಎರಡು ದಿನ ಮೊಟ್ಟೆ ಅಥವಾ ಬಾಳೆಹಣ್ಣು ಸಹ ವಿತರಣೆ ಆಗಬೇಕು. ಸ್ಥಳೀಯ ಹವಾಮಾನಕ್ಕೆ ಬೆಳೆಯುವ ತರಕಾರಿಗಳಿಗೆ ಮೊದಲ ಆದ್ಯತೆ ನೀಡಲಾಗಿದೆ.
ಇದನ್ನೂ ಓದಿ: Chitradurga: ಮತದಾರರ ಗುರುತಿನ ಚೀಟಿಗೆ ಅಧಾರ್ ಜೋಡಣೆ! ಇಲ್ಲಿದೆ ಅಗತ್ಯ ಮಾಹಿತಿ
ಗ್ರಾಮೀಣ ಭಾಗದ ಶಾಲೆಗಳಲ್ಲಿ ಸಮಸ್ಯೆ
ಇನ್ನು ಗ್ರಾಮೀಣ ಭಾಗದ ಶಾಲೆಗಳಿಗೆ ಮೂಲಭೂತ ಸೌಕರ್ಯಗಳ ಸಮಸ್ಯೆಯಿಂದಾಗಿ ಈ ಮೆನು ಪಾಲಿಸೋದು ಕಷ್ಟ ಎಂಬ ಮಾತುಗಳ ಸಹ ಕೇಳಿ ಬಂದಿವೆ. ಈ ಸಂಬಂಧ ಶಾಲಾ ಸಿಬ್ಬಂದಿ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಗ್ರಾಮೀಣ ಭಾಗಕ್ಕೆ ಉತ್ತಮ ಸಾರಿಗೆ ಸೌಲಭ್ಯ ಇರಲ್ಲ. ಸಿಬ್ಬಂದಿ ಕೊರತೆ ಜೊತೆಗೆ ಮಾರುಕಟ್ಟೆ ಅಲಭ್ಯತೆ ಅಂತಹ ಕೆಲ ಸಮಸ್ಯೆಗಳನ್ನು ನೀಡಿದ್ದಾರೆ.
ಸಾಂದರ್ಭಿಕ ಚಿತ್ರಈ ಸಮಸ್ಯೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸಂಪರ್ಕಿಸುವಂತೆ ಶಾಲೆ ಸಿಬ್ಬಂದಿಗೆ ಹೇಳಲಾಗಿದೆ. ಸ್ಥಳೀಯ ಪ್ರತಿನಿಧಿಗಳು ಈ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದೆ.
ಮಕ್ಕಳ ದಾಖಲಾತಿ & ಹಾಜರಾತಿ ಹೆಚ್ಚಳ
ಬಿಸಿಯೂಟದ ಹೊಸ ಮೆನುವಿನ ಪ್ರಕಾರ, ತಾಲೂಕಿನ ಶಾಲೆಗಳಲ್ಲಿನ ಎಲ್ಲಾ ಮಕ್ಕಳಿಗೆ ಬಿಸಿಯೂಟ ನೀಡಲಾಗುತ್ತಿದೆ. ಹೊಸ ಮೆನು ಸಿದ್ಧವಾದ ಹಿನ್ನೆಲೆ ಅಡುಗೆ ತಯಾರಿಕಾ ವೆಚ್ಚವನ್ನು ಹೆಚ್ಚಿಸಲಾಗಿದೆ. ಇನ್ನೂ ಹೊಸ ಮೆನುವಿನಿಂದಾಗಿ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. .




Post a Comment